logo
ಕನ್ನಡ ಸುದ್ದಿ  /  ಕ್ರೀಡೆ  /  Sachin Tendulkar Birthday: ಶಾರ್ಜಾ ಸ್ಟೇಡಿಯಂ ಸ್ಟ್ಯಾಂಡ್‌ಗೆ ಸಚಿನ್ ಹೆಸರು; ಅರಬ್ ರಾಷ್ಟ್ರದಲ್ಲಿ ಕ್ರಿಕೆಟ್ ದೇವರಿಗೆ ಗೌರವ

Sachin Tendulkar birthday: ಶಾರ್ಜಾ ಸ್ಟೇಡಿಯಂ ಸ್ಟ್ಯಾಂಡ್‌ಗೆ ಸಚಿನ್ ಹೆಸರು; ಅರಬ್ ರಾಷ್ಟ್ರದಲ್ಲಿ ಕ್ರಿಕೆಟ್ ದೇವರಿಗೆ ಗೌರವ

Jayaraj HT Kannada

Apr 25, 2023 06:43 PM IST

ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ (ಬಲ)

    • ಐತಿಹಾಸಿಕ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿರುವ ವೆಸ್ಟ್ ಸ್ಟ್ಯಾಂಡ್ ಅನ್ನು ‘ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್’ ಎಂದು ಮರುನಾಮಕರಣ ಮಾಡಲಾಗಿದೆ. 
ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ (ಬಲ)
ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ (ಬಲ) (PTI)

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೋಮವಾರ (ಏಪ್ರಿಲ್ 24) ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತದ ಕ್ರಿಕೆಟ್ ದಿಗ್ಗಜನನ್ನು ಗೌರವಿಸುವ ಸಲುವಾಗಿ ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ(Sharjah stadium)ನಲ್ಲಿ ಸ್ಟ್ಯಾಂಡ್ ಒಂದಕ್ಕೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಐತಿಹಾಸಿಕ ಸ್ಟೇಡಿಯಂನಲ್ಲಿರುವ ವೆಸ್ಟ್ ಸ್ಟ್ಯಾಂಡ್ ಅನ್ನು 'ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್'(Sachin Tendulkar Stand) ಎಂದು ಮರುನಾಮಕರಣ ಮಾಡಲಾಗಿದೆ. ಸೋಮವಾರ ನಡೆದ ವಿಶೇಷ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್‌ಗೆ ಈ ಗೌರವ ಸಮರ್ಪಿಸಲಾಯ್ತು.

ಭಾರತ ಬ್ಯಾಟಿಂಗ್ ದಂತಕಥೆಯ ಜನ್ಮದಿನ ಮಾತ್ರವಲ್ಲದೆ, 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಸಚಿನ್‌ ಸಿಡಿಸಿದ್ದರು. ಇದರ 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಚಿನ್‌ಗೆ ಈ ಗೌರವ ಸಂದಿದೆ. 34 ಕ್ರೀಡಾಂಗಣಗಳಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಸಚಿನ್ 49 ಶತಕಗಳನ್ನು ಸಿಡಿಸಿದ್ದಾರೆ.

ಸ್ಟ್ಯಾಂಡ್ ಅನ್ನು ಹೆಸರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್, "ದುರದೃಷ್ಟವಶಾತ್ ನನಗೆ ಬೇರೆ ಬದ್ಧತೆಗಳು ಇದ್ದ ಕಾರಣದಿಂದ ನಾನು ಅಲ್ಲಿರಲು ಆಗಿಲ್ಲ. ಶಾರ್ಜಾದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ. ಅಪಾರ ಪ್ರೀತಿ, ವಾತ್ಸಲ್ಯ ಮತ್ತು ಬೆಂಬಲ ಅಲ್ಲಿ ನನಗೆ ದೊರಕಿದೆ. ಶಾರ್ಜಾ ಮೈದಾನವು ಪ್ರಪಂಚದಾದ್ಯಂತದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುಂಬಿರುವ ವಿಶೇಷ ಸ್ಥಳವಾಗಿದೆ,” ಎಂದು ಅವರು ಹೇಳಿದರು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಗಿನ್ನೆಸ್ ದಾಖಲೆಯನ್ನು ಹೊಂದಿದೆ. ಇಲ್ಲಿ ಬರೋಬ್ಬರಿ 244 ಏಕದಿನ ಪಂದ್ಯಗಳನ್ನು ಆಡಲಾಗಿದೆ.

ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ ಮಾತನಾಡಿ, ಕ್ರಿಕೆಟ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಸಚಿನ್ ಅವರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮ್ಮದೊಂದು ಚಿಕ್ಕ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. "ಕ್ರಿಕೆಟ್‌ಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಗೌರವ ಸಲ್ಲಿಸುವುದು ನಿರ್ವಾಹಕರಾಗಿ ನಮ್ಮ ಕರ್ತವ್ಯ ಎಂದು ನಾವು ನಂಬುತ್ತೇವೆ. ಅಲ್ಲದೆ ನಾವು ಅದನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಸಚಿನ್‌ ತೆಂಡೂಲ್ಕರ್‌ಗೆ ಹುಟ್ಟುಹಬ್ಬದ ವಿಶೇಷ ದಿನದ ಅಂಗವಾಗಿ ಆಸ್ಟ್ರೇಲಿಯಾದ ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನ (Sydney Cricket Ground)ದಲ್ಲಿ ಸಚಿನ್ ಅವರ ಹೆಸರಿನ ಗೇಟ್ ಅನ್ನು ಸೋಮವಾರ (ಏಪ್ರಿಲ್‌ 24) ಅನಾವರಣಗೊಳಿಸಲಾಗಿತ್ತು. ಕ್ರಿಕೆಟ್‌ನಲ್ಲಿ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿರುವ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿರುವ ಲಿಟಲ್‌ ಮಾಸ್ಟರ್‌, ಎಸ್‌ಸಿಜಿ (SCG)ಯಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಆಕರ್ಷಕ ಶತಕಗಳು ಸೇರಿದಂತೆ ಒಟ್ಟು 785 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 2004ರಲ್ಲಿ ಸಿಡಿಸಿದ ಅಜೇಯ 241 ರನ್‌, ಆ ಮೈದಾನದಲ್ಲಿ ಸಿಡಿಸಿದ ಅತ್ಯಧಿಕ ರನ್‌. ಹೀಗಾಗಿ ಭಾರತದ ಹೊರಗೆ ಸಚಿನ್‌ ಅವರ ನೆಚ್ಚಿನ ಕ್ರಿಕೆಟ್ ಮೈದಾನ ಎಂದೇ ಎಸ್‌ಸಿಜಿಗೆ ಹೇಳಲಾಗುತ್ತದೆ. ಇಲ್ಲಿ ಸಚಿನ್‌ ಸರಾಸರಿ ಬರೋಬ್ಬರಿ 157 ಎಂಬುದು ವಿಶೇಷ. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾವು ಈ ವಿಶೇಷ ದಿನದಂದು ಅವರಿಗೆ ವಿಶೇಷ ಗೌರವ ನೀಡಿದೆ.

“ಭಾರತದಿಂದ ಹೊರಗೆ ಸಿಡ್ನಿ ಕ್ರಿಕೆಟ್ ಮೈದಾನವು ನನ್ನ ನೆಚ್ಚಿನ ಕ್ರೀಡಾಂಗಣವಾಗಿದೆ. 1991-92ರಲ್ಲಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಿನಿಂದ ಈ ಮೈದಾನಲ್ಲಿ ಹಲವು ಮಾಸದ ನೆನಪುಗಳಿವೆ” ಎಂದು ಎಸ್‌ಸಿಜಿ ಹೊರಡಿಸಿದ ಪ್ರಕಟಣೆಯಲ್ಲಿ ತೆಂಡೂಲ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

    ಹಂಚಿಕೊಳ್ಳಲು ಲೇಖನಗಳು