KL Rahul: 5ನೇ ಕ್ರಮಾಂಕದಲ್ಲಿ KL ರಾಹುಲ್ಗಿಲ್ಲ ಯಾರೂ ಸರಿಸಾಟಿ.. ಅಂಕಿ-ಅಂಶ ನೋಡಿದ್ರೆ ಶಾಕ್ ಆಗ್ತೀರಾ?
Mar 17, 2023 09:36 PM IST
ಕೆ.ಎಲ್.ರಾಹುಲ್
- KL Rahul: ಆಸ್ಟ್ರೇಲಿಯಾ ನೀಡಿದ ಸಾಧಾರಣ ಗುರಿ ಬೆನ್ನತ್ತುವಾಗ ಭಾರತ ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್ ರಾಹುಲ್ ತಂಡಕ್ಕೆ ಆಸರೆಯಾದರು.
2022ರಲ್ಲಿ ಸಾಲು ಸಾಲು ಪ್ಲಾಫ್ ಶೋ ನೀಡಿದ ಕೆಎಲ್ ರಾಹುಲ್ ಕೊನೆಗೂ ಟ್ರ್ಯಾಕ್ಗೆ ಮರಳಿದ್ದಾರೆ. ಆಸಿಸ್ ವಿರುದ್ಧ ತಾಳ್ಮೆಯ ಮಂತ್ರ ಪಠಿಸಿದ ರಾಹುಲ್, ಮೊದಲ ಏಕದಿನದ ಗೆಲುವಿನ ರೂವಾರಿಯಾಗಿದ್ದಾರೆ. ಫಾರ್ಮ್ಗೆ ಮರಳಿ, ಪರ್ಫಾಮ್ ಮಾಡಿದ್ದಾರೆ. 91 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿ ಮೆಚ್ಚುಗೆಗೆ ಕಾರಣರಾದರು. 7 ಬೌಂಡರಿ, 1 ಸಿಕ್ಸರ್ ಅವರ ಸೊಗಸಾದ ಇನ್ನಿಂಗ್ಸ್ನಲ್ಲಿ ದಾಖಲಾಗಿವೆ.
ಆಸ್ಟ್ರೇಲಿಯಾ ವಿರುದ್ಧದ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಅಂದುಕೊಂಡಂತೆ ಆಸಿಸ್ ಪಡೆಯನ್ನ ಕೇವಲ 188 ರನ್ಗಳಿಗೆ ಟೀಮ್ ಇಂಡಿಯಾ ಕಟ್ಟಿ ಹಾಕಿತು. ಈ ಸಾಧಾರಣ ಟಾರ್ಗೆಟ್ ಬೆನ್ನತ್ತುವಾಗ ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್ ರಾಹುಲ್ ತಂಡಕ್ಕೆ ಆಸರೆಯಾದರು.
ತಂಡಕ್ಕೆ ಆಸರೆಯಾದ ರಾಹುಲ್, ಏಕಾಂಗಿ ಹೋರಾಟ.!
ಸ್ವಲ್ಪ ಯಾಮಾರಿದರೂ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿ ಬಿಡುತ್ತಿತ್ತು. ಇದರಿಂದ ಪಾರು ಮಾಡಿದ್ದು, ಕೆಎಲ್ ರಾಹುಲ್.. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಕೆಎಲ್ ತಾಳ್ಮೆಯ ಬ್ಯಾಟಿಂಗ್ ನಡೆಸಿದರು. ಯಾವ ಕ್ಷಣದಲ್ಲೂ ಏಕಾಗ್ರತೆ ಕಳೆದುಕೊಳ್ಳದ ರಾಹುಲ್, ಅರ್ಧಶತಕ ಸಿಡಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಇದಕ್ಕೆ ರವೀಂದ್ರ ಜಡೇಜಾ ಸಖತ್ ಸಾಥ್ ನೀಡಿದರು. 6ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದರು.
ಮಿಡಲ್ ಆರ್ಡರ್ನಲ್ಲಿ ಮಿಂಚು
ಹೌದು..! 2022ರ ಕರಾಳ ವರ್ಷದಲ್ಲಿ ಕೆಎಲ್ ರಾಹುಲ್ ಸಾಲು ಸಾಲು ಫ್ಲಾಪ್ ಶೋಗಳನ್ನ ನೀಡಿದ್ದರು. ಕ್ಲಾಸ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ರಾಹುಲ್, ಫ್ಲಾಪ್ ಸ್ಟಾರ್ ಆಗಿ ಬಿಟ್ಟರು. ಹೀಗಾಗಿಯೇ ಬಾರ್ಡರ್ -ಗವಾಸ್ಕರ್ ಸರಣಿಯ ಕೊನೆಯ 2 ಪಂದ್ಯಗಳಿಗೆ ಬೆಂಚ್ ಕಾದರು. ಇದೀಗ ಏಕದಿನ ಕ್ರಿಕೆಟ್ನಲ್ಲಿ ಮತ್ತೆ ಅಬ್ಬರಿಸುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಮಿಡಲ್ ಆರ್ಡರ್ಗೆ ಕೆಎಲ್ ಫಿಕ್ಸ್!
ಮುಂಬರುವ ವಿಶ್ವಕಪ್ ದೃಷ್ಠಿಯಿಂದ ಟೀಮ್ ಇಂಡಿಯಾದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಬಿಸಿಸಿಐ 20 ಆಟಗಾರರ ಶಾರ್ಟ್ಲಿಸ್ಟ್ ಕೂಡ ಮಾಡಿದೆ. ಕೋಚ್-ಕ್ಯಾಪ್ಟನ್ ಕೂಡ ಕೋರ್ ಟೀಮ್ ರೆಡಿ ಮಾಡುತ್ತಿದ್ದಾರೆ. ಈಗ ರಾಹುಲ್ರನ್ನ ಮಿಡಲ್ ಆರ್ಡರ್ನಲ್ಲಿ ಆಡಿಸಿದ್ದು, ಕೂಡ ಈ ಪ್ಲಾನ್ನ ಭಾಗವೇ ಆಗಿದೆ. ಯಾಕಂದರೆ ಕೆ.ಎಲ್ 5ನೇ ಕ್ರಮಾಂಕದಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ.
5ನೇ ಕ್ರಮಾಂಕದಲ್ಲಿ ರಾಹುಲ್
ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಒಟ್ಟು 17 ಇನ್ನಿಂಗ್ಸ್ಗಳನ್ನಾಡಿರುವ ರಾಹುಲ್, 733 ರನ್ ಗಳಿಸಿದ್ದಾರೆ. 56.38ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ರಾಹುಲ್, 7 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.
ನಂಬರ್ 4ರಲ್ಲೂ ಅದ್ಭುತ ಪ್ರದರ್ಶನ
ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ 4ನೇ ಕ್ರಮಾಂಕದಲ್ಲೂ ಜಬರ್ದಸ್ತ್ ಬ್ಯಾಟಿಂಗ್ ನಡೆಸಿದ್ದಾರೆ. 4ನೇ ಸ್ಲಾಟ್ನಲ್ಲಿ 6 ಪಂದ್ಯಗಳನ್ನಾಡಿರುವ ರಾಹುಲ್ 209 ರನ್ ಚಚ್ಚಿದ್ದಾರೆ. 1 ಶತಕವನ್ನೂ ಸಿಡಿಸಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ರಾಹುಲ್ ಸ್ಥಾನ ಭದ್ರನಾ?
ಸದ್ಯಕ್ಕಂತೂ ರಾಹುಲ್ ಮಿಡಲ್ ಆರ್ಡರ್ನಲ್ಲಿ ಆಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಪ್ಲೇಸ್ ಸ್ಥಾನ ಕನ್ಫರ್ಮ್ ಅನ್ನುವಂತಿಲ್ಲ.. ಫ್ಲಾಪ್ ಆದರೆ ಬೆಂಚ್ ಕಾಯೋದು ಕನ್ಫರ್ಮ್..! ಯಾಕಂದ್ರೆ, ನಂಬರ್ 5 ಸ್ಲಾಟ್ಗೂ ಪೈಪೋಟಿ ತೀವ್ರವಾಗಿದೆ. ಸದ್ಯ ಅಪಘಾತದಿಂದ ಚೇತರಿಸಿಕೊಳ್ತಿರೋ ಪಂತ್, ಕಂಪ್ಲೀಟ್ ಫಿಟ್ ಆದ ಬಳಿಕ ಆ ಪೈಪೋಟಿ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ರಾಹುಲ್ ಕನ್ಸಿಸ್ಟೆನ್ಸಿ ಮೆಂಟೇನ್ ಮಾಡೋದು ಅನಿವಾರ್ಯ.