logo
ಕನ್ನಡ ಸುದ್ದಿ  /  ಕ್ರೀಡೆ  /  Ipl 2023 Final: ಚೆನ್ನೈನಲ್ಲಿ ಗೆದ್ದ ಸಿಎಸ್‌ಕೆಗೆ ಅಹಮದಾಬಾದ್ ಮೈದಾನದಲ್ಲಿ ಮತ್ತೆ ಗುಜರಾತ್ ಸವಾಲು; ಈ ಸಲ ಕಪ್ ಯಾರಿಗೆ

IPL 2023 Final: ಚೆನ್ನೈನಲ್ಲಿ ಗೆದ್ದ ಸಿಎಸ್‌ಕೆಗೆ ಅಹಮದಾಬಾದ್ ಮೈದಾನದಲ್ಲಿ ಮತ್ತೆ ಗುಜರಾತ್ ಸವಾಲು; ಈ ಸಲ ಕಪ್ ಯಾರಿಗೆ

Jayaraj HT Kannada

May 28, 2023 09:41 AM IST

ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ

    • ಎಂಎಸ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಅಹಮದಾಬಾದ್‌ ಮೈದಾನದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ. ಸತತ ಎರಡನೇ ಟ್ರೋಫಿ ಮೇಲೆ ಹಾರ್ದಿಕ್‌ ಪಾಂಡ್ಯ ಬಳಗ ಕಣ್ಣಿಟ್ಟಿದೆ.
ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ
ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ

ಐಪಿಎಲ್‌ನ 16ನೇ ಆವೃತ್ತಿಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಐಪಿಎಲ್ 2023ನೇ ಆವೃತ್ತಿಯ ಫೈನಲ್‌ ಪಂದ್ಯ ನಡೆಯುತ್ತಿದ್ದು, ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT) ಸವಾಲೆಸೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಲೀಗ್ ಹಂತದ ಹದಿನಾಲ್ಕು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದ ಸಿಎಸ್‌ಕೆ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಅದರಂತೆಯೇ ನೇರವಾಗಿ ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟ ತಂಡವು, ಹಾಲಿ ಚಾಂಪಿಯನ್‌ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಇದು ಈ ತಂಡದ 10ನೇ ಐಪಿಎಲ್ ಫೈನಲ್ ಆಗಿದೆ.

ಬ್ಯಾಟಿಂಗ್‌ನಲ್ಲಿ ಚೆನ್ನೈ ಅತ್ಯಂತ ಬಲಿಷ್ಠ

ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ತಂಡದ ಬ್ಯಾಟಿಂಗ್‌ ಲೈನಪ್‌ ಅತ್ಯಂತ ಬಲಿಷ್ಠವಾಗಿದೆ. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಸೀಸನ್‌ನಲ್ಲಿ 564 ರನ್ ಗಳಿಸಿದ್ದಾರೆ. ಇದೇ ವೇಳೆ ಮತ್ತೋರ್ವ ಆರಂಭಿಕ ಆಟಗಾರ ಡಿವೊನ್ ಕಾನ್ವೇ ಹದಿನಾಲ್ಕು ಇನ್ನಿಂಗ್ಸ್‌ಗಳಲ್ಲಿ 625 ರನ್‌ಗಳೊಂದಿಗೆ ತಂಡದ ಅಗ್ರ ಸ್ಕೋರರ್ ಆಗಿದ್ದಾರೆ. ಅಲ್ಲದೆ ಈ ಋತುವಿನಲ್ಲಿ ಈಗಾಗಲೇ ಆರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಶಿವಂ ದುಬೆ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 386 ಮತ್ತು 299 ರನ್ ಗಳಿಸಿ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಅಂಬಟಿ ರಾಯುಡು ಕಳಪೆ ಫಾರ್ಮ್‌ನಲ್ಲಿದ್ದರೂ, ಅವರ ಪಾಲಿಗೆ ಇದು ಅಂತಿಮ ಐಪಿಎಲ್ ಸೀಸನ್‌ನಂತೆ ಕಾಣುತ್ತಿದೆ.

ಬೌಲಿಂಗ್‌ನಲ್ಲಿ ಮೇಲ್ನೋಟಕ್ಕೆ ತಂಡವು ಬಲಿಷ್ಠವಾಗಿಲ್ಲ. ಶ್ರೀಲಂಕಾದ ಮಹೇಶ್ ತೀಕ್ಷಣ ಮತ್ತು ಮಥೀಶ ಪತಿರಾನ ಈ ಋತುವಿನಲ್ಲಿ ಕ್ರಮವಾಗಿ 11 ಮತ್ತು 17 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಡೆತ್‌ ಓವರ್‌ಗಳಲ್ಲಿ ಪತಿರಾನ ಮೋಡಿ ವರ್ಕೌಟ್‌ ಆಗಿದೆ. ಅತ್ತ ತುಷಾರ್ ದೇಶಪಾಂಡೆ ಪ್ರಸ್ತುತ 21 ವಿಕೆಟ್‌ಗಳೊಂದಿಗೆ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆದರೆ, ಪ್ರತಿ ಓವರ್‌ಗೆ ಬರೋಬ್ಬರಿ ಸುಮಾರು ಹತ್ತು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ 19 ಮತ್ತು ಮೊಯಿನ್ ಅಲಿ 9 ವಿಕೆಟ್ ಪಡೆದಿದ್ದಾರೆ.

ಸಿಎಸ್‌ಕೆ ಬೌಲರ್‌ಗಳು ಈ ಋತುವಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ತನ್ನ ತವರು ಮೈದಾನದ ಚೆನ್ನೈನಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಸುಲಭವಾಗಿ ಮಣಿಸಿದ್ದ ಚೆನ್ನೈ, ಭಾನುವಾರದಂದು ಅಹಮದಾಬಾದ್‌ನ ಬ್ಯಾಟಿಂಗ್-ಸ್ನೇಹಿ ಪಿಚ್‌ನಲ್ಲಿ ಮತ್ತೊಂದು ಸವಾಲು ಎದುರಿಸಲಿದೆ. ಇಂದಿನ ಪಂದ್ಯದಲ್ಲೂ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ಗುಜರಾತ್‌ ಆಲ್‌ರೌಂಡ್‌ ಆಟ

ಕಳೆದ ಬಾರಿಯಂತೆ, ಈ ಬಾರಿಯೂ ಗುಜರಾತ್‌ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡ್‌ ಆಟದಲ್ಲೂ ತಂಡ ಬಲಿಷ್ಠ ಎನಿಸಿಕೊಂಡಿದೆ. ತಂಡದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡುವ ಆಟಗಾರರ ದೊಡ್ಡ ಬಳಗವಿದೆ.

ಈ ವರ್ಷ ಫೈನಲ್‌ಗೂ ಮುನ್ನ ತಮ್ಮ ತವರು ಅಹಮದಾಬಾದ್‌ ಸ್ಟೇಡಿಯಂನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ತಂಡವು ಐದರಲ್ಲಿ ಗೆದ್ದಿದೆ. ಹೀಗಾಗಿ ತವರಿನಲ್ಲಿ ಗುಜರಾತ್‌ ಬಲಿಷ್ಠವೆನಿಸಿದೆ. ಇದೇ ವೇಳೆ ಟೂರ್ನಿಯಲ್ಲಿ ಪ್ರಬಲ ಫಾರ್ಮ್‌ನನಲ್ಲಿರುವ ಶುಬ್ಮನ್‌ ಗಿಲ್‌ ತವರಿನಲ್ಲಿ ಅಬ್ಬರದ ಆಟವಾಡುತ್ತಾರೆ. ಹೀಗಾಗಿ ಸಿಎಸ್‌ಕೆಗೆ ಗಿಲ್‌ ದೊಡ್ಡ ಸವಾಲಾಗಲಿದ್ದಾರೆ.

ಟೂರ್ನಿಯ ಉದ್ಘಾಟನಾ ಪಂದ್ಯವು ಇದೇ ಮೈದಾನದಲ್ಲಿ ನಡೆದಿತ್ತು. ಇಲ್ಲಿ ಚೆನ್ನೈ ತಂಡವು ಐದು ವಿಕೆಟ್‌ಗಳಿಂದ ಸೋತಿತು. ಆದರೆ, ಚೆನ್ನೈನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 15 ರನ್‌ಗಳಿಂದ ಸೋಲೊಪ್ಪಿತು. ಇದೀಗ ಪಂದ್ಯವು ಮತ್ತೆ ಅಹಮದಾಬಾದ್‌ನತ್ತ ಮುಖ ಮಾಡಿದ್ದು, ಉಭಯ ತಂಡಗಳ ತಂತ್ರಗಳು ಹೇಗೆ ಕೆಲಸ ಮಾಡಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಮೂವರು ಆಟಗಾರರು ಗುಜರಾತ್ ಟೈಟಾನ್ಸ್‌ ತಂಡದವರು ಎನ್ನುವುದು ವಿಶೇಷ. ಮೊಹಮದ್ ಶಮಿ 17.60ರ ಸರಾಸರಿಯಲ್ಲಿ 28 ವಿಕೆಟ್‌ ಪಡೆದಿದ್ದಾರೆ. 7.95ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಡೇಂಜರಸ್‌ ಲೆಗ್ ಸ್ಪಿನ್ನರ್ ರಶೀದ್ ಖಾನ್ 7.93ರ ಎಕಾನಮಿಯೊಂದಿಗೆ 27 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಕೇವಲ 13 ಪಂದ್ಯಗಳಲಿ ಆಡಿರುವ ಮೋಹಿತ್ ಶರ್ಮಾ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದರು. ಸದ್ಯ ಅವರು 7.89ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ 24 ವಿಕೆಟ್ ಸಂಪಾದಿಸಿದ್ದಾರೆ. ಅಲ್ಲದೆ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಸಿಎಸ್‌ಕೆ ಸಂಭಾವ್ಯ ಆಡುವ ಬಳಗ

ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾನ.

ಗುಜರಾತ್‌ ಸಂಭಾವ್ಯ ಆಡುವ ಬಳಗ

ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ ಲಿಟಲ್.

    ಹಂಚಿಕೊಳ್ಳಲು ಲೇಖನಗಳು