logo
ಕನ್ನಡ ಸುದ್ದಿ  /  Sports  /  Know Weather And Pitch Details Of Thiruvananthapuram

India vs South Africa 1st T20I: ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಪಿಚ್‌ ಹೇಗಿದೆ?

HT Kannada Desk HT Kannada

Sep 28, 2022 03:31 PM IST

ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ

    • ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಯಾವುದೇ ಮಳೆಯ ಆತಂಕ ಇಲ್ಲ ಎಂಬ ವರದಿ ಇದೆ.
ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ
ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ (Wikipedia)

ತಿರುವನಂತಪುರ: ಕಾಂಗರೂಗಳ ವಿರುದ್ಧ ಸರಣಿ ಜಯ ಸಾಧಿಸಿದ ಬೆನ್ನಲ್ಲೇ, ಇಂದಿನಿಂದ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ, ಇಂದು ಮೊದಲ ಚುಟುಕು ಸಮರ ನಡೆಯಲಿದೆ. ಇಂದಿನ ಪಂದ್ಯಕ್ಕಾಗಿ ಕೇರಳದ ರಾಜಧಾನಿಯ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣವು ಸಜ್ಜಾಗಿದೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಆಸೀಸ್‌ ವಿರುದ್ಧ ಇತ್ತೀಚೆಗಷ್ಟೇ ಮುಗಿದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ, ಅತಿಥೇಯರು ಉಳಿದ ಎರಡು ಪಂದ್ಯಗಳಲ್ಲಿ ಆಸೀಸ್‌ ವಿರುದ್ಧ ತಿರುಗಿ ಬೀಳುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಇಂದಿನಿಂದ ಮತ್ತೊಂದು ಸರಣಿ ಆರಂಭವಾಗುತ್ತಿದ್ದು, ಗೆಲುವಿನ ಓಟ ಮುಂದುವರಿಸಲು ಟೀಂ ಇಂಡಿಯಾ ತಂತ್ರ ರೂಪಿಸಿದೆ.

ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಆಡಿದ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿದೆ. 2015ರಲ್ಲಿ ಭಾರತ ವಿರುದ್ಧ ಮೊದಲ ಟಿ20 ಸರಣಿಯನ್ನು ಹರಿಣಗಳು 2-0 ಅಂತರದಲ್ಲಿ ಗೆದ್ದಿದ್ದರು. ಎರಡನೇ ಟಿ20 ಸರಣಿಯು ಸೆಪ್ಟೆಂಬರ್ 2018ರಲ್ಲಿ ನಡೆಯಿತು. ಈ ಸರಣಿಯು 1-1 ಸಮಬಲದಲ್ಲಿ ಕೊನೆಗೊಂಡಿತು. 2019ರ ಟಿ20 ಸರಣಿ ಕೂಡಾ 1-1 ಸಮಬಲದಲ್ಲಿ ಅಂತ್ಯವಾಯ್ತು.

ಭಾರತ ತಂಡದ ಡೆತ್ ಬೌಲಿಂಗ್ ಹೊರತುಪಡಿಸಿ, ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ವಿಭಾಗದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್‌ನಲ್ಲಿ ಡೆತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಕಾಂಗರೂಗಳ ವಿರುದ್ಧ ಆಡಿರಲಿಲ್ಲ. ಸದ್ಯ ಅವರು ತಂಡ ಸೇರಿಕೊಂಡಿದ್ದು, ಭಾರತವು ಟಿ20 ವಿಶ್ವಕಪ್‌ಗೆ ಮುನ್ನ ತಮ್ಮ ಸಂಕಟಗಳನ್ನು ಬಗೆಹರಿಸಿಕೊಳ್ಳಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು ಅರ್ಷದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರನ್ನು ಮೂವರು ವೇಗಿಗಳಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಹವಾಮಾನ ಹೇಗಿದೆ?

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಯಾವುದೇ ಮಳೆಯ ಆತಂಕ ಇಲ್ಲ ಎಂಬ ವರದಿ ಇದೆ. ಹೀಗಾಗಿ ಮಳೆಯಿಂದ ಪಂದ್ಯದ ಯಾವುದೇ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂದು ಹವಾಮಾನ ಮುನ್ಸೂಚನೆಯ ವರದಿ ಹೇಳಿದೆ. ವಾತಾವರಣವು ಭಾಗಶಃ ಮೋಡಗಳಿಂದ ಆವೃತವಾಗಿರುತ್ತದೆ. ಪಂದ್ಯದ ವೇಳೆ ತಾಪಮಾನವು 26ರಿಂದ 28 ಡಿಗ್ರಿ ಸೆಲ್ಸಿಯಸ್‌ ಇರುವ ನಿರೀಕ್ಷೆಯಿದೆ.

ಪಿಚ್ ವರದಿ

ತಿರುವನಂತಪುರದಲ್ಲಿ ಈ ಹಿಂದೆ ಎರಡು ಅಂತಾರಾಷಷ್ಟ್ರೀಯ ಟಿ20 ಪಂದ್ಯಗಳಷ್ಟೇ ನಡೆದಿದೆ. ಆ ಪ್ರಕಾರ, ಈ ಮೈದಾನದಲ್ಲಿ ರನ್ ಮಳೆಯನ್ನು ನಿರೀಕ್ಷಿಸಬಹುದು. ಕೆಲವೊಮ್ಮೆ ಬೌಲರ್‌ಗಳು ಪ್ರಾಬಲ್ಯ ಮೆರೆಯಬಹುದು. ಆದರೆ ಇದು ಬ್ಯಾಡಿಂಗ್‌ ಪಿಚ್‌ ಆಗಿರುವುದರಿಂದ, ಬ್ಯಾಟರ್‌ಗಳ ಸ್ವರ್ಗವಾಗಲಿದೆ.

ಪಂದ್ಯದ ಸಮಯ ಮತ್ತು ನೇರಪ್ರಸಾರ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯವು ಇಂದು ಸಂಜೆ 7:00 ಗಂಟೆಗೆ ಆರಂಭವಾಗಲಿದೆ. ಪಂದ್ಯವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಮೊಬೈಲ್‌ ಮೂಲಕ ಲೈವ್ ಸ್ಟ್ರೀಮಿಂಗ್ ಅನ್ನು Disney+Hotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

ಸಂಭಾವ್ಯ ಆಡುವ ಬಳಗ

ಆರಂಭಿಕರು: ರೋಹಿತ್ ಶರ್ಮಾ, ಕೆಎಲ್ ರಾಹುಲ್

ಅಗ್ರ ಮತ್ತು ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್

ಪವರ್ ಹಿಟ್ಟರ್ಸ್: ರಿಷಬ್ ಪಂತ್, ದಿನೇಶ್ ಕಾರ್ತಿಕ್

ಸ್ಪಿನ್ ಆಯ್ಕೆಗಳು: ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್

ಪೇಸ್ ಆಯ್ಕೆಗಳು: ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರ

    ಹಂಚಿಕೊಳ್ಳಲು ಲೇಖನಗಳು