logo
ಕನ್ನಡ ಸುದ್ದಿ  /  ಕ್ರೀಡೆ  /  R Sridhar: 'ಭಾರತದಲ್ಲಿ ರೋಹಿತ್ ಬಣ ಮತ್ತು ಕೊಹ್ಲಿ ಬಣವಿತ್ತು; ಶಾಸ್ತ್ರಿ ಇಬ್ಬರನ್ನೂ ಕರೆದು ಬುದ್ಧಿ ಹೇಳಿದರು'; ಮಾಜಿ ಕೋಚ್‌ ಹೇಳಿದ್ದೇನು?

R Sridhar: 'ಭಾರತದಲ್ಲಿ ರೋಹಿತ್ ಬಣ ಮತ್ತು ಕೊಹ್ಲಿ ಬಣವಿತ್ತು; ಶಾಸ್ತ್ರಿ ಇಬ್ಬರನ್ನೂ ಕರೆದು ಬುದ್ಧಿ ಹೇಳಿದರು'; ಮಾಜಿ ಕೋಚ್‌ ಹೇಳಿದ್ದೇನು?

Jayaraj HT Kannada

Feb 04, 2023 05:00 PM IST

ರವಿಶಾಸ್ತ್ರಿ (ಎಡ) ರೋಹಿತ್ ಶರ್ಮಾ (ಮಧ್ಯ) ಮತ್ತು ವಿರಾಟ್ ಕೊಹ್ಲಿ

    • ರೋಹಿತ್ ಹಾಗೂ ಕೊಹ್ಲಿ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಹಳಸಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಡುವಿನ ಸ್ನೇಹ ಸಂಬಂಧ ಹೇಗೆ ಹಳಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ರವಿಶಾಸ್ತ್ರಿ (ಎಡ) ರೋಹಿತ್ ಶರ್ಮಾ (ಮಧ್ಯ) ಮತ್ತು ವಿರಾಟ್ ಕೊಹ್ಲಿ
ರವಿಶಾಸ್ತ್ರಿ (ಎಡ) ರೋಹಿತ್ ಶರ್ಮಾ (ಮಧ್ಯ) ಮತ್ತು ವಿರಾಟ್ ಕೊಹ್ಲಿ (Twitter)

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಇಬ್ಬರು ದೈತ್ಯರು. ಸದ್ಯ ತಂಡದಲ್ಲಿರುವ ಇಬ್ಬರು ಹಿರಿಯ ಕ್ರಿಕೆಟಿಗರಾದ ಕೊಹ್ಲಿ ಮತ್ತು ರೋಹಿತ್ ಬಹಳ ವರ್ಗಳಿಂದ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದಾರೆ. 2008ರಿಂದಲೂ ಭಾರತೀಯ ತಂಡದಲ್ಲಿ ಜೊತೆಗೆ ಆಡುತ್ತಾ, ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿಗೂ ಇವರಿಬ್ಬರು ತಂಡದಲ್ಲಿದ್ದರೆ ಹಾಗೂ ಒಟ್ಟಿಗೆ ಬ್ಯಾಟ್ ಮಾಡುವಾಗ ಜಾಗತಿಕ ಕ್ರಿಕೆಟ್‌ನಲ್ಲಿ ಅದಕ್ಕಿಂದ ಸುಂದರ ದೃಶ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಇವರಿಬ್ಬರ ನಡುವೆ ಎಲ್ಲಾ ವಿಚಾರಗಳು ಸರಿ ಇವೆ ಎಂದು ಅರ್ಥವಲ್ಲ. ಬಹಳ ಸಮಯದ ಹಿಂದೆಯೇ ಕೊಹ್ಲಿ ಮತ್ತು ರೋಹಿತ್ ನಡುವೆ ಭಿನ್ನಾಭಿಪ್ರಾಯ ಇರುವ ಬಗ್ಗೆ ವದಂತಿಗಳು ಹಬ್ಬಿತ್ತು. ಇದು 2019ರ ವಿಶ್ವಕಪ್‌ ಸಮಯದಲ್ಲಿ ಬಹಿರಂಗವಾಗಿತ್ತು. ಆ ಬಳಿಕ 2021ರ ಕೊನೆಯಲ್ಲಿ ಕೊಹ್ಲಿಯನ್ನು ಭಾರತ ತಂಡದ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಉತ್ತುಂಗಕ್ಕೇರಿತು.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಆದರೆ, ಈ ಎಲ್ಲಾ ವದಂತಿಗಳಿಗೆ ಪುರಾವೆ ಇವೆಯಾ? ಖಂಡಿತವಾಗಿಯೂ ಇದೆ. ಈ ವದಂತಿಗಳಲ್ಲಿ ಈ ಇಬ್ಬರು ಕ್ರಿಕೆಟಿಗರ ತಪ್ಪಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದವು. ಇದರಿಂದಾಗಿ ಅವರಿಬ್ಬರ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಹಳಸಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಡುವಿನ ಸ್ನೇಹ ಸಂಬಂಧ ಹೇಗೆ ಹಳಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಆದರೆ, ಅದು ಉತ್ತುಂಗಕ್ಕೇರುವ ಮುನ್ನ ರವಿಶಾಸ್ತ್ರಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಿಳಿಸಿದ್ದಾರೆ.

“2019ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಅಂತ್ಯಗೊಂಡ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ಸಾಕಷ್ಟು ಕೆಟ್ಟ ಸುದ್ದಿಗಳು ಹರಿದಾಡಿದವು. ನಮ್ಮಲ್ಲಿ ರೋಹಿತ್ ಬಣ ಮತ್ತು ವಿರಾಟ್ ಬಣವಿದೆ ಎಂದು ನಮಗೆ ತಿಳಿಸಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಮತ್ತೊಬ್ಬರನ್ನು ಅನ್‌ಫಾಲೋ ಮಾಡಿದ್ದಾರೆ, ನೀವು ಅದನ್ನು ಉಲ್ಬಣಗೊಳಿಸಲು ಅವಕಾಶ ನೀಡಿದರೆ ಅದು ಬೇರೆಲ್ಲೋ ಹೋಗಬಹುದು ಎಂಬ ಮಗ್ಗೆ ಮಾಹಿತಿ ಲಭ್ಯವಾಯ್ತು” ಎಂದು ಶ್ರೀಧರ್ 'ಕೋಚಿಂಗ್ ಬಿಯಾಂಡ್(Coaching Beyond)' ಪುಸ್ತಕದಲ್ಲಿ ಬರೆದಿದ್ದಾರೆ.

“ಲೌಡರ್‌ಹಿಲ್‌ನಲ್ಲಿ ನಡೆಯಬೇಕಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಾಗಿ ನಾವು ವಿಶ್ವಕಪ್‌ ನಡೆದ ಸುಮಾರು 10 ದಿನಗಳ ನಂತರ ಯುನೈಟೆಡ್ ಸ್ಟೇಟ್ಸ್‌ಗೆ (ಯುಎಸ್) ಬಂದಿಳಿದೆವು. ಅಲ್ಲಿ ರವಿ ಅವರು ಆಗಮಿಸಿದ ಬಳಿಕ ನಾವು ಮಾಡಿದ ಮೊದಲ ಕೆಲಸವೆಂದರೆ, ವಿರಾಟ್ ಮತ್ತು ರೋಹಿತ್‌ ಅವರನ್ನು ನಮ್ಮ ಕೋಣೆಗೆ ಕರೆದು ಅವರಲ್ಲಿ ಮಾತನಾಡುವುದು. ಭಾರತೀಯ ಕ್ರಿಕೆಟ್ ಸದಾ ಸುಸ್ಥಿತಿಯಲ್ಲಿರಲು, ಅವರಿಬ್ಬರೂ ಒಂದಾಗಿರಬೇಕಾಗಿತ್ತು. 'ಸೋಷಿಯಲ್ ಮೀಡಿಯಾದಲ್ಲಿ ಏನಾಯಿತೋ, ಅವೆಲ್ಲವನ್ನೂ ಪಕ್ಕಕ್ಕಿಡಿ. ಆದರೆ, ನೀವಿಬ್ಬರು ಭಾರತ ಕ್ರಿಕೆಟ್‌ನ ಅತ್ಯಂತ ಹಿರಿಯ ಕ್ರಿಕೆಟಿಗರು. ಆದ್ದರಿಂದ ಇವಕ್ಕೆಲ್ಲಾ ಅಂತ್ಯ ಹಾಡಬೇಕು' ಎಂದು ರವಿ ಶಾಸ್ತ್ರಿ ಅವರು ವಿಶಿಷ್ಟವಾದ ಮಾತಿನ ಶೈಲಿಯಲ್ಲಿ ಹೇಳಿದರು. 'ಇವೆಲ್ಲವನ್ನೂ ನೀವು ಇಲ್ಲಿಗೆ ನಿಲ್ಲಿಸಬೇಕು. ನಾವು ತಂಡವಾಗಿ ಮುಂದುವರೆಯಲು ಎಲ್ಲರೂ ಒಟ್ಟಿಗೆ ಸೇರಬೇಕೆಂದು ನಾನು ಬಯಸುತ್ತೇನೆ', ಎಂದು ಅವರು ಹೇಳಿದ್ದರು" ಎಂದು ಶ್ರೀಧರ್‌ ಹೇಳಿದ್ದಾರೆ.

ಸದ್ಯ ಇವರಿಬ್ಬರ ನಡುವಿನ ಸಂಬಂಧ ಉತ್ತಮವಾಗಿದೆ. ಹಿರಿಯ ಕ್ರಿಕೆಟಿಗರಾಗಿ ತಂಡದ ಯಶಸ್ಸನ್ನು ಇಬ್ಬರೂ ಆನಂದಿಸುತ್ತಿರುವುದನ್ನು ಕಾಣಬಹುದು. ಮುಖ್ಯವಾಗಿ, ಪರಸ್ಪರರ ಯಶಸ್ಸನ್ನು ನೋಡಬಹುದು. ಒಬ್ಬರು ಫಾರ್ಮ್‌ನಲ್ಲಿದ್ದಾಗ ಒಬ್ಬರಿಗೊಬ್ಬರು ಬೆಂಬಲ ನೀಡುವುದು, ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದದ್ದನ್ನು ಸಂಭ್ರಮಿಸುತ್ತಿರುವುದು ಹೀಗೆ ಕೊಹ್ಲಿ ಮತ್ತು ರೋಹಿತ್ ಸಂಬಂಧ ಉತ್ತಮವಾಗಿದೆ ಎಂಬುವುದಕ್ಕೆ ಹಲವು ಸಾಕ್ಷಿ ಸಿಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು