logo
ಕನ್ನಡ ಸುದ್ದಿ  /  ಕ್ರೀಡೆ  /  Kohli Angry On Hardik: ರನ್ ಗಳಿಸಲು ತಡ? ವಿರಾಟ್ ಕೊಹ್ಲಿ ಡೆಡ್ಲಿ ಲುಕ್‌ಗೆ ಬೆಚ್ಚಿಬಿದ್ದ ಹಾರ್ದಿಕ್ ಪಾಂಡ್ಯ!

Kohli Angry on Hardik: ರನ್ ಗಳಿಸಲು ತಡ? ವಿರಾಟ್ ಕೊಹ್ಲಿ ಡೆಡ್ಲಿ ಲುಕ್‌ಗೆ ಬೆಚ್ಚಿಬಿದ್ದ ಹಾರ್ದಿಕ್ ಪಾಂಡ್ಯ!

HT Kannada Desk HT Kannada

Jan 11, 2023 04:30 PM IST

ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ

  • ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಬ್ಯಾಟಿಂಗ್ ಮಾಡುತ್ತಿದ್ದರು. ಎರಡನೇ ರನ್ ಗಳಿಸದಿದ್ದಕ್ಕಾಗಿ ಹಾರ್ದಿಕ್ ಅವರತ್ತ ವಿರಾಟ್ ಡೆಡ್ಲಿ ಲುಕ್ ಕೊಟ್ಟಿದ್ದಾರೆ. 

ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ
ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ

ಗುವಾಹಟಿ: ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಹೇಗೆ ಅಬ್ಬರಿಸುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದ್ಯ ಬೊಂಬಾಟ್ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಆಡುವ ಪ್ರತಿಯೊಂದು ಸರಣಿಯಲ್ಲೂ ಲಾಂಗ್ ಗ್ಯಾಪ್ ಬಳಿಕ ಅಬ್ಬರಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಬೌಂಡರಿ ಮತ್ತು ಸಿಕ್ಸರ್‌ಗಳಿಗಿಂತ ವಿಕೆಟ್‌ಗಳ ನಡುವೆ ರನ್ ಗಳಿಸುವಲ್ಲಿ ವಿರಾಟ್ ಗೆ ವಿರಾಟ್ ಅವರೇ ಸರಿಸಾಟಿ. ಬೌಂಡರಿ, ಸಿಕ್ಸರ್ ಹೊಡೆಯದಿದ್ದರೂ ಸಿಂಗಲ್ಸ್ ಹೊಡೆಯಲೇ ಬೇಕು. ತಂಡದ ಪರ ಸ್ಕೋರ್ ಬೋರ್ಡ್ ಹೆಚ್ಚಿಸುವ ಮನಸ್ಥಿತಿ ಅವರದ್ದು.

ಅಲ್ಲದೆ ಮಾಜಿ ನಾಯಕ ಎಂಎಸ್ ಧೋನಿ ನಾನ್ ಸ್ಟ್ರೈಕರ್ ತುದಿಯಲ್ಲಿದ್ದರೆ ಎದುರಾಳಿ ಫೀಲ್ಡರ್ ಗಳು ಇವರಿಬ್ಬರ ರನ್ ಓಟದಲ್ಲಿ ವಿಕೆಟ್ ಗಳ ನಡುವೆ ತಮ್ಮನ್ನು ಉಳಿಸಿಕೊಳ್ಳಲು ಬೆವರು ಹರಿಸಬೇಕಾಗುತ್ತದೆ. ಈ ಆಟಗಾರರು ಸಿಂಗಲ್ಸ್ ಮತ್ತು ಡಬಲ್ಸ್ ಎರಡಕ್ಕೂ ಆದ್ಯತೆ ನೀಡುತ್ತಾರೆ. ನಿನ್ನೆಯಷ್ಟೇ (ಜ.10, ಮಂಗಳವಾರ) ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೇಗವಾಗಿ ರನ್ ಗಳಿಸಿ ಮಿಂಚಿದ್ದರು.

ಮೈದಾನದಲ್ಲೇ ತಮ್ಮ ಭಾವೋದ್ವೇಗದವನ್ನು ತಕ್ಷಣಕ್ಕೆ ತೋರುವ ಕೊಹ್ಲಿ ನಿನ್ನೆಯ ಪಂದ್ಯದಲ್ಲೂ ಹಾರ್ದಿಕ್ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ 43ನೇ ಓವರ್‌ನಲ್ಲಿ ಕೊಹ್ಲಿ ಕಸುನ್ ರಜಿತ್ ಅವರ ಲೆಂಗ್ತ್ ಎಸೆತವನ್ನು ಆನ್‌ಸೈಡ್ ಹಿಂಬದಿಯ ಸ್ಕ್ವೇರ್‌ಗೆ ಆಡಿ ತಕ್ಷಣವೇ ಸಿಂಗಲ್ ತೆಗೆದುಕೊಂಡರು. ಆದರೆ ಡಬಲ್ ತೆಗೆದುಕೊಳ್ಳಲು ಯತ್ನಿಸಿದಾಗ ಹಾರ್ದಿಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಎರಡನೇ ರನ್ ಗೆ ಮುಂದಾಗಿದ್ದ ವಿರಾಟ್ ಹಿಂತಿರುಗಿ ಓಡಿಹೋಗಿ ಕ್ರೀಸ್ ಸೇರಿಕೊಂಡು ಹಾರ್ದಿಕ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೋಪದಿಂದ ಹಾರ್ದಿಕ್ ಪಾಂಡ್ಯ ಅವರನ್ನು ದಿಟ್ಟಿಸುವುದನ್ನು ಮುಂದುವರಿಸಿದನು. ಈ ಡೆಡ್ಲಿ ನೋಟಕ್ಕೆ ಹಾರ್ದಿಕ್ ಕೂಡ ಬೆಚ್ಚಿಬಿದ್ದಿದ್ದಾರೆ. ಸಾರಿ ಹೇಳಿ ಕೈ ಸಿಗ್ನಲ್ ಕೊಟ್ಟರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋಗೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಕೊಹ್ಲಿ ಅವರು ಹಾರ್ದಿಕ್ ರನ್ನ ಕಣ್ಣಲ್ಲೇ ಹೆದರಿಸಿದ್ದಾರೆ ಎಂಬ ಕಮೆಂಟ್ ಗಳು ಹರಿದಾಡುತ್ತಿವೆ. ವಿರಾಟ್ ಕ್ರೀಸ್‌ನಲ್ಲಿದ್ದರೆ ಅದೇ ಆಗಿರುತ್ತದೆ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 67 ರನ್‌ಗಳ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ (113) ಶತಕ ಸಿಡಿಸಿದರೆ, ರೋಹಿತ್ ಶರ್ಮಾ (83) ಹಾಗೂ ಶುಭಮನ್ ಗಿಲ್ (70) ಅರ್ಧಶತಕ ಸಿಡಿಸಿ ಮಿಂಚಿದರು. ಇದರಿಂದಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.

ಬಳಿಕ ಲಂಕಾ ತಂಡ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಗೆ ಸೀಮಿತವಾಯಿತು. ನಾಯಕ ದಾಸುನ್ ಸನಕ (108) ಶತಕ ಸಿಡಿಸಿದರೂ ಉಳಿದ ಬ್ಯಾಟ್ಸ್ ಮನ್ ಗಳು ಲಂಕಾ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿದರು. ಭಾರತದ ಬೌಲರ್‌ಗಳ ಪೈಕಿ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದರೆ ಮಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು.

    ಹಂಚಿಕೊಳ್ಳಲು ಲೇಖನಗಳು