logo
ಕನ್ನಡ ಸುದ್ದಿ  /  ಕ್ರೀಡೆ  /  Pbks Vs Dc: ಪ್ಲೇ ಆಫ್​ ರೇಸ್​​ನಲ್ಲಿ ಉಳಿಯಲು ಕಸರತ್ತು; ಟಾಸ್​ ಗೆದ್ದ ಪಂಜಾಬ್​ ಬೌಲಿಂಗ್​ ಆಯ್ಕೆ; ಡೆಲ್ಲಿಗಿದು ಆಟಕ್ಕುಂಟು ಲೆಕ್ಕಕ್ಕಿಲ್ಲ

PBKS vs DC: ಪ್ಲೇ ಆಫ್​ ರೇಸ್​​ನಲ್ಲಿ ಉಳಿಯಲು ಕಸರತ್ತು; ಟಾಸ್​ ಗೆದ್ದ ಪಂಜಾಬ್​ ಬೌಲಿಂಗ್​ ಆಯ್ಕೆ; ಡೆಲ್ಲಿಗಿದು ಆಟಕ್ಕುಂಟು ಲೆಕ್ಕಕ್ಕಿಲ್ಲ

Prasanna Kumar P N HT Kannada

May 17, 2023 07:09 PM IST

ಡೇವಿಡ್​ ವಾರ್ನರ್ ಮತ್ತು ಶಿಖರ್ ಧವನ್​

    • 16ನೇ ಆವೃತ್ತಿಯ ಐಪಿಎಲ್​ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​, ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾದರೆ ಉಭಯ ತಂಡಗಳಲ್ಲಿ ಆಡುವ 11ರ ಬಳಗ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಡೇವಿಡ್​ ವಾರ್ನರ್ ಮತ್ತು ಶಿಖರ್ ಧವನ್​
ಡೇವಿಡ್​ ವಾರ್ನರ್ ಮತ್ತು ಶಿಖರ್ ಧವನ್​

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ (IPL 2023) ಪ್ಲೇ ಆಫ್​ ಲೆಕ್ಕಾಚಾರ ದಿನದಿಂದ ದಿನಕ್ಕೆ ಕೌತುಕ ಸೃಷ್ಟಿಸುತ್ತಿದೆ. ಪ್ಲೇ ಆಫ್​ ರೇಸ್​ನಲ್ಲಿ ಉಳಿಯಲು ಬೃಹತ್​ ಅಂತರದ ಗೆಲುವಿನ ನಿರೀಕ್ಷೆಯಲ್ಲಿರುವ ಪಂಜಾಬ್​ ಕಿಂಗ್ಸ್ (Punjab Kings)​, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ತಂಡವನ್ನು ಮತ್ತೊಮ್ಮೆ ಸೋಲಿಸಲು ಸಜ್ಜಾಗಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಈ ಪಂದ್ಯದಲ್ಲಿ ಪಂಜಾಬ್ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​​ನಲ್ಲಿ (Himachal Pradesh Cricket Association Stadium, Dharamsala) ನಡೆಯಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಸೋಲು

ಹಾಲಿ ಆವೃತ್ತಿಯ ಐಪಿಎಲ್​​ನಲ್ಲಿ ಡೆಲ್ಲಿ ಮತ್ತು ಪಂಜಾಬ್​ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಐಪಿಎಲ್​ನ 59ನೇ ಪಂದ್ಯದಲ್ಲಿ ಉಭಯ ತಂಡಗಳು ಪರಸ್ಪರ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡವು ಹೀನಾಯ ಸೋಲು ಕಂಡಿತ್ತು. ಇದೀಗ ಸೋಲಿನ ಸೇಡು ತೀರಿಸಿಕೊಳ್ಳಲು ವಾರ್ನರ್​ ಪಡೆ ಸಜ್ಜಾಗಿದೆ. 31 ರನ್​ಗಳ ಅಂತರದಿಂದ ಡೆಲ್ಲಿ ಮುಖಭಂಗಕ್ಕೆ ಪಳಗಾಗಿತ್ತು.

ಪ್ಲೇ ಆಫ್​ ಲೆಕ್ಕಾಚಾರ

ಡೆಲ್ಲಿ ವಿರುದ್ಧ ಪಂಜಾಬ್​ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗೆದ್ದರಷ್ಟೆ ಪ್ಲೇ ಆಫ್​ ಕನಸು ಜೀವಂತವಾಗಿರಲಿದೆ. 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 6ರಲ್ಲಿ ಸೋಲು ಕಂಡಿದೆ. 12 ಅಂಕ ಪಡೆದ ಪಂಜಾಬ್ ಉಳಿದ 2 ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆಲ್ಲಬೇಕು. ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವೂ ಪಂಜಾಬ್​ ಪ್ಲೇ ಆಫ್​ ಮೇಲೆ ಪರಿಣಾಮ ಬೀರಲಿದೆ.

ಉಭಯ ತಂಡಗಳ ಮುಖಾಮುಖಿ

ಡೆಲ್ಲಿ ಮತ್ತು ಪಂಜಾಬ್​ ತಂಡಗಳು ಒಟ್ಟು 31 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಉಭಯ ತಂಡಗಳಿಂದಲೂ ಸಮನಾದ ಹೋರಾಟ ನಡೆದಿರುವುದು ವಿಶೇಷ. ಡೆಲ್ಲಿ 15 ಪಂದ್ಯಗಳಲ್ಲಿ ಜಯಿಸಿದ್ದರೆ, ಪಂಜಾಬ್ 16 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದೀಗ ಮತ್ತೊಂದು ಗೆಲುವಿನ ಮೇಲೆ ಎರಡು ತಂಡಗಳು ಕಣ್ಣಿಟ್ಟಿವೆ. ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಡೆಲ್ಲಿ ಸೋತಿತ್ತು. ಈಗ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.

ಪಿಚ್​​ ರಿಪೋರ್ಟ್​

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿಯಾಗಿದೆ. ಫಾಸ್ಟ್​ ಮತ್ತು ಬೌನ್ಸಿ ಟ್ರ್ಯಾಕ್​ಗೆ ಹೆಸರುವಾಗಿಯಾಗಿದೆ. ಬ್ಯಾಟರ್​​ಗಳು ನಿರಾಯಾಸವಾಗಿ ಬ್ಯಾಟ್​ ಬೀಸಲು ನೆರವಾಗುತ್ತದೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೂ ಕೊಂಚ ಮಟ್ಟಿಗೆ ನೆರವಾಗುತ್ತದೆ. ಹೆಚ್ಚು ಟರ್ನ್​ ಆಗುವ ಸಾಧ್ಯತೆಯಿದೆ. ಜೊತೆಗೆ ಇಲ್ಲಿ ಹೈಸ್ಕೋರಿಂಗ್​ ಕಾದಾಟ ನಿರೀಕ್ಷಿಸಬಹುದು.

ಪಂಜಾಬ್​ ಕಿಂಗ್ಸ್​ ತಂಡ

ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್), ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಆರ್ಷ್​ದೀಪ್ ಸಿಂಗ್

ಡೆಲ್ಲಿ ಕ್ಯಾಪಿಟಲ್ಸ್​ ತಂಡ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್), ರೈಲಿ ರೋಸೊ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಯಶ್ ಧುಲ್, ಕುಲದೀಪ್ ಯಾದವ್, ಆ್ಯನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್

    ಹಂಚಿಕೊಳ್ಳಲು ಲೇಖನಗಳು