logo
ಕನ್ನಡ ಸುದ್ದಿ  /  ಕ್ರೀಡೆ  /  Kevin Pietersen: ಅವರು ಭಾರತದ ಅಗ್ರಕ್ರಮಾಂಕದ ಭವಿಷ್ಯ; ವಿಶ್ವಕಪ್ ತಂಡಕ್ಕೆ ಗಿಲ್ ಮತ್ತು ಜೈಸ್ವಾಲ್ ಆಯ್ಕೆ ಕುರಿತು ಪೀಟರ್ಸನ್ ಮಾತು

Kevin Pietersen: ಅವರು ಭಾರತದ ಅಗ್ರಕ್ರಮಾಂಕದ ಭವಿಷ್ಯ; ವಿಶ್ವಕಪ್ ತಂಡಕ್ಕೆ ಗಿಲ್ ಮತ್ತು ಜೈಸ್ವಾಲ್ ಆಯ್ಕೆ ಕುರಿತು ಪೀಟರ್ಸನ್ ಮಾತು

HT Kannada Desk HT Kannada

May 16, 2023 08:22 PM IST

ಶುಬ್ಮನ್ ಗಿಲ್, ಕೆವಿನ್ ಪೀಟರ್ಸನ್, ಯಶಸ್ವಿ ಜೈಸ್ವಾಲ್

    • ಯಶಸ್ವಿ ಮತ್ತು ಗಿಲ್ ಇಬ್ಬರೂ, ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ಕೇವಲ ಒಂದು ರನ್‌ ಅಂತರದಿಂದ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿ ನಿಂತಿದ್ದಾರೆ.
ಶುಬ್ಮನ್ ಗಿಲ್, ಕೆವಿನ್ ಪೀಟರ್ಸನ್, ಯಶಸ್ವಿ ಜೈಸ್ವಾಲ್
ಶುಬ್ಮನ್ ಗಿಲ್, ಕೆವಿನ್ ಪೀಟರ್ಸನ್, ಯಶಸ್ವಿ ಜೈಸ್ವಾಲ್

ಐಪಿಎಲ್ ಪಂದ್ಯಾವಳಿಯು ಅಂತಿಮ ಹಂತವನ್ನು ತಲುಪುತ್ತಿದೆ. ಈ ನಡುವೆ ಹಲವು ಪ್ರತಿಭೆಗಳು ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ. ಮಿಲಿಯನ್‌ ಡಾಲರ್‌ ಟೂರ್ನಿಯ ಬಳಿಕ ಭಾರತ ತಂಡದ ಮುಂದೆ ಹಲವು ಸರಣಿಗಳಿದ್ದು, ಉತ್ತಮ ತಂಡವನ್ನು ಆಯ್ಕೆ ಮಾಡಲು ಭಾರತದ ಆಯ್ಕೆದಾರರಿಗೆ ಹಲವಾರು ಆಯ್ಕೆಗಳು ಸಿಕ್ಕಿವೆ. ಬೇಸಿಗೆಯ ನಂತರ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡಕ್ಕೆ ಕೆಲವು ಹೊಸ ಹೆಸರುಗಳು ಲಭ್ಯವಾಗಿವೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಸದ್ಯ, ಈ ವರ್ಷ ನಡೆಯಲಿರುವ ಪ್ರಮುಖ ಟೂರ್ನಿಯೆಂದರೆ ಏಕದಿನ ವಿಶ್ವಕಪ್. ಈ ವಿಶ್ವಕಪ್‌ಗೆ ಆಯ್ಕೆಯಾಗಲು ಹಲವು ಯುವ ಪ್ರತಿಭೆಗಳು ಕಾಯುತ್ತಿದ್ದಾರೆ. ಈ ನಡುವೆ ಒಂದೆರಡು ಹೆಸರುಗಳು ತುಂಬಾ ಚರ್ಚೆಯಲ್ಲಿವೆ. ಹಲವು ದಿಗ್ಗಜ ಕ್ರಿಕೆಟಿಗರು ಐಪಿಎಲ್‌ನಲ್ಲಿ ಮಿಂಚುತ್ತಿರುವ ಕ್ರಿಕೆಟಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಏಕದಿನ ವಿಶ್ವಕಪ್‌ನಲ್ಲಿ ಆಡಲು ಯಶಸ್ವಿ ಜೈಸ್ವಾಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ.‌ ಇದೇ ವೇಳೆ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಗುಜರಾತ್‌ ಟೈಟಾನ್ಸ್‌ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಮತ್ತು ಜೈಸ್ವಾಲ್‌ ಇಬ್ಬರ ಬೆಂಬಲಕ್ಕೂ ನಿಂತಿದ್ದಾರೆ.

ಯಶಸ್ವಿ ಮತ್ತು ಗಿಲ್ ಇಬ್ಬರೂ, ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ಕೇವಲ ಒಂದು ರನ್‌ ಅಂತರದಿಂದ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿ ನಿಂತಿದ್ದಾರೆ. ಆದರೂ, ಉಭಯ ಆಟಗಾರರು ಈ ರೇಸ್‌ನಲ್ಲಿ ಮುಂದುವರೆಯುವ ಸೂಚನೆ ನೀಡಿದ್ದಾರೆ. ಸದ್ಯ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬಳಿ ಆರೇಂಜ್‌ ಕ್ಯಾಪ್‌ ಇದೆ.

ಉಭಯ ಆಟಗಾರರು 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇವರಿಬ್ಬರೂ ತಲಾ ನಾಲ್ಕು ಅರ್ಧಶತಕ ಮತ್ತು ತಲಾ ಒಂದು ಶತಕ ಸಿಡಿಸಿದ್ದಾರೆ. ಆದರೆ ಗಿಲ್ 576 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್ 575 ರನ್ ಗಳಿಸಿದ್ದಾರೆ. ಗಿಲ್ ಅವರ 146 ಸ್ಟ್ರೈಕ್‌ ರೇಟ್‌ಗೆ ಹೋಲಿಸಿದರೆ, ಯಶಸ್ವಿಯ 166.18 ಸ್ಟ್ರೈಕ್ ರೇಟ್ ಉತ್ತಮವಾಗಿದೆ. ಈ ಒಂದು ಅಂಶದಲ್ಲಿ ಮಾತ್ರ ಇವರಿಬ್ಬರೂ ಭಿನ್ನವಾಗಿ ನಿಲ್ಲುತ್ತಾರೆ.

ಈ ಬಗ್ಗೆ Betwayಗೆ ಬರೆದ ಅಂಕಣದಲ್ಲಿ, ಪೀಟರ್ಸನ್ ಅವರು ಏಕದಿನ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ. ಗಿಲ್ ಮತ್ತು ಯಶಸ್ವಿ ಇಬ್ಬರೂ "ಭಾರತ ಕ್ರಿಕೆಟ್‌ ತಂಡದ ಅಗ್ರ ಕ್ರಮಾಂಕದ ಭವಿಷ್ಯ" ಎಂದು ಅವರು ಹೇಳಿದ್ದಾರೆ. ಶುಬ್ಮನ್‌ ಗಿಲ್‌ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಜೊತೆಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ವರ್ಷ ಶಿಖರ್ ಧವನ್ ಅವರ ಸ್ಥಾನವನ್ನು ಕಸಿದುಕೊಂಡ ಗಿಲ್‌, ಜನವರಿ ತಿಂಗಳಲ್ಲಿ ದಾಖಲೆಯ ದ್ವಿಶತಕದೊಂದಿಗೆ ತಮ್ಮ ಸ್ಥಾನವವನ್ನು ಭದ್ರಪಡಿಸಿದರು. ಹೀಗಾಗಿ ಯಶಸ್ವಿ ಜೈಸ್ವಾಲ್‌ ಭಾರತ ತಂಡಕ್ಕೆ ಮೂರನೇ ಆರಂಭಿಕ ಆಟಗಾರನ ಆಯ್ಕೆಯಾಗಬಹುದು. ಅಲ್ಲದೆ ಗಿಲ್ ಅವರೊಂದಿಗೆ ನೇರ ಪೈಪೋಟಿಗೆ ಒಡ್ಡಿಕೊಳ್ಳಲಿದ್ದಾರೆ.

“ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಲ್ಲಿ ನಾವು ಭಾರತದ ಅಗ್ರ ಕ್ರಮಾಂಕದ ಭವಿಷ್ಯವನ್ನು ನೋಡುತ್ತಿದ್ದೇವೆ. 50 ಓವರ್‌ಗಳ ವಿಶ್ವಕಪ್‌ಗಾಗಿ ನಾನು ಜೈಸ್ವಾಲ್‌ನನ್ನು ನಿಜವಾಗಿಯೂ ಬೆಂಬಲಿಸುತ್ತೇನೆ. ಭವಿಷ್ಯವನ್ನು ಯೋಚಿಸಿ, ನಾನು ಅವನನ್ನು ತಕ್ಷಣ ತಂಡಕ್ಕೆ ಸೇರಿಸುತ್ತೇನೆ,” ಎಂದು ಪೀಟರ್ಸನ್‌ ಜೈಸ್ವಾಲ್‌ ಅವರನ್ನು ಬೆಂಬಲಿಸಿದ್ದಾರೆ.

ಈ ಯುವ ಪ್ರತಿಭಾವಂತ ಕ್ರಿಕೆಟಿಗರಿಗೆ ದೊಡ್ಡ ಹಂತದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಐಪಿಎಲ್ ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೀಟರ್ಸನ್ ಪ್ರಶಂಸೆ ವ್ಯಕ್ತಪಡಿಸಿದರು.

“ಐಪಿಎಲ್ ಯುವ ಆಟಗಾರರಿಗೆ ಮೂರು ವಿಷಯಗಳಲ್ಲಿ ತುಂಬಾ ಮುಖ್ಯ. ಇದು ಅವರಿಗೆ ಆಡಲು ಅವಕಾಶ ನೀಡುತ್ತದೆ. ಅಲ್ಲದೆ ಅವರಿಗೆ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ತಂದು ಕೊಡುತ್ತದೆ. ಇದರೊಂದಿಗೆ ತೀವ್ರ ಪೈಪೋಟಿಯ ಒತ್ತಡದ ಸಮಯದಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಅವರಿಗೆ ಶಾಂತ ಪರಿಸ್ಥಿತಿ ನಿರ್ಮಿಸುತ್ತದೆ,” ಎಂದು ಅವರು ಹೇಳಿದ್ದಾರೆ. ಅಲ್ಲದೆ ಇವರಿಬ್ಬರೂ ಸಂಪೂರ್ಣ ಗುಣಮಟ್ಟದ ಆಟಗಾರರು ಎಂದು ಪೀಟರ್ಸನ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು