FIFA Best Men's Player Award: ಫಿಫಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೆಸ್ಸಿ, ಎಂಬಪ್ಪೆ; ರೊನಾಲ್ಡೊಗಿಲ್ಲ ಸ್ಥಾನ
Jan 13, 2023 10:06 AM IST
ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ
- ಐದು ಬಾರಿ ಬ್ಯಾಲನ್ ಡಿ ಓರ್ ವಿಜೇತ ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾದ ಅತ್ಯುತ್ತಮ ಪುರುಷರ ಆಟಗಾರರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 2022ರ ಫಿಫಾ ವಿಶ್ವಕಪ್ಗೂ ಮುಂಚಿತವಾಗಿ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ನಿಂದ ಬೇರ್ಪಟ್ಟರು. ಫಿಫಾ ವಿಶ್ವಕಪ್ನಲ್ಲಿ ಸೋಲಿನ ಬಳಿಕ ಸೌದಿ ಅರೇಬಿಯಾದ ಕ್ಲಬ್ ಆದ ಅಲ್ ನಸರ್ಗೆ ಸೇರಿದರು.
ಕತಾರ್ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಫೈನಲ್ ನಡೆದು, ಅರ್ಜೆಂಟೀನಾ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಮಿಂಚಿದ ಎರಡು ತಂಡಗಳ ಸೂಪರ್ಸ್ಟಾರ್ಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಅವರು ಫಿಫಾ ಅತ್ಯುತ್ತಮ ಪುರುಷರ ಆಟಗಾರ ಪ್ರಶಸ್ತಿ 2022ಕ್ಕೆ ನಾಮನಿರ್ದೇಶನಗೊಂಡಿದ್ದಾರೆ.
ಫಿಫಾವು ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. 14 ಸದಸ್ಯರ ಪಟ್ಟಿಯಲ್ಲಿ ಅರ್ಜೆಂಟೀನಾದಿಂದ ನಾಯಕ ಮೆಸ್ಸಿ ಮತ್ತು ಜೂಲಿಯನ್ ಅಲ್ವಾರೆಜ್ ಇಬ್ಬರು ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ಕತಾರ್ನಲ್ಲಿ ಅರ್ಜೆಂಟೀನಾವನ್ನು ತನ್ನ ಮೂರನೇ ಫಿಫಾ ವಿಶ್ವಕಪ್ ಪ್ರಶಸ್ತಿ ಗೆಲ್ಲುವಂತೆ ಮುನ್ನಡೆಸಿ ಮೆಸ್ಸಿ, ಈ ಋತುವಿನಲ್ಲಿ ಪ್ರಸಿದ್ಧ ಟ್ರೋಫಿ ಎತ್ತುವ ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಮೆಸ್ಸಿ 2019ರಲ್ಲಿ ಅತ್ಯುತ್ತಮ FIFA ಪುರುಷರ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅರ್ಜೆಂಟೀನಾ ನಾಯಕ ಮೆಸ್ಸಿ ಜೊತೆಗೆ, ಫ್ರೆಂಚ್ ಆಟಗಾರ ಎಂಬಪ್ಪೆ ಮತ್ತು ಬ್ರೆಜಿಲ್ನ ನೇಮಾರ್ ಪುರುಷರ ವಿಭಾಗದಲ್ಲಿ ನೆಚ್ಚಿನ ಆಟಗಾರರಾಗಿದ್ದಾರೆ. ಕೆವಿನ್ ಡಿ ಬ್ರೂಯ್ನೆ, ರಾಬರ್ಟ್ ಲೆವಾಂಡೋವ್ಸ್ಕಿ, ಮೊಹಮ್ಮದ್ ಸಲಾಹ್ ಮತ್ತು ಲುಕಾ ಮೊಡ್ರಿಕ್ ಅವರೊಂದಿಗೆ ಬ್ಯಾಲನ್ ಡಿ ಓರ್ ಗೆದ್ದಿರುವ ಕರೀಮ್ ಬೆಂಜೆಮಾ ಕೂಡ ಅತ್ಯುತ್ತಮ ಫಿಫಾ ಪುರುಷರ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ರೊನಾಲ್ಡೊಗೆ ಇಲ್ಲ ಸ್ಥಾನ
ಐದು ಬಾರಿ ಬ್ಯಾಲನ್ ಡಿ ಓರ್ ವಿಜೇತ ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾದ ಅತ್ಯುತ್ತಮ ಪುರುಷರ ಆಟಗಾರರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 2022ರ ಫಿಫಾ ವಿಶ್ವಕಪ್ಗೂ ಮುಂಚಿತವಾಗಿ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ನಿಂದ ಬೇರ್ಪಟ್ಟರು. ಫಿಫಾ ವಿಶ್ವಕಪ್ನಲ್ಲಿ ಸೋಲಿನ ಬಳಿಕ ಸೌದಿ ಅರೇಬಿಯಾದ ಕ್ಲಬ್ ಆದ ಅಲ್ ನಸರ್ಗೆ ಸೇರಿದರು.
ಅರ್ಜೆಂಟೀನಾದ ಫಿಫಾ ವಿಶ್ವಕಪ್ ವಿಜೇತ ತಂಡದ ಮುಖ್ಯ ಕೋಚ್ ಲಿಯೋನೆಲ್ ಸ್ಕಾಲೋನಿ, ಫ್ರಾನ್ಸ್ ಬಾಸ್ ಡಿಡಿಯರ್ ಡೆಸ್ಚಾಂಪ್ಸ್ ಮತ್ತು ಮೊರಾಕ್ಕೊ ಮ್ಯಾನೇಜರ್ ವಾಲಿದ್ ರೆಗ್ರಾಗುಯಿ, ರಿಯಲ್ ಮ್ಯಾಡ್ರಿಡ್ ಕೋಚ್ ಕಾರ್ಲೊ ಅನ್ಸೆಲೊಟ್ಟಿ ಮತ್ತು ಮ್ಯಾಂಚೆಸ್ಟರ್ ಸಿಟಿಯ ಪೆಪ್ ಗಾರ್ಡಿಯೊಲಾ ಅವರು ಅತ್ಯುತ್ತಮ ಫಿಫಾ ಪುರುಷರ ಕೋಚ್ ವಿಭಾಗದಲ್ಲಿ ಶಾರ್ಟ್ಲಿಸ್ಟ್ ಆಗಿದ್ದಾರೆ.
ಫಿಫಾ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು:
- ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ / ರಿವರ್ ಪ್ಲೇಟ್ / ಮ್ಯಾಂಚೆಸ್ಟರ್ ಸಿಟಿ ಎಫ್ಸಿ)
- ಜೂಡ್ ಬೆಲ್ಲಿಂಗ್ಹ್ಯಾಮ್ (ಇಂಗ್ಲೆಂಡ್ / ಬಿವಿ ಬೊರುಸ್ಸಿಯಾ 09 ಡಾರ್ಟ್ಮಂಡ್)
- ಕರೀಮ್ ಬೆಂಜೆಮಾ (ಫ್ರಾನ್ಸ್ / ರಿಯಲ್ ಮ್ಯಾಡ್ರಿಡ್ ಸಿಎಫ್)
- ಕೆವಿನ್ ಡಿ ಬ್ರೂಯ್ನೆ (ಬೆಲ್ಜಿಯಂ / ಮ್ಯಾಂಚೆಸ್ಟರ್ ಸಿಟಿ ಎಫ್ಸಿ)
- ಎರ್ಲಿಂಗ್ ಹಾಲೆಂಡ್ (ನಾರ್ವೆ / ಬಿವಿ ಬೊರುಸ್ಸಿಯಾ 09 ಡಾರ್ಟ್ಮಂಡ್ / ಮ್ಯಾಂಚೆಸ್ಟರ್ ಸಿಟಿ ಎಫ್ಸಿ)
- ಅಚ್ರಾಫ್ ಹಕಿಮಿ (ಮೊರಾಕೊ / ಪ್ಯಾರಿಸ್ ಸೇಂಟ್-ಜರ್ಮೈನ್)
- ರಾಬರ್ಟ್ ಲೆವಾಂಡೋವ್ಸ್ಕಿ (ಪೋಲೆಂಡ್ / ಎಫ್ಸಿ ಬೇಯರ್ನ್ ಮುಂಚೆನ್ / ಎಫ್ಸಿ ಬಾರ್ಸಿಲೋನಾ)
- ಸಾಡಿಯೊ ಮಾನೆ (ಸೆನೆಗಲ್ / ಲಿವರ್ಪೂಲ್ ಎಫ್ಸಿ / ಎಫ್ಸಿ ಬೇಯರ್ನ್ ಮುಂಚೆನ್)
- ಕೈಲಿಯನ್ ಎಂಬಪ್ಪೆ (ಫ್ರಾನ್ಸ್ / ಪ್ಯಾರಿಸ್ ಸೇಂಟ್-ಜರ್ಮೈನ್)
- ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ / ಪ್ಯಾರಿಸ್ ಸೇಂಟ್-ಜರ್ಮೈನ್)
- ಲುಕಾ ಮೊಡ್ರಿಕ್ (ಕ್ರೊಯೇಷಿಯಾ / ರಿಯಲ್ ಮ್ಯಾಡ್ರಿಡ್ ಸಿಎಫ್)
- ನೇಮರ್ (ಬ್ರೆಜಿಲ್ / ಪ್ಯಾರಿಸ್ ಸೇಂಟ್-ಜರ್ಮೈನ್)
- ಮೊಹಮ್ಮದ್ ಸಲಾಹ್ (ಈಜಿಪ್ಟ್ / ಲಿವರ್ಪೂಲ್ ಎಫ್ಸಿ)
- ವಿನಿಸಿಯಸ್ ಜೂನಿಯರ್ (ಬ್ರೆಜಿಲ್ / ರಿಯಲ್ ಮ್ಯಾಡ್ರಿಡ್ ಸಿಎಫ್)
ಫಿಫಾ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು
- ಐತಾನಾ ಬೊನ್ಮಾಟಿ (ಸ್ಪೇನ್ / FC ಬಾರ್ಸಿಲೋನಾ)
- ಡೆಬಿನ್ಹಾ (ಬ್ರೆಜಿಲ್ / ನಾರ್ತ್ ಕೆರೊಲಿನಾ ಕರೇಜ್)
- ಜೆಸ್ಸಿ ಫ್ಲೆಮಿಂಗ್ (ಕೆನಡಾ / ಚೆಲ್ಸಿಯಾ ಎಫ್ಸಿ ವಿಮೆನ್)
- ಅದಾ ಹೆಗರ್ಬರ್ಗ್ (ನಾರ್ವೆ / ಒಲಿಂಪಿಕ್ ಲಿಯೋನೈಸ್)
- ಸ್ಯಾಮ್ ಕೆರ್ (ಆಸ್ಟ್ರೇಲಿಯಾ / ಚೆಲ್ಸಿಯಾ ಎಫ್ಸಿ ವಿಮೆನ್)
- ಬೆತ್ ಮೀಡ್ (ಇಂಗ್ಲೆಂಡ್ / ಆರ್ಸೆನಲ್ WFC)
- ವಿವಿಯಾನ್ನೆ ಮಿಡೆಮಾ (ನೆದರ್ಲ್ಯಾಂಡ್ಸ್ / ಆರ್ಸೆನಲ್ WFC)
- ಅಲೆಕ್ಸ್ ಮೋರ್ಗನ್ (ಯುಎಸ್ಎ / ಒರ್ಲ್ಯಾಂಡೊ ಪ್ರೈಡ್ / ಸ್ಯಾನ್ ಡಿಯಾಗೋ ವೇವ್)
- ಲೆನಾ ಒಬರ್ಡಾರ್ಫ್ (ಜರ್ಮನಿ / ವಿಎಫ್ಎಲ್ ವೋಲ್ಫ್ಸ್ಬರ್ಗ್)
- ಅಲೆಕ್ಸಾಂಡ್ರಾ ಪಾಪ್ (ಜರ್ಮನಿ / ವಿಎಫ್ಎಲ್ ವೋಲ್ಫ್ಸ್ಬರ್ಗ್)
- ಅಲೆಕ್ಸಿಯಾ ಪುಟೆಲ್ಲಾಸ್ (ಸ್ಪೇನ್ / FC ಬಾರ್ಸಿಲೋನಾ)
- ವೆಂಡಿ ರೆನಾರ್ಡ್ (ಫ್ರಾನ್ಸ್ / ಒಲಿಂಪಿಕ್ ಲಿಯೊನೈಸ್)
- ಕೀರಾ ವಾಲ್ಷ್ (ಇಂಗ್ಲೆಂಡ್ / ಮ್ಯಾಂಚೆಸ್ಟರ್ ಸಿಟಿ WFC / FC ಬಾರ್ಸಿಲೋನಾ)
- ಲೇಹ್ ವಿಲಿಯಮ್ಸನ್ (ಇಂಗ್ಲೆಂಡ್ / ಆರ್ಸೆನಲ್ WFC)
ಅಸೋಸಿಯೇಷನ್ ಫುಟ್ಬಾಲ್ನ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯು ಫೆಬ್ರವರಿ ಆರಂಭದಲ್ಲಿ ಏಳು ವಿಭಾಗಗಳಲ್ಲಿ ಪ್ರತಿಯೊಂದರಲ್ಲೂ ಮೂರು ಅಂತಿಮ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲಿದೆ. ಫೆಬ್ರವರಿ 27ರಂದು ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.