logo
ಕನ್ನಡ ಸುದ್ದಿ  /  ಕ್ರೀಡೆ  /  Kamran Akmal: ಹಾಗಿದ್ದರೆ ದಕ್ಷಿಣ ಆಫ್ರಿಕಾ-ಕಿವೀಸ್ ತಂಡಗಳನ್ನು ನಿಷೇಧಿಸಬೇಕು', ಭಾರತದ ಪರ ಮಾತನಾಡಿದ ಪಾಕ್ ಮಾಜಿ ಕ್ರಿಕೆಟಿಗ

Kamran Akmal: ಹಾಗಿದ್ದರೆ ದಕ್ಷಿಣ ಆಫ್ರಿಕಾ-ಕಿವೀಸ್ ತಂಡಗಳನ್ನು ನಿಷೇಧಿಸಬೇಕು', ಭಾರತದ ಪರ ಮಾತನಾಡಿದ ಪಾಕ್ ಮಾಜಿ ಕ್ರಿಕೆಟಿಗ

HT Kannada Desk HT Kannada

Jan 27, 2023 07:50 PM IST

ಭಾರತವು ಐಸಿಸಿ ಕಪ್‌ ಗೆಲ್ಲದೆ ಸರಿಸುಮಾರು ಹತ್ತು ವರ್ಷಗಳಾಗಿವೆ

    • ಇತ್ತೀಚೆಗೆ ಪ್ರಮುಖ ಕಪ್‌ ಗೆಲ್ಲದಿದ್ದರೂ ಭಾರತವು ಶ್ರೇಷ್ಠ ತಂಡ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಅಲ್ಲದೆ ಭಾರತದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
ಭಾರತವು ಐಸಿಸಿ ಕಪ್‌ ಗೆಲ್ಲದೆ ಸರಿಸುಮಾರು ಹತ್ತು ವರ್ಷಗಳಾಗಿವೆ
ಭಾರತವು ಐಸಿಸಿ ಕಪ್‌ ಗೆಲ್ಲದೆ ಸರಿಸುಮಾರು ಹತ್ತು ವರ್ಷಗಳಾಗಿವೆ (Twitter)

ಸುಮಾರು 10 ವರ್ಷಗಳ ಹಿಂದೆ ಎಂ ಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್‌ ಇಂಡಿಯಾ, ಆ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಅಂದಿನಿಂದ ಕಪ್ ಸಮೀಪ ಬಂದರೂ, ಭಾರತದಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. 2015 ಮತ್ತು 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ತಲುಪಿದ್ದ ಭಾರತ, ಫೈನಲ್‌ಗೆ ಲಗ್ಗೆ ಇಡುವಲ್ಲಿ ವಿಫಲವಾಯ್ತು. ಮತ್ತೊಂದೆಡೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋತಿತು. ಟೀಮ್‌ ಇಂಡಿಯಾ 2014ರ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿ ಆವೃತ್ತಿಯನ್ನು ಮುಗಿಸಿದರೆ, 2016 ಮತ್ತು 2022ರ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿತು. 2021ರಲ್ಲಿ ಹೊಸದಾಗಿ ಪರಿಚಯಿಸಲಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತು. ಆ ಮೂಲಕ ಐಸಿಸಿ ಕಪ್‌ ಗೆಲ್ಲುವಲ್ಲಿ ಭಾರತ ವಿಫಲವಾಗುತ್ತಾ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಭಾರತವು ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ಎಡವುತ್ತಿದೆ ಎಂದು ಜಾಗತಿಕ ಕ್ರಿಕೆಟ್‌ ದಿಗ್ಗಜರು ಆಗಾಗ ಚರ್ಚಿಸುತ್ತಿದ್ದಾರೆ. ಭಾರತ ತಂಡವು ಕಪ್‌ ಬರ ಎದುರಿಸುತ್ತಿರುವ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗರು ಕೂಡಾ ಟೀಂ ಇಂಡಿಯಾವನ್ನು ಎಚ್ಚರಿಸುತ್ತಿದ್ದಾರೆ. ಈ ನಡುವೆ ಈ ವಿಷಯದ ಬಗ್ಗೆ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್, ಇತ್ತೀಚೆಗೆ ಪ್ರಮುಖ ಕಪ್‌ ಗೆಲ್ಲದಿದ್ದರೂ ಭಾರತವನ್ನು ಶ್ರೇಷ್ಠ ತಂಡ ಎಂದು ಕರೆದಿದ್ದಾರೆ. ಅಲ್ಲದೆ ಭಾರತದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

“ಕಳೆದ 10 ವರ್ಷಗಳಿಂದ ಭಾರತವು ಐಸಿಸಿಯ ಯಾವುದೇ ಪ್ರಮುಖ ಈವೆಂಟ್‌ನಲ್ಲಿ ಗೆದ್ದಿಲ್ಲ ಎಂದು ಜನರು ಮಾತನಾಡುತ್ತಾರೆ. ಯಾವ ತಂಡವೂ ಪ್ರತಿಯೊಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಿಲ್ಲ. ಒಂದು ವೇಳೆ ಐಸಿಸಿ ಟ್ರೋಫಿ ಗೆಲ್ಲುವುದೇ ಏಕೈಕ ಮಾನದಂಡವಾಗಿದ್ದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳನ್ನು ಕ್ರಿಕೆಟ್‌ನಿಂದ ನಿಷೇಧಿಸಬೇಕು. ಏಕೆಂದರೆ, ಈ ತಂಡಗಳೂ ಯಾವುದೇ ಐಸಿಸಿ ಕಪ್ ಗೆದ್ದಿಲ್ಲ. ಹೀಗಾಗಿ, ಭಾರತ ಉತ್ತಮ ತಂಡವಾಗಿದೆ ಮತ್ತು ವಿಭಿನ್ನ ಮಟ್ಟದಲ್ಲಿ ಆಡುತ್ತಿದೆ” ಎಂದು Paktv.tvಯಲ್ಲಿ ಅಕ್ಮಲ್ ಹೇಳಿದ್ದಾರೆ.

ಏತನ್ಮಧ್ಯೆ, ಭಾರತವು ಈ ವರ್ಷ ಐಸಿಸಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದ್ದು, ರೋಹಿತ್ ಶರ್ಮಾ ಮತ್ತು ಬಳಗಕ್ಕೆ ತವರಿನ ಮೈದಾನಗಳಲ್ಲಿ ವಿಶ್ವ ಚಾಂಪಿಯನ್‌ ಕಿರೀಟವನ್ನು ಅಲಂಕರಿಸುವ ದೊಡ್ಡ ಅವಕಾಶವಿದೆ. ಕುತೂಹಲಕಾರಿಯಾಗಿ, 50-ಓವರ್ ಮಾದರಿಯಲ್ಲಿ ವಿಶ್ವಕಪ್‌ನ ಕಳೆದ ಮೂರು ಆವೃತ್ತಿಗಳನ್ನು ಆತಿಥೇಯ ದೇಶಗಳೇ ಗೆದ್ದಿವೆ. ಇಂಗ್ಲೆಂಡ್ (2019), ಆಸ್ಟ್ರೇಲಿಯಾ (2015) ಮತ್ತು ಭಾರತ (2011) ಇದಕ್ಕೆ ಉದಾಹರಣೆ.

ಗಮನಿಸಬಹುದಾದ ಇತರೆ ಸುದ್ದಿಗಳು

India Title favorites WC 2023: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತವೇ ಫೇವರಿಟ್: ಇಂಗ್ಲೆಂಡ್ ಮಾಜಿ ಕ್ರಿಕೆಟರ್

ಭಾರತ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಫೇವರಿಟ್ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದ ನಂತರ ಟ್ವಿಟರ್‌ನಲ್ಲಿ ಈ ರೀತಿ ಹೇಳಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು