logo
ಕನ್ನಡ ಸುದ್ದಿ  /  ಕ್ರೀಡೆ  /  Asian Games: ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿ ನಾಕೌಟ್ ಸುತ್ತು ಪ್ರವೇಶಿಸಿದ ಭಾರತ ವಾಲಿಬಾಲ್ ತಂಡ

Asian Games: ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿ ನಾಕೌಟ್ ಸುತ್ತು ಪ್ರವೇಶಿಸಿದ ಭಾರತ ವಾಲಿಬಾಲ್ ತಂಡ

Jayaraj HT Kannada

Sep 20, 2023 09:25 PM IST

ದಕ್ಷಿಣ ಕೊರಿಯಾವನ್ನು 3-2 ಅಂತರದಿಂದ ಸೋಲಿಸಿದ ಭಾರತ

    • Asian Games 2023: ಬಲಿಷ್ಠ ದಕ್ಷಿಣ ಕೊರಿಯಾವನ್ನು 3-2 ಸೆಟ್‌ಗಳ ಅಂತರದಿಂದ ಮಣಿಸುವಲ್ಲಿ ಭಾರತ ವಾಲಿಬಾಲ್‌ ತನಡ ಯಶಸ್ವಿಯಾಗಿದೆ.
ದಕ್ಷಿಣ ಕೊರಿಯಾವನ್ನು 3-2 ಅಂತರದಿಂದ ಸೋಲಿಸಿದ ಭಾರತ
ದಕ್ಷಿಣ ಕೊರಿಯಾವನ್ನು 3-2 ಅಂತರದಿಂದ ಸೋಲಿಸಿದ ಭಾರತ (Twitter/India_AllSports)

ಚೀನಾದ ಹ್ಯಾಂಗ್‌ಝೌನಲ್ಲಿ (Hangzhou) ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ವಾಲಿಬಾಲ್ ತಂಡವು (Indian men's volleyball) ಅದ್ಧೂರಿ ಗೆಲುವು ಸಾಧಿಸಿದೆ. ಬುಧವಾರ (ಸೆಪ್ಟೆಂಬರ್‌ 20) ನಡೆದ ಪಂದ್ಯದಲ್ಲಿ ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ದಕ್ಷಿಣ ಕೊರಿಯಾವನ್ನು ಭಾರತ ರೋಚಕವಾಗಿ ಮಣಿಸಿದೆ. ಐದು ಸೆಟ್‌ಗಳ ರೋಚಕ ಹೋರಾಟದ ಬಳಿಕ ಗೆದ್ದ ಭಾರತವು, ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ ನಾಕ್‌ಔಟ್ ಹಂತಕ್ಕೆ ಲಗ್ಗೆ ಹಾಕಿದೆ.

ಟ್ರೆಂಡಿಂಗ್​ ಸುದ್ದಿ

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ಬರೋಬ್ಬರಿ ಎರಡು ಗಂಟೆ 38 ನಿಮಿಷಗಳ ಕಾಲ ನಡೆದ C ಗುಂಪಿನ ಅಂತಿಮ ಪಂದ್ಯದಲ್ಲಿ, ಭಾರತೀಯರು ರೋಚಕ ಫೈಪೋಟಿ ನೀಡಿದರು. ತನಗಿಂತ ಉನ್ನತ ಶ್ರೇಯಾಂಕದ ದಕ್ಷಿಣ ಕೊರಿಯಾವನ್ನು ಕೊನೆಗೂ 3-2 ಸೆಟ್‌ಗಳ ಅಂತರದಿಂದ ಮಣಿಸುವಲ್ಲಿ ಭಾರತೀಯರು ಯಶಸ್ವಿಯಾದರು. ರೋಚಕ ಹೋರಾಟದಲ್ಲಿ ಅಂತಿಮವಾಗಿ ಭಾರತ 25-27, 29-27, 25-22, 20-25, 17-15 ಅಂತರಗಳಿಂದ ಗೆಲುವು ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಕಾಂಬೋಡಿಯಾವನ್ನು 3-0 ಸೆಟ್‌ಗಳಿಂದ ಸೋಲಿಸಿದ್ದ ಭಾರತ, ಇದೀಗ ಐದು ಅಂಕ ಕಲೆಹಾಕಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಅಮಿತ್ ಗುಲಿಯಾ ಮತ್ತು ಅಶ್ವಲ್ ರೈ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡವು ಹಲವಾರು ನಿರ್ಣಾಯಕ ಅಂಕಗಳನ್ನು ಗಳಿಸಲು ಸಹಾಯ ಮಾಡಿದರು.

ಮುಂದಿನ ಸುತ್ತಿನಲ್ಲಿ ಭಾರತವು ಚೈನೀಸ್ ತೈಪೆ ಅಥವಾ ಮಂಗೋಲಿಯಾ ತಂಡದ ವಿರುದ್ಧ ಆಡಲಿದೆ.

ಭಾರತದ ಪುರುಷರ ವಾಲಿಬಾಲ್‌ ತಂಡವು ಇದುವರೆಗೆ ಒಟ್ಟು ಮೂರು ವಾಲಿಬಾಲ್ ಪದಕಗಳನ್ನು ಗೆದ್ದಿದೆ. 1962ರಲ್ಲಿ ರನ್ನರ್ ಅಪ್ ಆಗಿರುವ ಭಾರತ, ತನ್ನ‌ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅದರ ಹೊರತಾಗಿ 1958 ಮತ್ತು 1986ರಲ್ಲಿ ಕಂಚಿನ ಪದಕಗಳನ್ನು ಗೆದ್ದಿತ್ತು. ಭಾರತವು ಕೊನೆಯ ಪದಕವನ್ನು ಗೆದ್ದು 37 ವರ್ಷಗಳಾಗಿವೆ.

ಕಾಂಬೋಡಿಯಾ ಮಣಿಸಿದ ಭಾರತ ವಾಲಿಬಾಲ್ ತಂಡ; ಏಷ್ಯನ್‌ ಗೇಮ್ಸ್‌ನಲ್ಲಿ ಶುಭಾರಂಭ

ಏಷ್ಯನ್ ಗೇಮ್ಸ್‌ನ ಪುರುಷರ ವಾಲಿಬಾಲ್ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಭಾರತ ತಂಡವು 3-0 ಗೋಲುಗಳಿಂದ ಕಾಂಬೋಡಿಯಾವನ್ನು ಮಣಿಸಿತ್ತು. ಚೀನಾದ ಹ್ಯಾಂಗ್‌ಝೌನಲ್ಲಿ ಮಂಗಳವಾರ ನಡೆದ ಪೂಲ್ ಸಿ ಪಂದ್ಯದಲ್ಲಿ ಭಾರತವು 25-14, 25-13, 25-19 ಅಂಕಗಳೊಂದಿಗೆ ತನಗಿಂತ ಕೆಳ ಶ್ರೇಯಾಂಕದ ಕಾಂಬೋಡಿಯಾವನ್ನು ಸೋಲಿಸಿತು.

ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್‌ ವಿಭಾಗದಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ. ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಬಲಿಷ್ಠ ತಂಡಗಳೆಂದು ಪರಿಗಣಿಸಲಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ವಾಲಿಬಾಲ್‌ನಲ್ಲಿ ಜಪಾನ್ 16 ಚಿನ್ನದೊಂದಿಗೆ 27 ಬಾರಿ ಪೋಡಿಯಂ ಫಿನಿಶ್‌ ಮಾಡಿದೆ. ಆತಿಥೇಯ ಚೀನಾ 11 ಚಿನ್ನದೊಂದಿಗೆ ಎರಡನೇ ಮತ್ತು ಕೊರಿಯಾ ಐದು ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ