logo
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup 2022 Today Schedule: ಇಂದಿನಿಂದ ನಾಕೌಟ್ ಕದನ; ಡಚ್ ವಿರುದ್ಧ ಅಮೆರಿಕ ಕಣಕ್ಕೆ, ಆಸೀಸ್ ಗೆ ಅರ್ಜೆಂಟೀನಾ ಸವಾಲು

FIFA World Cup 2022 Today Schedule: ಇಂದಿನಿಂದ ನಾಕೌಟ್ ಕದನ; ಡಚ್ ವಿರುದ್ಧ ಅಮೆರಿಕ ಕಣಕ್ಕೆ, ಆಸೀಸ್ ಗೆ ಅರ್ಜೆಂಟೀನಾ ಸವಾಲು

HT Kannada Desk HT Kannada

Dec 03, 2022 09:33 AM IST

ಫಿಫಾ ವಿಶ್ವಕಪ್ (ಫೋಟೋ-FIFA)

  • ಕತಾರ್‌ನಲ್ಲಿ ನಡೆಯುತ್ತಿರುವ ಫಿಪಾ ವಿಶ್ವಕಪ್ ನಾಕೌಟ್ ಹಂತವನ್ನು ತಲುಪಿದೆ. ಇಂದು ಮೊದಲ ಪಂದ್ಯ ನೆದರ್ಲೆಂಡ್ಸ್ ಮತ್ತು ಅಮೆರಿಕ ನಡುವೆ ನಡೆಯಲಿದೆ. ಎರಡನೇ ಪಂದ್ಯ ಶನಿವಾರ ಮಧ್ಯರಾತ್ರಿ ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

ಫಿಫಾ ವಿಶ್ವಕಪ್ (ಫೋಟೋ-FIFA)
ಫಿಫಾ ವಿಶ್ವಕಪ್ (ಫೋಟೋ-FIFA)

ಕತಾರ್: ಫಿಫಾ ವಿಶ್ವಕಪ್ ನಲ್ಲಿ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಮುಂದಿನ ಹಂತಕ್ಕೆ ತಲುಪಿದೆ. 16 ತಂಡಗಳು ನಾಕೌಟ್ ಹಂತ ತಲುಪಿವೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಮೊದಲ ಸುತ್ತಿನಲ್ಲೇ ಹಲವು ಅಚ್ಚರಿ ಫಲಿತಾಂಶಗಳು ಬಂದಿದ್ದು, ಚಿಕ್ಕ ತಂಡಗಳು ತಮ್ಮ ಸಾಮರ್ಥ್ಯ ಏನೆಂದನ್ನು ಸಾಬೀತುಪಡಿಸಿವೆ. ಅದರಲ್ಲೂ ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಉರುಗ್ವೆಯಂಥ ಬಲಿಷ್ಠ ತಂಡಗಳಿಗೆ ಏಷ್ಯನ್ ತಂಡಗಳು ಆಘಾತ ನೀಡಿದ್ದವು.

ಗುಂಪು ಹಂತದಲ್ಲಿಲ್ಲೇ ಬಲಿಷ್ಠ ತಂಡಗಳನ್ನು ಮನೆಗೆ ಕಳಿಸುವ ಮೂಲಕ ನಾಕೌಟ್‌ ಹಂತದ ಬಾಗಿಲು ಬಂದ್ ಮಾಡಿಸಿವೆ. ಇದೀಗ ಪ್ರಮುಖ ಘಟ್ಟ ತಲುಪಿರುವ ಮಹಾ ಟೂರ್ನಿಯಲ್ಲಿ ಇಂದಿನಿಂದ ನೌಕೌಟ್ ಹಂತದ ಪಂದ್ಯಗಳು ನಡೆಯಲಿವೆ. ತಂಡಗಳು ಕೂಡ ಇದಕ್ಕಾಗಿ ಅಸ್ತ್ರಗಳನ್ನು ಸಿದ್ಧಪಡಿಸುತ್ತಿವೆ. ಇಂದು (ಶನಿವಾರ, ಡಿಸೆಂಬರ್ 3) ನಾಕೌಟ್ ಪಂದ್ಯಗಳು ಆರಂಭವಾಗಲಿವೆ.

ಮೊದಲ ಪಂದ್ಯ ನೆದರ್ಲೆಂಡ್ಸ್ ಮತ್ತು ಅಮೆರಿಕ ನಡುವೆ ರಾತ್ರಿ 8.30ಕ್ಕೆ ನಡೆಯಲಿದೆ. ಎರಡನೇ ಪಂದ್ಯ ಮಧ್ಯರಾತ್ರಿ 12.30ಕ್ಕೆ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾ ಸೆಣಸಾಡಲಿವೆ.

ನಾಕೌಟ್ ಪಂದ್ಯಗಳ ವೇಳಾಪಟ್ಟಿ

- ರಾತ್ರಿ 8.30ಕ್ಕೆ ನೆದರ್ಲೆಂಡ್ಸ್ ವಿರುದ್ಧ ಯುಎಸ್ಎ ಪಂದ್ಯ

- ಮಧ್ಯರಾತ್ರಿ 12.30ಕ್ಕೆ ಅರ್ಜೆಂಟೀನಾ vs ಆಸ್ಟ್ರೇಲಿಯಾ ನಡುವಿನ ಪಂದ್ಯ

ಮೂರು ಬಾರಿಯ ರನ್ನರ್ ಅಪ್ ನೆದರ್ಲೆಂಡ್ಸ್ ಗುಂಪು ಹಂತದಲ್ಲಿ ಸಮಾನ ಪ್ರದರ್ಶನ ನೀಡಲಿಲ್ಲ. ಸುಲಭವಾಗಿ ಕ್ವಾರ್ಟರ್ ತಲುಪಿದರೂ ಆ ಪ್ರದರ್ಶನ ಮುನ್ನಡೆಗೆ ಸಾಕಾಗಲಿಲ್ಲ.

ಮತ್ತೊಂದೆಡೆ ಅಮೆರಿಕ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತು. ಡಚ್ ತಂಡ ಮೇಲುಗೈ ಸಾಧಿಸಬೇಕಾದರೆ, ಅಮೆರಿಕ ವಿರುದ್ಧ ಉತ್ತಮ ಫಾರ್ಮ್‌ನಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಬೇಕಿದೆ.

ಶನಿವಾರ ಮಧ್ಯರಾತ್ರಿಯ ನಂತರ ಎರಡನೇ ನಾಕೌಟ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿದಿರುವ ಅರ್ಜೆಂಟೀನಾ ತಂಡವನ್ನು ಗ್ರೂಪ್ ಹಂತದಲ್ಲಿ ಸೌದಿ ಅರೇಬಿಯಾ ಸೋಲಿಸಿ ಆಘಾತ ಅನುಭವಿಸಿತು. ಇದರೊಂದಿಗೆ ಅತ್ಯಂತ ಪ್ರಯಾಸಪಟ್ಟು ನಾಕೌಟ್ ಸುತ್ತು ತಲುಪಿತು. ಮೆಕ್ಸಿಕೊ ಮತ್ತು ಪೋಲೆಂಡ್ ವಿರುದ್ಧ ಗೆದ್ದು ಕ್ವಾರ್ಟರ್ ತಲುಪಿತು.

ಮತ್ತೊಂದೆಡೆ, ಆಸ್ಟ್ರೇಲಿಯಾ ಕೂಡ ಸುಮಾರು 16 ವರ್ಷಗಳ ನಂತರ ನಾಕೌಟ್ ತಲುಪುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇವೆರಡರಲ್ಲಿ ಅರ್ಜೆಂಟೀನಾ ಗೆಲ್ಲುವ ಉತ್ತಮ ಅವಕಾಶಗಳನ್ನು ಹೊಂದಿದೆ, ಆದರೆ ಆಸೀಸ್ ಅನ್ನು ಅತಿ ಸುಲಭವಾಗಿ ಪರಿಗಣಿಸುವಂತಿಲ್ಲ.

ನೆದರ್ಲೆಂಡ್ಸ್ ಮತ್ತು ಅಮೆರಿಕ ನಡುವಿನ ಪಂದ್ಯವನ್ನು ಭಾರತೀಯರು ವೀಕ್ಷಿಸಲು ಬಯಸಿದರೆ ಸ್ಪೋರ್ಟ್ಸ್ 18, ಸ್ಪೋರ್ಟ್ಸ್ 18 ಹೆಚ್‌ಡಿ ಚಾನೆಲ್‌ನಲ್ಲಿ ನೋಡಬೇಕು. ಇದನ್ನು ಜಿಯೋ ಅಪ್ಲಿಕೇಶನ್‌ನಲ್ಲಿಯೂ ನೋಡಬಹುದು. ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆ ಕಲ್ಪಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು