logo
ಕನ್ನಡ ಸುದ್ದಿ  /  ಕ್ರೀಡೆ  /  Wpl 2023: ಆರ್‌ಸಿಬಿಗೆ ಸ್ಮೃತಿ ನಾಯಕಿ? ದೊಡ್ಡ ಮೊತ್ತದ ಖರೀದಿ ಬಳಿಕ ಮೈಕ್ ಹೆಸ್ಸನ್ ಸುಳಿವು!

WPL 2023: ಆರ್‌ಸಿಬಿಗೆ ಸ್ಮೃತಿ ನಾಯಕಿ? ದೊಡ್ಡ ಮೊತ್ತದ ಖರೀದಿ ಬಳಿಕ ಮೈಕ್ ಹೆಸ್ಸನ್ ಸುಳಿವು!

Jayaraj HT Kannada

Feb 13, 2023 06:30 PM IST

ಸ್ಮೃತಿ ಮಂಧನ

    • ಆರ್‌ಸಿಬಿ ಫ್ರಾಂಚೈಸಿಯು ಹಠಕ್ಕೆ ಬಿದ್ದವರಂತೆ ಬಿಡ್‌ನಲ್ಲಿ ಪಾಲ್ಗೊಂಡು ಸ್ಮೃತಿ ಖರೀದಿಯಲ್ಲಿ ಯಶಸ್ವಿಯಾಗಿದೆ. ಬಲಿಷ್ಠ ಹಾಗೂ ಅನುಭವಿ ಆಟಗಾರ್ತಿಯಾದ ಸ್ಮೃತಿ ಅವರನ್ನು ಆರ್‌ಸಿಬಿಯು ನಾಯಕಿಯಾಗಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ RCB ಕ್ರಿಕೆಟ್‌ನ ನಿರ್ದೇಶಕರಾಗಿರುವ ಮೈಕ್ ಹೆಸ್ಸನ್ ಸುಳಿವು ನೀಡಿದ್ದಾರೆ.
ಸ್ಮೃತಿ ಮಂಧನ
ಸ್ಮೃತಿ ಮಂಧನ (PTI)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌(WPL) 2023ರ ಹರಾಜಿಲ್ಲಿ ಸ್ಮೃತಿ ಮಂಧನ ಭಾರಿ ಮೊತ್ತಕ್ಕೆ ಆರ್‌ಸಿಬಿ ಸೇರಿಕೊಂಡಿದ್ದರೆ. ಮೊದಲನೇ ಆಗಾರ್ತಿಯಾಗಿ ಹರಾಜಾದ ಸ್ಮೃತಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಬರೋಬ್ಬರಿ 3.4 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಇದು ಪ್ರಸ್ತುತ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ದುಬಾರಿ ಮೊತ್ತದ ಖರೀದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಭಾರತದ ಆರಂಭಿಕ ಆಟಗಾರ್ತಿಯ ಮೂಲ ಬೆಲೆಯು 50 ಲಕ್ಷ ರೂಪಾಯಿಯಾಗಿತ್ತು. ಇವರ ಖರೀದಿಗೆ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ (MI) ತೀವ್ರ ಬಿಡ್ಡಿಂಗ್‌ಗೆ ಇಳಿಯಿತು. ಅಂತಿಮವಾಗಿ ತನ್ನ ಪೂರ್ವ ನಿರ್ಧರಿತ ಲೆಕ್ಕಾಚಾರದಂತೆಯೇ ಸ್ಟೈಲಿಶ್‌ ಆಟಗಾರ್ತಿಯನ್ನು ತನ್ನ ಬಳಗಕ್ಕೆ ಆರ್‌ಸಿಬಿ ಸೇರಿಸಿಕೊಂಡಿದೆ.

ಪ್ರಸ್ತುತ ಭಾರತ ಟಿ20 ವಿಶ್ವಕಪ್‌ ತಂಡದ ಭಾಗವಾಗಿರುವ ಮಂಧನ, ಪಾಕಿಸ್ತಾನದ ವಿರುದ್ಧದ ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದರು.

ಆರ್‌ಸಿಬಿ ಫ್ರಾಂಚೈಸಿಯು ಹಠಕ್ಕೆ ಬಿದ್ದವರಂತೆ ಬಿಡ್‌ನಲ್ಲಿ ಪಾಲ್ಗೊಂಡು ಸ್ಮೃತಿ ಖರೀದಿಯಲ್ಲಿ ಯಶಸ್ವಿಯಾಗಿದೆ. ಬಲಿಷ್ಠ ಹಾಗೂ ಅನುಭವಿ ಆಟಗಾರ್ತಿಯಾದ ಸ್ಮೃತಿ ಅವರನ್ನು ಆರ್‌ಸಿಬಿಯು ನಾಯಕಿಯಾಗಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ RCB ಕ್ರಿಕೆಟ್‌ನ ನಿರ್ದೇಶಕರಾಗಿರುವ ಮೈಕ್ ಹೆಸ್ಸನ್ ಸುಳಿವು ನೀಡಿದ್ದಾರೆ. ಮಂಧನ ಅವರು ಫ್ರಾಂಚೈಸಿ ಪರ ನಾಯಕತ್ವದ ಪಾತ್ರವನ್ನು ವಹಿಸಬಹುದು ಎಂದು ಹೇಳಿಕೆ ನೀಡಿದ್ದಾರೆ.

ಫ್ರಾಂಚೈಸಿಯು 26 ವರ್ಷದ ಆಟಗಾರ್ತಿಯನ್ನು ಖರೀದಿಸಿದ ಬಳಿಕ ಮಾತನಾಡಿದ ಹೆಸನ್, “ಮಂಧನ ಮತ್ತು ಪೆರ್ರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾವು ಇಂತಹ ಕೆಲ ಆಟಗಾರ್ತಿಯರನ್ನು ಖರೀದಿಸಲು ಮೊದಲೇ ನಿರ್ಧರಿಸಿದ್ದೆವು. ಅಂತಹ ಗುಣಮಟ್ಟದ ಆಟಗಾರರನ್ನು ಪಡೆಯಲು ನಾವು ತುಂಬಾ ಸಂತೋಷಪಡುತ್ತೇವೆ. ಮಂಧನ, ಪೆರ್ರಿ ಮತ್ತು ಡಿವೈನ್ ಅವರನ್ನು ನಮ್ಮ ತಂಡಕ್ಕೆ ಪಡೆಯುವುದು ನಮ್ಮ ಕನಸಾಗಿತ್ತು. ಸ್ಮೃತಿ ಅವರಿಗೆ ನಾಯಕತ್ವದ ಅನುಭವವಿದೆ. ಅಲ್ಲದೆ ಭಾರತೀಯ ಪರಿಸ್ಥಿತಿಗಳ ಬಗ್ಗೆಯೂ ಪರಿಚಿತರಾಗಿದ್ದಾರೆ. ಹೀಗಾಗಿ ಅವರು ನಾಯಕಿಯಾಗಬಹುದು,” ಎಂದು ಅವರು ಹೇಳಿದ್ದಾರೆ.

ಈವರೆಗೆ 112 ಟಿ20 ಪಂದ್ಯಗಳಲ್ಲಿ, ಮಂಧನ 123.13 ಸ್ಟ್ರೈಕ್ ರೇಟ್‌ನಲ್ಲಿ 2651 ರನ್‌ ದಾಖಲಿಸಿದ್ದಾರೆ. ಇದರಲ್ಲಿ 86 ಅತಿ ಹೆಚ್ಚು ಸ್ಕೋರ್. ಟಿ20 ವೃತ್ತಿಜೀವನದಲ್ಲಿ ಅವರು 20 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ 77 ಏಕದಿನ ಮತ್ತು ನಾಲ್ಕು ಟೆಸ್ಟ್‌ಗಳಲ್ಲಿ ಕ್ರಮವಾಗಿ 3,073 ಮತ್ತು 325 ರನ್‌ಗಳನ್ನು ದಾಖಲಿಸಿದ್ದಾರೆ.

ಇವರ ಹೊರತಾಗಿ ಆರ್‌ಸಿಬಿಯು ಎಲ್ಲಿಸ್ ಪೆರ್ರಿ ಮತ್ತು ರೇಣುಕಾ ಸಿಂಗ್ ಅವರನ್ನು ಕ್ರಮವಾಗಿ 1.7 ಕೋಟಿ ಮತ್ತು 1.5 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಅಲ್ಲದೆ ವಿಕೆಟ್‌ ಕೀಪರ್‌ ರಿಚಾ ಘೋಷ್‌ ಅವರನ್ನು 1.9 ಕೋಟಿ ರೂಪಾಯಿಗೆ ತನ್ನದಾಗಿಸಿದೆ. ಇದಲ್ಲದೆ ಸೋಫಿ ಡಿವೈನ್‌ ಕೂಡಾ ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ.

ಈವರೆಗೆ ಐದು ತಂಡಗಳು ಖರೀದಿಸಿದ ಆಟಗಾರ್ತಿಯರ ಪಟ್ಟಿ

ಆರ್‌ಸಿಬಿ: ಮಂಧನ, ಡಿವೈನ್, ಪೆರ್ರಿ, ರೇಣುಕಾ, ರಿಚಾ ಘೋಷ್

ಎಂಐ: ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ವಸ್ತ್ರಾಕರ್, ಯಾಸ್ತಿಕಾ

‌ಗುಜರಾತ್ ಜೈಂಟ್ಸ್: ಗಾರ್ಡ್ನರ್, ಮೂನಿ, ಡಂಕ್ಲಿ, ಸದರ್ಲ್ಯಾಂಡ್, ಹಾರ್ಲೀನ್, ಡಾಟಿನ್, ರಾಣಾ

ಯುಪಿ ವಾರಿಯರ್ಸ್: ಎಕ್ಲೆಸ್ಟೋನ್, ದೀಪ್ತಿ, ಮೆಗ್ರಾತ್, ಇಸ್ಮಾಯಿಲ್, ಹೀಲಿ, ಸರ್ವಾಣಿ, ಗಾಯಕ್ವಾಡ್, ಚೋಪ್ರಾ, ಸೆಹ್ರಾವತ್, ಯಶಸ್ರಿ

ಡಿಸಿ: ರೋಡ್ರಿಗಸ್, ಲ್ಯಾನಿಂಗ್, ಶಫಾಲಿ, ರಾಧಾ, ಪಾಂಡೆ, ಕಪ್, ಸಾಧು

    ಹಂಚಿಕೊಳ್ಳಲು ಲೇಖನಗಳು