logo
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup 2022: ನಾಲ್ಕು ಬಾರಿಯ ಚಾಂಪಿಯನ್ ಬಗ್ಗುಬಡಿದ ಜಪಾನ್; ಬುಧವಾರದ ಪಂದ್ಯಗಳ ಫಲಿತಾಂಶ ಹೀಗಿವೆ

FIFA World Cup 2022: ನಾಲ್ಕು ಬಾರಿಯ ಚಾಂಪಿಯನ್ ಬಗ್ಗುಬಡಿದ ಜಪಾನ್; ಬುಧವಾರದ ಪಂದ್ಯಗಳ ಫಲಿತಾಂಶ ಹೀಗಿವೆ

HT Kannada Desk HT Kannada

Nov 24, 2022 06:20 AM IST

ಜಪಾನ್‌-ಜರ್ಮನಿ ಪಂದ್ಯದ ದೃಶ್ಯ

    • ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಗ್ರೂಪ್ ಇ ಆರಂಭಿಕ ಪಂದ್ಯದಲ್ಲಿ, ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯನ್ನು ಜಪಾನ್ ಸೋಲಿಸಿತು. ಬುಧವಾರ ನಡೆದ 3 ಗೋಲುಗಳ ರೋಚಕ ಪಂದ್ಯದಲ್ಲಿ ಜಪಾನ್ ತಡವಾಗಿ ಎರಡು ಗೋಲು ಗಳಿಸಿ ಜರ್ಮನಿಯನ್ನು ದಂಗುಬಡಿಸಿತು.
ಜಪಾನ್‌-ಜರ್ಮನಿ ಪಂದ್ಯದ ದೃಶ್ಯ
ಜಪಾನ್‌-ಜರ್ಮನಿ ಪಂದ್ಯದ ದೃಶ್ಯ (AP)

ಕತಾರ್: ಅರಬ್‌ ರಾಷ್ಟ್ರ ಕತಾರ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಾವಳಿಯು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ನಿನ್ನೆ ನಡೆದ ಪಂದ್ಯಗಳು ಕೂಡಾ ಕುತೂಹಲದಿಂದ ಸಾಗಿದ್ದು, ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಹಾಲಿ ರನ್ನರ್‌ ಅಪ್‌ ಕ್ರೊಯೇಷಿಯಾ ವಿರುದ್ಧ ಮೊರಾಕೊ ಡ್ರಾ ಸಾಧಿಸಿತ್ತು. ಆ ಬಳಿಕ ನಡೆದ ಪಂದ್ಯಗಳಲ್ಲಿ ಜರ್ಮನಿ ವಿರುದ್ಧ ಜಪಾನ್‌ ಗೆದ್ದರೆ, ಕೋಸ್ಟರಿಕಾ ವಿರುದ್ಧ ಸ್ಪೇನ್‌ ಭರ್ಜರಿಯಾಗಿ ಗೆದ್ದು ಬೀಗಿತು. ಮತ್ತೊಂದೆಡೆ ಕೆನಡಾ ವಿರುದ್ಧ ಬೆಲ್ಜಿಯಂ ಜಯ ಸಾಧಿಸಿತು.

ಕ್ರೊಯೇಶಿಯಾ - ಮೊರಾಕೊ ಪಂದ್ಯ ಡ್ರಾ

ಬುಧವಾರದ ಮೊದಲ ಪಂದ್ಯದದಲ್ಲಿ 2018 ರನ್ನರ್ ಅಪ್ ಆಗಿರುವ ಕ್ರೊಯೇಶಿಯಾ ತಂಡಕ್ಕೆ ಮೊರಾಕೊ ಕಠಿಣ ಸ್ಪರ್ಧೆಯನ್ನು ನೀಡಿತು. ಕೊನೆಯವರೆಗೂ ಯಾವುದೇ ಅವಕಾಶ ನೀಡದೆ ಹೋರಾಡಿತು. ಮೊದಲ ಅರ್ಧಭಾಗದ ವೇಳೆಗೆ ಕ್ರೊಯೇಶಿಯಾ ತಂಡ ಮೊರಾಕೊ ತಂಡ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಗೋಲ್ ಹೊಡೆಯಲು ಗಂಭೀರವಾಗಿ ಯತ್ನಿಸಿದರೂ ಅದು ಫಲ ನೀಡಲಿಲ್ಲ. ಕೊನೆಯವರೆಗೆ ಪಂದ್ಯ 0-0 ನೊಂದಿಗೆ ಸಾಗುವುದರೊಂದಿಗೆ ಹೆಚ್ಚುವರಿ ಸಮಯವನ್ನು ನೀಡಲಾಯಿತು. ಆರು ನಿಮಿಷಗಳ ಹೆಚ್ಚುವರಿ ಸಮಯದಲ್ಲಿಯೂ ಯಾವುದೇ ಗೋಲ್ ದಾಖಲಾಗಿಲ್ಲ. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ನಾಲ್ಕು ಬಾರಿಯ ಚಾಂಪಿಯನ್‌ ಬಗ್ಗುಬಡಿದ ಜಪಾನ್‌

ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಗ್ರೂಪ್ ಇ ಆರಂಭಿಕ ಪಂದ್ಯದಲ್ಲಿ, ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯನ್ನು ಜಪಾನ್ ಸೋಲಿಸಿತು. ಬುಧವಾರ ನಡೆದ 3 ಗೋಲುಗಳ ರೋಚಕ ಪಂದ್ಯದಲ್ಲಿ ಜಪಾನ್ ತಡವಾಗಿ ಎರಡು ಗೋಲು ಗಳಿಸಿ ಜರ್ಮನಿಯನ್ನು ದಂಗುಬಡಿಸಿತು. ತಡವಾಗಿ ರಿಟ್ಸು ಡೋನ್ ಮತ್ತು ಟಕುಮಾ ಅಸಾನೊ ಬಾರಿಸಿದ ಗೋಲುಗಳು ಜಪಾನ್‌ನ ಅದ್ಭುತ ಗೆಲುವಿಗೆ ಕಾರಣವಾಯಿತು. ಜರ್ಮಿನಿ ವಿರುದ್ಧದ 2-1 ಅಂತರದ ಅಭೂತಪೂರ್ವ ಗೆಲುವಿನೊಂದಿಗೆ ಜಪಾನ್ ವಿಶ್ವಕಪ್ ಅಭಿಯಾನ ಆರಂಭಿಸಿತು.

ಸ್ಪೇನ್‌ ಭರ್ಜರಿ ಜಯ

ಗ್ರೂಪ್‌ ಇ ಪಂದ್ಯದಲ್ಲಿ ಕೋಸ್ಟರಿಕಾವನ್ನು ಭರ್ಜರಿಯಾಗಿ ಸೋಲಿಸಿದ ಸ್ಪೇನ್, ಗುಂಪಿನಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಸಂಪೂರ್ಣವಾಗಿ ಏಕಮುಖವಾಗಿ ಸಾಗಿದ ಪಂದ್ಯದಲ್ಲಿ ಸ್ಪೇನ್ ವಿಶ್ವಕಪ್‌ನಲ್ಲಿ ತಮ್ಮ ಅತಿದೊಡ್ಡ ಗೆಲುವನ್ನು ದಾಖಲಿಸಿತು. ಅಂತಿಮವಾಗಿ ಕೋಸ್ಟರಿಕಾವನ್ನು ಏಳು ಗೋಲುಗಳ ಅಂತರದಿಂದ ಸೋಲಿಸಿತು.

ಕೆನಡಾ ವಿರುದ್ಧ ಬೆಲ್ಜಿಯಂಗೆ ಜಯ

ಕೆನಡಾ ವಿರುದ್ಧದ ಪಂದ್ಯದಲ್ಲಿ ಮಿಚಿ ಬಟ್ಶುವಾಯಿ ಏಕೈಕ ಗೋಲು ಗಳಿಸಿ ಬೆಲ್ಜಿಯಂಗೆ 1-0 ಅಂತರದ ರೋಚಕ ಗೆಲುವು ತಂದುಕೊಟ್ಟರು. 1986ರಲ್ಲಿ ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡಿರುವ ಕೆನಡಿಯನ್ನರು, ಇದುವರೆಗೂ ಒಂದು ಅಂಕವನ್ನು ಕೂಡಾ ಸಂಗ್ರಹಿಸಿಲ್ಲ. ವಿಶ್ವದಲ್ಲೇ ಫುಟ್ಬಾಲ್‌ನಲ್ಲಿ ನಂಬರ್‌ 2 ಶ್ರೇಯಾಂಕ ಹೊಂದಿರುವ ಬೆಲ್ಜಿಯಂ ಒಂದು ಗೋಲಿನ ಅಂತರದಿಂದ ಗೆಲ್ಲಲು ಶಕ್ತವಾಯ್ತು.

ಇಂದಿನ ಪಂದ್ಯದಲ್ಲಿ ಘಾನಾ ವಿರುದ್ಧ ಪೋರ್ಚುಗಲ್‌ ಆಡಿದರೆ, ಸೆರೆಬಿಯಾ ವಿರುದ್ಧ ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ಆಡಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು