ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ
ಕನ್ನಡ ಸುದ್ದಿ  /  ಕ್ರೀಡೆ  /  ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ

ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ

Rohan Bopanna: ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಗೆದ್ದ ರೋಹನ್‌ ಬೋಪಣ್ಣ ತಮ್ಮ ವೃತ್ತಿಜೀವನದ 500ನೇ ಗೆಲುವನ್ನು ದಾಖಲಿಸಿದರು.

ರೋಹನ್ ಬೋಪಣ್ಣ ಗುರುವಾರ ತಮ್ಮ ವೃತ್ತಿಜೀವನದ 500ನೇ ಗೆಲುವು ದಾಖಲಿಸಿದರು.
ರೋಹನ್ ಬೋಪಣ್ಣ ಗುರುವಾರ ತಮ್ಮ ವೃತ್ತಿಜೀವನದ 500ನೇ ಗೆಲುವು ದಾಖಲಿಸಿದರು.

ಆಸ್ಟ್ರೇಲಿಯನ್‌ ಓಪನ್‌ನಲ್ಲಿ (Australian Open 2024) ಭಾರತದ ಅನುಭವಿ ಹಾಗೂ ಹಿರಿಯ ಟೆನ್ನಿಸ್‌ ಆಟಗಾರ ರೋಹನ್‌ ಬೋಪಣ್ಣ (Rohan Bopanna ಗೆಲುವು ಸಾಧಿಸಿದ್ದಾರೆ. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಗೆದ್ದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಈ ಗೆಲುವಿನೊಂದಿಗೆ ಭಾರತೀಯ ಆಟಗಾರ ಐತಿಹಾಸಿಕ ದಾಖಲೆ ಮಾಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಜೋಡಿಗೆ ಎದುರಾಳಿ ತಂಡದ ಜೇಮ್ಸ್ ಡಕ್ವರ್ತ್ ಮತ್ತು ಮಾರ್ಕ್ ಪೋಲ್ಮನ್ಸ್ ಪ್ರಬಲ ಪೂಪೋಟಿ ನೀಡಿದರು. ಆದರೆ ಕೊನೆಗೂ ಆಸ್ಟ್ರೇಲಿಯನ್ ಜೋಡಿಯನ್ನು 7-6 (5), 4-6, 7-6 (10-2) ಸೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಎರಡೂ ಜೋಡಿಗಳು ಆಟದ ಎಲ್ಲಾ ವಿಭಾಗಗಳಲ್ಲಿ ಸಮಾನ ಪೈಪೋಟಿ ನೀಡಿದರು. ಅಂತಿಮವಾಗಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು ಎದುರಾಳಿಯ 110 ಅಂಕಕ್ಕೆ ಪ್ರತಿಯಾಗಿ 114 ಅಂಕಗಳನ್ನು ಗಳಿಸಿದರು.

ವೃತ್ತಿಜೀವನದ 500ನೇ ಗೆಲುವು

ಈ ಗೆಲುವಿನೊಂದಿಗೆ ಭಾರತೀಯ ಟೆನಿಸ್‌ ಲೋಕದ ಹಿರಿಯ ಆಟಗಾರ ರೋಹನ್ ಬೋಪಣ್ಣ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಈ ಗೆಲುವಿನೊಂದಿಗೆ ತಮ್ಮ ವೃತ್ತಿಜೀವನದ 500ನೇ ಪ್ರವಾಸ ಮಟ್ಟದ ಗೆಲುವನ್ನು ದಾಖಲಿಸಿದರು.

ಇದನ್ನೂ ಓದಿ | Australian Open: 27ನೇ ಶ್ರೇಯಾಂಕಿತ ಬುಬ್ಲಿಕ್ ಮಣಿಸಿ 2ನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್; ಭಾರತೀಯನ ವಿಶ್ವದಾಖಲೆ

ಟೂರ್‌ ಹಂತದಲ್ಲಿ 24 ಬಾರಿ ಟ್ರೋಫಿ ಗೆದ್ದಿರುವ ಬೋಪಣ್ಣ, ಚೊಚ್ಚಲ ಪುರುಷರ ಡಬಲ್ಸ್ ಪ್ರಶಸ್ತಿಗಾಗಿ ತಮ್ಮ ಬೇಟೆ ಮುಂದುವರೆಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯನ್ ಓಪನ್ ದಾಖಲೆಯನ್ನು ಸುಧಾರಿಸುವತ್ತ ಚಿತ್ತ ಹರಿಸಿದ್ದಾರೆ. ಬೋಪಣ್ಣ ಮತ್ತು ಎಬ್ಡೆನ್ ಮುಂದಿನ ಸುತ್ತಿನಲ್ಲಿ ಜಾನ್ ಮಿಲ್ಮನ್ ಮತ್ತು ಎಡ್ವರ್ಡ್ ವಿಂಟರ್ ಅವರನ್ನು ಎದುರಿಸಲಿದ್ದಾರೆ.

ರೋಹನ್‌ ಬೋಪಣ್ಣ ವೃತ್ತಿಜೀವನದ ಸ್ಮರಣೀಯ ಪ್ರದರ್ಶನಗಳು

  • 2007ರಲ್ಲಿ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಪ್ಯಾರಿಸ್ ಮಾಸ್ಟರ್ಸ್ ಗೆಲುವು
  • 2012 ರಲ್ಲಿ ಮಹೇಶ್ ಭೂಪತಿಯೊಂದಿಗೆ ಪ್ಯಾರಿಸ್ ಮಾಸ್ಟರ್ಸ್ ಗೆಲುವು
  • 2013ರಲ್ಲಿ ಫ್ಲೋರಿನ್ ಮೆರ್ಗೆಯಾ ಅವರೊಂದಿಗೆ ಮ್ಯಾಡ್ರಿಡ್ ಮಾಸ್ಟರ್ಸ್ ಗೆಲುವು
  • ಪಾಬ್ಲೋ ಕ್ಯುವಾಸ್ ಅವರೊಂದಿಗೆ ಮಾಂಟೆ-ಕಾರ್ಲೋ ಮಾಸ್ಟರ್ಸ್ ಗೆಲುವು

ಅತ್ತ ಭಾರತದ ಭರವಸೆಯ ಆಟಗಾರ ಸುಮಿತ್ ನಗಾಲ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೋಲು ಕಂಡಿದ್ದಾರೆ. ಮೊದಲ ಸುತ್ತಿನಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿ ಎರಡನೇ ಸುತ್ತಿಗೆ ಮುನ್ನಡೆದಿದ್ದ ಭಾರತದ ನಂಬರ್‌ ವನ್‌ ಆಟಗಾರ, ಎರಡನೇ ಸುತ್ತಿನಲ್ಲಿ ಸೋತಿದ್ದಾರೆ. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಯುವ ಟೆನ್ನಿಸ್‌ ಆಟಗಾರ ಜುಂಚೆಂಗ್ ಶಾಂಗ್ ವಿರುದ್ಧ 6-2, 3-6, 5-7, 4-6 ಸೆಟ್‌ಗಳಿಂದ ಸೋತು ಆಸ್ಟ್ರೇಲಿಯನ್ ಓಪನ್‌ನಿಂದ ಸುಮಿತ್ ನಗಾಲ್ ಹೊರಬಿದ್ದಿದ್ದಾರೆ.

ಇದನ್ನೂ ಓದಿ | ಆಸ್ಟ್ರೇಲಿಯಾ ಓಪನ್ ಐತಿಹಾಸಿಕ ಗೆಲುವು; 80 ಸಾವಿರದಿಂದ 98 ಲಕ್ಷ ರೂಪಾಯಿಗೇರಿದ ಸುಮಿತ್ ಬ್ಯಾಂಕ್ ಬ್ಯಾಲೆನ್ಸ್

ಐತಿಹಾಸಿಕ ಸಾಧನೆ ಸಾಧನೆಯೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಸಿದ ನಗಾಲ್‌ ಅವರಿಗೆ ಇದೀಗ 180,000 ಆಸ್ಟ್ರೇಲಿಯನ್ ಡಾಲರ್ (98 ಲಕ್ಷ ರೂಪಾಯಿ) ಬಹುಮಾನದ ಹಣ ಸಿಕ್ಕಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.