logo
ಕನ್ನಡ ಸುದ್ದಿ  /  ಕ್ರೀಡೆ  /  Rohit Sharma: ಟಿ20 ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ಎರಡೆರಡು ದಾಖಲೆ; ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ

Rohit Sharma: ಟಿ20 ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ಎರಡೆರಡು ದಾಖಲೆ; ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ

Jayaraj HT Kannada

May 21, 2023 09:08 PM IST

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

    • IPL 2023: ಉಮ್ರಾನ್ ಮಲಿಕ್ ಎಸೆದ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಗಳಿಸಿದ ಶರ್ಮಾ, ಮತ್ತೊಂದೆಡೆ ವಿವ್ರಾಂತ್‌ ಶರ್ಮಾ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿದರು. ಕೊನೆಗೂ 31 ಎಸೆತಗಳಲ್ಲಿ ಐವತ್ತು ರನ್ ಪೂರೈಸಿದರು. ಈ ನಡುವೆ ಅವರು ಮುಂಬೈ ಇಂಡಿಯನ್ಸ್‌ ಪರ 5000 ರನ್‌ ಗಳಿಸಿದ ಮೈಲಿಗಲ್ಲು ತಲುಪಿದರು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, ನಾಯಕ ರೋಹಿತ್‌ ಶರ್ಮಾ (Rohit Sharma) ಫಾರ್ಮ್‌ಗೆ ಮರಳಿದ್ದಾರೆ. ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಪರ ಆಡಿದ ಮೊದಲ 13 ಪಂದ್ಯಗಳಲ್ಲಿ ನಾಯಕ ಶರ್ಮಾ ಕಳಪೆ ಪ್ರದರ್ಶನ ನೀಡಿದ್ದರು. ಕೇವಲ 19.8ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದ ಅವರು, ಏಕೈಕ ಅರ್ಧಶತಕದೊಂದಿಗೆ 196 ರನ್‌ ಕಲೆ ಹಾಕಿದ್ದರು. ರನ್‌‌ ಬರದಿಂದಾಗಿ ಅಭಿಮಾನಿಗಳಿಗೆ ಚಿಂತೆ ಎದುರಾಗಿತ್ತು. ಮುಂದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಡೆಯಲಿದ್ದು, ನಾಯಕನ ಫಾರ್ಮ್‌ ಭಾರತಕ್ಕೆ ಅನಿವಾರ್ಯವಾಗಿತ್ತು. ಸದ್ಯ ಈ ಚಿಂತೆ ದೂರವಾದಂತಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಇಂದಿನ ಪಂದ್ಯದಲ್ಲಿ ತಂಡಕ್ಕೆ ರೋಹಿತ್‌ ಶರ್ಮಾ ಕೊಡುಗೆ ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ ಅವರು, ಭರ್ಜರಿ ಅರ್ಧಶತಕ ಸಿಡಿಸಿದರು. ಇದು ಪ್ರಸಕ್ತ ಆವೃತ್ತಿಯಲ್ಲಿ ಹಿಟ್‌ಮ್ಯಾನ್‌ ಸಿಡಿಸಿದ ಎರಡನೇ ಅರ್ಧಶತಕ. ಈ ಫಿಫ್ಟಿಯೊಂದಿಗೆ ರೋಹಿತ್‌ ಶರ್ಮಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಮಾಡಿದ್ದ ದಾಖಲೆಯನ್ನು ಇದೀಗ ರೋಹಿತ್‌ ಶರ್ಮಾ ಕೂಡಾ ಮಾಡಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಈ ದಾಖಲೆ ನಿರ್ಮಿಸಿದ್ದಾರೆ. ಇನ್ನಿಂಗ್ಸ್‌ನ ಆರಂಭದಲ್ಲಿ ಬ್ಯಾಟ್‌ ಬೀಸಲು ರೋಹಿತ್ ಹೆಣಗಾಡುತ್ತಿದ್ದರು. ಹೈದರಾಬಾದ್‌ ನೀಡಿದ 201 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ, ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಕ್ಯಾಮರೂನ್ ಗ್ರೀನ್ ಜೊತೆಗೂಡಿದ ರೋಹಿತ್‌, ಉತ್ತಮ ಜೊತೆಯಾಟ ನಿರ್ಮಿಸಿದರು. ಎದುರಿಸಿದ ಮೊದಲ 19 ಎಸೆತಗಳಲ್ಲಿ 22 ರನ್ ಗಳಿಸಿದರು. ಅಂತಿಮವಾಗಿ ಅವರು 37 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು.

ಉಮ್ರಾನ್ ಮಲಿಕ್ ಎಸೆದ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಗಳಿಸಿದ ಶರ್ಮಾ, ಮತ್ತೊಂದೆಡೆ ವಿವ್ರಾಂತ್‌ ಶರ್ಮಾ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿದರು. ಕೊನೆಗೂ 31 ಎಸೆತಗಳಲ್ಲಿ ಐವತ್ತು ರನ್ ಪೂರೈಸಿದರು. ಈ ನಡುವೆ ಅವರು ಮುಂಬೈ ಇಂಡಿಯನ್ಸ್‌ ಪರ 5000 ರನ್‌ ಗಳಿಸಿದ ಮೈಲಿಗಲ್ಲು ತಲುಪಿದರು. ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಬಳಿಕ ಒಂದೇ ಫ್ರಾಂಚೈಸಿ ಪರ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಖ್ಯಾತಿಗೆ ರೋಹಿತ್‌ ಪಾತ್ರರಾದರು.

ಒಟ್ಟಾರೆಯಾಗಿ, ಅವರು 241 ಐಪಿಎಲ್ ಪಂದ್ಯಗಳಲ್ಲಿ 6191 ರನ್ ಗಳಿಸಿದ್ದಾರೆ. ಇಲ್ಲಿ ಉಳಿದ ರನ್‌ಗಳನ್ನು ಅವರು ಡೆಕ್ಕನ್ ಚಾರ್ಜರ್ಸ್ ಪರ ಗಳಿಸಿದ್ದಾರೆ. ಇತ್ತ, ಐಪಿಎಲ್‌ನ ಚೊಚ್ಚಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್‌ ಕೊಹ್ಲಿ, 7162 ರನ್ ಗಳಿಸಿದ್ದಾರೆ. ಆ ಮೂಲಕ ಗರಿಷ್ಠ ಐಪಿಎಲ್ ರನ್‌ಗಳ ಪಟ್ಟಿಯಲ್ಲಿ ಕಿಂಗ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ಟಿ20 ಕ್ರಿಕೆಟ್‌ನಲ್ಲಿ ಮುಂಬೈ ನಾಯಕ 11000 ರನ್‌ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಿದರು. ಆ ಮೂಲಕ ಇಲ್ಲಿಯೂ ಕೂಡಾ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಭಾರತದ ಮಾಜಿ ನಾಯಕ ವಿರಾಟ್‌, 373 ಪಂದ್ಯಗಳಲ್ಲಿ ಬರೋಬ್ಬರಿ 11864 ರನ್ ಗಳಿಸಿದ್ದಾರೆ. ಇದರಲ್ಲಿ ದೆಹಲಿ, ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ಪರ ಗಳಿಸಿದ ರನ್‌ಗಳು ಸೇರಿವೆ. ಒಟ್ಟಾರೆಯಾಗಿ ಈವರೆಗೆ ಜಾಗತಿಕ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೀರಾನ್ ಪೊಲಾರ್ಡ್ ಮತ್ತು ಡೇವಿಡ್ ವಾರ್ನರ್ ಈವರೆಗೆ ಈ ಮೈಲಿಗಲ್ಲನ್ನು ತಲುಪಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು