logo
ಕನ್ನಡ ಸುದ್ದಿ  /  ಕ್ರೀಡೆ  /  Pietersen On Kohli: ಆರ್‌ಸಿಬಿಯಲ್ಲೇ ಉಳಿದುಕೊಂಡರೆ ನೀವು ಪ್ರಶಸ್ತಿ ಗೆಲ್ಲಲ್ಲ, ಡೆಲ್ಲಿಗೆ ಬನ್ನಿ; ವಿರಾಟ್​ ಕೊಹ್ಲಿಗೆ ಪೀಟರ್​ಸನ್​ ಸಲಹೆ

Pietersen on Kohli: ಆರ್‌ಸಿಬಿಯಲ್ಲೇ ಉಳಿದುಕೊಂಡರೆ ನೀವು ಪ್ರಶಸ್ತಿ ಗೆಲ್ಲಲ್ಲ, ಡೆಲ್ಲಿಗೆ ಬನ್ನಿ; ವಿರಾಟ್​ ಕೊಹ್ಲಿಗೆ ಪೀಟರ್​ಸನ್​ ಸಲಹೆ

Prasanna Kumar P N HT Kannada

May 23, 2023 10:43 PM IST

ವಿರಾಟ್​ ಕೊಹ್ಲಿ ಸಲಹೆ ನೀಡಿದ ಕೆವಿನ್​ ಪೀಟರ್​ಸನ್​

    • 16ನೇ ಆವೃತ್ತಿಯ ಐಪಿಎಲ್​ನ 70ನೇ ಹಾಗೂ ಲೀಗ್​​ನ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಆರ್‌ಸಿಬಿ ಸೋತ ನಂತರ ಕೆವಿನ್ ಪೀಟರ್​ಸನ್ (Kevin Pietersen)​ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ತವರು ದೆಹಲಿಗೆ ಆಡುವ ಸಮಯ ಬಂದಿದೆ ಎಂದು ಟ್ವೀಟ್​​ನಲ್ಲಿ ಬರೆದಿದ್ದಾರೆ.
ವಿರಾಟ್​ ಕೊಹ್ಲಿ ಸಲಹೆ ನೀಡಿದ ಕೆವಿನ್​ ಪೀಟರ್​ಸನ್​
ವಿರಾಟ್​ ಕೊಹ್ಲಿ ಸಲಹೆ ನೀಡಿದ ಕೆವಿನ್​ ಪೀಟರ್​ಸನ್​

ಲಿಯೋನೆಲ್ ಮೆಸ್ಸಿ (Lionel Messi), ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಸೇರಿದಂತೆ ವಿಶ್ವ ಪ್ರಸಿದ್ಧ ಫುಟ್ಬಾಲ್ ಆಟಗಾರರೇ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹೋಗಿರುವ ಉದಾಹರಣೆಗಳಿವೆ. ಆದರೆ, 16 ವರ್ಷಗಳಿಂದ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ (Virat Kohli), ಈಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತೊರೆಯುವ ಸಮಯ ಬಂದಿದೆ. ಹೀಗಂತ ನಾವಲ್ಲ, ಇಂಗ್ಲೆಂಡ್ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಪ್ರಸಕ್ತ ಐಪಿಎಲ್​ನಲ್ಲಿ (IPL 2023) ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಕಿಂಗ್​ ಕೊಹ್ಲಿ ಆಡಿದ 14 ಇನ್ನಿಂಗ್ಸ್​​ಗಳಲ್ಲಿ ಸತತ 2 ಶತಕ ಮತ್ತು 2 ಅರ್ಧಶತಕಗಳ ನೆರವಿನಿಂದ ಒಟ್ಟು 639 ರನ್​​ಗಳಿಸಿದ್ದಾರೆ. ಆದರೆ ಪ್ಲೇ ಆಫ್​​ಗೆ ಅರ್ಹತೆ ಪಡೆಯುವಲ್ಲಿ ಆರ್​ಸಿಬಿ ವಿಫಲವಾಯಿತು. ಅದಕ್ಕಾಗಿಯೇ ವಿರಾಟ್ ತಮ್ಮ ತವರಿನ ತಂಡವನ್ನು ಸೇರಿಕೊಳ್ಳಬೇಕು ಎಂದು ಆರ್‌ಸಿಬಿ ಮಾಜಿ ನಾಯಕ ಕೆವಿನ್ ಪೀಟರ್​​ಸನ್ (Kevin Pietersen) ಸಲಹೆ ನೀಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ನ 70ನೇ ಹಾಗೂ ಲೀಗ್​​ನ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಆರ್‌ಸಿಬಿ ಸೋತ ನಂತರ ಕೆವಿನ್ ಪೀಟರ್​ಸನ್​ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರು ತಮ್ಮ ತವರು ದೆಹಲಿಗೆ ಆಡುವ ಸಮಯ ಬಂದಿದೆ ಎಂದು ಟ್ವೀಟ್​​ನಲ್ಲಿ ಬರೆದಿದ್ದಾರೆ. ಈ ಮೂಲಕ ಕಿಂಗ್ ತವರು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪರ ಆಡಬೇಕು ಎಂಬ ಅಭಿಪ್ರಾಯವನ್ನು ಪೀಟರ್​ಸನ್​ ಮುಂದಿಟ್ಟಿದ್ದಾರೆ.

ಆರ್‌ಸಿಬಿ ಪರ ಸತತ 16 ವರ್ಷ ಆಡಿದ್ದರೂ ಕಿಂಗ್ ಕೊಹ್ಲಿ ಟ್ರೋಫಿಗೆ ಮುತ್ತಿಡಲು ಸಾಧ್ಯವಾಗದಿರುವುದು ಇದಕ್ಕೆ ಪ್ರಮುಖ ಕಾರಣ. ಆದ್ದರಿಂದ, ಕೆವಿನ್ ಪೀಟರ್ಸನ್ ಮುಂಬರುವ ಋತುಗಳಲ್ಲಿ ತನ್ನ ತವರು ಡೆಲ್ಲಿ ಕ್ಯಾಪಿಟಲ್ಸ್​​ಗಾಗಿ ಆಡಲು ಸಲಹೆ ನೀಡಿದ್ದಾರೆ. ಇದಕ್ಕೂ ಮೊದಲು, ಪೀಟರ್​​ಸನ್​ ಆರ್​ಸಿಬಿ ತೊರೆದು ಬೇರೆ ತಂಡ ಸೇರುವಂತೆ ಕಿಂಗ್ ಕೊಹ್ಲಿಗೆ ಸಲಹೆ ನೀಡಿದ್ದರು.

ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರೇ ತಂಡವನ್ನು ಬದಲಾಯಿಸಿದ್ದಾರೆ. ಅದಕ್ಕಾಗಿಯೇ ಅದೇ ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ತಮ್ಮ ತವರು ಡೆಲ್ಲಿ ಆಡುವಂತೆ ವಿನಂತಿಸಿದ್ದಾರೆ. ಈಗ ಮತ್ತೊಮ್ಮೆ ಕಿಂಗ್ ಕೊಹ್ಲಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೋಗುವ ಸಮಯ ಬಂದಿದೆ ಎಂದು ನೆನಪಿಸಿದ್ದಾರೆ.

ಇಂಗ್ಲಿಷ್ ಆಟಗಾರ ಕೆವಿನ್ ಪೀಟರ್ಸನ್ 2009 ಮತ್ತು 2010ರಲ್ಲಿ ಆರ್‌ಸಿಬಿ ಪರ ಆಡಿದ್ದರು. ಅವರು 6 ಪಂದ್ಯಗಳಲ್ಲಿ RCB ತಂಡವನ್ನು ಮುನ್ನಡೆಸಿದರು. ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 13 ಪಂದ್ಯಗಳಲ್ಲಿ 329 ರನ್ ಗಳಿಸಿದ್ದಾರೆ.

16 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡುತ್ತಿರುವ ವಿರಾಟ್​ ಕೊಹ್ಲಿ, ನೂರಾರು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈವರೆಗೂ 237 ಪಂದ್ಯಗಳನ್ನು ಆಡಿರುವ ಕಿಂಗ್​​, ಐಪಿಎಲ್​ನಲ್ಲಿ ಅತಿ ಹೆಚ್ಚು ಗಳಿಸಿ ಆಟಗಾರ ಎನಿಸಿದ್ದಾರೆ. ಶ್ರೀಮಂತ ಲೀಗ್​​ನಲ್ಲಿ 7263 ರನ್​ ಗಳಿಸಿದ್ದಾರೆ. ಒಟ್ಟು 50 ಅರ್ಧಶತಕಗಳು, 7 ಶತಕ ಸಿಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು