logo
ಕನ್ನಡ ಸುದ್ದಿ  /  ಕ್ರೀಡೆ  /  Iba Threatens Ioc: ಒಪ್ಪಂದ ಉಲ್ಲಂಘನೆ ಆರೋಪ; ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಐಬಿಎ ಎಚ್ಚರಿಕೆ

IBA threatens IOC: ಒಪ್ಪಂದ ಉಲ್ಲಂಘನೆ ಆರೋಪ; ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಐಬಿಎ ಎಚ್ಚರಿಕೆ

HT Kannada Desk HT Kannada

Mar 28, 2023 11:28 AM IST

ಸಾಂದರ್ಭಿಕ ಚಿತ್ರ

  • ಒಲಿಂಪಿಕ್‌ ಸಮಿತಿಯಲ್ಲಿ "ಪಾರದರ್ಶಕತೆಯ ಕೊರತೆ" ಎದ್ದು ಕಾಣುತ್ತಿದೆ ಎಂದಿರುವ ಐಬಿಎ, ಇದು "ಕಾನೂನು ಬಾಹಿರ" ನಡವಳಿಕೆ ಎಂದು ಆರೋಪಿಸಿದೆ. ಸದ್ಯ ಎದ್ದಿರುವ ಸಮಸ್ಯೆಯ ಪರಿಹಾರಕ್ಕಾಗಿ ಐಒಸಿಯನ್ನು ನ್ಯಾಯಾಲಯಕ್ಕೆ ಎಳೆತರುವುದಾಗಿ ಐಬಿಎ ಬೆದರಿಕೆ ಹಾಕಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PTI)

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ಮೇಲೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಗಂಭೀರ ಆರೋಪ ಮಾಡಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆಗೆ ಬಾಕ್ಸಿಂಗ್ ಅಧಿಕಾರಿಗಳನ್ನು ಆಹ್ವಾನಿಸುವ ವಿಚಾರವಾಗಿ ಅದರ "ಪಾರದರ್ಶಕ ತತ್ವಗಳ" ಬಗ್ಗೆ ಐಬಿಎ ಚಕಾರ ಎತ್ತಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಒಲಿಂಪಿಕ್‌ ಸಮಿತಿಯಲ್ಲಿ "ಪಾರದರ್ಶಕತೆಯ ಕೊರತೆ" ಎದ್ದು ಕಾಣುತ್ತಿದೆ ಎಂದಿರುವ ಐಬಿಎ, ಇದು "ಕಾನೂನು ಬಾಹಿರ" ನಡವಳಿಕೆ ಎಂದು ಆರೋಪಿಸಿದೆ. ಸದ್ಯ ಎದ್ದಿರುವ ಸಮಸ್ಯೆಯ ಪರಿಹಾರಕ್ಕಾಗಿ ಐಒಸಿಯನ್ನು ನ್ಯಾಯಾಲಯಕ್ಕೆ ಎಳೆತರುವುದಾಗಿ ಐಬಿಎ ಬೆದರಿಕೆ ಹಾಕಿದೆ.

ಮಂಗಳವಾರ ನಡೆಯಲಿರುವ ಜಾಗತಿಕ ಕ್ರೀಡಾ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸಭೆಗೂ ಮುನ್ನ, ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್‌(Thomas Bach)ಗೆ ಐಬಿಎ ಬರೆದ ಬಹಿರಂಗ ಪತ್ರದಲ್ಲಿ ತನ್ನ ಸ್ಪರ್ಧಾತ್ಮಕ ಅಧಿಕಾರಿಗಳನ್ನು ಐಒಸಿಯು "ಐಬಿಎಯ ಪೂರ್ವಾನುಮತಿ ಅಥವಾ ಯಾವುದೇ ರೀತಿಯ ಸಂವಹನ ನಡೆಸದೆ" ಸಂಪರ್ಕಿಸುತ್ತಿದೆ ಎಂದು ಆರೋಪಿಸಿದೆ. ಇದು 2019ರಲ್ಲಿ ಎರಡು ಪಕ್ಷಗಳ ನಡುವೆ ಸಹಿ ಹಾಕಲಾಯಿದ ಡೇಟಾ ವರ್ಗಾವಣೆ ಒಪ್ಪಂದ(data transfer agreement)ದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಬಾಕ್ಸಿಂಗ್ ಸಂಸ್ಥೆಯ ಆಡಳಿತ, ಆರ್ಥಿಕ ಪಾರದರ್ಶಕತೆ, ಸುಸ್ಥಿರತೆ ಮತ್ತು ತೀರ್ಪುಗಾರರ ಮತ್ತು ತೀರ್ಪು ನೀಡುವ ಪ್ರಕ್ರಿಯೆಯ ಸಮಗ್ರತೆಯ ಬಗೆಗಿನ ಕಾಳಜಿಯಿಂದಾಗಿ ಬಾಕ್ಸಿಂಗ್ ಸಂಸ್ಥೆಯ ಮೇಲೆ ಒಲಿಂಪಿಕ್‌ ಅಸೋಸಿಯೇಷನ್ ಹೇರಿದ ನಿಷೇಧ ಈ ಎಲ್ಲಾ ಸಮಸ್ಯೆಯ ಮೂಲವಾಗಿದೆ.

2020ರ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಮಾಡಿದ್ದ ರೀತಿಯಲ್ಲಿಯೇ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುಂಚಿತವಾಗಿ ಬಾಕ್ಸಿಂಗ್ ಅರ್ಹತಾ ಪಂದ್ಯಗಳನ್ನು ನಡೆಸುವುದಾಗಿ ಐಒಸಿಯು ಐಬಿಎಗೆ ತಿಳಿಸಿತ್ತು.

ಆದರೆ, ಐಒಸಿಯ ಸೂಚನೆಗಳ ಹೊರತಾಗಿಯೂ, ಬಾಕ್ಸಿಂಗ್ ಸಂಸ್ಥೆಯು ನವದೆಹಲಿಯಲ್ಲಿ ಭಾನುವಾರದಂದು ಮುಕ್ತಾಯಗೊಂಡ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌(women's World Championships) ಪಂದ್ಯಗಳೇ 2024ರ ಪ್ಯಾರಿಸ್‌ಗೆ ಮುಖ್ಯ ಅರ್ಹತಾ ಪಂದ್ಯವಾಗಿದೆ ಎಂದು ಘೋಷಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌(Women's World Boxing Championships)ನಲ್ಲಿ ಭಾರತದ ಭರವಸೆಯ ಯುವ ಬಾಕ್ಸರ್‌ ನಿಖತ್ ಜರೀನ್ (Nikhat Zareen) ಚಿನ್ನ ಗೆದ್ದಿದ್ದಾರೆ. 48ರಿಂದ 50 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ (Nguyen Thi Tam) ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ಜರೀನ್‌, ಎರಡನೇ ವಿಶ್ವ ಚಾಂಪಿಯನ್‌ಶಿಪ್‌ ಬಂಗಾರಕ್ಕೆ ಕೊರಳೊಡ್ಡಿದರು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವನ್ನು ಇಂದೋರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಪಂದ್ಯ ಮುಗಿದ ಬಳಿಕ ಇಂದೋರ್‌ ಪಿಚ್ “ಕಳಪೆ” ಎಂದು ಐಸಿಸಿ ರೇಟಿಂಗ್‌ ಕೊಟ್ಟಿತ್ತು. ಆದರೆ, ಈಗ ಈ ರೇಟಿಂಗ್‌ ಅನ್ನು ಬದಲಾಯಿಸಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು