logo
ಕನ್ನಡ ಸುದ್ದಿ  /  ಕ್ರೀಡೆ  /  Dhoni In Fifa World Cup: ಫಿಫಾ ವಿಶ್ವಕಪ್ : ಬ್ರೆಜಿಲ್ ಪಂದ್ಯದಲ್ಲಿ ಧೋನಿ ಸಿಎಸ್ ಕೆ ಜೆರ್ಸಿ ಪ್ರದರ್ಶನ; ಫೋಟೋ ವೈರಲ್

Dhoni in FIFA World Cup: ಫಿಫಾ ವಿಶ್ವಕಪ್ : ಬ್ರೆಜಿಲ್ ಪಂದ್ಯದಲ್ಲಿ ಧೋನಿ ಸಿಎಸ್ ಕೆ ಜೆರ್ಸಿ ಪ್ರದರ್ಶನ; ಫೋಟೋ ವೈರಲ್

HT Kannada Desk HT Kannada

Nov 25, 2022 03:07 PM IST

ಬ್ರೆಜಿಲ್ vs ಸೆರ್ಬಿಯಾ ಪಂದ್ಯದಲ್ಲಿ ಎಂ.ಎಸ್. ಧೋನಿಯ ಚೆನ್ನೈ ಜೆರ್ಸಿ ಪ್ರದರ್ಶಿಸುತ್ತಿರುವುದು

  • ಬ್ರೆಜಿಲ್ vs ಸೆರ್ಬಿಯಾ ಪಂದ್ಯದಲ್ಲಿ ಎಂ.ಎಸ್. ಧೋನಿಯ ಚೆನ್ನೈ ಜೆರ್ಸಿಯ ಫೋಟೋ ವೈರಲ್ ಆಗುತ್ತಿದೆ. ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯನ್ನು ಧರಿಸಿದ್ದ ಅಭಿಮಾನಿಯೊಬ್ಬರು ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರೆಜಿಲ್ vs ಸೆರ್ಬಿಯಾ ಪಂದ್ಯದಲ್ಲಿ ಎಂ.ಎಸ್. ಧೋನಿಯ ಚೆನ್ನೈ ಜೆರ್ಸಿ ಪ್ರದರ್ಶಿಸುತ್ತಿರುವುದು
ಬ್ರೆಜಿಲ್ vs ಸೆರ್ಬಿಯಾ ಪಂದ್ಯದಲ್ಲಿ ಎಂ.ಎಸ್. ಧೋನಿಯ ಚೆನ್ನೈ ಜೆರ್ಸಿ ಪ್ರದರ್ಶಿಸುತ್ತಿರುವುದು

ಕತಾರ್: ಬ್ರೆಜಿಲ್ ಫಿಫಾ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದೆ. ಸೆರ್ಬಿಯಾ ವಿರುದ್ಧದ ಈ ಪಂದ್ಯದಲ್ಲಿ ಬ್ರೆಜಿಲ್ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ರಿಚರ್ಲಿಸನ್‌ ಅಮೋಘ ಎರಡು ಗೋಲುಗಳೊಂದಿಗೆ ಬ್ರೆಜಿಲ್ ಭರ್ಜರಿ ಜಯ ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಎಂ.ಎಸ್. ಧೋನಿ ವಿಶೇಷ ಆಕರ್ಷಣೆಯಾಗಿದ್ದರು. ಅಂದರೆ ಎಂಎಸ್ ಡಿ ಖುದ್ದು ಕ್ರೀಡಾಂಗಣಕ್ಕೆ ಬಂದಿರಲಿಲ್ಲ.

ಜಗತ್ತಿನ ಯಾವ ಮೂಲೆಗೆ ಹೋದರೂ ಎಂ.ಎಸ್.ಧೋನಿ ಅವರ ಅಭಿಮಾನಿಯೊಬ್ಬರು ಇದ್ದೇ ಇರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬರು ಧೋನಿಯ ಜೆರ್ಸಿಯೊಂದಿಗೆ ಬ್ರೆಜಿಲ್-ಸೆರ್ಬಿಯಾ ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಬ್ರೆಜಿಲ್ ಅಭಿಮಾನಿಯೊಂದಿಗೆ ಧೋನಿಯ ಜೆರ್ಸಿಯನ್ನು ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದಾರೆ.

ಬ್ರೆಜಿಲ್ ತಂಡದ ಜೆರ್ಸಿ ಕೂಡ ಹಳದಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ಬಣ್ಣ ಕೂಡ ಹಳದಿಯಾಗಿದ್ದು, ಜೆರ್ಸಿಗಳು ಹೀಗೆ ಒಂದಾಗಿವೆ ಎಂದಿದ್ದಾರೆ. ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶ್ವಕಪ್ ಜಿ ಗುಂಪಿನ ಭಾಗವಾಗಿ ಬ್ರೆಜಿಲ್ ಮತ್ತು ಸರ್ಬಿಯಾ ಪಂದ್ಯ ಗುರುವಾರ (ನವೆಂಬರ್ 24) ರಾತ್ರಿ ಲುಕೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಕ್ಕೆ ಧೋನಿ ಅಭಿಮಾನಿಯೊಬ್ಬರು ಬಂದಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಅವರು ಧೋನಿಯ ಜೆರ್ಸಿಯನ್ನು ಹಿಡಿದಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೋದಲ್ಲೆಲ್ಲಾ ಹಳದಿ ಪ್ರೀತಿ ಕಾಣುತ್ತಿದೆ ಎಂದು ಚೆನ್ನೈ ಈ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ವ್ಯಕ್ತಿಯ ಹೆಸರು ನಬೀಲ್ ಅವರು ಧೋನಿಯ ದೊಡ್ಡ ಅಭಿಮಾನಿ. ಬ್ರೆಜಿಲ್ ಪಂದ್ಯದ ವೇಳೆ ಅವರು ಆ ತಂಡದ ಜೆರ್ಸಿ ಹಾಗೂ ಚೆನ್ನೈನ ಜೆರ್ಸಿಯನ್ನು ಧರಿಸಿದ್ದರು. ಈ ಹಿಂದೆ ಒಮ್ಮೆ ಧೋನಿ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದರು. ಈ ಪಂದ್ಯದಲ್ಲಿ ಬ್ರೆಜಿಲ್ ಜಯ ಸಾಧಿಸಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.

ಆದರೆ, ಈ ಪಂದ್ಯದಲ್ಲಿ ಬ್ರೆಜಿಲ್ ನ ಸ್ಟಾರ್ ಆಟಗಾರ ನೇಮಾರ್ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದು, ಅಭಿಮಾನಿಗಳಿಗೆ ನೋವು ತರಿಸಿದೆ. ಆತನ ಗಾಯದ ತೀವ್ರತೆ ಎಷ್ಟಿದೆ ಎಂಬುದು ತಿಳಿದುಬಂದಿಲ್ಲ. ಮುಂದಿನ ಪಂದ್ಯದಲ್ಲಿ ನೇಮಾರ್ ಆಡ್ತಾರಾ ಇಲ್ಲವೇ ಎಂಬುದರ ಮಾಹಿತಿಯೂ ಲಭ್ಯವಾಗಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು