logo
ಕನ್ನಡ ಸುದ್ದಿ  /  ಕ್ರೀಡೆ  /  Sourav Ganguly: ನಿಮಗೆ ಇಂಗ್ಲೀಷ್​ ಬರದಿದ್ದರೆ ನಾನೇನು ಮಾಡಲಿ; ತನ್ನ ಟ್ರೋಲ್​ ಮಾಡಿದ ಕೊಹ್ಲಿ ಫ್ಯಾನ್ಸ್​ಗೆ ಸೌರವ್ ಗಂಗೂಲಿ ತರಾಟೆ

Sourav Ganguly: ನಿಮಗೆ ಇಂಗ್ಲೀಷ್​ ಬರದಿದ್ದರೆ ನಾನೇನು ಮಾಡಲಿ; ತನ್ನ ಟ್ರೋಲ್​ ಮಾಡಿದ ಕೊಹ್ಲಿ ಫ್ಯಾನ್ಸ್​ಗೆ ಸೌರವ್ ಗಂಗೂಲಿ ತರಾಟೆ

Prasanna Kumar P N HT Kannada

May 25, 2023 06:00 AM IST

ಸೌರವ್​ ಗಂಗೂಲಿ ಮತ್ತು ವಿರಾಟ್​ ಕೊಹ್ಲಿ

    • ಮೇ 21ರಂದು ವಿರಾಟ್​ ಕೊಹ್ಲಿ ಮತ್ತು ಶುಭ್ಮನ್​ ಗಿಲ್​ ಶತಕ ಸಿಡಿಸಿದ್ದರು. ಈ ಸೆಂಚುರಿಗಳ ಕುರಿತು ಟೀಮ್​ ಇಂಡಿಯಾ ಮಾಜಿ ಸಾರಥಿ, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದರು. ಆದರೆ ಗಿಲ್​ರನ್ನು ಹೊಗಳಿ ಕೊಹ್ಲಿಯನ್ನು ಹೊಗಳದೆ ಯಾಕೆ ತಾರತಮ್ಯ ಮಾಡುತ್ತೀರಾ ಎಂದು ಫ್ಯಾನ್ಸ್​ ಕೇಳಿದ್ದಾರೆ.
ಸೌರವ್​ ಗಂಗೂಲಿ ಮತ್ತು ವಿರಾಟ್​ ಕೊಹ್ಲಿ
ಸೌರವ್​ ಗಂಗೂಲಿ ಮತ್ತು ವಿರಾಟ್​ ಕೊಹ್ಲಿ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್​, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್​ಗೇರಿದೆ. ಇನ್ನೊಂದು ನಾಲ್ಕು ದಿನಗಳಲ್ಲಿ ಟೂರ್ನಿಗೆ ತೆರೆ ಬೀಳಲಿದೆ. ಇದರ ನಡುವೆ ಸೌರವ್​ ಗಂಗೂಲಿ ವಿರುದ್ಧ ವಿರಾಟ್​ ಕೊಹ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ನಿಮಗೆ ಇಂಗ್ಲೀಷ್​ ಬರದಿದ್ದರೆ ನಾನೇನು ಮಾಡಲಿ ಎಂದು ಫ್ಯಾನ್ಸ್​ಗೆ ಗಂಗೂಲಿ ತರಾಟೆ ತೆಗೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಮೇ 21ರಂದು ನಡೆದ ಐಪಿಎಲ್​ನ ಲೀಗ್​​​ ಹಂತದ ಕೊನೆಯ ಪಂದ್ಯ ನಡೆಯಿತು. ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ಓಪನರ್​ ವಿರಾಟ್​ ಕೊಹ್ಲಿ ಮತ್ತು ಗುಜರಾತ್​ ಓಪನರ್ ಶುಭ್ಮನ್​ ಗಿಲ್​ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಸೆಂಚುರಿ ಸಿಡಿಸುವ ಮೂಲಕ ಐಪಿಎಲ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಸಿಡಿಸಿದ ದಾಖಲೆ ಬರೆದರು.

ಕೊಹ್ಲಿ ಮೇಲೇಕೆ ತಾರತಮ್ಯ?

ವಿರಾಟ್​ ಕೊಹ್ಲಿ ಮೊದಲು ಸನ್​ರೈಸರ್ಸ್​ ವಿರುದ್ಧ ನಂತರ ಗುಜರಾತ್​ ವಿರುದ್ಧ 100ರ ಗಡಿ ದಾಟಿದರು. ಹಾಗೆಯೇ ಗಿಲ್​ ಸಹ ಸನ್​ರೈಸರ್ಸ್​ ಹೈದರಾಬಾದ್​ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಶತಕ ಬಾರಿಸಿದರು. ಆದರೆ ಈ ಸೆಂಚುರಿಗಳ ಬಳಿಕ ಟೀಮ್​ ಇಂಡಿಯಾ ಮಾಜಿ ಸಾರಥಿ, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದರು. ಆದರೆ ಗಿಲ್​ರನ್ನು ಹೊಗಳಿ ಕೊಹ್ಲಿಯನ್ನು ಹೊಗಳದೆ ಯಾಕೆ ತಾರತಮ್ಯ ಮಾಡುತ್ತೀರಾ ಎಂದು ಫ್ಯಾನ್ಸ್​ ಕೇಳಿದ್ದಾರೆ.

ಗಂಗೂಲಿ ಟ್ವೀಟ್​ ಹೀಗಿತ್ತು!

ಈ ದೇಶದಲ್ಲಿ ಪ್ರತಿಭಾವಂತ ಕ್ರಿಕೆಟಿಗರ ಕೊರತೆ ಇಲ್ಲ. ಶುಭ್​ಮನ್​ ಗಿಲ್​​​.. ವಾವ್.. ಎರಡರಲ್ಲಿ ಎರಡು ಅದ್ಬುತ ನಾಕ್‌ಗಳು.. ಐಪಿಎಲ್.. ಈ ಟೂರ್ನಿಗೆ ಎಂಥಾ ಸ್ಟಾಂಡರ್ಡ್ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟ್ವೀಟ್​ ಮಾಡಿದ್ದರು. ಆದರೆ ಈ ಟ್ವೀಟ್​ನಲ್ಲಿ ದಾದಾ, ಗಿಲ್ ಹೆಸರನ್ನು ಮಾತ್ರ ಉಲ್ಲೇಖಿಸಿ ಕೊಹ್ಲಿ ಹೆಸರನ್ನು ಕಡೆಗಣಿಸಿರುವುದು ವಿರಾಟ್​ಅಭಿಮಾನಿಗಳನ್ನು ಕೆರಳಿಸಿದೆ.

ಗಿಲ್​ ಹೆಸರಿನಂತೆ ಕೊಹ್ಲಿ ಹೆಸರನ್ನು ಉಲ್ಲೇಖಿಸಿದ್ದರೆ ನಾವು ಕೂಡ ಖುಷಿಪಡುತ್ತಿದ್ದೆವು ಎಂದು ಫ್ಯಾನ್ಸ್​ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿಗೆ ಯಾಕೆ ಇಷ್ಟೊಂದು ತಾರತಮ್ಯ? ಗಂಗೂಲಿ ಮನಸ್ಸಿನಲ್ಲಿ ಇನ್ನೂ ಹಳೆಯ ಬಣಗಳಿವೆ ಎಂದು ಖಾರವಾಗಿ ಕೇಳಿದ್ದಾರೆ. ಹೀಗೆ ಟ್ರೋಲ್​ ಮಾಡುತ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಗಂಗೂಲಿ ವಾರ್ನಿಂಗ್​ ಮಾಡಿದ್ದಾರೆ. ತಾನು ಮಾಡಿದ್ದ ಟ್ವೀಟ್​ಗೆ ರಿಟ್ವೀಟ್​ ಕಾಮೆಂಟ್​ ಮಾಡಿದ್ದು, ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

‘ಇಂಗ್ಲೀಷ್​ ಬರದಿದ್ದರೆ ನಾನೇನು ಮಾಡಲಿ’

ಇತ್ತೀಚೆಗಷ್ಟೇ ತನ್ನನ್ನು ಟ್ರೋಲ್ ಮಾಡಿದವರಿಗೆ ದಾದಾ ಸಖತ್ ಉತ್ತರ ನೀಡಿದ್ದಾರೆ. ಅದೇ ಟ್ವೀಟ್ ಅಡಿಯಲ್ಲಿ, ಕೇವಲ ತ್ವರಿತ ಜ್ಞಾಪನೆ. ನನ್ನ ಟ್ವೀಟ್ ಅನ್ನು ನಿಮಗೆ ಇಷ್ಟವಾದಂತೆ ಅರ್ಥೈಸಿಕೊಳ್ಳುವವರಿಗೆ ನನ್ನ ನನ್ನ ಸಲಹೆ ಏನೆಂದರೆ ಮೊದಲು ಇಂಗ್ಲೀಷ್ ಅನ್ನು ಅರ್ಥಮಾಡಿಕೊಳ್ಳಿ. ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲದಿದ್ದರೆ ಯಾರಿಗಾದರೂ ಕೇಳಿ ತಿಳಿದಕೊಳ್ಳಿ' ಎಂದು ಬರೆದುಕೊಂಡಿದ್ದಾರೆ.

ಗಂಗೂಲಿ ತಮ್ಮ ಮೊದಲ ಟ್ವೀಟ್‌ನಲ್ಲಿ, 'ಎರಡರಲ್ಲಿ ಎರಡು ಅದ್ಬುತ ನಾಕ್‌ಗಳು' ಎಂದರೆ ‘ಒಂದೇ ಎದುರಾಳಿಯ ವಿರುದ್ಧ ಏಕಕಾಲದಲ್ಲಿ ಅತ್ಯುತ್ತಮ ಪ್ರದರ್ಶನ‘ ಅಥವಾ 'ಎರಡು ಸಮಾನ ಅವಧಿಗಳಲ್ಲಿ ಒಂದೇ ಪ್ರದರ್ಶನ' ಎಂದರ್ಥ. ಇದರ ಪ್ರಕಾರ, ಗಿಲ್ ಮತ್ತು ಕೊಹ್ಲಿ ಒಂದೇ ಎದುರಾಳಿ (ಸನ್​​ರೈಸರ್ಸ್) ವಿರುದ್ಧ ಶತಕ ಸಿಡಿಸಿದ್ದು ಮಾತ್ರವಲ್ಲದೇ ಭಾನುವಾರ ಒಂದೇ ಪಂದ್ಯದಲ್ಲಿ ಎರಡು ಶತಕ ಸಿಡಿಸಿರುವುದು ಗಮನಾರ್ಹ. ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದು ಗಂಗೂಲಿ ವಾದ.

    ಹಂಚಿಕೊಳ್ಳಲು ಲೇಖನಗಳು