logo
ಕನ್ನಡ ಸುದ್ದಿ  /  ಕ್ರೀಡೆ  /  Messi Image In Farm Land: ವಾವ್...124 ಎಕರೆ ಕೃಷಿ ಭೂಮಿಯಲ್ಲಿ ಅರಳಿದ ಮೆಸ್ಸಿ ಚಿತ್ರ; ರೈತನ ಪವಾಡಕ್ಕೆ ಭಾರಿ ಮೆಚ್ಚುಗೆ

Messi Image in Farm Land: ವಾವ್...124 ಎಕರೆ ಕೃಷಿ ಭೂಮಿಯಲ್ಲಿ ಅರಳಿದ ಮೆಸ್ಸಿ ಚಿತ್ರ; ರೈತನ ಪವಾಡಕ್ಕೆ ಭಾರಿ ಮೆಚ್ಚುಗೆ

HT Kannada Desk HT Kannada

Jan 19, 2023 02:36 PM IST

124 ಎಕರೆ ಕೃಷಿ ಭೂಮಿಯಲ್ಲಿ ಲಿಯೋನೆಲ್ ಮೆಸ್ಸಿ ಭಾವಚಿತ್ರ

  • 124 ಎಕರೆ ಕೃಷಿ ಭೂಮಿಯಲ್ಲಿ ಮೆಸ್ಸಿಯ ಭಾವಚಿತ್ರ ಎಂದರೆ ಅದು ಸಾಮಾನ್ಯ ವಿಷಯವಲ್ಲ. ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದು ಒಂದು ತಿಂಗಳು ಪೂರೈಸಿದ ಸಂದರ್ಭದಲ್ಲಿ ಅಲ್ಲಿನ ರೈತನೊಬ್ಬ ಮಾಡಿದ ಪವಾಡವಿದು. ಬಾಹ್ಯಾಕಾಶದಿಂದ ಅದು ಎಷ್ಟು ಅದ್ಭುತವಾಗಿದೆ ಎಂಬುದನ್ನು ನೀವು ಕಣ್ತುಂಬಿಕೊಳ್ಳಿ. 

124 ಎಕರೆ ಕೃಷಿ ಭೂಮಿಯಲ್ಲಿ ಲಿಯೋನೆಲ್ ಮೆಸ್ಸಿ ಭಾವಚಿತ್ರ
124 ಎಕರೆ ಕೃಷಿ ಭೂಮಿಯಲ್ಲಿ ಲಿಯೋನೆಲ್ ಮೆಸ್ಸಿ ಭಾವಚಿತ್ರ

ಅರ್ಜೆಂಟೀನಾ: ನೆಚ್ಚಿನ ನಟ, ರಾಜಕಾರಣಿ ಅಥವಾ ಕ್ರೀಡಾಪಟುವಿನ ಭಾವಚಿತ್ರವನ್ನು ವಿವಿಧ ಬಣ್ಣಗಳಲ್ಲಿ, ಮರಳು, ತರಕಾರಿ ಹಾಗೂ ದವಸ-ಧಾನ್ಯಗಳಲ್ಲಿ ಬಿಡಿಸಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ ತನ್ನ ನೆಚ್ಚಿನ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ಭಾವಚಿತ್ರವನ್ನು ಬಿಡಿಸಲು ಬರೋಬ್ಬರಿ 124 ಎಸಕರೆ ಭೂಮಿಯನ್ನು ಬಳಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಇಷ್ಟು ದೊಡ್ಡ ಮಟ್ಟದ ನೀರಾವರಿ ಪ್ರದೇಶದಲ್ಲಿ ಮೆಸ್ಸಿ ಅವರ ಭಾವಚಿತ್ರ ಮೂಡಿಬಂದಿದ್ದು ಹೇಗೆ? ಅನ್ನದಾತನಿಗೆ ಈ ಪ್ಲಾನ್ ಹೊಳಿದಿದ್ದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.

ಡಿಸೆಂಬರ್ 18, 2022.. ಅದು ಅರ್ಜೆಂಟೀನಾ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಗೆದ್ದ ದಿನ. ಬುಧವಾರ (2023ರ ಜನವರಿ 18)ಕ್ಕೆ ಅರ್ಜೆಂಟೀನಾ ಕತಾರ್ ನಲ್ಲಿ ಚಾಂಪಿಯನ್ ಆಗಿ ಸರಿಯಾಗಿ ಒಂದು ತಿಂಗಳು ಕಳೆದಿದೆ.

ಈ ಒಂದು ತಿಂಗಳ ಖುಷಿಯನ್ನು ಸಂಭ್ರಮಿಸಲು ಅರ್ಜೆಂಟೀನಾದ ರೈತರೊಬ್ಬರು ಒಂದು ಪವಾಡವನ್ನೇ ಮಾಡಿದ್ದಾರೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 124 ಎಕರೆ ಕೃಷಿ ಭೂಮಿಯಲ್ಲಿ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ನ ಫೈನಲ್ ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಅರ್ಜೆಂಟೀನಾ ಕಪ್ ಗೆದ್ದುಕೊಂಡಿತ್ತು. ಟೂರ್ನಿಯುದ್ದಕ್ಕೂ ಮಿಂಚಿದ ನಾಯಕ ಮೆಸ್ಸಿ ಫೈನಲ್ ನಲ್ಲೂ ಮಿಂಚಿದರು. 1986ರ ನಂತರ ಅವರು ತಮ್ಮ ದೇಶಕ್ಕೆ ಮತ್ತೊಂದು ಟ್ರೋಫಿಯನ್ನು ತಂದು ಕೊಟ್ಟರು.

ಅವಿಸ್ಮರಣೀಯನ್ನು ಅದ್ಧೂರಿಯಾಗಿ ಸಂಭ್ರಮಿಸಿದ ಅರ್ಜೆಂಟೀನಾ ಫಿಫಾ ವಿಶ್ವಕಪ್ ಮುಗಿದು ಒಂದು ತಿಂಗಳು ಕಳೆದ ಹಿನ್ನೆಲೆಯಲ್ಲಿ ನಿನ್ನೆ (ಜ.18) ಕೇಂದ್ರ ಕಾರ್ಡೋಬಾ ಪ್ರಾಂತ್ಯದ ಲಾಸ್ ಕಾಂಡೋರ್ಸ್‌ನಲ್ಲಿರುವ ತನ್ನ ನೀರಾವರಿ ಜಮೀನಿನಲ್ಲಿ ರೈತರೊಬ್ಬರು ಮೆಸ್ಸಿಯ ಬೃಹತ್ ಭಾವಚಿತ್ರವನ್ನು ಅರಳಿಸಿದ್ದಾರೆ.

ಮೆಸ್ಸಿಯ ರೂಪವನ್ನು ಅರಳಿಸುವುದಕ್ಕಾಗಿಯೇ ಜೋಳದ ಬೆಳೆ ಬೆಳೆದಿದ್ದಾರೆ. ಇದಕ್ಕಾಗಿ ರೈತ ಅಲ್ಗಾರಿದಮ್ ಅನ್ನು ಅನುಸರಿಸಿದ್ದಾನೆ. 124 ಎಕರೆ ಎಂದರೆ ಸಾಮಾನ್ಯ ಮಾತಲ್ಲ. ಮೆಸ್ಸಿ ಫಾರ್ಮ್ ಸರಿಯಾಗಲು ಇಷ್ಟು ದೊಡ್ಡ ಭೂಮಿಯಲ್ಲಿ ಬೆಳೆ ಹಾಕಿರುವುದು ನಿಜಕ್ಕೂ ಅದ್ಭುತ.

ಅರ್ಜೆಂಟೀನಾ ವಿಶ್ವದ ಅತಿ ಹೆಚ್ಚು ತೊಗರಿ ಬೆಳೆಯುವ ದೇಶಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ, ಇದು ಫುಟ್ಬಾಲ್ ಅನ್ನು ಹೆಚ್ಚು ಪ್ರೀತಿಸುವ ದೇಶವಾಗಿದೆ. ಈ ಎರಡನ್ನೂ ಮೇಳೈಸಿದ ಮ್ಯಾಕ್ಸಿಮಿಲಿಯಾನೊ ಸ್ಪಿನಾಝ್ ಎಂಬ ರೈತ ಕಣ್ಣು ಕುಕ್ಕುವ ಈ ಪವಾಡ ಮಾಡಿದ್ದಾನೆ. ಇಲ್ಲಿನ ನಿಜವಾದ ವೈಶಿಷ್ಟ್ಯವೆಂದರೆ ಮೆಸ್ಸಿಯ ಫೋಟೋವನ್ನು ಬಾಹ್ಯಾಕಾಶದಿಂದಲೂ ನೋಡಬಹುದಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು