logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup 2023: ಏಷ್ಯಾಕಪ್​​​​​ ಪಾಕಿಸ್ತಾನ ಕೈ ತಪ್ಪಿದರೆ 3 ಮಿಲಿಯನ್​ ಡಾಲರ್ ನಷ್ಟ: ಪಿಸಿಬಿ ಮುಖ್ಯಸ್ಥ ನಜಮ್​ ಸೇಥಿ

Asia Cup 2023: ಏಷ್ಯಾಕಪ್​​​​​ ಪಾಕಿಸ್ತಾನ ಕೈ ತಪ್ಪಿದರೆ 3 ಮಿಲಿಯನ್​ ಡಾಲರ್ ನಷ್ಟ: ಪಿಸಿಬಿ ಮುಖ್ಯಸ್ಥ ನಜಮ್​ ಸೇಥಿ

Prasanna Kumar P N HT Kannada

Apr 13, 2023 06:27 PM IST

ನಜಮ್​ ಸೇಥಿ

    • ಏಷ್ಯಾಕಪ್ 2023 ಪಾಕಿಸ್ತಾನದಲ್ಲಿ (Asia Cup in Pakistan) ನಡೆಯದಿದ್ದರೆ, ನಮ್ಮ ಮಂಡಳಿಗೆ ಬರೋಬ್ಬರಿ 3 ಮಿಲಿಯನ್ ಡಾಲರ್ ನಷ್ಟವಾಗಲಿದೆ. ಏಷ್ಯಾ ಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಯಸಿದ್ದೇವೆ ಎಂದು ನಜಮ್ ಸೇಥಿ ಹೇಳಿದ್ದಾರೆ.
ನಜಮ್​ ಸೇಥಿ
ನಜಮ್​ ಸೇಥಿ (Twitter)

ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket board) ಮತ್ತು ಬಿಸಿಸಿಐ (BCCI) ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ‘ಪಾಕಿಸ್ತಾನಕ್ಕೆ ಟೀಮ್​ ಇಂಡಿಯಾ ಪ್ರಯಾಣ ಬೆಳೆಸಲ್ಲ; ಭಾರತಕ್ಕೆ ಪಾಕಿಸ್ತಾನ ತಂಡ ಹೋಗಲ್ಲ..’ ಹೀಗಂತ ಉಭಯ ದೇಶಗಳು ಪಟ್ಟು ಹಿಡಿದಿವೆ. ಏಷ್ಯಾಕಪ್​ ಟೂರ್ನಿಯನ್ನು (Asia Cup) ಬೇರೆಡೆ ಆಯೋಜಿಸುವ ಕುರಿತು ಭಾರಿ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ (PCB chief Najam Sethi) ಮಹತ್ವದ ಹೇಳಿಕೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಏಷ್ಯಾಕಪ್ 2023 ಪಾಕಿಸ್ತಾನದಲ್ಲಿ (Asia Cup in Pakistan) ನಡೆಯದಿದ್ದರೆ, ನಮ್ಮ ಮಂಡಳಿಗೆ ಬರೋಬ್ಬರಿ 3 ಮಿಲಿಯನ್ ಡಾಲರ್ ನಷ್ಟವಾಗಲಿದೆ. ಏಷ್ಯಾ ಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಯಸಿದ್ದೇವೆ ಎಂದು ನಜಮ್ ಸೇಥಿ ಹೇಳಿದ್ದಾರೆ. ಇದರ ಅಡಿಯಲ್ಲಿ ಭಾರತ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಏಷ್ಯಾಕಪ್ 2023ರ ಆತಿಥ್ಯವನ್ನು ಪಾಕಿಸ್ತಾನ ಪಡೆಯುತ್ತದೆ. ಆದರೆ ಟೀಮ್​ ಇಂಡಿಯಾ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಆದರೆ ಟೂರ್ನಿ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ - ಬಿಸಿಸಿಐ ನಡುವಿನ ಭಿನ್ನಾಭಿಪ್ರಾಯಗಳ ನಂತರ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿರುವುದಾಗಿ ನಜಮ್ ಸೇಥಿ ಹೇಳಿದ್ದಾರೆ.

ಇದರ ಅಡಿಯಲ್ಲಿ ಭಾರತ ತಂಡವು ಬೇರೆ ಯಾವುದೇ ಮೈದಾನದಲ್ಲಿ ಆಡಬೇಕಾಗಿದೆ. ಆದರೆ, ಟೂರ್ನಿಯ ಉಳಿದ ಪಂದ್ಯಗಳು ಪಾಕಿಸ್ತಾನದ ಮೈದಾನದಲ್ಲಿ ನಡೆಯಲಿವೆ. ಏಷ್ಯಾಕಪ್ 2023ರ ಆತಿಥ್ಯ ನಮ್ಮೊಂದಿಗಿದ್ದು, ಯಾವುದೇ ಸಂದರ್ಭದಲ್ಲೂ ನಾವು ಅದನ್ನು ಕಳೆದುಕೊಳ್ಳುವುದಿಲ್ಲ ಎಂದು ನಜಮ್ ಸೇಥಿ ಸ್ಪಷ್ಟಪಡಿಸಿದ್ದಾರೆ.

ಭಾರತ ಪಂದ್ಯಗಳನ್ನು ಹೊರತುಪಡಿಸಿ, ಉಳಿದ ಪಂದ್ಯಗಳು ಪಾಕಿಸ್ತಾನ ಮೈದಾನದಲ್ಲೇ ನಡೆಯಬೇಕಿದೆ. ನಾವು ಬೇರೆ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಮತ್ತು ನಾವು ಬೇರೆ ಯಾವುದೇ ಆಯ್ಕೆಯನ್ನು ಸ್ವೀಕರಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಟೂರ್ನಿ ಆತಿಥ್ಯ ಕಳೆದುಕೊಂಡರೆ, ನಮಗೆ ಮೂರು ಮಿಲಿಯನ್​ ಡಾಲರ್ ನಷ್ಟವಾಗಲಿದೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಯಾವುದೇ ಭದ್ರತಾ ಸಮಸ್ಯೆ ಇಲ್ಲ. ಭದ್ರತಾ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಇದಕ್ಕೆ ಲಿಖಿತ ಸಾಕ್ಷ್ಯವನ್ನು ತೋರಿಸಬೇಕು ಎಂದು ನಜಮ್ ಸೇಥಿ ಸವಾಲು ಹಾಕಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ನಮ್ಮ ದೇಶಕ್ಕೆ ಬಂದು ಆಡಿವೆ. ಈಗ ಭಾರತಕ್ಕೂ ಬರುವಂತೆ ಕೋರಿದ್ದೇವೆ ಎನ್ನುತ್ತಾರೆ.

ವಿಶ್ವಕಪ್​ ಆಡಲು ಭಾರತ ನೆಲಕ್ಕೆ ಪಾಕಿಸ್ತಾನ ಬಂದಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಜಮ್ ಸೇಥಿ ಅವರು, ಐಸಿಸಿ ಜೊತೆಗಿನ ನಮ್ಮ ಸಂಬಂಧ ವಿಭಿನ್ನವಾಗಿದೆ. ಆದರೆ ಇದೆಲ್ಲವೂ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಐಸಿಸಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು