logo
ಕನ್ನಡ ಸುದ್ದಿ  /  Sports  /  Gambhir On Rohit Sets Unwanted Streak

Gambhir on Rohit: 50 ಪಂದ್ಯಗಳಲ್ಲಿ ರೋಹಿತ್ ಶತಕದ ಬರ; 'ಕೊಹ್ಲಿಯಂತೆ ಇವರನ್ನೂ ನೋಡಿ' ಎಂದ ಗಂಭೀರ್‌

HT Kannada Desk HT Kannada

Jan 16, 2023 12:34 PM IST

ಲಂಕಾ ವಿರುದ್ಧದ ಮೂರನೇ ಏಕದಿನದಲ್ಲಿ ಔಟಾದ ಬಳಿಕ ರೋಹಿತ್‌ ಪ್ರತಿಕ್ರಿಯೆ

    • ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾದ ರೋಹಿತ್, ಸದ್ಯ ಶತಕದ ಬರ ಎದುರಿಸುತ್ತಿದ್ದಾರೆ. ತಮ್ಮ ಕೊನೆಯ 50 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಮೂರಂಕಿ ಮೊತ್ತವನ್ನು ತಲುಪಲು ರೋಹಿತ್ ವಿಫಲರಾಗಿದ್ದಾರೆ.
ಲಂಕಾ ವಿರುದ್ಧದ ಮೂರನೇ ಏಕದಿನದಲ್ಲಿ ಔಟಾದ ಬಳಿಕ ರೋಹಿತ್‌ ಪ್ರತಿಕ್ರಿಯೆ
ಲಂಕಾ ವಿರುದ್ಧದ ಮೂರನೇ ಏಕದಿನದಲ್ಲಿ ಔಟಾದ ಬಳಿಕ ರೋಹಿತ್‌ ಪ್ರತಿಕ್ರಿಯೆ (PTI)

ತಿರುವನಂತಪುರದಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅತಿಥೇಯ ಭಾರತ, ಭರ್ಜರಿ 390 ರನ್‌ ಪೇರಿಸಿತು. ಆ ಬಳಿಕ ಚೇಸಿಂಗ್‌ ವೇಳೆ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿತು. ಅಮೋಘ ಫಾರ್ಮ್ ಮುಂದುವರೆಸಿರುವ ರನ್‌ ಮಷಿನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಶತಕ ಸಿಡಿಸಿದರು. 110 ಎಸೆತಗಳಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 166 ರನ್ ಗಳಿಸಿದರು.

ಟ್ರೆಂಡಿಂಗ್​ ಸುದ್ದಿ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಮತ್ತೊಂದೆಡೆ 50 ಓವರ್‌ಗಳ ಸ್ವರೂಪದಲ್ಲಿ ಶುಭಮನ್ ಗಿಲ್‌ ಎರಡನೇ ಶತಕವನ್ನು ಸಿಡಿಸಿದರು. ಕೊಹ್ಲಿ ಜತೆಗೂಡಿ ಎರಡನೇ ವಿಕೆಟ್‌ಗೆ ಇಬ್ಬರೂ 131 ರನ್‌ಗಳನ್ನು ಸೇರಿಸಿದರು.

ಆದರೆ, ಉತ್ತಮ ಆರಂಭವನ್ನು ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದ ಒಬ್ಬ ಆಟಗಾರನೆಂದರೆ, ಭಾರತದ ನಾಯಕ ರೋಹಿತ್ ಶರ್ಮಾ. ಭಾರತದ ನಾಯಕ 49 ಎಸೆತಗಳಲ್ಲಿ 42 ರನ್‌ ಗಳಿಸಿ, ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಇದು ಅನಗತ್ಯ ದಾಖಲೆಯನ್ನು ಸಹ ಸೃಷ್ಟಿಸಿತು. ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾದ ರೋಹಿತ್, ಸದ್ಯ ಶತಕದ ಬರ ಎದುರಿಸುತ್ತಿದ್ದಾರೆ. ತಮ್ಮ ಕೊನೆಯ 50 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಮೂರಂಕಿ ಮೊತ್ತವನ್ನು ತಲುಪಲು ರೋಹಿತ್ ವಿಫಲರಾಗಿದ್ದಾರೆ.

ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ನ ಚರ್ಚೆಯ ಪ್ಯಾನೆಲಿಸ್ಟ್‌ಗಳಲ್ಲಿ ಒಬ್ಬರಾಗಿರುವ ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್, ಈ ದಾಖಲೆಯ ಬಗ್ಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಗಂಭೀರ್, ಕೆಲವು ತಿಂಗಳ ಹಿಂದೆ ಕೊಹ್ಲಿ ಇದ್ದ ಜಾಗದಲ್ಲಿ ರೋಹಿತ್‌ ಅವರನ್ನು ಕೂಡಾ ನೋಡಬೇಕು ಎಂದು ಹೇಳಿದ್ದಾರೆ.

“ಕಳೆದ ಮೂರೂವರೆ ವರ್ಷಗಳಲ್ಲಿ ವಿರಾಟ್ ಶತಕ ಗಳಿಸದಿದ್ದಾಗ ನಾವು ಅವರನ್ನು ನೋಡಿದಂತೆಯೇ ರೋಹಿತ್‌ ಶರ್ಮಾರನ್ನು ಕೂಡಾ ನೋಡಬೇಕೆಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಬಗ್ಗೆಯೂ ನಾವು ಕೊಹ್ಲಿಯಂತೆಯೇ ಸಮಾನವಾಗಿರಬೇಕು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಇನ್ನಿಂಗ್ಸ್‌ಗಳು ಸಾಕಷ್ಟು ಹೆಚ್ಚು,” ಎಂದು ಗಂಭೀರ್ ಹೇಳಿದರು.

ಹೆಬ್ಬೆರಳಿನ ಗಾಯದ ನಂತರ ತಂಡಕ್ಕೆ ಪುನರಾಗಮನ ಮಾಡಿದ ರೋಹಿತ್, ಮೊದಲ ಏಕದಿನ ಪಂದ್ಯದಲ್ಲಿ 67 ಎಸೆತಗಳಲ್ಲಿ 83 ರನ್ ಗಳಿಸುವ ಮೂಲಕ 2023 ಅನ್ನು ಉತ್ತಮವಾಗಿ ಪ್ರಾರಂಭಿಸಿದರು. ಆ ಪಂದ್ಯವನ್ನು ಭಾರತ 67 ರನ್‌ಗಳಿಂದ ಗೆದ್ದಿತು. ತಿರುವನಂತಪುರದಲ್ಲಿ ನಡೆದ ಮೂರನೇ ಮುಖಾಮುಖಿಯಲ್ಲಿ ಅವರು ಉತ್ತಮವಾಗಿ ಬ್ಯಾಟ್‌ ಬೀಸಿದರು.

ಲಂಕಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ರೋಹಿತ್ ನೆರವಾಗಿದ್ದಾರೆ ಎಂದು ಹೇಳಿದ ಗಂಭೀರ್, “ರೋಹಿತ್ ಚೆಂಡನ್ನು ಚೆನ್ನಾಗಿ ಸಂಪರ್ಕಿಸುತ್ತಿದ್ದಾರೆ. ಆದರೆ, 2019ರ ವಿಶ್ವಕಪ್‌ನಲ್ಲಿ ಅವರಿದ್ದ ಫಾರ್ಮ್ ಅನ್ನು ಮರಳಿ ಪಡೆಯಬೇಕಾಗಿದೆ” ಎಂದು ಹೇಳಿದ್ದಾರೆ. ಒಂಬತ್ತು ಪಂದ್ಯಗಳಿಂದ 648 ರನ್ ಗಳಿಸುವುದರೊಂದಿಗೆ, ರೋಹಿತ್ ಪಂದ್ಯಾವಳಿಯ ಪ್ರಮುಖ ರನ್ ಸ್ಕೋರರ್ ಆಗಿದ್ದರು. ಟೂರ್ನಿಯ ಅವಧಿಯಲ್ಲಿ ಅವರು ಐದು ಶತಕಗಳನ್ನು ಸಿಡಿಸಿದ್ದರು.

“ರೋಹಿತ್‌ ಕೇವಲ ಒಂದು ಅಥವಾ ಎರಡು ಸರಣಿಗಳಲ್ಲಿ ಮಾತ್ರ ಶತಕ ಸಿಡಿಸದೆ ಇರುವುದಲ್ಲ. ಕಳೆದ ವಿಶ್ವಕಪ್‌ನಿಂದ ರೋಹಿತ್ ಅವರ ಆಟದಲ್ಲಿ ಶತಕ ಕಾಣೆಯಾಗಿದೆ. ಈ ಬಾರಿ ಅವರು ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ. ಅವರು ಚೆಂಡನ್ನು ಚೆನ್ನಾಗಿ ಎದುರಿಸುತ್ತಿದ್ದಾರೆ. ಆದರೆ, ಅವರು ಅದನ್ನು ಉತ್ತಮ ಮೊತ್ತವಾಗಿ ಪರಿವರ್ತಿಸಬೇಕಾಗಿದೆ. ವಿರಾಟ್ ಈಗಾಗಲೇ ಅದನ್ನು ಮರಳಿ ಪಡೆದಿದ್ದಾರೆ. ರೋಹಿತ್ ಶರ್ಮಾ ವಿಶ್ವಕಪ್‌ಗೆ ಮೊದಲು ಫಾರ್ಮ್‌ಗೆ ಮರಳಬೇಕಾಗಿದೆ. ಏಕೆಂದರೆ ಭಾರತ ವಿಶ್ವಕಪ್‌ ಗೆಲ್ಲಲು ಈ ಇಬ್ಬರು ಅತ್ಯಂತ ಪ್ರಮುಖರು” ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು