logo
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni: ಬ್ಯಾಂಕ್​ನಲ್ಲಿ ನೋಟ್‌ಗಳು ಬದಲಾಗಬಹುದು; ಆದರೆ ವಿಕೆಟ್​​ ಹಿಂದೆ ಧೋನಿ ಕೀಪಿಂಗ್ ಎಂದೂ ಬದಲಾಗಲ್ಲ; ವಿರೇಂದ್ರ ಸೆಹ್ವಾಗ್​ ಟ್ವೀಟ್

MS Dhoni: ಬ್ಯಾಂಕ್​ನಲ್ಲಿ ನೋಟ್‌ಗಳು ಬದಲಾಗಬಹುದು; ಆದರೆ ವಿಕೆಟ್​​ ಹಿಂದೆ ಧೋನಿ ಕೀಪಿಂಗ್ ಎಂದೂ ಬದಲಾಗಲ್ಲ; ವಿರೇಂದ್ರ ಸೆಹ್ವಾಗ್​ ಟ್ವೀಟ್

Prasanna Kumar P N HT Kannada

May 30, 2023 07:00 AM IST

ಎಂಎಸ್​ ಧೋನಿ ಸ್ಟಂಪಿಂಗ್​ ಕುರಿತು ವಿರೇಂದ್ರ ಸೆಹ್ವಾಗ್​ ಟ್ವೀಟ್​​

    • ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಡೌಲ್, ಎಂಎಸ್​ ಧೋನಿ (MS Dhoni) ವಿಶ್ವದ ಅತ್ಯಂತ ವೇಗದ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಭಾರತದ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹ್ವಾಗ್​, ವಿಕೆಟ್​​ಗಳ ಧೋನಿ​ಯನ್ನು ಬದಲಿಸೋದು ಅಸಾಧ್ಯ ಎಂದು ಟ್ವೀಟ್​ ಮೂಲಕ ಹೇಳಿದ್ಧಾರೆ.
ಎಂಎಸ್​ ಧೋನಿ ಸ್ಟಂಪಿಂಗ್​ ಕುರಿತು ವಿರೇಂದ್ರ ಸೆಹ್ವಾಗ್​ ಟ್ವೀಟ್​​
ಎಂಎಸ್​ ಧೋನಿ ಸ್ಟಂಪಿಂಗ್​ ಕುರಿತು ವಿರೇಂದ್ರ ಸೆಹ್ವಾಗ್​ ಟ್ವೀಟ್​​

ಭೂಮಿಯಲ್ಲಿ ಚಿರತೆ ವೇಗ, ಆಕಾಶದಲ್ಲಿ ಜೆಟ್​ ವೇಗ, ನೀರಿನಲ್ಲಿ ಮೀನಿನ ವೇಗಕ್ಕೆ ಸರಿ ಸಾಟಿ ಯಾವುದೂ ಇಲ್ಲ. ಅದೇ ರೀತಿ ಕ್ರಿಕೆಟ್​ನಲ್ಲಿ ಎಂಎಸ್​ ಧೋನಿ (MS Dhoni) ಸ್ಟಂಪ್​ ವೇಗಕ್ಕೂ ಯಾರೂ ಸರಿಸಾಟಿ ಇಲ್ಲ. ಕಣ್ಣು ಮಿಟುಕಿಸುವುದರಲ್ಲಿ ವಿಕೆಟ್​​ ಬೇಲ್ಸ್​ ಎಗರಿಸಿರುತ್ತಾರೆ. ಇಂತಹ ಕ್ಷಣಕ್ಕೆ 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯವು ಸಾಕ್ಷಿಯಾಯಿತು.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಸೆಕೆಂಡ್​​ಗಳಲ್ಲಿ ಸ್ಟಂಪೌಟ್​

ಐಪಿಎಲ್​​ ಫೈನಲ್​​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (CSK vs GT Final 2023) ಮುಖಾಮುಖಿಯಾಗಿದ್ದು, ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಟೈಟಾನ್ಸ್​, ಬೃಹತ್​ ಮೊತ್ತ ಕಲೆ ಹಾಕಿತು. ಇನ್ನಿಂಗ್ಸ್​ ಆರಂಭಿಸಿದ ಶುಭ್ಮನ್​ ಗಿಲ್ (Shubman Gill) ಭರ್ಜರಿ ಆಟವಾಡಿದರು.

ಚೆನ್ನೈ ಬೌಲರ್​ಗಳ ಮೇಲೆ ಸವಾರಿ ಮಾಡಿದ ಗಿಲ್​, 39 ರನ್​ ಗಳಿಸಿದ್ದಾಗ ರವೀಂದ್ರ ಜಡೇಜಾ (Ravindra Jadeja) ಬೌಲಿಂಗ್​​ನಲ್ಲಿ ಸ್ಟಂಪ್​ ಔಟ್​ ಆದರು. ಧೋನಿ ಚುರುಕಿನ ಫೀಲ್ಡಿಂಗ್​ ಗಿಲ್​​​ಗೆ ಶಾಕ್​ ಆದರು. ಸ್ಟಂಪ್‌ನ ಹಿಂದೆ ಧೋನಿ ಅವರ ಅದ್ಭುತ ಕೈಚಳಕದಿಂದ ಶುಭ್ಮನ್ ಗಿಲ್​ ಪೆವಿಲಿಯನ್​ ದಾರಿ ಹಿಡಿದರು.

ಪವರ್‌ಪ್ಲೇ ಮುಗಿದ ನಂತರ ರವೀಂದ್ರ ಜಡೇಜಾ ಬೌಲಿಂಗ್​ ಮಾಡಲು ಬಂದರು. ಓವರ್‌ನ ಕೊನೆಯ ಎಸೆತದಲ್ಲಿ ಶುಭ್ಮನ್ ಗಿಲ್‌ ಅವರಿಗೆ ಜಡ್ಡು ವೇಗದ ಎಸೆತ ಎಸೆದರು. ಆ ಚೆಂಡು ಶುಭ್ಮನ್ ಬ್ಯಾಟ್​​ಗೆ ತಾಗದೆ ನೇರವಾಗಿ ಎಂಎಸ್ ಧೋನಿ ಕೈ ಸೇರಿತು. ಕೇವಲ 0.12 ಸೆಕೆಂಡುಗಳಲ್ಲಿ ಧೋನಿ ಬೇಲ್ಸ್ ಎಗರಿಸಿದರು.

ಸಖತ್​ ವೈರಲ್​ ಆಗುತ್ತಿದೆ ವಿಡಿಯೋ

ಮುಂದೆ ಹೋಗಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶುಭ್ಮನ್, ಚೆಂಡು ಮಿಸ್​​ ಆಗುತ್ತಿದ್ದಂತೆ ಮರಳಿ ಕ್ರೀಸ್ ಮುಟ್ಟುವಷ್ಟರಲ್ಲಿ ಧೋನಿ ಕ್ಷಣಾರ್ಧದಲ್ಲಿ ಸ್ಟಂಪ್​ನ ಬೇಲ್ಸ್​ ಹಾರಿಸಿದ್ದರು. ಅಭಿಮಾನಿಗಳಂತೂ ಧೋನಿಗೆ ಧೋನಿಯೇ ಸರಿಸಾಟಿ. ಕಣ್ಣು ರೆಪ್ಪೆ ಒಂದು ಸಲ ಮುಚ್ಚಿ ತೆರೆಯುವುದರಲ್ಲಿ ಸ್ಟಂಪ್​ ಮಾಡಿದ್ದಾರೆ. ಇದು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸ್ಟಂಪ್​ ಮಾಡಿರುವ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಅಭಿಮಾನಿಗಳು ಅಷ್ಟೇ ಅಲ್ಲ, ಮಾಜಿ ಕ್ರಿಕೆಟಿಗರು ಎಂಎಸ್​ ಧೋನಿಯನ್ನು ಫಾಸ್ಟೆಸ್ಟ್​ ಸ್ಟಂಪ್​ಗೆ ಫಿದಾ ಆಗಿದ್ದು, ತಮ್ಮದೇ ಶೈಲಿಯಲ್ಲಿ ಬಣ್ಣಿಸುತ್ತಿದ್ದಾರೆ. ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ (Simon Doull), ಧೋನಿ ವಿಶ್ವದ ಅತ್ಯಂತ ವೇಗದ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಭಾರತದ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹ್ವಾಗ್ (Virender Sehwag)​, ವಿಕೆಟ್​​ಗಳ ಹಿಂದೆ ಧೋನಿಯನ್ನು​ ಎಂದೂ ಬದಲಿಸಲು ಸಾಧ್ಯವಿಲ್ಲ ಎಂದು ಟ್ವೀಟ್​ ಮೂಲಕ ಹೇಳಿದ್ಧಾರೆ.

ಟ್ವೀಟ್​ ಹೀಗಿದೆ

'ಅದ್ಭುತ.! ಬ್ಯಾಂಕ್ ನೋಟ್‌ಗಳನ್ನಾದರೂ ಬದಲಾಯಿಸಬಹುದು. ಆದರೆ, ವಿಕೆಟ್‌ಗಳ ಹಿಂದೆ ಮಹೇಂದ್ರ ಸಿಂಗ್ ಧೋನಿಯನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆಗಲ್ಲ ಬದಲಾಯಿಸಲು ಆಗಲ್ಲ ಅಷ್ಟೆ. ಎಂಎಸ್ ಧೋನಿ ವೇಗವನ್ನು ಯಾರೂ ಸರಿಗಟ್ಟಲಾರರು ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಹರ್ಷ ಭೋಗ್ಲೆ ಟ್ವೀಟ್​​

'ಆಟದಲ್ಲಿ ಎಂದೆಂದಿಗೂ ವೇಗದ ಕೈಗಳು. ಎಂಎಸ್‌ಡಿಯಿಂದ ಇದು ನಂಬಲಾಗದ, ಅದ್ಭುತ, ಅತ್ಯಾಕರ್ಷಕ ಸ್ಟಂಪಿಂಗ್ ಆಗಿದೆ ಎಂದು ಕ್ರಿಕೆಟ್ ನಿರೂಪಕ ಹರ್ಷಾ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

ಇರ್ಫಾನ್​ ಪಠಾಣ್​

ಎಂಎಸ್​ಡಿ ಮಿಂಚಿನ ವೇಗ ನೋಡಿದೆ. ಎಲ್ಲರೂ ಇಷ್ಟಪಡುತ್ತಾರೆ ಎಂದು ರಾಬಿನ್ ಉತ್ತಪ್ಪ ಅವರು ಟ್ವೀಟ್ ಮಾಡಿದ್ದಾರೆ. 'ಇದು ಮಹಿ ವಿಶೇಷ. ಆ ಕೈಗಳು ಮಿಂಚಿನ ವೇಗವನ್ನು ಪಡೆದುಕೊಂಡಿವೆ' ಎಂದು ಇರ್ಫಾನ್ ಪಠಾಣ್ ಬಣ್ಣಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು