logo
ಕನ್ನಡ ಸುದ್ದಿ  /  ಕ್ರೀಡೆ  /  ಜಪಾನ್ ವಿರುದ್ಧ 1-0 ಅಂತರದ ಸೋಲು; ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಕಳೆದುಕೊಂಡ ಭಾರತ ಮಹಿಳಾ ಹಾಕಿ ತಂಡ

ಜಪಾನ್ ವಿರುದ್ಧ 1-0 ಅಂತರದ ಸೋಲು; ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಕಳೆದುಕೊಂಡ ಭಾರತ ಮಹಿಳಾ ಹಾಕಿ ತಂಡ

Jayaraj HT Kannada

Jan 19, 2024 08:54 PM IST

ಭಾರತ ವನಿತೆಯರ ಹಾಕಿ ತಂಡ

    • Indian Women's Hockey Team: ಎಫ್ಐಎಚ್ ಕ್ವಾಲಿಫೈಯರ್‌ನಲ್ಲಿ ಭಾರತ ವನಿತೆಯರ ಹಾಕಿ ತಂಡವು ಜಪಾನ್ ವಿರುದ್ಧ 1-0 ಅಂತರದಿಂದ ಸೋಲೊಪ್ಪಿದೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತ ತಂಡ ಹೊರಬಿದ್ದಿದೆ.
ಭಾರತ ವನಿತೆಯರ ಹಾಕಿ ತಂಡ
ಭಾರತ ವನಿತೆಯರ ಹಾಕಿ ತಂಡ (Hockey India)

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ವನಿತೆಯರ ಹಾಕಿ ತಂಡವು (Indian women's hockey team), 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ (Paris Olympics) ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಜನವರಿ 19ರ ಶುಕ್ರವಾರ ನಡೆದ ಎಫ್ಐಎಚ್ ಕ್ವಾಲಿಫೈಯರ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ಮಹಿಳೆಯರ ಹಾಕಿ ತಂಡವು 1-0 ಅಂತರದಿಂದ ರೋಚಕ ಸೋಲು ಕಂಡಿತು. ಹೀಗಾಗಿ ಈ ವರ್ಷ ನಡೆಯುತ್ತಿರುವ ಅದ್ಧೂರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಜಪಾನ್‌ನ ಕರಣ್ ಉರಾಟಾ, ಪಂದ್ಯದ ಆರನೇ ನಿಮಿಷದಲ್ಲಿ ಅತ್ಯಮೂಲ್ಯ ಗೋಲು ಗಳಿಸಿದರು. ಈ ಗೋಲು ಪಂದ್ಯದುದ್ದಕ್ಕೂ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಭಾರತ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಅವಕಾಶ ನೀಡದ ಜಪಾನೀಯರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತವನ್ನು ಹೊರದಬ್ಬಿದರು.

ಪೆನಾಲ್ಟ್‌ ಕಾರ್ನರ್‌ ಅವಕಾಶಗಳನ್ನು ಮಿಸ್‌ ಮಾಡಿಕೊಂಡ ಭಾರತ

ಪಂದ್ಯದುದ್ದಕ್ಕೂ ಜಪಾನೀಯರು ಪ್ರಾಬಲ್ಯ ಸಾಧಿಸಿದರು. ಭಾರತವು ಸಂಪೂರ್ಣ 60 ನಿಮಿಷಗಳಲ್ಲಿ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆಯಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯ್ತು. ಕೊನೆಯ 11 ನಿಮಿಷಗಳ ಆಟದಲ್ಲಿ ಭಾರತ ಮೂರು ಪೆನಾಲ್ಟಿ ಕಾರ್ನರ್‌ ಪಡೆದುಕೊಂಡಿತು. ಆದರೆ ದೀಪಿಕಾ ಮತ್ತು ಉದಿತಾ ಅವರ ಕಳಪೆ ದಾಖಲೆ ಮುಂದುವರೆಯಿತು. ಅಂತಿಮ ಒಂದೂವರೆ ನಿಮಿಷ ಇರುವಾಗ ಸಲೀಮಾ ಟೆಟೆ ಭಾರತಕ್ಕೆ ಸಮಬಲ ಸಾಧಿಸಲು ಉತ್ತಮ ಅವಕಾಶ ಪಡೆದರು. ಆ ಅವಕಾಶವೂ ಕೈಜಾರಿತು.

ಇದನ್ನೂ ಓದಿ | ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ

ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಜಪಾನ್ ಮೂರನೇ ಸ್ಥಾನ ಪಡೆಯಿತು. ಆ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತು. ಮತ್ತೊಂದೆಡೆ ಫೈನಲ್ ಪ್ರವೇಶಿಸಿರುವ ಜರ್ಮನಿ ಮತ್ತು ಯುಎಸ್ಎ ತಂಡಗಳು ಈಗಾಗಲೇ ಪ್ಯಾರಿಸ್‌ ಟಿಕೆಟ್‌ ಬುಕ್‌ ಮಾಡಿವೆ.

1980ರ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ಸೇರ್ಪಡೆಯಾದ ಬಳಿಕ ಭಾರತ ಈವರೆಗೆ ಒಲಿಂಪಿಕ್ಸ್‌ನಲ್ಲಿ ಕೇವಲ ಮೂರು ಬಾರಿ ಮಾತ್ರ ಆಡಿದೆ. ಚೊಚ್ಚಲ ಪ್ರಯತ್ನದಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತವು ಆ ಬಳಿಕ 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು.‌ ಆ ಆವೃತ್ತಿಯಲ್ಲಿ 12ನೇ ಸ್ಥಾನ ಪಡೆದ ವನಿತೆಯರು ಆ ನಂತರ ಈ ಹಿಂದಿನ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು. ಜಪಾನ್‌ನಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡಿದ ವನಿತೆಯರು ಒಲಿಂಪಿಕ್ಸ್‌ ಪದಕದಿಂದ ಸ್ವಲ್ಪದರಲ್ಲೇ ವಂಚಿರಾದರು.

ಇದನ್ನೂ ಓದಿ | ಕಿವೀಸ್ ವನಿತೆಯರ ವಿರುದ್ಧ 3-1ರಿಂದ ಭರ್ಜರಿ ಗೆಲುವು; ಭಾರತ ಹಾಕಿ ತಂಡದ ಒಲಿಂಪಿಕ್ಸ್ ಭರವಸೆ ಜೀವಂತ

ಈ ಹಿಂದೆ ಜನವರಿ 14ರ ಭಾನುವಾರದಂದು ರಾಂಚಿಯ ಮಾರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಭಾರತ 3-1 ಗೋಲುಗಳಿಂದ ಸೋಲಿಸಿತ್ತು.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.

ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ