logo
ಕನ್ನಡ ಸುದ್ದಿ  /  Sports  /  Cricket News Adidas Unveils First Look Of Team India New Jerseys For Odi T20i And Test Cricket Wtc Final Jra

Adidas: ಟೀಮ್ ಇಂಡಿಯಾದ ಹೊಸ ಜೆರ್ಸಿ ಅನಾವರಣಗೊಳಿಸಿದ ಅಡಿಡಾಸ್;‌ ಎಷ್ಟು ಸುಂದರವಾಗಿದೆ ನೋಡಿ

Jayaraj HT Kannada

Jun 01, 2023 08:46 PM IST

ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟಿಗರು

    • ಅಡಿಡಾಸ್ ಕಂಪನಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಟೀಮ್ ಇಂಡಿಯಾದ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದೆ.
ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟಿಗರು
ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟಿಗರು (PTI)

ಭಾರತ ಕ್ರಿಕೆಟ್‌ ತಂಡದ (Team India) ಅಧಿಕೃತ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡಿರುವ ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಡಿಡಾಸ್ (Adidas) ಕಂಪನಿಯು, ಭಾರತ ತಂಡದ ಆಟಗಾರರ ಹೊಸ ಜೆರ್ಸಿ ರಿವೀಲ್‌ ಮಾಡಿದೆ. ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ (World Test Championship final) ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಈ ಹೊಸ ಜರ್ಸಿಯನ್ನು ಅಡಿಡಾಸ್‌ ಸಂಸ್ಥೆಯು ಇಂದು (ಗುರುವಾರ) ಅನಾವರಣಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಟೆಸ್ಟ್‌, ಏಕದಿನ ಹಾಗೂ ಟಿ20 ತಂಡಕ್ಕೆ ಮೂರು ಪ್ರತ್ಯೇಕ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಇದೇ ಜೂನ್‌ 7ರಂದು ಇಂಗ್ಲೆಂಡ್‌ನ ಓವಲ್‌ ಮೈದಾನದಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಹೊಸ ಬಿಳಿ ಜೆರ್ಸಿಯೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ, ಓವಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಅಡಿಡಾಸ್ ಇಂಡಿಯಾವು ತನ್ನ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಅಧಿಕೃತವಾಗಿ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಏಕದಿನ, ಟಿ20 ಮತ್ತು ಟೆಸ್ಟ್ ಮಾದರಿಗಳಿಗಾಗಿ ಹೊಚ್ಚಹೊಸ ಜರ್ಸಿಯ ಮೊದಲ ನೋಟವನ್ನು ಅನಾವರಣಗೊಳಿಸಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಮೂರು ಬೃಹತ್ ಜೆರ್ಸಿಗಳನ್ನು ಅನಾವರಣಗೊಳಿಸುವ ಮಾದರಿಯಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಗಿದೆ. ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ ಸಂಸ್ಥೆಯು, ಅಡಿಡಾಸ್ ಇಂಡಿಯಾ ವೆಬ್‌ಸೈಟ್ (www.adidas.co.in) ಮತ್ತು ದೇಶಾದ್ಯಂತ ಇರುವ ಮಳಿಗೆಗಳಲ್ಲಿ ಜರ್ಸಿಗಳನ್ನು ಚಿಲ್ಲರೆ ಮಾರಾಟ ಮಾಡಲು ಆರಂಭಿಸಲಿದೆ.

“ಒಂದು ಅಪ್ರತಿಮ ಕ್ಷಣ. ಐತಿಹಾಸಿಕ ಕ್ರೀಡಾಂಗಣ. ಟೀಮ್ ಇಂಡಿಯಾದ ಹೊಸ ಜೆರ್ಸಿಗಳನ್ನು ಪರಿಚಯಿಸುತ್ತಿದ್ದೇವೆ,” ಎಂದು ಅಡಿಡಾಸ್ ಇಂಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕಳೆದ ತಿಂಗಳು ಪುರುಷರ ತಂಡದ ಹೊಸ ಕಿಟ್ ಪ್ರಾಯೋಜಕರಾಗಿ ಅಡಿಡಾಸ್‌ ಸಂಸ್ಥೆಯನ್ನು ಘೋಷಿಸಿತ್ತು.

“ಕಿಟ್ ಪ್ರಾಯೋಜಕರಾಗಿ ಅಡಿಡಸ್‌ ಜೊತೆಗೆ ಬಿಸಿಸಿಐನ ಪಾಲುದಾರಿಕೆ ಬಗ್ಗೆ ಘೋಷಿಸಲು ನನಗೆ ಸಂತೋಷವಾಗಿದೆ. ನಾವು ಕ್ರಿಕೆಟ್ ಆಟವನ್ನು ಬೆಳೆಸಲು ಬದ್ಧರಾಗಿದ್ದೇವೆ. ಇಂತಹ ಸಮಯದಲ್ಲಿ ವಿಶ್ವದ ಪ್ರಮುಖ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಡಿಡಾಸ್‌ನೊಂದಿಗೆ ಪಾಲುದಾರರಾಗಲು ಹೆಚ್ಚು ಉತ್ಸುಕರಾಗಿದ್ದೇವೆ. ಹೊಸ ಪ್ರಾಯೋಜಕರಿಗೆ ಸ್ವಾಗತ,” ಎಂದು ಜಯ್ ಶಾ ಟ್ವೀಟ್ ಮಾಡಿದ್ದರು.

ಈ ಹಿಂದಿನ ಕಿಟ್ ಪ್ರಾಯೋಜಕತ್ವ ಒಪ್ಪಂದದ ಪ್ರಕಾರ, 2023ರ ಅಂತ್ಯದವರೆಗೆ ಎಂಪಿಎಲ್ ಪ್ಯಾಯೋಜಕತ್ವ ವಹಿಸಬೇಕಿತ್ತು. ಆದರೆ, ತನ್ನ ಒಪ್ಪಂದವನ್ನು 2023ರ ಅಂತ್ಯದವರೆ ಉಳಿಸಲು ಬಯಸದ ಎಂಪಿಎಲ್‌, ಅದನ್ನು ಅರ್ಧದಲ್ಲೇ ಮೊಟಕುಗೊಳಿಸಲು ನಿರ್ಧರಿಸಿತು. ಹೀಗಾಗಿ ಎಂಪಿಎಲ್‌ ಸಂಸ್ಥೆಯು ಅಷ್ಟೇನೂ ಪ್ರಸಿದ್ಧವಲ್ಲದ ಉಡುಪು ಬ್ರ್ಯಾಂಡ್ ಆಗಿರುವ ಕಿಲ್ಲರ್ ಕಂಪನಿಗೆ, ಭಾರತ ತಂಡದ ಕಿಟ್ ಪ್ರಾಯೋಜಕತ್ವವನ್ನು ವಹಿಸಿಕೊಟ್ಟಿತು. ಇದು ಆ ಎರಡು ಕಂಪನಿಯೊಳಗಿನ ಉಪ ಒಪ್ಪಂದ. ಎಂಪಿಎಲ್ ಕಂಪನಿಯು ಮೂರು ವರ್ಷಗಳ ಒಪ್ಪಂದಕ್ಕೆ ಬಿಸಿಸಿಐಗೆ 9 ಕೋಟಿ ರೂಪಾಯಿಯನ್ನು ರಾಯಲ್ಟಿಯಾಗಿ ಪಾವತಿಸುತ್ತಿತ್ತು. ಅಲ್ಲದೆ ಪ್ರತಿ ಪಂದ್ಯಕ್ಕೆ 65 ಲಕ್ಷ ಪಾವತಿಸುತ್ತಿತ್ತು.

    ಹಂಚಿಕೊಳ್ಳಲು ಲೇಖನಗಳು