logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023: ಪಂದ್ಯ ಸೋತರೂ ದಾಖಲೆಯಿಂದ ಗಮನ ಸೆಳೆದ ಪಂಜಾಬ್ ನಾಯಕ ಶಿಖರ್ ಧವನ್; ಕೆಕೆಆರ್ ರೆಕಾರ್ಡ್ ಪಟ್ಟಿ ಇಲ್ಲಿದೆ

IPL 2023: ಪಂದ್ಯ ಸೋತರೂ ದಾಖಲೆಯಿಂದ ಗಮನ ಸೆಳೆದ ಪಂಜಾಬ್ ನಾಯಕ ಶಿಖರ್ ಧವನ್; ಕೆಕೆಆರ್ ರೆಕಾರ್ಡ್ ಪಟ್ಟಿ ಇಲ್ಲಿದೆ

May 09, 2023 02:27 PM IST

Kolkata Knight Riders vs Punjab Kings: ನಿತೀಶ್ ರಾಣಾ ಅವರ ಅರ್ಧಶತಕ ಮತ್ತು ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅವರ ಮ್ಯಾಚ್ ಫಿನಿಶಿಂಗ್ ನೆರವಿನಿಂದ, ಪಂಜಾಬ್‌ ವಿರುದ್ಧ ಕೆಕೆಆರ್ ತಂಡವು ಮತ್ತೊಂದು ರೋಚಕ ಜಯ ಸಾಧಿಸಿತು. ಈ ಪಂದ್ಯವು ಹಲವು ವಿಶೇಷತೆ ಹಾಗೂ ದಾಖಲೆಗಳಿಗೆ ಸಾಕ್ಷಿಯಾಯ್ತು.

  • Kolkata Knight Riders vs Punjab Kings: ನಿತೀಶ್ ರಾಣಾ ಅವರ ಅರ್ಧಶತಕ ಮತ್ತು ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅವರ ಮ್ಯಾಚ್ ಫಿನಿಶಿಂಗ್ ನೆರವಿನಿಂದ, ಪಂಜಾಬ್‌ ವಿರುದ್ಧ ಕೆಕೆಆರ್ ತಂಡವು ಮತ್ತೊಂದು ರೋಚಕ ಜಯ ಸಾಧಿಸಿತು. ಈ ಪಂದ್ಯವು ಹಲವು ವಿಶೇಷತೆ ಹಾಗೂ ದಾಖಲೆಗಳಿಗೆ ಸಾಕ್ಷಿಯಾಯ್ತು.
ರಿಂಕು ಸಿಂಗ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಮತ್ತೊಮ್ಮೆ ಕೆಕೆಆರ್‌ಗೆ ಪಂದ್ಯ ಗೆದ್ದು ಕೊಟ್ಟರು. ಈ ಋತುವಿನ ಐಪಿಎಲ್‌ನಲ್ಲಿ ಚೇಸಿಂಗ್‌ ನಡೆಸಿದ ಆರು ತಂಡಗಳು ಅಂತಿಮ ಎಸೆತದಲ್ಲಿ ಗುರಿ ಸಾಧಿಸಿ ಗೆದ್ದಿದೆ. 
(1 / 5)
ರಿಂಕು ಸಿಂಗ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಮತ್ತೊಮ್ಮೆ ಕೆಕೆಆರ್‌ಗೆ ಪಂದ್ಯ ಗೆದ್ದು ಕೊಟ್ಟರು. ಈ ಋತುವಿನ ಐಪಿಎಲ್‌ನಲ್ಲಿ ಚೇಸಿಂಗ್‌ ನಡೆಸಿದ ಆರು ತಂಡಗಳು ಅಂತಿಮ ಎಸೆತದಲ್ಲಿ ಗುರಿ ಸಾಧಿಸಿ ಗೆದ್ದಿದೆ. (PTI)
ಪಂಜಾಬ್‌ ನಾಯಕ ಶಿಖರ್ ಧವನ್ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನದ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅವರು ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಬಳಿಕ, ಐಪಿಎಲ್‌ನಲ್ಲಿ ಅರ್ಧಶತಕಗಳ ಅರ್ಧಶತಕವನ್ನು ಪೂರ್ಣಗೊಳಿಸಿದ ಮೂರನೇ ಆಟಗಾರ ಎನಿಸಿಕೊಂಡರು. ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು(58) ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಮತ್ತು ಧವನ್ ತಲಾ ಐವತ್ತು ಅರ್ಧಶತಕಗಳನ್ನು ತಮ್ಮ ದಾಖಲೆ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.
(2 / 5)
ಪಂಜಾಬ್‌ ನಾಯಕ ಶಿಖರ್ ಧವನ್ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನದ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅವರು ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಬಳಿಕ, ಐಪಿಎಲ್‌ನಲ್ಲಿ ಅರ್ಧಶತಕಗಳ ಅರ್ಧಶತಕವನ್ನು ಪೂರ್ಣಗೊಳಿಸಿದ ಮೂರನೇ ಆಟಗಾರ ಎನಿಸಿಕೊಂಡರು. ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು(58) ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಮತ್ತು ಧವನ್ ತಲಾ ಐವತ್ತು ಅರ್ಧಶತಕಗಳನ್ನು ತಮ್ಮ ದಾಖಲೆ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.(PTI)
ಈ ಪಂದ್ಯದ ಮೂಲಕ ಪಂಜಾಬ್‌ ವಿರುದ್ಧ ಕೆಕೆಆರ್‌ ತಂಡವು ತನ್ನ ಗೆಲುವಿನ ದಾಖಲೆಯನ್ನು 21ಕ್ಕೆ ವಿಸ್ತರಿಸಿತು. ತಂಡವೊಂದರ ವಿರುದ್ಧ ಐಪಿಎಲ್‌ನಲ್ಲೊ ಇದು ಎರಡನೇ ಅತಿ ಹೆಚ್ಚು ಗೆಲುವು.  ಕೆಕೆಆರ್‌ ವಿರುದ್ಧ ಮುಂಬೈ ತಂಡವು 23 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ.
(3 / 5)
ಈ ಪಂದ್ಯದ ಮೂಲಕ ಪಂಜಾಬ್‌ ವಿರುದ್ಧ ಕೆಕೆಆರ್‌ ತಂಡವು ತನ್ನ ಗೆಲುವಿನ ದಾಖಲೆಯನ್ನು 21ಕ್ಕೆ ವಿಸ್ತರಿಸಿತು. ತಂಡವೊಂದರ ವಿರುದ್ಧ ಐಪಿಎಲ್‌ನಲ್ಲೊ ಇದು ಎರಡನೇ ಅತಿ ಹೆಚ್ಚು ಗೆಲುವು.  ಕೆಕೆಆರ್‌ ವಿರುದ್ಧ ಮುಂಬೈ ತಂಡವು 23 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ.(AP)
ಕೆಕೆಆರ್‌ ನಾಯಕ ನಿತೀಶ್ ರಾಣಾ ಅವರ ಅರ್ಧಶತಕ ಮತ್ತು ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ ಜೊತೆಯಾಟದ ನೆರವಿನಿಂದ, ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
(4 / 5)
ಕೆಕೆಆರ್‌ ನಾಯಕ ನಿತೀಶ್ ರಾಣಾ ಅವರ ಅರ್ಧಶತಕ ಮತ್ತು ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ ಜೊತೆಯಾಟದ ನೆರವಿನಿಂದ, ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.(AP)
ಕೆಕೆಆರ್‌ ಬ್ಯಾಟಿಂಗ್‌ ದೈತ್ಯ ರಸೆಲ್‌, ಪಂಜಾಬ್‌ ವಿರುದ್ಧ 200.00 ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಅವರು ಆರ್‌ಸಿಬಿ ವಿರುದ್ಧ 205.18 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ದಾಖಲೆ ಹೊಂದಿದ್ದಾರೆ. 
(5 / 5)
ಕೆಕೆಆರ್‌ ಬ್ಯಾಟಿಂಗ್‌ ದೈತ್ಯ ರಸೆಲ್‌, ಪಂಜಾಬ್‌ ವಿರುದ್ಧ 200.00 ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಅವರು ಆರ್‌ಸಿಬಿ ವಿರುದ್ಧ 205.18 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ದಾಖಲೆ ಹೊಂದಿದ್ದಾರೆ. (AFP)

    ಹಂಚಿಕೊಳ್ಳಲು ಲೇಖನಗಳು