logo
ಕನ್ನಡ ಸುದ್ದಿ  /  ಕ್ರೀಡೆ  /  Dc Vs Pbks: ಮತ್ತೆ ವಾರ್ನರ್ ನೆಚ್ಚಿಕೊಂಡು ಸೋತ ಡೆಲ್ಲಿ; ಪ್ರಭ್‌ಸಿಮ್ರಾನ್ ಶತಕಕ್ಕೆ ಪಂಜಾಬ್‌ಗೆ ಒಲಿದ ಜಯ

DC vs PBKS: ಮತ್ತೆ ವಾರ್ನರ್ ನೆಚ್ಚಿಕೊಂಡು ಸೋತ ಡೆಲ್ಲಿ; ಪ್ರಭ್‌ಸಿಮ್ರಾನ್ ಶತಕಕ್ಕೆ ಪಂಜಾಬ್‌ಗೆ ಒಲಿದ ಜಯ

Jayaraj HT Kannada

May 13, 2023 11:34 PM IST

ಪಂಜಾಬ್‌ ಆಟಗಾರರ ಸಂಭ್ರಮ

    •  ಈ ಗೆಲುವಿನೊಂದಿಗೆ ಪಂಜಾಬ್‌ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
ಪಂಜಾಬ್‌ ಆಟಗಾರರ ಸಂಭ್ರಮ
ಪಂಜಾಬ್‌ ಆಟಗಾರರ ಸಂಭ್ರಮ

ಗೆಲ್ಲಲೇ ಬೇಕಾದ ಪಂದ್ಯವನ್ನು ಪಂಜಾಬ್‌ ಕಿಂಗ್ಸ್‌ (Punjab Kings) ಗೆದ್ದು ಬೀಗಿದರೆ, ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸೋಲೊಪ್ಪಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಲೀಗ್‌ನಿಂದ ಬಹುತೇಕ ಹೊರಬಿದ್ದಿದೆ. ಧವನ್‌ ಪಡೆ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾದ ವಾರ್ನರ್‌ ಪಡೆ, 31 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌, ಪ್ರಭ್‌ಸಿಮ್ರಾನ್ ಅವರ ಆಕರ್ಷಕ ಶತಕದ ನೆರವಿನಿಂದ 7 ವಿಕೆಟ್‌ ಕಳೆದುಕೊಂಡು 167 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ, ಮತ್ತೊಮ್ಮೆ ಸಂಪೂರ್ಣವಾಗಿ ನಾಯಕನ ಮೇಲೆ ಅವಲಂಬಿತವಾಯ್ತು. ಮಧ್ಯಮ ಹಾಗೂ ಕೆಳ ಕ್ರಮಾಂಕದ ವೈಫಲ್ಯದಿಂದಾಗಿ 8 ವಿಕೆಟ್‌ ನಷ್ಟಕ್ಕೆ 136 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಹೀಗಾಗಿ ಪ್ಲೇ ಆಫ್‌ ಕನಸನ್ನು ಬಹುತೇಕ ಕೈಚೆಲ್ಲಿದರೆ, ಪಂಜಾಬ್‌ ಇನ್ನೂ ಮುಂದಿನ ಹಂತಕ್ಕೆ ಲಗ್ಗೆ ಹಾಕುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಡೆಲ್ಲಿ ಪರ ನಾಯಕ ವಾರ್ನರ್‌ ಅರ್ಧಶತಕ ಸಿಡಿಸಿದರೆ, ಫಿಲಿಪ್‌ ಸಾಲ್ಟ್‌ 21 ರನ್‌ ಕಲೆ ಹಾಕಿದರು. ಪವರ್‌ಪ್ಲೇ ಉದ್ದಕ್ಕೂ ಸ್ಥಿರವಾಗಿ ಬ್ಯಾಟ್ ಬೀಸಿದ ಇವರಿಬ್ಬರೂ, ಮೊದಲ ವಿಕೆಟ್‌ಗೆ 69 ರನ್‌ ಕಲೆ ಹಾಕಿದರು. 68 ರನ್‌ಗಳವರೆಗೂ ವಿಕೆಟ್‌ ಕಳೆದುಕೊಳ್ಳದ ತಂಡವು, ಮುಂದಿನ 20 ರನ್‌ಗಳ ಒಳಗೆ ಅಗ್ರ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಮಿಚೆಲ್‌ ಮಾರ್ಷ್‌, ರಿಲೀ ರೋಸ್ಸೋ, ಅಕ್ಷರ್‌ ಪಟೇಲ್‌ ಒಂದಂಕಿ ಮೊತ್ತಕ್ಕೆ ಔಟಾದರು. ಮನೀಶ್‌ ಪಾಂಡೆ ಡಕೌಟ್‌ ಆದರು. ಕೆಳಕ್ರಮಾಂಕದಲ್ಲಿಗೂ ಸ್ಥಿರ ಪ್ರದರ್ಶನ ಬಾರದ ಕಾರಣ, ಡೆಲ್ಲಿ ಸೋಲೊಪ್ಪಿಕೊಳ್ಳಬೇಕಾಯ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಪರವೂ, ಪ್ರಭ್‌ಸಿಮ್ರಾನ್ ಬಿಟ್ಟರೆ ಯಾರಿಂದಲೂ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಸ್ಯಾಮ್‌ ಕರನ್‌ 20 ರನ್‌ ಗಳಿಸಿ ಎರಡಂಕಿ ಮೊತ್ತ ಗಳಿಸಿದರು. ಉಳಿದಂತೆ ಸಿಕಂದರ್‌ ರಝಾ 11 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲಾ ಆಟಗಾರರು ಒಂದಂಕಿ ಮೊತ್ತ ಮಾತ್ರ ಗಳಿಸಿದರು. ಸದ್ಯ, ಪ್ರಭ್‌ ಶತಕದಾಟದಿಂದಾಗಿ ಪಂಜಾಬ್‌ಗೆ ಗೆಲುವು ಒಲಿದಿದೆ.

ಪಂಜಾಬ್‌ ಪರ ಹರ್‌ಪ್ರೀತ್‌ ಬ್ರಾರ್‌ ನಾಲ್ಕು ವಿಕೆಟ್‌ ಕಬಳಿಸಿ ಗೆಲುವಿನ ರೂವಾರಿಯಾದರು. ರಾಹುಲ್‌ ಚಹಾರ್‌ ಕೂಡಾ ಪ್ರಮುಖ ಎರಡು ವಿಕೆಟ್‌ ಪಡೆದರು. ಈ ಗೆಲುವಿನೊಂದಿಗೆ ಪಂಜಾಬ್‌ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಡೆಲ್ಲಿ ತಂಡ:

ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ರಿಲೀ ರೋಸೊವ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

ಪಂಜಾಬ್‌ ತಂಡ

ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಸಿಕಂದರ್ ರಝಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್.

    ಹಂಚಿಕೊಳ್ಳಲು ಲೇಖನಗಳು