ಕನ್ನಡ ಸುದ್ದಿ  /  ಕ್ರೀಡೆ  /  Hardik On Dhoni: ಎಂಎಸ್ ಧೋನಿ ಒಬ್ಬ ಅಪರೂಪದ ವ್ಯಕ್ತಿ, ಅಂತಹ ಆಟಗಾರರನ್ನು ದ್ವೇಷಿಸುವವರು ರಾಕ್ಷಸರಿಗೆ ಸಮ; ಹಾರ್ದಿಕ್ ಪಾಂಡ್ಯ ಹೇಳಿಕೆ

Hardik on Dhoni: ಎಂಎಸ್ ಧೋನಿ ಒಬ್ಬ ಅಪರೂಪದ ವ್ಯಕ್ತಿ, ಅಂತಹ ಆಟಗಾರರನ್ನು ದ್ವೇಷಿಸುವವರು ರಾಕ್ಷಸರಿಗೆ ಸಮ; ಹಾರ್ದಿಕ್ ಪಾಂಡ್ಯ ಹೇಳಿಕೆ

Hardik Pandya on MS Dhoni: ಫೀಲ್ಡ್​​​ನಲ್ಲಿ ಗಲಾಟೆ, ವಿವಾದ, ಸೋತರೂ, ಸಹ ಆಟಗಾರರು, ಕ್ಯಾಚ್ ಬಿಟ್ಟರೂ ಹೀಗೆ ಏನೇ ನಡೆಯಲಿ ಎಂದೂ ಎಂಎಸ್ ಧೋನಿ (MS Dhoni) ಕೋಪಗೊಂಡ ವ್ಯಕ್ತಿಯಲ್ಲ. ಅಂತಹ ವ್ಯಕ್ತಿಯನ್ನು ಯಾವಾಗಲೂ ಗಂಭೀರವಾಗಿರುತ್ತಾರೆ ಎಂದು ಕೆಲವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಾರ್ದಿಕ್​ ಪಾಂಡ್ಯ (Hardik Pandya), ಖಡಕ್ ಉತ್ತರ ನೀಡಿದ್ದಾರೆ.

ಎಂಎಸ್​ ಧೋನಿ ಬಣ್ಣಿಸಿದ ಹಾರ್ದಿಕ್​ ಪಾಂಡ್ಯ
ಎಂಎಸ್​ ಧೋನಿ ಬಣ್ಣಿಸಿದ ಹಾರ್ದಿಕ್​ ಪಾಂಡ್ಯ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​​​ (Indian Premier League 2023) ಅಂತಿಮ ಹಂತಕ್ಕೆ ಬಂದು ನಿಂತಿದೆ. ಕ್ವಾಲಿಫೈಯರ್​, ಎಲಿಮಿನೇಟರ್​ ಮತ್ತು ಫೈನಲ್​​ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಕಳೆದ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಈ ಬಾರಿ ಅದ್ಭುತ ಪ್ರದರ್ಶನದೊಂದಿಗೆ ಪ್ಲೇ ಆಫ್​ ಪ್ರವೇಶಿಸಿದೆ. ಅಲ್ಲದೆ, ನಾಯಕ ಎಂಎಸ್​ ಧೋನಿ (CSK Captain MS Dhoni) ಅವರು ಐಪಿಎಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿಗಳಿವೆ.

ಕಳೆದ ಬಾರಿ ಅದ್ಭುತ ಪ್ರದರ್ಶನ ತೋರಿದ್ದ ಗುಜರಾತ್​ ಟೈಟಾನ್ಸ್ (Gujarat Titans)​, ಈ ಬಾರಿಯೂ ಪ್ಲೇ ಆಫ್ (Play off)​ ಪ್ರೇವೇಶಿಸಿದೆ. ಲೀಗ್​​​ನಲ್ಲಿ 10 ಪಂದ್ಯಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಧೋನಿ ಒಬ್ಬ ತಾಳ್ಮೆಯ ಪ್ರತಿರೂಪ. ಫೀಲ್ಡ್​​​ನಲ್ಲಿ ಗಲಾಟೆ, ವಿವಾದ, ಸೋತರೂ, ಸಹ ಆಟಗಾರರು, ಕ್ಯಾಚ್ ಬಿಟ್ಟರೂ ಹೀಗೆ ಏನೇ ನಡೆಯಲಿ ಎಂದೂ ಕೋಪಗೊಂಡ ವ್ಯಕ್ತಿಯಲ್ಲ.

ಅಂತಹ ವ್ಯಕ್ತಿಯನ್ನು ಕೆಲವರು ಗಂಭೀರವಾಗಿರುತ್ತಾರೆ ಎಂದಿದ್ದಾರೆ. ಈ ಬಗ್ಗೆ ಮೊದಲ ಕ್ವಾಲಿಫೈಯರ್​ ಪಂದ್ಯಕ್ಕೂ ಮುನ್ನ ಪ್ರತಿಕ್ರಿಯಿಸಿದ ಹಾರ್ದಿಕ್​ ಪಾಂಡ್ಯ (Hardik Pandya), ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಪ್ಟನ್​ ಎಂಎಸ್​ ಧೋನಿ ಅವರನ್ನು ಅದ್ಭುತ ಮಾತುಗಳ ಮೂಲಕ ಬಣ್ಣಿಸಿದ್ದಾರೆ. ಭಾರತದ ಅತ್ಯಂತ ನಿಪುಣ ನಾಯಕರಲ್ಲಿ ಒಬ್ಬರೆಂದು ಹೆಸರಾಗಿರುವ ಧೋನಿ ಅವರು ಎಂದೂ ಗಂಭೀರ ವ್ಯಕ್ತಿಯಲ್ಲ ಎಂದಿದ್ದಾರೆ.

'ಕೆಲವರು ಧೋನಿ ಯಾವಾಗಲೂ ಗಂಭೀರವಾಗಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಧೋನಿ ಯಾವಾಗಲೂ ನಗುತ್ತಲೇ ಇರುತ್ತಾರೆ. ಇದು ಅವರೊಂದಿಗೆ ಹತ್ತಿರದ ಸಂಬಂಧ ಹೊಂದಿರುವವರಿಗೆ ಮಾತ್ರ ಗೊತ್ತು. ಮಾಹಿ ಅವರನ್ನು ನೋಡುತ್ತಲೇ ಎಷ್ಟೋ ವಿಷಯಗಳನ್ನು ಕಲಿತಿದ್ದೇನೆ. ಅವರು ನನಗೆ ಎಂದಿಗೂ ನನಗೆ ಸ್ನೇಹಿತ ಮತ್ತು ಸಹೋದರ ಎಂದು ಕೂಲ್​ ಕ್ಯಾಪ್ಟನ್​ ಕುರಿತು ಹಾರ್ದಿಕ್​ ವಿಶೇಷವಾಗಿ ಹೇಳಿದ್ದಾರೆ.

ಧೋನಿ ಅವರೊಂದಿಗೆ ಫ್ರಾಂಕ್, ಜೋಕ್​​ ಮಾಡುತ್ತಾ ಇರ್ತೇನೆ. ರಿಲ್ಯಾಕ್ಸ್​ ಆಗುತ್ತೇನೆ. ನಾನೆಂದಿಗೂ ಮಾಹಿಗೆ ಅಭಿಮಾನಿ. ಅಭಿಮಾನಿಗಳಿಗೆ ಕ್ರಿಕೆಟ್​ ಪ್ರಿಯರಿಗೆ ಧೋನಿ ಯಾವತ್ತಿಗೂ ಒಬ್ಬ ಸೂಪರ್ ಸ್ಟಾರ್ ಕ್ರಿಕೆಟರ್​. ಅಂತಹ ವ್ಯಕ್ತಿಯನ್ನು ದ್ವೇಷಿಸುವುದು ತುಂಬಾ ಕಷ್ಟ. ರಾಕ್ಷಸರು ಮಾತ್ರ ಧೋನಿ ಅವರಂತಹ ಅಪರೂಪದ ವ್ಯಕ್ತಿಯನ್ನು ದ್ವೇಷಿಸುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ ಅವರು 2016ರಲ್ಲಿ ಎಂಎಸ್​ ಧೋನಿ ನಾಯಕತ್ವದಲ್ಲಿಯೇ ಟೀಮ್​ ಇಂಡಿಯಾಗೆ ಪದಾರ್ಪಣೆ ಮಾಡಿದರು. ಹಲವು ವರ್ಷಗಳ ಕಾಲ ಧೋನಿ ಅವರೊಂದಿಗೆ ಡ್ರೆಸ್ಸಿಂಗ್​ ರೂಮ್​ ಶೇರ್ ಮಾಡಿಕೊಂಡಿದ್ದರು. ಆದರೆ ಐಪಿಎಲ್​ನಲ್ಲಿ ಬೇರೆ ಬೇರೆ ತಂಡಗಳ ಜೊತೆಗೆ ಕಣಕ್ಕಿಳಿದಿದ್ದರು. ಹಾರ್ದಿಕ್, ಗುಜರಾತ್ ಟೈಟಾನ್ಸ್​​ ತಂಡಕ್ಕೂ ಮೊದಲು 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​​ ತಂಡದಲ್ಲಿದ್ದರು.