logo
ಕನ್ನಡ ಸುದ್ದಿ  /  ಕ್ರೀಡೆ  /  World Cup 2023: ಭಾರತದಲ್ಲಿ ವಿಶ್ವಕಪ್ ಆಡಲು ಪಾಕಿಸ್ತಾನ ಸಿದ್ಧ, ಆದರೆ; ಐಸಿಸಿಗೆ ಪಿಸಿಬಿ ಹೇಳಿದ್ದು ಹೀಗೆ

World cup 2023: ಭಾರತದಲ್ಲಿ ವಿಶ್ವಕಪ್ ಆಡಲು ಪಾಕಿಸ್ತಾನ ಸಿದ್ಧ, ಆದರೆ; ಐಸಿಸಿಗೆ ಪಿಸಿಬಿ ಹೇಳಿದ್ದು ಹೀಗೆ

Jayaraj HT Kannada

Jun 02, 2023 09:19 AM IST

ರೋಹಿತ್‌ ಶರ್ಮಾ, ಬಾಬರ್‌ ಅಜಾಮ್

    • India vs Pakistan: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರು ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗಿ ಕುರಿತಂತೆ ಪಿಸಿಬಿಯಿಂದ ಮಾಹಿತಿ ಪಡೆಯಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
ರೋಹಿತ್‌ ಶರ್ಮಾ, ಬಾಬರ್‌ ಅಜಾಮ್
ರೋಹಿತ್‌ ಶರ್ಮಾ, ಬಾಬರ್‌ ಅಜಾಮ್ (Getty)

ಭಾರತ ಮತ್ತು ಪಾಕಿಸ್ತಾನದ ನಡುವೆ ಏಷ್ಯಾಕಪ್‌ ಹಾಗೂ ವಿಶ್ವಕಪ್‌ ಆತಿಥ್ಯ ಕುರಿತಾಗಿ ಭಿನ್ನಾಭಿಪ್ರಾಯಗಳಿವೆ. ಭಾರತವಂತೂ, ಏನೇ ಆದರೂ ಪಾಕಿಸ್ತಾನಕ್ಕೆ ಮಾತ್ರ ಪ್ರಯಾಣಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಅಲ್ಲದೆ ಏಷ್ಯಾಕಪ್‌ ಅನ್ನು ಪಾಕಿಸ್ತಾನದಿಂದ ಸಂಪೂರ್ಣವಾಗಿ ಹೊರಗಡೆ ಆಯೋಜಿಸಲು ತಿಳಿಸಿದೆ. ಇದರಿಂದ ಅಸಮಾಧಾನಗೊಂಡಿದ್ದ ಪಾಕಿಸ್ಥಾನ ಭಾರತದಲ್ಲಿ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್‌ನಿಂದ ಹೊರಗುಳಿಯುವುದಾಗಿಯೂ ಹೇಳಿತ್ತು. ಈ ನಡುವೆ ಈ ಕುರಿತು ಮತ್ತೊಂದು ಬೆಳವಣಿಗೆ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರು ಏಕದಿನ ವಿಶ್ವಕಪ್ ಕುರಿತಾಗಿ ಮಾತನಾಡಲು ಪಾಕಿಸ್ಥಾನಕ್ಕೆ ತೆರಳಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಬಾಬರ್‌ ಅಜಮ್ ಪಡೆಯ ಭಾಗಿ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಿಂದ ಖಚಿತ ಮಾಹಿತಿ ಪಡೆಯಲು ಲಾಹೋರ್‌ಗೆ ಬಂದಿದ್ದಾರೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳಿಗೆ ಹೈಬ್ರಿಡ್ ಮಾದರಿಯನ್ನು ಜಾರಿಗೆ ತರಲು ಒತ್ತಾಯಿಸುವುದಿಲ್ಲ ಎಂಬುದನ್ನು ಖಚಿತಪಡಿಸಲು ಮಾತುಕತೆ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.

ಹೈಬ್ರಿಡ್ ಮಾದರಿ ಎಂದರೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ತಂಡ ಆಡುವ ಎಲ್ಲಾ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಡಿಸುವುದು.

ಏಷ್ಯಾಕಪ್‌ನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಆಡಲು ಭಾರತ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ, ಪಾಕಿಸ್ತಾನ ವಿಶ್ವಕಪ್‌ ವಿಚಾರವಾಗಿ ಯಾವ ನಿರ್ಧಾರಕ್ಕೆ ಬರಲಿದೆ ಎಂಬ ಕುತೂಹಲವಿತ್ತು. ಹೀಗಾಗಿ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪಾಲ್ಗೊಳ್ಳುವಿಕೆಯ ಕುರಿತು ಐಸಿಸಿಯ ಈ ಇಬ್ಬರು ಅಧಿಕಾರಿಗಳು ಪಿಸಿಬಿಯ ನಿರ್ಧಾರವನ್ನು ಕೇಳಿದ್ದಾರೆ. ಇದಕ್ಕೆ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಪಾಕ್‌ ತಂಡವನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಸರ್ಕಾರವು ಅನುಮತಿ ನೀಡದಿದ್ದರೆ, ಅಥವಾ ತಂಡವನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಭದ್ರತಾ ಕಾಳಜಿಯ ಪ್ರಸ್ತಾಪ ಬಂದರೆ, ಪಿಸಿಬಿಯು ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಐಸಿಸಿಗೆ ಒತ್ತಾಯಿಸಬಹುದು ಎಂದು ಅವರು ಸೂಚಿಸಿದ್ದಾರೆ.

“ಐಸಿಸಿ ಅಥವಾ ಬಿಸಿಸಿಐ ಇಂತಹ ಪರಿಸ್ಥಿತಿಯನ್ನು ಬಯಸುವುದಿಲ್ಲ. ಏಕೆಂದರೆ ಭಾರತದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಪಾಕಿಸ್ತಾನವು ನಿಸ್ಸಂದಿಗ್ಧವಾಗಿ ಭಾಗವಹಿಸುವುದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಯಶಸ್ಸಿಗೆ ಮತ್ತು ಸಂಪೂರ್ಣ ಪಂದ್ಯಾವಳಿಯ ಯಶಸ್ಸು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಏಷ್ಯಾಕಪ್‌ ವಿಚಾರವಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲು ಭಾರತ ಹಿಂದೆ ಸರಿದಿದೆ. ಅಂದರೆ, ಪಾಕಿಸ್ತಾನದಲ್ಲಿ ಮೂರು ಅಥವಾ ನಾಲ್ಕು ಪಂದ್ಯಗಳನ್ನು ಮತ್ತು ಯುಎಇ ಅಥವಾ ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಿಂಜರಿದಿದ್ದಾರೆ.

ಪಾಕಿಸ್ತಾನ ಏಷ್ಯಾಕಪ್‌ನ ಆತಿಥೇಯ ರಾಷ್ಟ್ರವಾಗಿದ್ದು ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಮತ್ತೊಂದು ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ, ಅದು ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸೇಥಿ ಹಲವಾರು ಬಾರಿ ಹೇಳಿದ್ದಾರೆ. ಏಷ್ಯಾಕಪ್‌ನ ಕನಿಷ್ಠ ಕೆಲವು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸದಿದ್ದರೆ, ಅದು ವಿಶ್ವಕಪ್‌ನ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಸುಳಿವು ನೀಡಿದ್ದಾರೆ.

ಏಷ್ಯಾಕಪ್‌ಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳದಿದ್ದರೆ, ಪಾಕ್‌ ತಂಡ ಕೂಡಾ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪ್ರಯಾಣಿಸುವುದಿಲ್ಲ ಎಂದು ಸೇಥಿ ಹೇಳಿದ್ದಾರೆ. ಹೀಗಾಗಿ ಐಸಿಸಿ ಮತ್ತು ಬಿಸಿಸಿಐ ಹೈಬ್ರಿಡ್ ಮಾದರಿಯು ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಿಶ್ವಕಪ್‌ಗೂ ಮುಂಚಿತವಾಗಿ ನಡೆಯುವ ಏಷ್ಯಾಕಪ್‌ಗೆ ಹೈಬ್ರಿಡ್ ಮಾದರಿಯನ್ನು ಸೇಥಿ ಸೂಚಿಸಿದ್ದರೂ, ಒಮ್ಮೆ ಪ್ರಾದೇಶಿಕ ಟೂರ್ನಿಗೆ ಈ ಮಾದರಿಯನ್ನು ಒಪ್ಪಿಕೊಂಡರೆ ಪಿಸಿಬಿಯು ನಂತರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗಿ ವಿಚಾರವಾಗಿಯೂ ಅದನ್ನೇ ಜಾರಿಗೆ ತರಲು ಐಸಿಸಿಯನ್ನು ಕೇಳಬಹುದು ಎಂಬ ಆತಂಕವಿದೆ. ಐಸಿಸಿ ಅಧಿಕಾರಿಗಳು ಪಿಸಿಬಿ ಮತ್ತು ಬಿಸಿಸಿಐ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಸಂಬಂಧಿಸಿದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

    ಹಂಚಿಕೊಳ್ಳಲು ಲೇಖನಗಳು