FIFA World Cup : ಫಿಫಾ ವಿಶ್ವಕಪ್: ಇಂದು ಸ್ಪೇನ್ ವಿರುದ್ಧ ಮೊರಾಕೊ, ಸ್ವಿಟ್ಜರ್ಲೆಂಡ್ ವಿರುದ್ಧ ಪೋರ್ಚುಗಲ್ ಪ್ರಿ ಕ್ವಾರ್ಟರ್ ಕೊನೆ ಫೈಟ್
Dec 06, 2022 12:28 PM IST
ಸ್ಪೇನ್ ತಂಡದ ಆಟಗಾರರು ಗೋಲು ಗಳಿಸಲು ಪ್ರಯತ್ನಿಸುತ್ತಿರುವುದು (ಫೋಟೋ-AP)
FIFA World Cup 2022 Today Schedule: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಾಕೌಟ್ ಪಂದ್ಯಗಳು ಅಂತಿಮ ಹಂತವನ್ನು ತಲುಪಿವೆ. ಎಫ್ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಮೊರಾಕೊ ತಂಡ ಇಂದು ಸ್ಪೇನ್ ತಂಡವನ್ನು ಎದುರಿಸಲಿದೆ.
ಕತಾರ್: ಫಿಫಾ ವಿಶ್ವಕಪ್ 2022 ಮಹಾ ಕಾಲ್ಚೆಂಡಿನಾಟ ರೋಚಕದಿಂದ ಸಾಗುತ್ತಿದ್ದು, ಗ್ರೂಪ್ ಪಂದ್ಯಗಳಲ್ಲಿ ವಿಶ್ವದ ಬಲಿಷ್ಠ ತಂಡಗಳು ಈಗಾಗಲೇ ನಾಕೌಟ್ ಹಂತ ತಲುಪಿವೆ. ಈ ಪಂದ್ಯಗಳೂ ಮಂಗಳವಾರ ಮುಕ್ತಾಯಗೊಳ್ಳಲಿವೆ. ಅದರ ನಂತರ ಕ್ವಾರ್ಟರ್, ಸೆಮಿ ಮತ್ತು ಫೈನಲ್‌ಗಳು ಮಾತ್ರ ಉಳಿದಿವೆ.
ನಾಕೌಟ್ ಹಂತದ ಅಂತಿಮ ಪಂದ್ಯಗಳು ಇಂದು ನಡೆಯಲಿವೆ. ಮೊದಲ ನೌಕೌಟ್ ಅಂದರೆ ರೌಂಡ್ 16 ನಲ್ಲಿ ಸ್ಪೇನ್ ವಿರುದ್ಧ ಮೊರಾಕೊ ರಾತ್ರಿ 8.30ಕ್ಕೆ ಸೆಣಿಸಿದರೆ, ಪೋರ್ಚುಗಲ್-ಸ್ವಿಟ್ಜರ್ಲೆಂಡ್ ಪಂದ್ಯ ಮಧ್ಯರಾತ್ರಿ 12.30ಕ್ಕೆ ನಡೆಯಲಿದೆ.
FIFA 2022 ಇಂದಿನ ಪಂದ್ಯದ ವಿವರಗಳು..
- ಮೊರಾಕೊ vs ಸ್ಪೇನ್ ನಡುವಿನ ಪಂದ್ಯ ರಾತ್ರಿ 8.30 ಕ್ಕೆ ಅಲ್ ರಯಾನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
- ಪೋರ್ಚುಗಲ್ vs ಸ್ವಿಟ್ಜರ್ಲೆಂಡ್ ನಡುವಿನ ಪಂದ್ಯ ಮಧ್ಯರಾತ್ರಿ 12.30ಕ್ಕೆ ಆರಂಭ
ಕತಾರ್‌ನಲ್ಲಿ ನಡೆಯುತ್ತಿರುವ ಈ ಫುಟ್‌ಬಾಲ್ ವಿಶ್ವಕಪ್‌ನ ಆರಂಭದಿಂದಲೂ ಮೊರಾಕೊ ಅದ್ಭುತವಾದ ಪ್ರದರ್ಶನ ನೀಡುತ್ತಿದೆ. ಗುಂಪು ಹಂತದಲ್ಲಿಯೇ ಬಲಿಷ್ಠ ಬೆಲ್ಜಿಯಂನಂತಹ ದೊಡ್ಡ ತಂಡದ ದೊಡ್ಡ ಶಾಕ್ ನೀಡಿ ಗ್ರೂಪ್-ಎಫ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು.
ಅದೇ ಆತ್ಮಸ್ಥೈರ್ಯದೊಂದಿಗೆ ನಾಕೌಟ್ ಹಂತದಲ್ಲೂ ಸಾಧನೆ ಮಾಡಲು ಉತ್ಸುಕವಾಗಿದೆ. ಗುಂಪು ಹಂತವನ್ನು ಗೆಲುವಿನೊಂದಿಗೆ ಕ್ಲೀನ್ ಸ್ವೀಪ್ ಮಾಡಿದ ನಂತರ ಮೊರಾಕೊ ನಾಕೌಟ್ ಹಂತದಲ್ಲಿ ಸ್ಪೇನ್ ಅನ್ನು ಎದುರಿಸಲಿದೆ.
ಮತ್ತೊಂದೆಡೆ, ಗುಂಪು ಹಂತದಲ್ಲಿ ಸೋಲು ಸೇರಿದಂತೆ ಡ್ರಾದೊಂದಿಗೆ ಸ್ಪೇನ್ ನಾಕೌಟ್ ಹಂತವನ್ನು ತಲುಪಿತು. ಅಂಡರ್‌ರೇಟೆಡ್ ಜಪಾನ್ ವಿರುದ್ಧದ ಪಂದ್ಯದಲ್ಲೂ ಸ್ಪೇನ್ ತಂಡವು ಸೋಲನ್ನು ಅನುಭವಿಸಿತ್ತು.
ಜರ್ಮನಿ ವಿರುದ್ಧದ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು. ಆರಂಭಿಕ ಪಂದ್ಯದಲ್ಲಿ ಕೋಸ್ಟರಿಕಾವನ್ನು 7-0 ಗೋಲುಗಳಿಂದ ಸೋಲಿಸಿದ್ದು ಬಿಟ್ಟರೆ ಸ್ಪೇನ್ ಉತ್ತಮ ಪ್ರದರ್ಶನ ನೀಡಲಿಲ್ಲ.
ಮಂಗಳವಾರ ಮಧ್ಯರಾತ್ರಿಯ ನಂತರ ಸ್ವಿಟ್ಜರ್ಲೆಂಡ್ ತಂಡ ಪೋರ್ಚುಗಲ್ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳಲ್ಲಿ ಪೋರ್ಚುಗಲ್ ಗೆ ಗೆಲುವಿನ ಅವಕಾಶವಿದ್ದರೂ ಅಂಕಿ ಅಂಶದಲ್ಲಿ ಸ್ವಿಟ್ಜರ್ಲೆಂಡ್ ಮುಂದಿದೆ.
ಎರಡು ತಂಡಗಳು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10 ಬಾರಿ ಮುಖಾಮುಖಿ ಆಗಿದ್ದರೆ, ಸ್ವಿಸ್ 6 ಬಾರಿ ಗೆದ್ದಿದ್ದರೆ, ಪೋರ್ಚುಗಲ್ 3 ಬಾರಿ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಗ್ರೂಪ್ ಹಂತದಲ್ಲಿ ದಕ್ಷಿಣ ಕೊರಿಯಾ ಪೋರ್ಚುಗಲ್ ಗೆ ಶಾಕ್ ನೀಡಿತ್ತು. ಆದರೆ ಪೋರ್ಚುಗಲ್ ನಲ್ಲಿ ರೊನಾಲ್ಡೊ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ ಎಂಬುದು ಗಮನಾರ್ಹ.
1938 ರ ವಿಶ್ವ ಅರ್ಹತಾ ಪಂದ್ಯಗಳಲ್ಲಿ ಪೋರ್ಚುಗಲ್-ಸ್ವಿಸ್ ಮುಖಾಮುಖಿಯಾದವು. ಈ ಪಂದ್ಯವನ್ನು ಸ್ವಿಸ್ 2-1 ಅಂತರದಿಂದ ಗೆದ್ದುಕೊಂಡಿತು. ಆ ಬಳಿಕ ಉಭಯ ತಂಡಗಳು ಫೈನಲ್‌ಗೂ ಮುನ್ನ ಮುಖಾಮುಖಿಯಾಗಿರಲಿಲ್ಲ.