FIFA World Cup 2022: ಟೂರ್ನಿಯಲ್ಲಿ ಉಳಿಯುತ್ತಾ ನಾಲ್ಕು ಬಾರಿಯ ಚಾಂಪಿಯನ್? ಇಂದಿನ ಪಂದ್ಯಗಳ ವಿವರ ಇಲ್ಲಿದೆ
Dec 01, 2022 02:33 PM IST
ಇಂದಿನ ಪಂದ್ಯಗಳ ವಿವರ ಇಲ್ಲಿದೆ...
- ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬೆಲ್ಜಿಯಂ ಮತ್ತು ಕ್ರೊಯೇಷಿಯಾ ಎರಡೂ ತಂಡಗಳು ತಮ್ಮ ಮುಖಾಮುಖಿಯಲ್ಲಿ ಗೆಲ್ಲಬೇಕಾಗಿದೆ. ಒಂದು ವೇಳೆ ಇಂದು ಬೆಲ್ಜಿಯಂ ಸೋತರೆ, ಟೂರ್ನಿಯಿಂದ ಹೊರ ಹೋಗಬೇಕಾಗುತ್ತದೆ. ಇದೇ ವೇಳೆ ಪಂದ್ಯ ಡ್ರಾ ಆದರೆ, ಕೆನಡಾ ಮತ್ತು ಮೊರಾಕೊ ನಡುವಿನ ಪಂದ್ಯದ ಫಲಿತಾಂಶದ ಆಧಾರದಲ್ಲಿ ಬೆಲ್ಜಿಯಂ ಭವಿಷ್ಯ ನಿರ್ಧಾರವಾಗಲಿದೆ.
ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬೆಲ್ಜಿಯಂ ಮತ್ತು ಕ್ರೊಯೇಷಿಯಾ ಎರಡೂ ತಂಡಗಳು ತಮ್ಮ ಮುಖಾಮುಖಿಯಲ್ಲಿ ಗೆಲ್ಲಬೇಕಾಗಿದೆ. ಒಂದು ವೇಳೆ ಇಂದು ಬೆಲ್ಜಿಯಂ ಸೋತರೆ, ಟೂರ್ನಿಯಿಂದ ಹೊರ ಹೋಗಬೇಕಾಗುತ್ತದೆ. ಇದೇ ವೇಳೆ ಪಂದ್ಯ ಡ್ರಾ ಆದರೆ, ಕೆನಡಾ ಮತ್ತು ಮೊರಾಕೊ ನಡುವಿನ ಪಂದ್ಯದ ಫಲಿತಾಂಶದ ಆಧಾರದಲ್ಲಿ ಬೆಲ್ಜಿಯಂ ಭವಿಷ್ಯ ನಿರ್ಧಾರವಾಗಲಿದೆ.ಫಿಫಾ ವಿಶ್ವಕಪ್ ಮತ್ತಷ್ಟು ರೋಚಕ ಹಂತ ತಲುಪುತ್ತಿದೆ. ಪ್ರಸ್ತುತ ಗ್ರೂಪ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಕೆಲ ತಂಡಗಳು ನಾಕೌಟ್ ಹಂತ ಪ್ರವೇಶಿಸಲು ಮಾರ್ಗ ಸುಗಮವಾಗಿಸಿವೆ. ಮತ್ತೆ ಕೆಲ ತಂಡಗಳು ಗ್ರೂಪ್ ಹಂತದಲ್ಲೇ ತಮ್ಮ ಅಭಿಯಾನ ಅಂತ್ಯಗೊಳಿಸಿವೆ. ಇಂದಿನ ದಿನವೂ ಕೆಲವು ಮಹತ್ವದ ಪಂದ್ಯಗಳು ನಡೆಯುತ್ತಿದ್ದು, ಟೂರ್ನಿಯಲ್ಲಿ ಜೀವಂತವಾಗುಳಿಯಲು ಕೆಲ ತಂಡಗಳಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಗುರುವಾರ ಕತಾರ್‌ನ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ 16ನೇ ಸುತ್ತಿಗೆ ಅರ್ಹತೆ ಪಡೆಯಲು ನಡೆಯುತ್ತಿರುವ ಮುಖಾಮುಖಿಯಲ್ಲಿ ಕ್ರೊಯೇಷಿಯಾ ತಂಡವು ಬೆಲ್ಜಿಯಂ ಅನ್ನು ಎದುರಿಸಲಿದೆ. ಈ ನಡುವೆ, ಅಲ್ ಥುಮಾಮಾ ಸ್ಟೇಡಿಯಂನಲ್ಲಿ ಎಫ್ ಗುಂಪಿನ ಅಂತಿಮ ಪಂದ್ಯಗಳಲ್ಲಿ ಕೆನಡಾ ತಂಡ ಮೊರಾಕೊವನ್ನು ಎದುರಿಸುತ್ತದೆ. ಕ್ರೊಯೇಷಿಯಾ ಪ್ರಸ್ತುತ ಎಫ್ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮೊರಾಕೊ ಕೂಡಾ ನಾಲ್ಕು ಅಂಕಗಳನ್ನು ಪಡೆದುಕೊಂಡಿದ್ದು, ಕಡಿಮೆ ಗೋಲು ವ್ಯತ್ಯಾಸದೊಂದಿಗೆ ನಂತರದ ಸ್ಥಾನದಲ್ಲಿದೆ. ಇದೇ ವೇಳೆ ಬೆಲ್ಜಿಯಂ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಕೆನಡಾ ದೇಶ ಅಂಕಗಳ ಖಾತೆ ತೆರೆಯದೆ ಕೊನೆಯ ಸ್ಥಾನದಲ್ಲಿದೆ.
ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬೆಲ್ಜಿಯಂ ಮತ್ತು ಕ್ರೊಯೇಷಿಯಾ ಎರಡೂ ತಂಡಗಳು ತಮ್ಮ ಮುಖಾಮುಖಿಯಲ್ಲಿ ಗೆಲ್ಲಬೇಕಾಗಿದೆ. ಒಂದು ವೇಳೆ ಇಂದು ಬೆಲ್ಜಿಯಂ ಸೋತರೆ, ಟೂರ್ನಿಯಿಂದ ಹೊರ ಹೋಗಬೇಕಾಗುತ್ತದೆ. ಇದೇ ವೇಳೆ ಪಂದ್ಯ ಡ್ರಾ ಆದರೆ, ಕೆನಡಾ ಮತ್ತು ಮೊರಾಕೊ ನಡುವಿನ ಪಂದ್ಯದ ಫಲಿತಾಂಶದ ಆಧಾರದಲ್ಲಿ ಬೆಲ್ಜಿಯಂ ಭವಿಷ್ಯ ನಿರ್ಧಾರವಾಗಲಿದೆ.
ಅತ್ತ ಕ್ರೊಯೇಷಿಯಾದ ಸೋಲು, ಈ ಗುಂಪಿನ ಮುಂದಿನ ಲೆಕ್ಕಾಚಾರವನ್ನು ಮತ್ತಷ್ಟು ಕುತೂಹಲಕಾರಿಯಾಗಿಸುತ್ತದೆ. ಮೊರಾಕೊವನ್ನು ಕೆನಡಾ ಸೋಲಿಸಬೇಕೆಂದು ಕಾಯಬೇಕಾಗುತ್ತದೆ. ಮೊರಾಕೊ ಇಂದು ಗೆಲುವು ಸಾಧಿಸಿದರೆ, ನಾಕೌಟ್ ಹಂತಕ್ಕೆ ಲಗ್ಗೆ ಹಾಕುತ್ತದೆ. ಒಂದು ವೇಖೆ ಡ್ರಾಗೊಂಡರೆ. ಕ್ರೊಯೇಷಿಯಾದ ಪಂದ್ಯದ ಆಧಾರದಲ್ಲಿ ಮುಂದಿನ ಲೆಕ್ಕಾಚಾರ ನಡೆಯುತ್ತದೆ. ಒಂದು ವೇಳೆ ಮೊರಾಕೊ ಕೆನಡಾ ವಿರುದ್ಧ ಸೋತರೆ, ಅವರ ಭವಿಷ್ಯವು ಕ್ರೊಯೇಷಿಯಾ ಮತ್ತು ಬೆಲ್ಜಿಯಂ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ.
ಇತ್ತ, ಇ ಗುಂಪಿನ ಅಂತಿಮ ಪಂದ್ಯಗಳಲ್ಲಿ, ಜಪಾನ್ ತಂಡವು ಸ್ಪೇನ್ ತಂಡವನ್ನು ಎದುರಿಸುತ್ತಿದೆ. ಅಲ್ ಬೇಟ್ ಸ್ಟೇಡಿಯಂನಲ್ಲಿ ಜರ್ಮನಿಯನ್ನು ಕೋಸ್ಟರಿಕಾ ಎದುರಿಸಲಿದೆ. ಇ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಸ್ಪೇನ್ ಅಗ್ರಸ್ಥಾನದಲ್ಲಿದ್ದು, ಮೂರು ಅಂಕಗಳೊಂದಿಗೆ ಜಪಾನ್ ನಂತರದ ಸ್ಥಾನದಲ್ಲಿದೆ. ಕೋಸ್ಟರಿಕಾ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ಒಂದು ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಎಲ್ಲಾ ನಾಲ್ಕು ತಂಡಗಳು 16ರ ಸುತ್ತಿನ ಸ್ಪರ್ಧೆಯಲ್ಲಿವೆ. ಜಪಾನ್ ವಿರುದ್ಧ ಸ್ಪೇನ್ ಕನಿಷ್ಠ ಡ್ರಾ ಸಾಧಿಸಿದರೆ ಮುಂದಿನ ಹಂತ ಸುಗಮವಾಗಲಿದೆ. ಒಂದು ವೇಳೆ ಅದು ಸೋತರೆ, ಕೋಸ್ಟರಿಕಾ ಮತ್ತು ಜರ್ಮನಿಯ ಸೋಲು ಗೆಲುವುಗಳಿಂದ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಇತ್ತ ಜಪಾನ್ ತನ್ನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇಲ್ಲಿಯೂ ಡ್ರಾಗೊಂಡರೆ, ಅದರ ಭವಿಷ್ಯವು ಇತರ ಪಂದ್ಯದ ಮೇಲೆ ಅವಲಂಬಿತವಾಗಿರುತ್ತದೆ. ಕೋಸ್ಟರಿಕಾ ಮತ್ತು ಜರ್ಮನಿ ತಂಡಗಳಿಗೆ ಪಂದ್ಯವನ್ನು ಗೆಲ್ಲೇಲೇ ಬೇಕಾದ ಅನಿವಾರ್ಯತೆ ಇದೆ.
ಇಂದಿನ ಪಂದ್ಯಗಳು
ಕ್ರೊಯೇಷಿಯಾ vs ಬೆಲ್ಜಿಯಂ
ಕೆನಡಾ vs ಮೊರಾಕೊ,
ಜಪಾನ್ vs ಸ್ಪೇನ್,
ಕೋಸ್ಟರಿಕಾ ಮತ್ತು ಜರ್ಮನಿ
ಪಂದ್ಯಗಳು ಎಲ್ಲಿ ನಡೆಯುತ್ತವೆ?
ಕ್ರೊಯೇಷಿಯಾ ಮತ್ತು ಬೆಲ್ಜಿಯಂ ನಡುವಿನ ಪಂದ್ಯವು ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕೆನಡಾ ಹಾಗೂ ಮೊರಾಕೊ ಪಂದ್ಯವು ಅಲ್ ಥುಮಾಮಾ ಸ್ಟೇಡಿಯಂನಲ್ಲಿ ನಡೆದರೆ, ಜಪಾನ್ ಹಾಗೂ ಸ್ಪೇನ್ ನಡುವಿನ ಪಂದ್ಯ ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯದಾಗಿ ಕೋಸ್ಟರಿಕಾ ಹಾಗೂ ಜರ್ಮನಿ ಪಂದ್ಯವು ಅಲ್ ಬೈಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಪಂದ್ಯದ ಸಮಯ
ಕೋಸ್ಟರಿಕಾ vs ಬೆಲ್ಜಿಯಂ, ಕೆನಡಾ vs ಮೊರಾಕೊ ನಡುವಿನ ಪಂದ್ಯಗಳು, ಭಾರತೀಯ ಕಾಲಮಾನದ ಪ್ರಕಾರ ಇಂದು (ಡಿಸೆಂಬರ್ 1) ಸಂಜೆ 8:30ಕ್ಕೆ ನಡೆಯಲಿವೆ. ಜಪಾನ್ ವಿರುದ್ಧ ಸ್ಪೇನ್, ಕೋಸ್ಟರಿಕಾ ವಿರುದ್ಧ ಜರ್ಮನಿ ಪಂದ್ಯಗಳು ತಡರಾತ್ರಿ (ಶುಕ್ರವಾರ ಡಿಸೆಂಬರ್ 2) 12:30ಕ್ಕೆ ನಡೆಯಲಿವೆ.
ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ
ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ https://www.hindustantimes.com/sports/football ನಲ್ಲಿ ಲೈವ್ ಅಪ್ಡೇಟ್ ಅನ್ನು ನೀವು ಅನುಸರಿಸಬಹುದು.