logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಎಷ್ಟು ಗೆಲುವು ಬೇಕು?

WTC final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಎಷ್ಟು ಗೆಲುವು ಬೇಕು?

HT Kannada Desk HT Kannada

Dec 18, 2022 04:21 PM IST

ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು

    • ಎರಡೂ ಪಂದ್ಯಗಳ ಫಲಿತಾಂಶಗಳ ಬಳಿಕ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತವು ಶೇಕಡಾ 55.77 ಅಂಕಗಳನ್ನು ಹೊಂದಿದ್ದರೆ, ದಕ್ಷಿಣ ಆಫ್ರಿಕಾದ ಅಂಕ ಶೇಕಡಾ 60 ರಿಂದ 54.55ಕ್ಕೆ ಇಳಿಕೆಯಾಗಿದೆ.
ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು
ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು (ANI)

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 188 ರನ್‌ಗಳಿಂದ ಗೆದ್ದಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್ ಪಡೆಯು 404 ರನ್ ಪೇರಿಸುವುದರೊಂದಿಗೆ ಬೃಹತ್‌ ಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಆತಿಥೇಯರು 150 ರನ್‌ಗಳಿಗೆ ಆಲೌಟ್ ಆದರು. 254 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಮುಂದುವರೆಯಿತು.

ಟ್ರೆಂಡಿಂಗ್​ ಸುದ್ದಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಭಾರಿ ಮುನ್ನಡೆಯಿದ್ದರೂ, ಫಾಲೋ ಆನ್ ಜಾರಿಗೊಳಿಸಲು ಭಾರತ ನಿರಾಕರಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಬಲಿಷ್ಠವಾಗಿ ಆಡಿದ ಭಾರತದ ಪರ ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಶತಕ ಸಿಡಿಸಿ ಮಿಂಚಿದರು. 258 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಹೀಗಾಗಿ ಬಾಂಗ್ಲಾದೇಶವು ಗೆಲುವಿಗೆ 513 ರನ್‌ಗಳ ಬೃಹತ್ ಗುರಿ ಪಡೆಯಿತು.

ಚೊಚ್ಚಲ ಪಂದ್ಯದಲ್ಲೇ ಝಾಕಿರ್ ಹಸನ್ ಶತಕ ಸಿಡಿಸುವುದರೊಂದಿಗೆ ಆತಿಥೇಯರು ಪ್ರಬಲ ಹೋರಾಟ ನಡೆಸಿದರು. ಶಕೀಬ್ ಅಲ್ ಹಸನ್ ಕೂಡ 84 ರನ್ ಗಳಿಸಿದರು. ಆದರೆ ಅಂತಿಮವಾಗಿ ತಂಡವು 324 ರನ್ ಗಳಿಸಿ ಆಲೌಟ್‌ ಆಯಿತು. ಒಟ್ಟು 8 ವಿಕೆಟ್ ಪಡೆದು 40 ರನ್ ಗಳಿಸಿದ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅತ್ತ, ಆಸ್ಟ್ರೇಲಿಯಾ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕಾ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿದೆ. ಆಸ್ಟ್ರೇಲಿಯಾವು ಪ್ರಾಬಲ್ಯ ಮೆರೆದಿದ್ದು, ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಹರಿಣಗಳನ್ನು 99 ರನ್‌ಗಳಿಗೆ ಆಲೌಟ್‌ ಮಾಡಿತು. ಹೀಗಾಗಿ ಆಸೀಸ್‌ಗೆ ಕೇವಲ 34 ರನ್‌ಗಳ ಗುರಿ ಸಿಕ್ಕಿತು. ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಪರದಾಡಿದ ಆಸೀಸ್‌, ಅಂತಿಮವಾಗಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಎರಡೂ ಪಂದ್ಯಗಳ ಫಲಿತಾಂಶಗಳ ಬಳಿಕ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತವು ಶೇಕಡಾ 55.77 ಅಂಕಗಳನ್ನು ಹೊಂದಿದ್ದರೆ, ದಕ್ಷಿಣ ಆಫ್ರಿಕಾದ ಅಂಕ ಶೇಕಡಾ 60 ರಿಂದ 54.55ಕ್ಕೆ ಇಳಿಕೆಯಾಗಿದೆ.

ಸತತ 2ನೇ ಬಾರಿ ಫೈನಲ್‌ ರೇಸ್‌ನಲ್ಲಿರುವ ಭಾರತಕ್ಕೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸವಾಲು ಎದುರಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 3-0 ಅಂತರದಿಂದ ಸೋಲಿಸಿದರೆ ಫೈನಲ್‌ಗೆ ಮುನ್ನಡೆಯುತ್ತದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಆಸೀಸ್‌ ಜಯ ಸಾಧಿಸಿತ್ತು.

ಮತ್ತೊಂದೆಡೆ, ಭಾರತ ಕೂಡಾ ಇನ್ನೂ ಐದು ಟೆಸ್ಟ್‌ಗಳಲ್ಲಿ ಆಡಲಿದೆ. ಇದರಲ್ಲಿ ಗುರುವಾರದಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯವೂ ಸೇರಿದೆ. ಸರಣಿಯ ನಂತರ, ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿರುವ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾದೊಂದಿಗೆ ತವರಿನ ಸರಣಿ ಆಡಲಿದೆ.

ಒಂದು ವೇಳೆ ಭಾರತವು ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನೂ ಗೆದ್ದು ಕ್ಲೀನ್‌ ಸ್ವೀಪ್‌ ಸಾಧಿಸಿದರೆ, ಮತ್ತು ಆಸೀಸ್‌ ವಿರುದ್ಧ ಕನಿಷ್ಠ ಮೂರು ಟೆಸ್ಟ್‌ಗಳನ್ನು ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದರೆ, ಕನಿಷ್ಠ ಶೇಕಡಾ 64.35 ಅಂಕಗಳೊಂದಿಗೆ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು