logo
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup 2022: ಫೇವರೆಟ್ ಪೋರ್ಚುಗಲ್‌ಗೆ ಜಯ, ಬಲಿಷ್ಠ ಬ್ರೆಜಿಲ್‌ಗೆ ದಿಗ್ವಿಜಯ; ನಿನ್ನೆಯ ಪಂದ್ಯಗಳ ಫಲಿತಾಂಶ ಹೀಗಿವೆ

FIFA World Cup 2022: ಫೇವರೆಟ್ ಪೋರ್ಚುಗಲ್‌ಗೆ ಜಯ, ಬಲಿಷ್ಠ ಬ್ರೆಜಿಲ್‌ಗೆ ದಿಗ್ವಿಜಯ; ನಿನ್ನೆಯ ಪಂದ್ಯಗಳ ಫಲಿತಾಂಶ ಹೀಗಿವೆ

HT Kannada Desk HT Kannada

Nov 25, 2022 07:12 AM IST

ಬ್ರೆಜಿಲ್ ಮತ್ತು ಸೆರ್ಬಿಯಾ ನಡುವಿನ ಪಂದ್ಯದ ದೃಶ್ಯ

    • ನಿನ್ನೆ ಸ್ವಿಟ್ಜರ್ಲೆಂಡ್ ವಿರುದ್ಧ ಕ್ಯಾಮರೂನ್ ಕಣಕ್ಕಿಳಿದರೆ, ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಘಾನಾವನ್ನು ಎದುರಿಸಿದೆ. ಮತ್ತೊಂದು ಪಂದ್ಯದಲ್ಲಿ ವಿಶ್ವಕಪ್‌ನ ಯಶಸ್ವಿ ತಂಡ ಬ್ರೆಜಿಲ್‌ ಸರ್ಬಿಯಾ ಸವಾಲನ್ನು ಎದುರಿಸಿದರೆ, ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಕೂಡಾ ಮುಖಾಮುಖಿಯಾಗಿವೆ.
ಬ್ರೆಜಿಲ್ ಮತ್ತು ಸೆರ್ಬಿಯಾ ನಡುವಿನ ಪಂದ್ಯದ ದೃಶ್ಯ
ಬ್ರೆಜಿಲ್ ಮತ್ತು ಸೆರ್ಬಿಯಾ ನಡುವಿನ ಪಂದ್ಯದ ದೃಶ್ಯ

ಫುಟ್ಬಾಲ್ ವಿಶ್ವಕಪ್‌ನಲ್ಲಿ ಗುರುವಾರ ನಡೆದ ಪಂದ್ಯಗಳು ರೋಚಕವಾಗಿ ಸಾಗಿತು. ಖ್ಯಾತ ಆಟಗಾರ ರೊನಾಲ್ಡೊ ಪ್ರತಿನಿಧಿಸುವ ಪೋರ್ಚುಗಲ್, ರೋಚಕ ಜಯದೊಂದಿಗೆ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ಫುಟ್ಬಾಲ್‌ನ ಅತ್ಯಂತ ಯಶಸ್ವಿ ತಂಡ ಬ್ರೆಜಿಲ್‌ ಕೂಡಾ ಜಯದೊಂದಿಗೆ ವಿಶ್ವಕಪ್‌ ಪಯಣ ಆರಂಭಿಸಿದೆ. ನಿನ್ನೆ ನಡೆದ ಎಲ್ಲಾ ನಾಲ್ಕು ಪಂದ್ಯಗಳ ಫಲಿತಾಂಶ ಹೀಗಿವೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ನಿನ್ನೆ ಸ್ವಿಟ್ಜರ್ಲೆಂಡ್ ವಿರುದ್ಧ ಕ್ಯಾಮರೂನ್ ಕಣಕ್ಕಿಳಿದರೆ, ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಘಾನಾವನ್ನು ಎದುರಿಸಿದೆ. ಮತ್ತೊಂದು ಪಂದ್ಯದಲ್ಲಿ ವಿಶ್ವಕಪ್‌ನ ಯಶಸ್ವಿ ತಂಡ ಬ್ರೆಜಿಲ್‌ ಸರ್ಬಿಯಾ ಸವಾಲನ್ನು ಎದುರಿಸಿದರೆ, ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಕೂಡಾ ಮುಖಾಮುಖಿಯಾಗಿವೆ.

ಪೋರ್ಚುಗಲ್ ಮತ್ತು ಘಾನಾ ಪಂದ್ಯದ ಫಲಿತಾಂಶ

ಘಾನಾ ವಿರುದ್ಧದ ಪಂದ್ಯದಲ್ಲಿ ಫುಟ್ಬಾಲ್‌ ದಿಗ್ಗಜ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಮೊದಲಾರ್ಧದ ಆರಂಭಿಕ ಹಂತಗಳಲ್ಲಿ ಒಂದೆರಡು ದೊಡ್ಡ ಅವಕಾಶಗಳನ್ನು ಕಳೆದುಕೊಂಡರು. ಆದರೆ ಅಂತಿಮವಾಗಿ ಪೆನಾಲ್ಟಿ ಅವಕಾಶದಿಂದ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಲೀಡ್‌ ತಂದುಕೊಟ್ಟರು. ಪೋರ್ಚುಗಲ್‌ಗೆ ಸಮನಾಗಿ ಘಾನಾ ಕೂಡಾ ಗೋಲು ಗಳಿಸಲು ಮುಂದಾಯಿತು. ಆದರೆ, ಘಾನಾ ಗೆಲುವಿಗೆ ಅವಕಾಶ ನೀಡದ ಪೋರ್ಚುಗಲ್‌, ಮತ್ತೊಂದು ಗೋಲು ಗಳಿಸಿ 3-1ರಿಂದ ಮುನ್ನಡೆ ಸಾಧಿಸಿತು. ಘಾನಾ ನಂತರ ಮತ್ತೊಂದು ಗೋಲು ಗಳಿಸಿತು. ಆದರೆ ಪೋರ್ಚುಗಲ್ ಮೂರು ಅಂಕಗಳನ್ನು ಗಳಿಸಿದ್ದರಿಂದ 3-2ರಿಂದ ಪೋರ್ಚುಗಲ್‌ ಪಂದ್ಯ ಗೆದ್ದಿತು.

ಕ್ಯಾಮರೂನ್ ವಿರುದ್ಧ ಸ್ವಿಟ್ಜರ್ಲೆಂಡ್‌ಗೆ ಗೆಲುವು

ಬ್ರೀಲ್ ಎಂಬೊಲೊ ಗಳಿಸಿದ ಅಮೂಲ್ಯ ಗೋಲೊಂದು, ಗುರುವಾರ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧ ಸ್ವಿಟ್ಜರ್ಲೆಂಡ್ 1-0 ರೋಚಕ ಅಂತರದಿಂದ ಗೆಲುವಿಗೆ ಕಾರಣವಾಯ್ತು. ಗ್ರೂಪ್‌ Gಯಲ್ಲಿ ಬ್ರೆಜಿಲ್ ಮತ್ತು ಸೆರ್ಬಿಯಾ ತಂಡ ಕೂಡಾ ಇದೆ. ಮುಂದಿನ ದಿನಗಳಲ್ಲಿ ಈ ತಂಡಗಳ ವಿರುದ್ಧ ಪಂದ್ಯಗಳನ್ನು ಕ್ಯಾಮರೂನ್‌ ತಂಡ ಎದುರಿಸಲಿದೆ.

ಬ್ರೆಜಿಲ್ ಮತ್ತು ಸೆರ್ಬಿಯಾ

ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಿಚಾರ್ಲಿಸನ್ ಅವರ ಅದ್ಭುತ ಓವರ್‌ಹೆಡ್ ಸಿಸರ್ ಕಿಕ್ ನೆರವಿನಿಂದ ಬ್ರೆಜಿಲ್ ತಂಡವು ಸೆರ್ಬಿಯಾ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು. ದಾಖಲೆಯ ಐದು ಬಾರಿ ವಿಶ್ವಕಪ್‌ ಗೆದ್ದಿರುವ ಬ್ರೆಜಿಲ್‌, ಮೊದಲಾರ್ಧದಲ್ಲಿ ಬೆವರಿಳಿಸಿ ಆಡಿತು. ಆದರೆ ಗೋಲುಗಳು ಬರಲಿಲ್ಲ. ದ್ವಿತೀಯಾರ್ಧದಲ್ಲಿ ಅವರ ಪಟ್ಟುಬಿಡದ ದಾಳಿಯಿಂದ ಗೋಲ್‌ ಒಲಿಯಿತು. ರಿಚಾರ್ಲಿಸನ್ 62ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, 73ನೇ ನಿಮಿಷದಲ್ಲಿ ತಂಡಕ್ಕೆ ಮತ್ತೊಂದು ಗೋಲು ಬಂತು. ಹೀಗಾಗಿ ಸರ್ಬಿಯಾ ವಿರುದ್ಧ ಬ್ರೆಜಿಲ್‌ ಸುಲಭ ಗೆಲುವು ದಾಖಲಿಸಿತು.

ಉರುಗ್ವೆ ಮತ್ತು ದಕ್ಷಿಣ ಕೊರಿಯಾ

ಉರುಗ್ವೆ ಮತ್ತು ಕೊರಿಯಾ ನಡುವಿನ ಪಂದ್ಯವು ನೀರಸ ಡ್ರಾದಲ್ಲಿ ಅಂತ್ಯಗೊಂಡಿತು. ಉಭಯ ತಂಡಗಳು ಕೂಡಾ ಗೋಲು ಗಳಿಸಲು ವಿಫಲವಾದ ಕಾರಣ, 0-0 ಗೋಲುಗಳೊಂದಿಗೆ ಪಂದ್ಯ ಡ್ರಾ ಕಂಡಿತು. ಹೀಗಾಗಿ ಉಭಯ ದೇಶಗಳ ಅಭಿಮಾನಿಗಳು ನಿರಾಶರಾದರು.

ವಿಶ್ವಕಪ್‌ನಲ್ಲಿ ಇಂದು ಕೂಡಾ ನಾಲ್ಕು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ವೇಲ್ಸ್‌ಗೆ ಇರಾನ್‌ ಸವಾಲೆಸೆದರೆ, ನಂತರದ ಪಂದ್ಯದಲ್ಲಿ ಕತಾರ್‌ಗೆ ಸೆನೆಗಲ್‌ ಸವಾಲೊಡ್ಡಲಿದೆ. ಬಳಿಕ ನೆದರ್ಲೆಂಡ್ಸ್‌ ಮತ್ತು ಈಕ್ವೆಡಾರ್‌ ಪಂದ್ಯಗಳು ನಡೆದರೆ, ಇಂದು ಮಧ್ಯರಾತ್ರಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಯುಎಸ್‌ಎ ಪೈಪೋಟಿ ನೀಡಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು