logo
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಆರ್‌ಸಿಬಿಗೆ ಆನೆಬಲ; ವಿಲ್ ಜಾಕ್ಸ್ ಬದಲಿಗೆ ಬೆಂಗಳೂರು ತಂಡ ಸೇರಿಕೊಂಡ ಕಿವೀಸ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್

IPL 2023: ಆರ್‌ಸಿಬಿಗೆ ಆನೆಬಲ; ವಿಲ್ ಜಾಕ್ಸ್ ಬದಲಿಗೆ ಬೆಂಗಳೂರು ತಂಡ ಸೇರಿಕೊಂಡ ಕಿವೀಸ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್

HT Kannada Desk HT Kannada

Mar 18, 2023 01:00 PM IST

ಮೈಕೆಲ್ ಬ್ರೇಸ್‌ವೆಲ್

    • RCB ತಂಡವು ಏಪ್ರಿಲ್ 2ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2023ರ ಐಪಿಎಲ್‌ ಅಭಿಯಾನವನ್ನು ಪ್ರಾರಂಭಿಸಲಿದೆ.
ಮೈಕೆಲ್ ಬ್ರೇಸ್‌ವೆಲ್
ಮೈಕೆಲ್ ಬ್ರೇಸ್‌ವೆಲ್

ನ್ಯೂಜಿಲೆಂಡ್ ತಂಡದ ಸ್ಟಾರ್‌ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರನ್ನು ನಿರೀಕ್ಷೆಯಂತೆಯೇ ಆರ್‌ಸಿಬಿ ತಂಡವು ತನ್ನ ಬಳಗ ಸೇರಿಸಿಕೊಂಡಿದೆ. ಆರ್‌ಸಿಬಿಯು ಹರಾಜಿನಲ್ಲಿ ಖರೀದಿಸಿದ್ದ ವಿಲ್ ಜಾಕ್ಸ್ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಐಪಿಎಲ್‌ನ 2023ರ ಆವೃತ್ತಿಗೆ ಬ್ರೇಸ್‌ವೆಲ್‌ ಅವರನ್ನು ಬದಲಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಆ ಮೂಲಕ ಬೆಂಗಳೂರು ತಂಡವು ಮತ್ತಷ್ಟು ಬಲಿಷ್ಠವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಮೀರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ, ಇಂಗ್ಲೆಂಡ್‌ ಆಟಗಾರ ಜಾಕ್ಸ್ ಗಾಯಗೊಂಡಿದ್ದರು. ಆ ಬಳಿಕ ಅವರು ತಂಡದಿಂದ ಹೊರಬಿದ್ದರು. ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಜಾಕ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 3.2 ಕೋಟಿ ರೂಪಾಯಿಗೆ ಖರೀದಿಸಿತ್ತು.

"ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಆವೃತ್ತಿಗಾಗಿ ಇಂಗ್ಲೆಂಡ್ ಬ್ಯಾಟರ್ ವಿಲ್ ಜಾಕ್ಸ್ ಬದಲಿಗೆ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಖರೀದಿಸಿದೆ" ಎಂದು IPL ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಜ್ಯಾಕ್ಸ್ ಇತ್ತೀಚೆಗೆ ಎಲ್ಲಾ ಮೂರು ಸ್ವರೂಪಗಳಲ್ಲೂ ಇಂಗ್ಲೆಂಡ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. 24ರ ಹರೆಯದ ಅವರು ಐಪಿಎಲ್‌ನಿಂದ ಹೊರಗುಳಿದಿರುವುದು ಇಂಗ್ಲೆಂಡ್‌ ತಂಡಕ್ಕೂ ದುರದೃಷ್ಟಕರವಾಗಿದೆ. ಭಾರತದಲ್ಲಿ ಮುಂದೆ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ತಂಡದಲ್ಲಿ ಜ್ಯಾಕ್ಸ್ ಅವರನ್ನು ಸೇರಿಸಲು ಇಂಗ್ಲೆಂಡ್‌ ಆಯ್ಕೆ ಸಮಿತಿಗೆ ಅವಕಾಶವಿತ್ತು. ಇದೀಗ ಆ ಅವಕಾಶವನ್ನು ಜ್ಯಾಕ್ಸ್ ಹಾಗೂ ಇಂಗ್ಲೆಂಡ್ ಕಳೆದುಕೊಂಡಿದೆ.

ಜ್ಯಾಕ್ಸ್‌ ಅಲಭ್ಯರಾಗಿದ್ದು ಬ್ರೇಸ್‌ವೆಲ್‌ಗೆ ಅವಕಾಶ ನೀಡಲು ನೆರವಾಗಿದೆ. ಕಳೆದ ಬಾರಿ ಭಾರತದ ವಿರುದ್ಧದ ಹೈದರಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಬ್ರೇಸ್‌ವೆಲ್‌ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಬ್ರೇಸ್‌ವೆಲ್ ಈವರೆಗೆ 16 ಟಿ20 ಪಂದ್ಯಗಳನ್ನು ಆಡಿ 113 ರನ್ ಗಳಿಸಿದ್ದಾರೆ. ಇದರೊಂದಿಗೆ 21 ವಿಕೆಟ್‌ಗಳನ್ನು ಕೂಡಾ ಪಡೆದಿದ್ದಾರೆ. ಅವರು ತಮ್ಮ ಮೂಲ ಬೆಲೆ 1 ಕೋಟಿ ರೂಪಾಯಿಗೆ RCB ತಂಡ ಸೇರಿಕೊಳ್ಳುತ್ತಾರೆ ಎಂದು IPL ಹೇಳಿದೆ.

RCB ತಂಡವು ಏಪ್ರಿಲ್ 2ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2023ರ ಐಪಿಎಲ್‌ ಅಭಿಯಾನವನ್ನು ಪ್ರಾರಂಭಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ:

ಫಾಫ್ ಡು ಪ್ಲೆಸಿಸ್, ಫಿನ್ ಅಲೆನ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹಮದ್, ಸುಯೇಶ್ ಪ್ರಭುದೇಸಾಯಿ, ವನಿಂದು ಹಸರಂಗ, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮೈಕೆಲ್ ಬ್ರೇಸ್‌ವೆಲ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್‌, ಮನೋಜ್ ಬಾಂಡಗೆ.‌

    ಹಂಚಿಕೊಳ್ಳಲು ಲೇಖನಗಳು