logo
ಕನ್ನಡ ಸುದ್ದಿ  /  ಕ್ರೀಡೆ  /  Isl Final: ಬೆಂಗಳೂರು ಎಫ್‌ಸಿಗೆ ಸೋಲು; ಎಟಿಕೆ ಮೋಹನ್ ಬಗಾನ್ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್

ISL final: ಬೆಂಗಳೂರು ಎಫ್‌ಸಿಗೆ ಸೋಲು; ಎಟಿಕೆ ಮೋಹನ್ ಬಗಾನ್ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್

Jayaraj HT Kannada

Mar 19, 2023 06:25 AM IST

ಕಪ್‌ ಗೆದ್ದ ಎಟಿಕೆ ಮೋಹನ್ ಬಗಾನ್

    • ಮೋಹನ್‌ ಬಗಾನ್‌ ಪರ ಡಿಮಿಟ್ರಿ ಪೆಟ್ರಾಟೋಸ್ ಅವರು ಶೂಟೌಟ್‌ನಲ್ಲಿ ಮೂರು ಪೆನಾಲ್ಟಿ ಗೋಲುಗಳನ್ನು ಗಳಿಸಿದರು. ಆದರೆ, ಬಗಾನ್‌ ಪಡೆಯಯನ್ನುಗೆಲುವಿನ ಸನಿಹಕ್ಕೆ ತಂದವರು ವಿಶಾಲ್ ಕೈತ್.
ಕಪ್‌ ಗೆದ್ದ ಎಟಿಕೆ ಮೋಹನ್ ಬಗಾನ್
ಕಪ್‌ ಗೆದ್ದ ಎಟಿಕೆ ಮೋಹನ್ ಬಗಾನ್ (Indian Super League Twitter)

ಎರಡನೇ ಬಾರಿಗೆ ಇಂಡಿಯನ್‌ ಸೂಪರ್‌ ಲೀಗ್‌ ( Indian Super League) ಟ್ರೋಫಿ ಗೆಲ್ಲುವ ಬೆಂಗಳೂರು ಎಫ್‌ಸಿ (Bengaluru FC) ಕನಸಿಗೆ ಎಟಿಕೆ ಮೋಹನ್ ಬಗಾನ್ (ATK Mohun Bagan) ತಣ್ಣೀರೆರಚಿದೆ. ಜಿದ್ದಾಜಿದ್ದಿನಿಂದ ಕೂಡಿದ ರೋಚಕ ಫೈನಲ್‌ ಪಂದ್ಯದಲ್ಲಿ ಕಡೆಗೂ ಪೆನಾಲ್ಟಿ ಶೂಟೌಟ್‌ ಮೂಲಕ ಗೆದ್ದ ಎಟಿಕೆ ಮೋಹನ್ ಬಗಾನ್ ತಂಡವು, ಇದೇ ಮೊದಲ ಬಾರಿಗೆ ಇಂಡಿಯನ್‌ ಸೂಪರ್‌ ಲೀಗ್‌ ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಎಸ್‌ಎಲ್‌ ಫೈನಲ್‌ ಪಂದ್ಯವು ರೋಚಕವಾಗಿ ಸಾಗಿತು. ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಎಫ್‌ಸಿ ತಂಡವು, ಎರಡನೇ ಕಪ್‌ ಗೆಲ್ಲುವ ಉತ್ಸಾಹದಲ್ಲಿತ್ತು. ಇದೇ ನಿರೀಕ್ಷೆಯಲ್ಲಿ ಗೋವಾ ಮೈದಾನದಲ್ಲೂ ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಆದರೆ ಬೆಂಗಳೂರಿಗೆ ಪ್ರಬಲ ಪೈಪೋಟಿ ನೀಡಿದ ಮೋಹನ್‌ ಬಗಾನ್‌ ತಂಡವು, ಅದರ ಗೆಲುವಿಗೆ ಅವಕಾಶ ಮಾಡಿಕೊಡಲಿಲ್ಲ. ನಿಗದಿತ ಸಮಯವು 2-2 ಗೋಲುಗಳೊಂದಿಗೆ ಸಮಬಲಗೊಂಡಿತು. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯ್ತು. ಈ ಅವಕಾಶದಲ್ಲಿಯೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. ಹೀಗಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯ್ತು.

ಪಂದ್ಯವು ಸಮಬಲಗೊಂಡಿದ್ದರಿಂದ ಪೆನಾಲ್ಟಿ ಶೂಟೌಟ್‌ ಮೂಲಕ ಚಾಂಪಿಯನ್‌ಗಳು ಯಾರೆಂದು ನಿರ್ಧರಿಸಲಾಯ್ತು. ಅಂತಿಮವಾಗಿ ಪೆನಾಲ್ಟಿಯಲ್ಲಿ 4-3 ಗೋಲುಗಳ ರೋಚಕ ಅಂತರದಿಂದ ಬೆಂಗಳೂರು ಎಫ್‌ಸಿಯನ್ನು ಸೋಲಿಸಿದ ATK ಮೋಹನ್ ಬಗಾನ್, ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ ಫೈನಲ್‌ ಪಂದ್ಯ ಗೆದ್ದು ಸಂಭ್ರಮಿಸಿತು.

ಮೋಹನ್‌ ಬಗಾನ್‌ ಪರ ಡಿಮಿಟ್ರಿ ಪೆಟ್ರಾಟೋಸ್ ಅವರು ಶೂಟೌಟ್‌ನಲ್ಲಿ ಮೂರು ಪೆನಾಲ್ಟಿ ಗೋಲುಗಳನ್ನು ಗಳಿಸಿದರು. ಆದರೆ, ಬಗಾನ್‌ ಪಡೆಯಯನ್ನುಗೆಲುವಿನ ಸನಿಹಕ್ಕೆ ತಂದವರು ವಿಶಾಲ್ ಕೈತ್. ಬ್ರೂನೋ ರಮಿರೆಸ್‌ ಅವರ ಗೋಲೊಂದನ್ನು ಅದ್ಭುತವಾಗಿ ತಡೆದ ಅವರು, ಎಎಫ್‌ಸಿ ಗೆಲುವಿಗೆ ಅಡ್ಡಿಯಾದರು.

ಪಂದ್ಯದ ಆರಂಭಿಕ ಹಂತದಲ್ಲೇ ಶಿವಶಕ್ತಿ ನಾರಾಯಣನ್ ಅವರು ಗಾಯಗೊಂಡರು. ಹೀಗಾಗಿ ಅವರನ್ನು ಚಿಕಿತ್ಸೆಗೆ ಕಳುಹಿಸಲಾಯ್ತು. ಹೀಗಾಗಿ ಬೆಂಗಳೂರು ಎಫ್‌ಸಿ ಸುನಿಲ್ ಛೆಟ್ರಿ ಅವರನ್ನು ಮೈದಾನಕ್ಕೆ ಬೇಗನೆ ಎಂಟ್ರಿಕೊಟ್ಟರು.

ಪಂದ್ಯದ 13ನೇ ನಿಮಿಷದಲ್ಲಿ ಕೃಷ್ಣ ಪೆಟ್ರಾಟೋಸ್ ಕಾರ್ನರ್‌ನಿಂದ ಚೆಂಡನ್ನು ಹ್ಯಾಂಡಲ್ ಮಾಡಿದಾಗ ಎಟಿಕೆಎಂಬಿಗೆ ಪೆನಾಲ್ಟಿ ಸಿಕ್ಕಿತು. ಪೆಟ್ರಾಟೋಸ್ ಅದನ್ನು ಗೋಲಾಗಿ ಪರಿವರ್ತಿಸಿ, ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬೆಂಗಳೂರು ಎಫ್‌ಸಿ ಮೇಲೆ ನಿರಂತರ ಒತ್ತಡ ಹೇರಿದ ತಂಡವು, ಪಂದ್ಯದ ಪೂರ್ಣ ಅವಧಿ ಸಮಬಲಗೊಂಡರೂ, ಬೆಂಗಳೂರಿನ ಒತ್ತಡವನ್ನು ಇಮ್ಮಡಿಗೊಳಿಸಿತು.

ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಎಟಿಕೆಎಂಬಿ ತಂಡವು 6 ಕೋಟಿ ರೂಪಾಯಿ ಬಹುಮಾನವನ್ನು ಪಡೆದುಕೊಂಡರೆ, ರನ್ನರ್ ಅಪ್ ಬೆಂಗಳೂರು ಎಫ್‌ಸಿ 2.5 ಕೋಟಿ ರೂಪಾಯಿ ಪಡೆದಿದೆ.

ಎಟಿಕೆ ಮೋಹನ್ ಬಗಾನ್ (ATK Mohun Bagan) ತಂಡವು ಸೆಮಿ ಫೈನಲ್‌ನಲ್ಲಿ ಹೈದರಾಬಾದ್ ಎಫ್‌ಸಿ (Hyderabad FC) ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಬೆಂಗಳೂರು ಎಫ್‌ಸಿ ರೋಚಕವಾಗಿ ಫೈನಲ್‌ ಪ್ರವೇಶಿಸಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು