logo
ಕನ್ನಡ ಸುದ್ದಿ  /  ಕ್ರೀಡೆ  /  Psl Final: ಒಂದು ರನ್ ಅಂತರದಿಂದ ಮುಲ್ತಾನ್ ಸುಲ್ತಾನ್ಸ್ ಮಣಿಸಿ ಪಿಎಸ್‌ಎಲ್ ಟ್ರೋಫಿ ಉಳಿಸಿಕೊಂಡ ಲಾಹೋರ್ ಖಲಂದರ್ಸ್

PSL Final: ಒಂದು ರನ್ ಅಂತರದಿಂದ ಮುಲ್ತಾನ್ ಸುಲ್ತಾನ್ಸ್ ಮಣಿಸಿ ಪಿಎಸ್‌ಎಲ್ ಟ್ರೋಫಿ ಉಳಿಸಿಕೊಂಡ ಲಾಹೋರ್ ಖಲಂದರ್ಸ್

HT Kannada Desk HT Kannada

Mar 19, 2023 07:15 AM IST

ಲಾಹೋರ್ ಖಲಂದರ್ಸ್ ಚಾಂಪಿಯನ್

    • ಕಳೆದ ಆವೃತ್ತಿಯಲ್ಲೂ ಈ ಎರಡು ತಂಡಗಳು ಫೈನಲ್‌ನಲ್ಲಿ ಆಡಿದ್ದವು. ಆಗಲೂ ಲಾಹೋರ್‌ ತಂಡ ಗೆದ್ದಿತ್ತು. ಈ ವರ್ಷವೂ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಈ ವರ್ಷದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಮುಲ್ತಾನ್ ವಿರುದ್ಧ ಲಾಹೋರ್ ಒಂದು ರನ್ ಗೆಲುವಿನೊಂದಿಗೆ ಪ್ರಾರಂಭಿಸಿತ್ತು.‌
ಲಾಹೋರ್ ಖಲಂದರ್ಸ್ ಚಾಂಪಿಯನ್
ಲಾಹೋರ್ ಖಲಂದರ್ಸ್ ಚಾಂಪಿಯನ್ (‌AFP)

ಐಪಿಎಲ್‌ನಂತೆಯೇ ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಸೂಪರ್ ಲೀಗ್‌ (Pakistan Super League)ನ ಈ ಆವೃತ್ತಿಯು ರೋಚಕವಾಗಿ ಅಂತ್ಯಗೊಂಡಿತು. ಫೈನಲ್‌ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ (Multan Sultans) ವಿರುದ್ಧ ಹಾಲಿ ಚಾಂಪಿಯನ್ ಲಾಹೋರ್ ಖಲಂದರ್ಸ್ (Lahore Qalandars) ತಂಡವು ಕೊನೆಯ ಎಸೆತದಲ್ಲಿ ಒಂದು ರನ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಆ ಮೂಲಕ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ತಂಡವಾಯಿತು.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಮೊದಲು ಬ್ಯಾಟಿಂಗ್‌ ಮಾಡಿದ ಶಾಹೀನ್‌ ಅಫ್ರಿದಿ ನೇತೃತ್ವದ ಲಾಹೋರ್‌, 6 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನತ್ತಿದ ಮೊಹಮ್ಮದ್‌ ರಿಜ್ವಾನ್‌ ನೇತೃತ್ವದ ಮುಲ್ತಾನ್‌ ಸುಲ್ತಾನ್ಸ್‌, 8 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿ ಸೋಲೊಪ್ಪಿತು. ಕೊನೆಯ ಎಸೆತದಲ್ಲಿ ತಂಡಕ್ಕೆ ನಾಲ್ಕು ರನ್‌ಗಳ ಅಗತ್ಯವಿತ್ತು. ಈ ವೇಳೆ ಎರಡು ರನ್‌ ಓಡಿದ ಖುಶ್ದಿಲ್‌, ಮೂರನೇ ರನ್‌ ಕದಿಯುವಾಗ ರನೌಟ್‌ ಆದರು. ಹೀಗಾಗಿ ಲಾಹೋರ್‌ ತಂಡವು ಕೇವಲ ಒಂದು ರನ್‌ ಅಂತರದಿಂದ ರೋಚಕವಾಗಿ ಗೆದ್ದಿತು.

ಪಂದ್ಯದಲ್ಲಿ ನಾಯಕನ ಆಟವಾಡಿದ ಶಾಹೀನ್ ಶಾ ಆಫ್ರಿದಿ, ಆಲ್‌ರೌಂಡ್ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ನಲ್ಲಿ ಕೇವಲ 15 ಎಸೆತಗಳಲ್ಲಿ ಅಜೇಯ 44 ರನ್‌ ಗಳಿಸಿದ ಅವರು, ತಂಡದ ಮೊತ್ತವನ್ನು ಹಿಗ್ಗಿಸಿದರು. ನಂತರ ಎಡಗೈ ವೇಗಿಯು ಡೆತ್ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವಿಶೇಷವೆಂದರೆ, ಕಳೆದ ಆವೃತ್ತಿಯಲ್ಲೂ ಈ ಎರಡು ತಂಡಗಳು ಫೈನಲ್‌ನಲ್ಲಿ ಆಡಿದ್ದವು. ಆಗಲೂ ಲಾಹೋರ್‌ ತಂಡ ಗೆದ್ದಿತ್ತು. ಈ ವರ್ಷವೂ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಈ ವರ್ಷದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಮುಲ್ತಾನ್ ವಿರುದ್ಧ ಲಾಹೋರ್ ಒಂದು ರನ್ ಗೆಲುವಿನೊಂದಿಗೆ ಪ್ರಾರಂಭಿಸಿತ್ತು.‌ ಈಗ ಫೈನಲ್‌ ಪಂದ್ಯ ಕೂಡಾ ಅದೇ ರೀತಿ ಅಂತ್ಯಗೊಂಡಿದೆ. ಮುಲ್ತಾನ್ ಕ್ವಾಲಿಫೈಯರ್‌ನಲ್ಲಿ ಲಾಹೋರ್ ತಂಡವನ್ನು ಸೋಲಿಸುವ ಮೊದಲು ಲಾಹೋರ್ ತನ್ನ ಎಲಿಮಿನೇಷನ್ ಪಂದ್ಯದಲ್ಲಿ ಪೇಶಾವರ್ ಝಲ್ಮಿಯನ್ನು ಸೋಲಿಸಿತ್ತು.

ಲಾಹೋರ್‌ ಪರ ಶಫೀಕ್‌ 65 ರನ್‌ ಗಳಿಸಿದರೆ, ಫಕರ್‌ ಝಮನ್‌ 39 ರನ್‌ ಗಳಿಸಿದರು. ಸುಲ್ತಾನ್ಸ್‌ ಪರ ಉಸಾಮಾ ಮಿರ್‌ ಮೂರು ವಿಕೆಟ್‌ ಪಡೆದರು. ಮತ್ತೊಂದೆಡೆ ಚೇಸಿಂಗ್‌ ವೇಳೆ ಮುಲ್ತಾನ್‌ ಪರ ರೋಸ್ಸೋ ಅರ್ಧಶತಕ ಗಳಸಿದರೆ, ನಾಯಕ ರಿಜ್ವಾನ್‌ 34 ರನ್‌ ಗಳಿಸಿದರು.

ಪಂದ್ಯಾವಳಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 550 ರನ್‌ ಗಳಿಸಿದ ರಿಜ್ವಾನ್ ಪಂದ್ಯಾವಳಿಯ ಬ್ಯಾಟರ್‌ ಆಗಿ ಹೊರಹೊಮ್ಮಿದರು.

ಪಂದ್ಯಾವಳಿಯ ಬ್ಯಾಟರ್: ಮೊಹಮ್ಮದ್ ರಿಜ್ವಾನ್

ಟೂರ್ನಿಯ ಬೌಲರ್: ಇಹ್ಸಾನುಲ್ಲಾ

ಟೂರ್ನಿಯ ಆಲ್ ರೌಂಡರ್: ಇಮಾದ್ ವಾಸಿಂ

ಪಂದ್ಯಾವಳಿಯ ಫೀಲ್ಡರ್: ಕೀರಾನ್ ಪೊಲಾರ್ಡ್

ಪಂದ್ಯಾವಳಿಯ ವಿಕೆಟ್‌ಕೀಪರ್: ರಿಜ್ವಾನ್

ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ಪೇಶಾವರ್ ಝಲ್ಮಿ

ಟೂರ್ನಿಯ ಉದಯೋನ್ಮುಖ ಆಟಗಾರ: ಅಬ್ಬಾಸ್ ಅಫ್ರಿದಿ

ಪಂದ್ಯಾವಳಿಯ ಅಂಪೈರ್: ಅಲೆಕ್ಸ್ ವಾರ್ಫ್

    ಹಂಚಿಕೊಳ್ಳಲು ಲೇಖನಗಳು