logo
ಕನ್ನಡ ಸುದ್ದಿ  /  ಕ್ರೀಡೆ  /  Kieron Pollard Retires From Ipl: ಐಪಿಎಲ್ ಗೆ ಪೊಲಾರ್ಡ್ ಗುಡ್ ಬೈ; ಮುಂಬೈ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಬಡ್ತಿ

Kieron Pollard retires from IPL: ಐಪಿಎಲ್ ಗೆ ಪೊಲಾರ್ಡ್ ಗುಡ್ ಬೈ; ಮುಂಬೈ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಬಡ್ತಿ

HT Kannada Desk HT Kannada

Nov 15, 2022 04:33 PM IST

ಕೀರನ್ ಪೊಲಾರ್ಡ್ (ಫೋಟೋ-IPL)

  • ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಪರ 13 ವರ್ಷಗಳ ಕಾಲ ಆಡಿದ್ದ ಪೊಲಾರ್ಡ್ ಇದೀಗ ಅದೇ ತಂಡದಲ್ಲೇ ಬ್ಯಾಟಿಂಗ್ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ.

ಕೀರನ್ ಪೊಲಾರ್ಡ್ (ಫೋಟೋ-IPL)
ಕೀರನ್ ಪೊಲಾರ್ಡ್ (ಫೋಟೋ-IPL)

ಮುಂಬೈ: ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಹಾಗೂ ದೈತ್ಯ ಬ್ಯಾಟರ್ ಕೀರನ್ ಪೊಲಾರ್ಡ್ ಇಂಡಿಯನ್ ಪ್ರೀಮಿಯರ್ ಲೀಗ್- ಐಪಿಎಲ್‌ ಗೆ ವಿದಾಯ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

2010 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ಪೊಲಾರ್ಡ್ ಒಟ್ಟು 13 ಸೀಸನ್‌ಗಳಲ್ಲಿ ಎಂಐ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಐಪಿಎಲ್ ಲೀಗ್‌ನಲ್ಲಿ ಆಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೊಲಾರ್ಡ್ ಅವರ ನಿರ್ಧಾರಕ್ಕೆ ಸಮ್ಮತಿಸಿರುವ ಮುಂಬೈ ಇಂಡಿಯನ್ಸ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಐಪಿಎಲ್‌ನಲ್ಲಿ ಮುಂಬೈ ಹೊರತುಪಡಿಸಿ ಬೇರೆ ಯಾವುದೇ ತಂಡಕ್ಕಾಗಿ ಆಡುವುದಿಲ್ಲ ಎಂದು ಪೊಲಾರ್ಡ್ ಹೇಳಿದ್ದಾರೆ. ಆದರೆ ಆಟಗಾರನಾಗಿ ನಿವೃತ್ತಿಯಾದರೂ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 2009 ರ ಚಾಂಪಿಯನ್ಸ್ ಲೀಗ್‌ನಲ್ಲಿ ಪೊಲಾರ್ಡ್ ಆಟವನ್ನು ನೋಡಿದ ನಂತರ, ನಂತರದ ವರ್ಷ ಮುಂಬೈ ಇಂಡಿಯನ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಅಂದಿನಿಂದ ಅವರು ಮುಂಬೈ ತಂಡದ ಜೊತೆಗಿದ್ದಾರೆ.

ಆ ಹರಾಜಿನಲ್ಲಿ ಮೂಲ ಬೆಲೆ 2 ಲಕ್ಷ ಡಾಲರ್ ಇದ್ದ ಪೊಲಾರ್ಡ್ ಅವರನ್ನು ಮುಂಬೈ 7.5 ಲಕ್ಷ ಡಾಲರ್ ಗೆ ಖರೀದಿಸಿತ್ತು. ಅವರು ತಂಡದಲ್ಲಿದ್ದ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಚಾಂಪಿಯನ್ ಆಯಿತು. ಕಳೆದ ವರ್ಷ ಪೊಲಾರ್ಡ್ ರನ್ನು 6 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅವರು ಬ್ಯಾಟಿಂಗ್ ನಲ್ಲಿ ದಯನೀಯವಾಗಿ ವಿಫಲರಾಗಿದ್ದರು. ಈ ವೇಳೆ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಮುಂಬೈ ಯೋಚಿಸಿತ್ತು.

ಪೊಲಾರ್ಡ್ ಮುಂಬೈ ಇಂಡಿಯನ್ಸ್ ಪರ 189 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ನಂತರ, ಪೊಲಾರ್ಡ್ ಒಂದು ಫ್ರಾಂಚೈಸಿಗಾಗಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ಈ 189 ಪಂದ್ಯಗಳಲ್ಲಿ ಪೊಲಾರ್ಡ್ 3,412 ರನ್ ಗಳಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳಿವೆ. ಬೌಲಿಂಗ್ ನಲ್ಲಿ 69 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಪೊಲಾರ್ಡ್ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಇದೀಗ ಅವರ 13 ವರ್ಷಗಳ ಐಪಿಎಲ್ ಪ್ರಯಾಣ ಮುಕ್ತಾಯವಾಗುತ್ತಿದೆ. ಆದರೆ ಇದೇ ತಂಡದಲ್ಲಿ ಅವರು ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯುವ ಮೂಲಕ ಬಡ್ತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಪೊಲಾರ್ಡ್ ಅವರು ಐಪಿಎಲ್‌ಗೆ ವಿದಾಯ ಹೇಳುತ್ತಿರುವುದಾಗಿ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ಮುಂಬೈ ಪರ ಆಡುವ ಆಸೆ ಇದ್ದರೂ ಕಠಿಣ ನಿರ್ಧಾರ.. ತಂಡದೊಂದಿಗೆ ಚರ್ಚಿಸಿದ ಬಳಿಕ ನಿವೃತ್ತಿಯಾಗಲು ನಿರ್ಧರಿಸಿರುವುದಾಗಿ ತಿಳಿಸಿದರು. ಒಮ್ಮೆ ಮುಂಬೈ ಇಂಡಿಯನ್ ಆಗಿದ್ದರೆ, ತಾನು ಸದಾ ಮುಂಬೈ ಇಂಡಿಯನ್ ಎಂದು ಪೊಲಾರ್ಡ್ ಹೇಳಿರುವುದು ಗಮನಾರ್ಹ.

ಆದರೆ ಇನ್ನು ಮುಂದೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯುವುದಾಗಿ ಪೊಲಾರ್ಡ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಈ ಹೊಸ ಜವಾಬ್ದಾರಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದರು. ಮುಂಬೈ ಇಂಡಿಯನ್ಸ್‌ನ ಎಮಿರೇಟ್ಸ್ ತಂಡದಲ್ಲೂ ಪೊಲಾರ್ಡ್ ಮುಂದುವರಿಯಲಿದ್ದಾರೆ. ಅವರ ಘೋಷಣೆಯ ನಂತರ, ಮುಂಬೈ ಇಂಡಿಯನ್ಸ್ ತನ್ನ ಟ್ವಿಟರ್ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿತು. ಪೊಲಾರ್ಡ್ ಫಾರೆವರ್ ಎಂಐ ಹೇಳಿದರು ಫೋಟೋವನ್ನೇ ಪ್ರೊಫೈಲ್ ಚಿತ್ರವಾಗಿ ಇರಿಸಲಾಗಿದೆ.

ಐಪಿಎಲ್ 2023ರ ಆವೃತ್ತಿಗಾಗಿ ಮಿನಿ ಹರಾಜು ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಆಟಗಾರರನ್ನು ಬಿಡುವ ಹಾಗೂ ಖರೀದಿಗೆ ಲಭ್ಯ ಇರುವ ಕ್ರಿಕೆಟರ್ ಗಳ ಪ್ರಕ್ರಿಯೆ ಆರಂಭವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು