logo
ಕನ್ನಡ ಸುದ್ದಿ  /  ಕ್ರೀಡೆ  /  India Vs Australia 4th Test: ಭಾರತದ ಭರ್ಜರಿ ಪ್ರದರ್ಶನದ ನಡುವೆಯೂ ಡ್ರಾದತ್ತ ಅಂತಿಮ ಟೆಸ್ಟ್; ರೋಹಿತ್ ಪಡೆಗೆ ಐದನೇ ದಿನ ಅಸಲಿ ಸವಾಲು

India vs Australia 4th Test: ಭಾರತದ ಭರ್ಜರಿ ಪ್ರದರ್ಶನದ ನಡುವೆಯೂ ಡ್ರಾದತ್ತ ಅಂತಿಮ ಟೆಸ್ಟ್; ರೋಹಿತ್ ಪಡೆಗೆ ಐದನೇ ದಿನ ಅಸಲಿ ಸವಾಲು

HT Kannada Desk HT Kannada

Mar 12, 2023 05:27 PM IST

ವಿರಾಟ್‌ ಕೊಹ್ಲಿ

    • ನಾಲ್ಕನೇ ದಿನದ ಅಂತ್ಯಕ್ಕೆ 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿದೆ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಮ್ಯಾಥ್ಯೂ ಕುಹ್ನೆಮನ್‌ ಕ್ರೀಸ್‌ನಲ್ಲಿದ್ದಾರೆ.
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (ANI)

ಅಹಮದಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಪೇರಿಸಿ ಆಲೌಟ್‌ ಆಗಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 289 ರನ್‌ ಗಳಿಸಿದ್ದ ಭಾರತ, ಇಂದು ಭರ್ಜರಿ ಬ್ಯಾಟಿಂಗ್‌ ಮುಂದುವರೆಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೂ ಮುನ್ನ 571 ರನ್‌ ಗಳಿಸಿ ಆಲೌಟ್‌ ಆಯ್ತು. ಸದ್ಯ 91 ರನ್‌ಗಳ ಮುನ್ನಡೆ ಕಾಯ್ದುಕೊಂಡಿರುವ ಭಾರತವು, ಆಸೀಸ್‌ಗೆ ಎರಡನೇ ಇನ್ನಿಂಗ್ಸ್‌ ಆಡಲು ಅವಕಾಶ ಮಾಡಿಕೊಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 480 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ನಡೆಸಿದ ಭಾರತವು ಶುಬ್ಮನ್‌ ಗಿಲ್‌ ಹಾಗೂ ವಿರಾಟ್‌ ಕೊಹ್ಲಿಯ ಆಕರ್ಷಕ ಶತಕದ ನೆರವಿನಿಂದ 571 ರನ್‌ ಗಳಿಸಿದೆ. ಗಾಯಗೊಳಗಾಗಿದ್ದ ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ಗೆ ಬರಲಿಲ್ಲ. ಹೀಗಾಗಿ ತಂಡ ಒಂಬತ್ತು ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆಯೇ ಭಾರತದ ಇನ್ನಿಂಗ್ಸ್‌ ಅಂತ್ಯವಾಯ್ತು. 91 ರನ್‌ಗಳ ಮುನ್ನಡೆ ಕಾಯ್ದುಕೊಂಡಿರುವ ಭಾರತವು, ಉಳಿದಿರುವ ಒಂದು ದಿನದಲ್ಲಿ ಆಸೀಸ್‌ ತಂಡವನ್ನು ಆಲೌಟ್‌ ಮಾಡಬೇಕಿದೆ.

ಪಂದ್ಯದ ನಾಲ್ಕನೇ ದಿನದಂದು ತಾಳ್ಮೆಯ ಇನ್ನಿಂಗ್ಸ್ ಆಡಿದ ವಿರಾಟ್‌ ಕೊಹ್ಲಿ, ಶತಕ ಸಿಡಿಸಿ ಸಂಭ್ರಮಿಸಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ 28ನೇ ಟೆಸ್ಟ್ ಸೆಂಚುರಿ ಸಿಡಿಸಿ, ಟೀಕಾಕರರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದರು. ಆಸೀಸ್‌ ಸ್ಪಿನ್ನರ್‌ ನಾಥನ್ ಲಿಯಾನ್ ಅವರ ಓವರ್‌ನಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ 241 ಎಸೆತಗಳಲ್ಲಿ ತಮ್ಮ 28ನೇ ಟೆಸ್ಟ್ ಶತಕವನ್ನು ಕೊಹ್ಲಿ ಪೂರ್ಣಗೊಳಿಸಿದರು.

ವಿರಾಟ್‌ ಕೊಹ್ಲಿಗೆ ಉತ್ತಮ ಸಾಥ್‌ ನೀಡಿದ ಅಕ್ಷರ್‌ ಪಟೇಲ್‌ ಕೂಡ ಭರ್ಜರಿಯಾಗಿ ಬ್ಯಾಟ್‌ ಬೀಸಿ ಅರ್ಧಶತಕ ಸಿಡಿಸಿದರು. 113 ಎಸೆತಗಳನ್ನು ಎದುರಿಸಿದ ಅವರು, 5 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಸ್ಫೋಟಕ 79 ರನ್‌ ಗಳಿಸಿದರು. ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನದಲ್ಲಿ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಅದಕ್ಕೂ ಮೊದಲು ವಿರಾಟ್‌ ಜೊತೆಗೂಡಿ 215 ಎಸೆತಗಳಲ್ಲಿ‌ ಅಮೂಲ್ಯ 162 ರನ್‌ಗಳ ಜೊತೆಯಾಟವಾಡಿದರು.

ಭಾರತದ ಪರ ಜಡೇಜಾ 28 ರನ್‌ ಗಳಿಸಿ ಔಟಾದರೆ, ಶ್ರೀಕರ್‌ ಭರತ್‌ 44 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಅಶ್ವಿನ್‌ 7 ರನ್‌ ಗಳಿಸಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಉಮೇಶ್‌ ಯಾದವ್‌ ರನೌಟ್‌ ಆದರು. ಶತಕ ಸಿಡಿಸಿದ ಬಳಿಕ ದ್ವಿಶತಕದತ್ತ ಮುನ್ನಡೆಯುತ್ತಿದ್ದ ವಿರಾಟ್‌, ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿ ಔಟಾದರು. ಅಲ್ಲಿಗೆ ಭಾರತದ ಬ್ಯಾಟಿಂಗ್‌ ಕ್ರಮಾಂಕ ಮುಕ್ತಾಯವಾಯ್ತು.

91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿದೆ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಮ್ಯಾಥ್ಯೂ ಕುಹ್ನೆಮನ್‌ ಕ್ರೀಸ್‌ನಲ್ಲಿದ್ದಾರೆ.

ನಾಳೆಯ ಪಂದ್ಯ ರೋಚಕತೆಯಿಂದ ಕೂಡಿದ್ದು, ಬಹುತೇಕ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಭಾರತವು ಆಸೀಸ್‌ ಪಾಳಯದ ಎಲ್ಲಾ ವಿಕೆಟ್‌ಗಳನ್ನು ಬೇಗನೆ ಕೀಳುವಲ್ಲಿ ಯಶಸ್ವಿಯಾದರೆ, ಪಂದ್ಯ ಗೆಲ್ಲುವ ಸಾಧ್ಯತೆ ಇದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಪಂದ್ಯದಲ್ಲಿ ಆಸೀಸ್‌ ಗೆಲುವು ಕಷ್ಟಸಾಧ್ಯ. ಆದರೆ, ಭಾರತಕ್ಕೆ ಗೆಲ್ಲುವ ಅವಕಾಶಗಳಿವೆ. ಅತ್ತ ಆಸೀಸ್‌ಗೆ ಡ್ರಾ ಮಾಡಿಕೊಳ್ಳುವ ಅವಕಾಶ ಮಾತ್ರ ಇದೆ.

    ಹಂಚಿಕೊಳ್ಳಲು ಲೇಖನಗಳು