FIFA world cup expenses: ಫಿಫಾ ವಿಶ್ವಕಪ್ 2022ಗೆ ಕತಾರ್ ಖರ್ಚು ಮಾಡಿದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!
Dec 06, 2022 02:35 PM IST
ಫಿಫಾ ವಿಶ್ವಕಪ್ ಗಾಗಿ ಕತಾರ್ ಖರ್ಚು ಮಾಡಿರುವ ಹಣದ ಮೊತ್ತ ಕೇಳಿದ್ರೆ ಅಚ್ಚರಿಯಾಗುತ್ತದೆ (ಫೋಟೋ-ಫಿಫಾ)
ಪ್ರಸ್ತುತ ವರ್ಷ ಕತಾರ್ ಜಿಡಿಪಿ 18,000 ಕೋಟಿ ಡಾಲರ್ ಇದರೆ. ಆದರೆ ಫಿಫಾ ವಿಶ್ವಕಪ್ ನ ಫುಟ್ಬಾಲ್ ಪಂದ್ಯಗಳಿಗೆ ಕತಾರ್ ಇದಕ್ಕೂ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುತ್ತಿದೆಯಂತೆ. ಅದಕ್ಕೆ ಕಾರಣವನ್ನು ಹೇಳಿದೆ.
ದೋಹ(ಕತಾರ್): ವಿಶ್ವದ ಅತ್ಯಂತ ಆಕರ್ಷಕವಾದ ಕ್ರೀಡೆಗಳಲ್ಲಿ ಫುಟ್ಬಾಲ್ ಕೂಡ ಒಂದು. ಆಟಗಾರರ ವೆಸ್ ಸೈಟ್ ಅಂದಾಜಿನ ಪ್ರಕಾರ, ಫುಟ್ಬಾಲ್ ಗೆ 350 ಕೋಟಿ ಜನರು ಅಭಿಮಾನಿಗಳಾಗಿದ್ದರೆ, ಕ್ರಿಕೆಟ್‌ಗೆ 250 ಕೋಟಿ ಫ್ಯಾನ್ಸ್ ಇದ್ದಾರೆ.
ವಿಶೇಷವಾಗಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆ-ಫಿಫಾ ನಿರ್ವಹಿಸುವ ವಿಶ್ವಕಪ್ ಫುಟ್ಬಾಲ್ ಆಟವನ್ನು ವೀಕ್ಷಿಸುವರ ಸಂಖ್ಯೆ ಹೆಚ್ಚಿದೆ. ಈ ವಿಷಯದಲ್ಲಿ ಒಲಿಂಪಿಕ್ಸ್ ಮಾತ್ರ ಇದಕ್ಕೆ ಸ್ಪರ್ಧೆ ನೀಡುತ್ತದೆ. ಈ ವರ್ಷ ಫಿಫಾ ವಿಶ್ವಕಪ್ ನವೆಂಬರ್ 20ನಲ್ಲಿ ಕತಾರ್ ನಲ್ಲಿ ಆರಂಭವಾಗಿದೆ.
ಡಿಸೆಂಬರು 18 ರವರೆಗೆ ನಡೆಯುವ ಈ ಮಹಾ ಸಮರದಲ್ಲಿ ದೊಡ್ಡ ದಾಖಲೆಗಳು ದಾಖಲಾಗಿವೆ. ಪ್ರಸ್ತುತ ವರ್ಷ ಕತಾರ್ ಜಿಡಿಪಿ 18,000 ಕೋಟಿ ಡಾಲರ್ ಇದರೆ. ಆದರೆ ಫಿಫಾ ವಿಶ್ವಕಪ್ ನ ಫುಟ್ಬಾಲ್ ಪಂದ್ಯಗಳಿಗೆ ಕತಾರ ಬರೋಬ್ಬರಿ 22,000 ಕೋಟಿ ಡಾಲರ್ ಮಾಡುತ್ತಿದೆಯಂತೆ.
1930ರಲ್ಲಿ ವಿಶ್ವಕಪ್ ಫುಟ್‌ಬಾಲ್ ಆರಂಭದ ನಂತರ ಇಷ್ಟು ಭಾರಿ ವೆಚ್ಚ ಮಾಡಿದ ದೇಶ ಮತ್ತೊಂದಿಲ್ಲ. ಕತಾರ್ ನಲ್ಲಿ ವಿಶ್ವ ಕಪ್ ಫುಟ್‌ಬಾಲ್ ನಡೆಸುವುದಾಗಿ ಫಿಫಾ 2010 ರಲ್ಲಿ ಘೋಷಿಸಿತ್ತು. ಅಂದಿನಿಂದ ಖತಾರ್ ತನ್ನ ಜಿಡಿಪಿಯಲ್ಲಿ ಶೇ.10ರಷ್ಟು ಅನ್ನು ಕ್ರೀಡಾ ನಿರ್ವಹಣೆಗೆ ಖರ್ಚು ಮಾಡುತ್ತಿದೆ.
ಕಳೆದ 21 ಫಿಫಾ ಫುಟ್‌ಬಾಲ್ ಸ್ಪರ್ಧೆಯನ್ನೆಲ್ಲಾ ಸೇರಿಸಿದರೂ ಇಷ್ಟೊಂದು ಖರ್ಚು ಬರುತ್ತಿಲ್ಲ. ಅದಕ್ಕಿಂತ ಹಲವು ಪಟ್ಟುಗಳಷ್ಟು ಹೆಚ್ಚು ಹಣವನ್ನು ದೋಹಾ ಖರ್ಚು ಮಾಡುತ್ತಿದೆ. 2014ರಲ್ಲಿ ಬ್ರೆಜಿಲ್ ಈ ವಿಶ್ವಕಪ್ ಟೂರ್ನಿಗೆ 1,500 ಕೋಟಿ ಡಾಲರ್ ಮಾಡಿದೆ.
2018ರಲ್ಲಿ ರಷ್ಯಾ 1,160 ಕೋಟಿ ಡಾಲರ್ ವೆಚ್ಚಿಸಿದೆ. ಫಿಫಾ ಸ್ಪರ್ಧೆಗಾಗಿ ಸ್ಟೇಡಿಯಾಗಳು, ಹೋಟೆಲ್ ನಿರ್ಮಾಣ, ಸಾರಿಗೆ, ಟೆಲಿಕಮ್ಯೂನಿಕೇಶನ್ ಸೌಲಭ್ಯಗಳ ನಿರ್ಮಾಣ, ಭದ್ರತೆಗಾಗಿ ಕತಾರ್ ನೀರಿನಂತೆ ಹಣವನ್ನು ಖರ್ಚು ಮಾಡಿದೆ.
ತೈಲ ಶೇಖರಣೆಯೊಂದಿಗೆ ಸಂಪತ್ಭರಿತವಾದ ಈ ದೇಶಕ್ಕೆ ಅಂತಿಮವಾಗಿ ಸಿಗುವ ಲಾಭವಾದರೂ ಏನು ಎಂಬ ಪ್ರಶ್ನೆಗಳು ಶುರುವಾಗಿವೆ. ವಾಸ್ತದಲ್ಲಿ ಕತಾರ್ ಗೆ ಆರಂಭದಲ್ಲಿ ಯಾವುದೇ ಲಾಭ ಸಿಗುವವುದಿಲ್ಲ. ತಿಂಗಳ ಕೊನೆಯವರೆಗೆ ವಿಶ್ವ ಕಪ್ ಫುಟ್‌ಬಾಲ್ ನಿರ್ವಹಣೆಗೆ 170 ಕೋಟಿ ಡಾಲರ್‌ಖರ್ಚನ್ನು ಫಿಫಾ ಸಂಸ್ಥೆಯೇ ಭರಿಸುತ್ತದೆ. ಟಿಕೆಟ್ ಮಾರಾಟ, ಅಂತಾರಾಷ್ಟ್ರೀಯ ಟೆಲಿವಿಜನ್ ಪ್ರಸಾರ ಹಕ್ಕುಗಳ ಮೂಲಕ ದೊರೆಯುವ 470 ಕೋಟಿ ಡಾಲರ್ ಆದಾಯವನ್ನು ಫಿಫಾ ತನ ಜೇಬಿಗೆ ಇಳಿಸಿಕೊಳ್ಳುತ್ತದೆ.
ಅಂದರೆ ಫಿಫಾ ನೈಜವಾಗಿ 300 ಕೋಟಿ ಡಾಲರ್ ಗಳಷ್ಟು ಲಾಭ ಮಾಡಿಕೊಳ್ಳುತ್ತದೆ. ಫುಟ್ಬಾಲ್ ಸ್ಪರ್ಧೆಗಳನ್ನು ನೋಡಲು ಬರುವ ಪ್ರೇಕ್ಷಕರು ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತದೆ. ಪ್ರೇಕ್ಷಕರಿಗೆ ವಸ್ತುಗಳನ್ನು ಮಾರಾಟ ಮಾಡಲು ಫುಟ್ಬಾಲ್ ಸ್ಟೇಡಿಯಲ್‌ನಲ್ಲಿ ಸಣ್ಣ ವ್ಯಾಪಾರಿಗಳ ಅಂಗಡಿಗಳನ್ನು ತೆಗೆದುಹಾಕಲು 2014 ರಲ್ಲಿ ಬ್ರೆಜಿಲ್ ಸರ್ಕಾರವನ್ನು ಫಿಫಾ ಒತ್ತಾಯಿಸಿದ್ದು, ಇದಕ್ಕೆ ನಿದರ್ಶನವಾಗಿದೆ.
ಫಿಫಾ ಫುಟ್‌ಬಾಲ್ ಸ್ಪರ್ಧೆಗಾಗಿ ಖತಾರ್ 650 ಕೋಟಿ ಡಾಲರ್ ಖರ್ಚು ಮಾಡಿ ಎಂಟು ಸ್ಟೇಡಿಯಾಗಳನ್ನು ನಿರ್ಮಿಸಿದೆ. ಕೇವಲ 28 ಲಕ್ಷ ಜನಸಂಖ್ಯೆ ಹೊಂದಿರುವ ಚಿಕ್ಕ ದೇಶಕ್ಕೆ ಇಷ್ಟೊಂದು ಕ್ರೀಡಾ ಮೈದಾನಗಳು ಅಗತ್ಯ ಇರಲಿಲ್ಲ. ಫಿಫಾ ವಿಶ್ವಕಪ್ ಮುಕ್ತಾಯಗೊಂಡ ನಂತರ ಮೂರು ಸ್ಟೇಡಿಯಂಗಳಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗಾಗಿ ಮಂಜೂರಾತಿಯನ್ನು ಪಡೆಯುತ್ತದೆ. ಉಳಿದ ಸ್ಟೇಡಿಯಂಗಳನ್ನು ನೆಲಸಮ ಮಾಡಿ ಇತರೆ ಕೆಲಸಗಳಿಗೆ ಉಪಯೋಗಿಸಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.
ಕತಾರ್ ರಾಷ್ಟ್ರೀಯ ವಿಜನ್-2030ರಲ್ಲಿ ಮೆಟ್ರೋ ರೈಲ್ವೆ, ಅತ್ಯಾಧುನಿಕ ನಗರ, ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹೀಗೆ 100ಕ್ಕೂ ಹೆಚ್ಚು ಹೋಟೆಲ್‌ಗಳನ್ನು ನಿರ್ಮಿಸಿದ್ದಾರೆ. ಫಿಫಾ ಸ್ಪರ್ಧೆಗಳು ಮುಗಿದ ಬಳಿಕ ಮೂಲಭೂತ ಸೌಕರ್ಯಗಳು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು, ಹೊಸ ಉದ್ಯಮಗಳನ್ನು ಕತಾರ್ ಕಡೆಗೆ ಆಕರ್ಷಿಸಲಾಗುತ್ತದೆ ಎಂದು ಸರ್ಕಾರವು ಆಶಿಸುತ್ತಿದೆ.
ಈ ಮೊದಲ ವರ್ಷದ 10 ತಿಂಗಳಲ್ಲಿ ಕತಾರ್ ಗೆ 400 ಕೋಟಿ ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತ್ತದೆ. ಫಿಫಾ ವಿಶ್ವಕಪ್ ಆಯೋಜನೆಯಿಂದ ಈ ವರ್ಷ ಅಂತಿಮವಾಗಿ ದೋಹಾ ಜಿಡಿಪಿ ಬೆಳವಣಿಗೆ ದರ ಶೇ.4.1ರಷ್ಟು ಬೆಳವಣಿಗೆಯ ನಿರೀಕ್ಷೆಯಿದೆ. ಕತಾರ್ ನಲ್ಲಿ ಕಳೆದ ವರ್ಷದಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಚೆನ್ನಾಗಿ ಬೆಳೆಯುತ್ತವೆ. ಮತ್ತೊಂದೆಡೆ, 2010 ರಿಂದ ಈ ಸ್ಟೇಡಿಯಂಗಳ ನಿರ್ವಹಣೆ ಮಾಡಿದ್ದ ಕಾರ್ಮಿಕ ಪರಿಸ್ಥಿತಿ ಮುಂದೇನು ಎಂಬ ಚಿಂತೆಯೂ ಶುರುವಾಗಿದೆ.
2010-2020ರ ಮಧ್ಯ ಕತಾರ್ ನಲ್ಲಿ 6,500 ಮಂದಿ ವಲಸೆ ಕಾರ್ಮಿಕರು ಮರಣ ಹೊಂದಿದ್ದಾರೆ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಈ ಮೃತರೆಲ್ಲಾ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದೇಶಗಳಿಗೆ ಸೇರಿದವರೇ ಆಗಿದ್ದಾರೆ. ಇದರ ವಿರುದ್ದ ಮಾನವ ಹಕ್ಕುಗಳ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿವೆ. ಒಟ್ಟಿನಲ್ಲಿ ಕತಾರ್ ಫಿಫಾ ವಿಶ್ವಕಪ್ ಕಲರ್ ಫುಲ್ ಆಟದ ಹಿಂದೆ ಕರಾಳ ಕಹಿ ಘಟನೆ ಗಳಿವೆ.