logo
ಕನ್ನಡ ಸುದ್ದಿ  /  ಕ್ರೀಡೆ  /  Royal Challengers Bangalore: ಆರ್ಸಿಬಿ ಉಳಿಸಿಕೊಂಡ, ಬಿಡುಗಡೆಯಾದ ಆಟಗಾರರ ಸಂಪೂರ್ಣ ಪಟ್ಟಿ: ಹೇಗಿದೆ ಟೀಂ ಚಾಲೆಂಜರ್ಸ್?

Royal Challengers Bangalore: ಆರ್ಸಿಬಿ ಉಳಿಸಿಕೊಂಡ, ಬಿಡುಗಡೆಯಾದ ಆಟಗಾರರ ಸಂಪೂರ್ಣ ಪಟ್ಟಿ: ಹೇಗಿದೆ ಟೀಂ ಚಾಲೆಂಜರ್ಸ್?

Raghavendra M Y HT Kannada

Nov 15, 2022 08:26 PM IST

ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ (ಫೋಟೋ-RCB)

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದ ಆಟಗಾರರಲ್ಲಿ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಶೆರ್ಫೇನ್ ರುತ್ ರ್ಫೋರ್ಡ್ ಪ್ರಮುಖ ಹೆಸರುಗಳಾಗಿವೆ. 

ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ (ಫೋಟೋ-RCB)
ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ (ಫೋಟೋ-RCB)

ಬೆಂಗಳೂರು: ದೇಶ ಹಾಗೂ ಕರ್ನಾಟಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್ಸಿಬಿ ಫ್ಯಾನ್ಸ್ ಕ್ರೇಜ್ ಗೆ ಬೆಲೆ ಕಟ್ಟಲಾಗದು. ಸೋಲಿರಲಿ ಗೆಲುವಿರಲಿ ಸದಾ ತಂಡದ ಬೆನ್ನಿಗೆ ನಿಲುತ್ತಿರುವವರು ನಿಜವಾದ ಅಭಿಮಾನಿಗಳು ಅನ್ನೋದನ್ನು ಸಾಕಷ್ಟು ಬಾರಿ ಸಾಬೀತು ಮಾಡಿದ್ದಾರೆ. ಇದೀಗ ಮುಂದಿನ ಆವೃತ್ತಿಗೆ ತಂಡ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯುವ ಹಿನ್ನೆಲೆಯಲ್ಲಿ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ನೀಡಲು ಇವತ್ತು (ನವೆಂಬರ್ 15, ಮಂಗಳವಾರ) ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಸಿಬಿ ಇವತ್ತು ಯಾರನ್ನೆಲ್ಲಾ ಉಳಿಸಿಕೊಂಡಿದೆ ಹಾಗೂ ಯಾರನ್ನು ಬಿಡುಗಡೆ ಮಾಡಿದೆ ಎಂಬುದರ ಪಟ್ಟಿ ಇಲ್ಲಿದೆ.

2022ರ ಐಪಿಎಲ್ ಆವೃತ್ತಿಗೂ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಹಳಷ್ಟು ಬದಲಾವಣೆಗಳನ್ನು ಕಂಡಿತು. ವಿರಾಟ್ ಕೊಹ್ಲಿ ತಮ್ಮ ನಾಯಕತ್ವವನ್ನು ತ್ಯಜಿಸಿದರು. ಆ ನಂತರ ಫಾಫ್ ಡು ಪ್ಲೆಸಿಸ್ ನೂತನ ನಾಯಕರಾಗಿ ಆಯ್ಕೆಯಾಗಿದ್ದರು. ಡು ಪ್ಲೆಸಿಸ್ ನೇತೃತ್ವದಲ್ಲಿ ಬೆಂಗಳೂರು ತಂಡ ಪ್ಲೇಆಫ್‌ಗೆ ಅರ್ಹತೆ ಗಳಿಸಿಕೊಂಡಿತ್ತು.

ಆದರೆ ಕ್ವಾಲಿಫೈಯರ್ 2 ರಲ್ಲಿ ಅಂತಿಮವಾಗಿ ರನ್ನರಪ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಾಣಬೇಕಾಯಿತು. ಇವತ್ತು ಬಿಡುಗಡೆಯಾದ ಪ್ರಮುಖ ಆಟಗಾರರ ಪೈಕಿ ಜೇಸನ್ ಬೆಹ್ರೆಂಡಾರ್ಫ್ ಮತ್ತು ಶೆರ್ಫೇನ್ ರುತ್ ರ್ಫೋರ್ಡ್ ಹೆಸರುಗಳಿವೆ. ಒಟ್ಟಾರೆಯಾಗಿ ಐದು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದರು. ಇದರ ಹೊರತಾಗಿ ಆರ್ಸಿಬಿ ಯಾವುದೇ ರೀತಿಯ ಪ್ರಮುಖ ಬದಲಾವಣೆಗಳಿಗೆ ಕೈಹಾಕಲಿಲ್ಲ. ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಅಂತಿಮ ತಂಡದ ಪಟ್ಟಿಯನ್ನು ಹರಾಜಿನಲ್ಲಿ ಪ್ರಕಟಿಸಲು ಇವತ್ತು ಕಡೆಯ ದಿನವಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ:

1. ಜೇಸನ್ ಬೆಹ್ರೆಂಡಾರ್ಫ್

2. ಅನೀಶ್ವರ್ ಗೌತಮ್

3. ಚಾಮಾ ಮಿಲಿಂದ್

4. ಲುವ್ನಿತ್ ಸಿಸೋಡಿಯಾ

5. ಶೆರ್ಫೇನ್ ರುತ್ ರ್ಫೋರ್ಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ ಉಳಿದಿರುವ ಪರ್ಸ್:

8.75 ಕೋಟಿ ರೂಪಾಯಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡಿರುವ ಆಟಗಾರರ ಪಟ್ಟಿ:

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್

ವಿಭಾಗ

    ಹಂಚಿಕೊಳ್ಳಲು ಲೇಖನಗಳು