logo
ಕನ್ನಡ ಸುದ್ದಿ  /  ಕ್ರೀಡೆ  /  Match-fixing In 2022: ಕ್ರಿಕೆಟ್​, ಫುಟ್ಬಾಲ್​ ಸೇರಿ ಪ್ರಮುಖ ಕ್ರೀಡೆಗಳಲ್ಲಿ ಭಾರಿ ಫಿಕ್ಸಿಂಗ್.. ವರದಿಯಲ್ಲಿ ಬಯಲಾದ್ವು ಪ್ರಮುಖ ಅಂಶಗಳು!

Match-Fixing in 2022: ಕ್ರಿಕೆಟ್​, ಫುಟ್ಬಾಲ್​ ಸೇರಿ ಪ್ರಮುಖ ಕ್ರೀಡೆಗಳಲ್ಲಿ ಭಾರಿ ಫಿಕ್ಸಿಂಗ್.. ವರದಿಯಲ್ಲಿ ಬಯಲಾದ್ವು ಪ್ರಮುಖ ಅಂಶಗಳು!

HT Kannada Desk HT Kannada

Mar 25, 2023 02:21 PM IST

ಫಿಕ್ಸಿಂಗ್​​

  • ಫಿಕ್ಸಿಂಗ್​ ಎಂಬ ಮಾತು ಕೇಳಿದರೆ ಕ್ರಿಕೆಟ್​ ಮೇಲೆ ಬೊಟ್ಟು ಮಾಡುತ್ತಿದ್ದವರೇ ಹೆಚ್ಚು. ಆದರೆ ಕ್ರಿಕೆಟ್​​ಗಿಂತ ಇತರೆ ಕ್ರೀಡೆಗಳಲ್ಲೇ ಹೆಚ್ಚಿನ ಫಿಕ್ಸಿಂಗ್​​​ ನಡೆದಿರುವ ಬಗ್ಗೆ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆ ಸ್ಪೋರ್ಟ್ಸ್ ರಾಡಾರ್ ವರದಿಯಲ್ಲಿ ಪತ್ತೆಯಾಗಿದೆ.

ಫಿಕ್ಸಿಂಗ್​​
ಫಿಕ್ಸಿಂಗ್​​ (Anandabazar/Website)

ಕ್ರೀಡಾ ಲೋಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​, ಫುಟ್​ಬಾಲ್​, ಟೆನಿಸ್​, ಬಾಸ್ಕೆಟ್​ ಬಾಲ್​ ಸೇರಿದಂತೆ ಪ್ರಮುಖ ಕ್ರೀಡೆಗಳಿಗೆ ಫಿಕ್ಸಿಂಗ್​​​​​​​​​​​ ಭೂತ ಬಡಿದಪ್ಪಳಿಸಿದೆ. ಕಳೆದ ವರ್ಷ ದೊಡ್ಡಮಟ್ಟದಲ್ಲಿ ಫಿಕ್ಸಿಂಗ್​ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆ ಸ್ಪೋರ್ಟ್ಸ್ ರಾಡಾರ್, ತನ್ನ ವರದಿಯಲ್ಲಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಸ್ವಿಟ್ಜರ್​​ಲೆಂಡ್​​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ ತನ್ನ ವರದಿಯಲ್ಲಿ ಫಿಕ್ಸಿಂಗ್​​​​​ ವಿಷಯಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಇಡೀ ಕ್ರೀಡಾ ಲೋಕವೇ ಒಂದು ಕ್ಷಣ ತಲ್ಲಣಗೊಂಡಿದೆ. ಈ ಸಂಚಲನ ಸುದ್ದಿ, ಫಿಕ್ಸಿಂಗ್​​​ ಇನ್ನೂ ಜೀವಂತವಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಫಿಕ್ಸಿಂಗ್​ ಎಂಬ ಮಾತು ಕೇಳಿದರೆ ಕ್ರಿಕೆಟ್​ ಮೇಲೆ ಬೊಟ್ಟು ಮಾಡುತ್ತಿದ್ದವರೇ ಹೆಚ್ಚು. ಆದರೆ ಕ್ರಿಕೆಟ್​​ಗಿಂತ ಇತರೆ ಕ್ರೀಡೆಗಳಲ್ಲೇ ಹೆಚ್ಚಿನ ಫಿಕ್ಸಿಂಗ್​​​ ನಡೆದಿರುವ ಬಗ್ಗೆ ಈ ವರದಿಯಲ್ಲಿ ಪತ್ತೆಯಾಗಿದೆ.

ಫಿಕ್ಸಿಂಗ್​ಗೆ ಸಂಬಂಧಿಸಿ 28 ಪುಟಗಳಲ್ಲಿ ವರದಿ ಸಿದ್ಧಪಡಿಸಿದೆ. ಒಟ್ಟು 92 ದೇಶಗಳಲ್ಲಿ ನಡೆಸಲಾದ ಈ ವರದಿಯು, 12 ಕ್ರೀಡೆಗಳಿಗೆ ಸಂಬಂಧಿಸಿದ ಪಂದ್ಯಗಳನ್ನು ಒಳಗೊಂಡಿದೆ. ಅದರ ಪ್ರಕಾರ ವಿವಿಧ ಕ್ರೀಡೆಗಳ ಒಟ್ಟು 1212 ಪಂದ್ಯಗಳ ಮೇಲೆ ಅನುಮಾನ ವ್ಯಕ್ತವಾಗಿರುವ ಕುರಿತು ಮಾಹಿತಿ ಹೇಳಿದೆ. ಆದರೆ, ವಿಶ್ವದ ಶ್ರೀಮಂತ ಕ್ರೀಡೆ ಫುಟ್​ಬಾಲ್​​​​ ಪಂದ್ಯಗಳ ಮೇಲೆಯೇ ಹೆಚ್ಚು ಅನುಮಾನ ವ್ಯಕ್ತವಾಗಿರುವುದು ಕಾಲ್ಚೆಂಡು ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ.

ಭ್ರಷ್ಟಾಚಾರ, ಬೆಟ್ಟಿಂಗ್ ಮತ್ತು ಫಿಕ್ಸಿಂಗ್​ ನಡೆದಿರುವ ಅನುಮಾನ ವ್ಯಕ್ತಪಡಿಸಿ ಈ (1,212) ಪಂದ್ಯಗಳ ಮೇಲೆ ಒಂದು ಕಣ್ಣಿಡಲಾಗಿತ್ತು ಎಂದು ಸ್ಪೋರ್ಟ್ಸ್ ರಾಡಾರ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಒಟ್ಟು 775 ಫುಟ್​ಬಾಲ್​​ ಪಂದ್ಯಗಳ ಮೇಲೆ ಅನುಮಾನ ಬಂದಿದೆ. ಫುಟ್‌ಬಾಲ್ ನಂತರ ಬಾಸ್ಕೆಟ್ ​ಬಾಲ್​ ಎರಡನೇ ಸ್ಥಾನದಲ್ಲಿದ್ದು, ಒಟ್ಟು 220 ಪಂದ್ಯಗಳನ್ನು ನಿಗದಿಪಡಿಸಲಾಗಿದೆ. 3ನೇ ಸ್ಥಾನದಲ್ಲಿರುವ ಟೆನಿಸ್​ ಆಟದಲ್ಲೂ 75 ಅನುಮಾನಾಸ್ಪದ ಪಂದ್ಯಗಳು ನಡೆದಿವೆ ಎಂದು ಹೇಳಿದೆ.

ಕ್ರಿಕೆಟ್​​ನಲ್ಲಿ 13 ಕ್ರಿಕೆಟ್​ ಪಂದ್ಯಗಳು.!

ಈ ವರದಿ ಪ್ರಕಾರ ಕ್ರಿಕೆಟ್​ನಲ್ಲಿ ಕೇವಲ 13 ಪಂದ್ಯಗಳ ಮೇಲಷ್ಟೇ ಅನುಮಾನ ವ್ಯಕ್ತವಾಗಿದೆಯಂತೆ. ಹಲವು ವರ್ಷಗಳ ಹಿಂದೆ ಕ್ರಿಕೆಟ್​​ನಲ್ಲೂ ಮ್ಯಾಚ್​ ಫಿಕ್ಸಿಂಗ್​, ಬೆಟ್ಟಿಂಗ್​​ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಇದು ಕ್ರಿಕೆಟ್​​ ಲೋಕಕ್ಕೆ ಒಂದು ಕಪ್ಪು ಚುಕ್ಕೆಯಾಗಿತ್ತು. ಆಗ ಐಸಿಸಿ ಕಠಿಣ ಕ್ರಮಕ್ಕೆ ಮುಂದಾಯಿತು. ಈ ಪ್ರಕರಣಗಳಲ್ಲಿ ಭಾಗಿಯಾದ ಆಟಗಾರರು ಮತ್ತು ಇತರರಿಗೆ ನಿಷೇಧ ಹೇರಿತು. ಜೈಲಿಗೂ ಕಳುಹಿಸುತ್ತಿತ್ತು. ಭಾರೀ ದಂಡ ವಿಧಿಸುತ್ತಿತ್ತು. ಈ ಕಾರಣಗಳಿಂದ ಹವ್ಯಾಹತವಾಗಿ ನಡೆಯುತ್ತಿದ್ದ ಬೆಟ್ಟಿಂಗ್​ ಈಗ ತೀವ್ರ ಕುಸಿತ ಕಂಡಿದೆ. ಹಾಗಂತ ಕಡಿಯಾಗಿದೆ ಎಂದಲ್ಲ ಎಂಬುದು ತಜ್ಞರ ಅಭಿಪ್ರಾಯ.

ಸ್ಪೋರ್ಟ್ಸ್ ರಾಡಾರ್ ಪ್ರಕಾರ, ಯೂರೋಪ್‌ ಒಂದರಲ್ಲೇ 630 ಅನುಮಾನಾಸ್ಪದ ಪಂದ್ಯಗಳು ನಡೆದಿವೆಯಂತೆ. ನಂತರ ಏಷ್ಯಾ (240), ದಕ್ಷಿಣ ಅಮೇರಿಕಾ (225), ಆಫ್ರಿಕಾ (93) ಮತ್ತು ಉತ್ತರ ಅಮೆರಿಕ (24) ಸ್ಥಾನ ಪಡೆದಿವೆ. 2021 ವರ್ಷಕ್ಕೆ ಹೋಲಿಸಿದರೆ, ಭ್ರಷ್ಟಾಚಾರ ಮತ್ತು ಮ್ಯಾಚ್ ಫಿಕ್ಸಿಂಗ್ 2022ರಲ್ಲಿ ಭಾರಿ​​ ಏರಿಕೆ ಕಂಡಿದೆ. 2021 ರಲ್ಲಿ 905 ಅನುಮಾನಸ್ಪದ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಅವುಗಳ ಸಂಖ್ಯೆ 1,212 ಕ್ಕೆ ಹೆಚ್ಚಾಗಿದೆ.

ನಿಯಮಗಳು ಕಠಿಣವಾಗಿದ್ದರೂ ಫಿಕ್ಸರ್​​ಗಳಿಗೆ ತಕ್ಕ ಶಿಕ್ಷೆಯಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಕಳೆದ ಎರಡು ದಶಕಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ವಿಶೇಷವಾಗಿ 90 ಮತ್ತು 2000 ರ ದಶಕದಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ವಿಶ್ವ ಕ್ರಿಕೆಟ್‌ನಲ್ಲಿ ಅಳಿಸಲಾಗದ ಗುರುತಾಗಿ ಉಳಿದಿವೆ. ದಿಗ್ಗಜ ಕ್ರಿಕೆಟಿಗರೇ ಫಿಕ್ಸಿಂಗ್ ಆರೋಪಗಳಿಂದ ವೃತ್ತಿಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರಪಂಚದ ಮುಂದೆ ತಪ್ಪಿತಸ್ಥರಾಗಿ ನಿಂತಿದ್ದಾರೆ. ಮುಂದೆಯಾದರೂ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿ ಅನ್ನೋದೇ ನಮ್ಮೆಲ್ಲರ ಆಶಯ.

    ಹಂಚಿಕೊಳ್ಳಲು ಲೇಖನಗಳು