logo
ಕನ್ನಡ ಸುದ್ದಿ  /  ಕ್ರೀಡೆ  /  Cricket In Olympics: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಭಾರತವೇ ನಿರ್ಣಾಯಕ; ಒಲಿಂಪಿಕ್ ಸಮಿತಿ ಮುಂದೆ ಧನಲಾಭದ ಪ್ರಸ್ತಾಪ

Cricket in Olympics: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಭಾರತವೇ ನಿರ್ಣಾಯಕ; ಒಲಿಂಪಿಕ್ ಸಮಿತಿ ಮುಂದೆ ಧನಲಾಭದ ಪ್ರಸ್ತಾಪ

Rasesh Mandani HT Kannada

May 20, 2023 07:00 AM IST

ಭಾರತ ಕ್ರಿಕೆಟ್‌ ತಂಡ

    • ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ, 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಒಲಿಂಪಿಕ್ ಗೇಮ್ಸ್‌ ನಡೆಯಲಿದೆ. ಈ ಜಾಗತಿಕ ಕ್ರೀಡಾಹಬ್ಬಕ್ಕೆ ಕ್ರಿಕೆಟ್‌ ಆಟವನ್ನು ಸೇರಿಸುವ ಕೂಗು ಮುನ್ನೆಲೆಗೆ ಬಂದಿದೆ. ಇದೇ ವಿಷಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಿರಂತರವಾಗಿ ಶ್ರಮಿಸುತ್ತಿದೆ.
ಭಾರತ ಕ್ರಿಕೆಟ್‌ ತಂಡ
ಭಾರತ ಕ್ರಿಕೆಟ್‌ ತಂಡ (ANI)

ಭಾರತದಲ್ಲಿ ಕ್ರಿಕೆಟ್ ಕ್ಷೇತ್ರವು ಗೆಲುವಿನ ಉತ್ತುಂಗಕ್ಕೇರಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕ್ರಿಕೆಟ್‌ ಉನ್ನತ ಸ್ಥಾನ ಪಡೆದಿದೆ. ಭಾರತ ಕ್ರಿಕೆಟ್‌ನ ನಿಯಂತ್ರಣ ಮಂಡಳಿಯಾಗಿರುವ ಬಿಸಿಸಿಐ, ಕ್ರಿಕೆಟ್‌ಗೆ ದೊಡ್ಡಣ್ಣನಾಗಿ ಮೆರೆಯುತ್ತಿದೆ. ವಿಶ್ವ ಕ್ರಿಕೆಟ್‌ನ ಮೂಗುದಾರ ಹಿಡಿದಿರುವ ಐಸಿಸಿ ಕೂಡಾ ಬಿಸಿಸಿಐ ಪವರ್‌ ಹಾಗೂ ಹಣಬಲದ ಮುಂದೆ ಮಂಕಾಗುತ್ತದೆ. ದೇಶದ ಕ್ರಿಕೆಟ್ ಮಾರುಕಟ್ಟೆಯು ಅಷ್ಟು ದೊಡ್ಡ ಮಟ್ಟಿಗೆ ವಿಸ್ತರಿಸಿಕೊಂಡಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಮಹತ್ತರ ಬದಲಾವಣೆಗಳನ್ನು ತರುವ ಸಾಮರ್ಥ್ಯ ಬಿಸಿಸಿಐಗಿದೆ. ಇದೇ ಪವರ್‌, ಈಗ ಮತ್ತೊಂದು ಹೊಸತನಕ್ಕೆ ಕಾರಣವಾಗುವ ಸೂಚನೆ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

2024ರಲ್ಲಿ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ, 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಒಲಿಂಪಿಕ್ ಗೇಮ್ಸ್‌ ನಡೆಯಲಿದೆ. ಈ ಜಾಗತಿಕ ಕ್ರೀಡಾಹಬ್ಬಕ್ಕೆ ಕ್ರಿಕೆಟ್‌ ಆಟವನ್ನು ಸೇರಿಸುವ ಕೂಗು ಮುನ್ನೆಲೆಗೆ ಬಂದಿದೆ. ಇದೇ ವಿಷಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)ಯು ನಿರಂತರವಾಗಿ ಶ್ರಮಿಸುತ್ತಿದೆ. ವಿಶೇಷವೆಂದರೆ, ಒಲಿಂಪಿಕ್ಸ್‌ ಸಮಿತಿಯನ್ನು ಮೆಚ್ಚಿಸುವ ಸಲುವಾಗಿ ಐಸಿಸಿಯು ಭಾರತವನ್ನು ಆಗಾಗ ತೋರಿಸುತ್ತಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಅನ್ನು ಸೇರಿಸುವ ಮೂಲಕ ಆರ್ಥಿಕವಾಗಿ ಹಿಗ್ಗಲು ಭಾರತ ನೆರವಾಗಲಿದೆ ಎಂದು ಒಲಿಂಪಿಕ್ಸ್‌ ಸಮಿತಿಗೆ ಐಸಿಸಿ ಹೇಳುತ್ತಾ ಬರುತ್ತಿದೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಮತ್ತು ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನ ಸಂಘಟನಾ ಸಮಿತಿಗೆ ನಿಯಮಿತವಾಗಿ ಮನವಿಗಳನ್ನು ಐಸಿಸಿ ಸಲ್ಲಿಸುತ್ತಾ ಬರುತ್ತಿದೆ. ಇತ್ತೀಚೆಗೆ, ಈ ಸಂಬಂಧ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಕ್ರಿಕೆಟ್‌ ಅನ್ನು ಉಸಿರಾಡುವ ಭಾರತದಲ್ಲಿ ಕ್ರಿಕೆಟ್‌ ಎಂದರೆ ಹಣದ ಹೊಳೆಯೇ ಹರಿದು ಬರುತ್ತದೆ. ಇದಕ್ಕೆ ಕಾರಣ ಅಭಿಮಾನಿಗಳ ಸಂಖ್ಯೆ. ಕ್ರಿಕೆಟ್‌ ಪಂದ್ಯಗಳಿಗೆ ಜಾಹೀರಾತು, ಮಾಧ್ಯಮ ಹಕ್ಕು ಹೀಗೆ ಎಲ್ಲಾ ವಲಯಗಳಿಂದಲೂ ಹಣದ ರಾಶಿಯೇ ಹರಿಯುತ್ತದೆ. ಹೀಗಾಗಿ, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾದರೆ, ಭಾರತದಿಂದ ಹಣಕಾಸಿನ ಹರಿವಿನ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಗಮನಕ್ಕೆ ತರಲು ಐಸಿಸಿ ಪ್ರಯತ್ನಿಸುತ್ತಿದೆ.

“ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸಿದರೆ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಮಾಧ್ಯಮ ಹಕ್ಕುಗಳಿಂದ ಭಾರತದಲ್ಲಿ ಸೃಷ್ಟಿಯಾಗುವ ಆದಾಯವು ಕಡಿಮೆ ಎಂದರೆ 130 ಮಿಲಿಯನ್‌ ಡಾಲರ್‌ಗೆ ಏರುತ್ತದೆ. ಇದು ಗರಿಷ್ಠ 260 ಮಿಲಿಯನ್‌ ಡಾಲರ್‌ಗೆ ತಲುಪುವ ಸಾಧ್ಯತೆಯೂ ಇದೆ ಎಂದು ಐಸಿಸಿ ವಾದಿಸಿದೆ,” ಎಂದು ಕ್ರಿಕೆಟ್‌ ಮಂಡಳಿಯ ಮೂಲವೊಂದು ತಿಳಿಸಿದೆ. ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್‌ ಪ್ರಸಾರದ ಹಕ್ಕುಗಳನ್ನು ಭಾರತದಲ್ಲಿ ವಯಾಕಾಮ್ 18 ಖರೀದಿಸಿದೆ. ಈ ಒಪ್ಪಂದವು 31 ಮಿಲಿಯನ್ ಡಾಲರ್‌ ಮೌಲ್ಯದ್ದು ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಐಸಿಸಿ ಈವೆಂಟ್‌ಗಳ ಮಾಧ್ಯಮ ಹಕ್ಕುಗಳಿಗೂ ಕೂಡಾ ಭಾರತೀಯ ಪ್ರಸಾರಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಮುಂದಿಟ್ಟುಕೊಂಡು ಐಸಿಸಿಯು ಐಒಸಿ ಮುಂದೆ ನಿಂತಿದೆ. ಐಸಿಸಿಯ ಮಾಧ್ಯಮ ಹಕ್ಕುಗಳು ಭಾರತದಲ್ಲಿ 400 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆ ಐಸಿಸಿಗೂ ಹೆಚ್ಚು ಆದಾಯ ತಂದುಕೊಡುವ ಮಾರುಕಟ್ಟೆಯಾಗಿದೆ.

ಒಲಂಪಿಕ್ಸ್‌ಗೆ ಕ್ರಿಕೆಟ್‌ ಸೇರಿಸುವ ಪ್ರಸ್ತಾಪವನ್ನು ಮಾಡುವ ಸಲುವಾಗಿ, ಐಸಿಸಿಯು ಪ್ರತಿ ಬಾರಿಯು ಭಾರತದ ಜನಸಂಖ್ಯಾ ಪ್ರಯೋಜನ ಮತ್ತು ಕ್ರಿಕೆಟ್ ಮೇಲಿನ ಜನರ ಅತೀವ ಪ್ರೀತಿಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡುತ್ತಿದೆ. ಡಿಜಿಟಲ್ ಮಾಧ್ಯಮವು ದೇಶಾದ್ಯಂತ ವ್ಯಾಪಿಸಿಕೊಂಡಿದ್ದು, ಯುವಜನ ಮತ್ತು ಡಿಜಿಟಲ್‌ ಮಾಧ್ಯಮವು ಕ್ರೀಡೆಯ ಜನಪ್ರಿಯತೆಯನ್ನು ನಿರ್ಧರಿಸುವ ಪ್ರಮುಖ ಮಾನದಂಡಗಳಲ್ಲಿ ಒಂದಾಗಿದೆ.

“ನಾವು ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ಅವರಲ್ಲಿ ಸುಮಾರು 90 ಪ್ರತಿಶತದಷ್ಟು ಜನರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಾರೆ” ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.

ಒಲಿಂಪಿಕ್ಸ್‌ ಸಮಿತಿಯು ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾದ ಒಟ್ಟು ಅಥ್ಲೀಟ್‌ಗಳ ಸಂಖ್ಯೆಯನ್ನು 10,500ಕ್ಕೆ ಮಿತಿಗೊಳಿಸಲು ಉದ್ದೇಶಿಸಿದೆ. ಹೀಗಾಗಿ ಐಸಿಸಿಯು ತನ್ನ ಪ್ರಸ್ತಾವನೆಯಲ್ಲಿ, ಭಾಗವಹಿಸುವ ಕ್ರಿಕೆಟ್‌ ತಂಡಗಳ ಸಂಖ್ಯೆಯನ್ನು ತಲಾ ಆರಕ್ಕೆ ಇಳಿಸಿದೆ. ಇದು ಪುರುಷ ಮತ್ತು ಮಹಿಳೆಯರ ತಂಡಗಳಿಗೆ ಅನ್ವಯವಾಗಲಿದೆ. ಅಲ್ಲದೆ ಟಿ20 ಸ್ವರೂಪದ ಕ್ರಿಕೆಟ್‌ ಅನ್ನು ಆಡಿಸುವ ಲೆಕ್ಕಾಚಾರ ಪ್ರಸ್ತಾವನೆಯಲ್ಲಿದೆ.

ಅಕ್ಟೋಬರ್ ತಿಂಗಳಲ್ಲಿ ಮುಂಬೈನಲ್ಲಿ ಐಒಸಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು