logo
ಕನ್ನಡ ಸುದ್ದಿ  /  ಕ್ರೀಡೆ  /  India Vs New Zealand 1st T20i: ಭಾರತಕ್ಕೆ ಮೊದಲ ಸೋಲು; ಚುಟುಕು ಸರಣಿಯಲ್ಲಿ ಕಿವೀಸ್ ಗೆಲುವಿನ ಆರಂಭ

India vs New Zealand 1st T20I: ಭಾರತಕ್ಕೆ ಮೊದಲ ಸೋಲು; ಚುಟುಕು ಸರಣಿಯಲ್ಲಿ ಕಿವೀಸ್ ಗೆಲುವಿನ ಆರಂಭ

HT Kannada Desk HT Kannada

Jan 27, 2023 10:35 PM IST

ಭಾರತ ನ್ಯೂಜಿಲ್ಯಾಂಡ್ ಪಂದ್ಯದ ದೃಶ್ಯ

    • ಏಕದಿನ ಸರಣಿ ಕ್ಲೀನ್‌ಸ್ವೀಪ್‌ ಮಾಡಿದ್ದ ಭಾರತ, ಕಿವೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ.
ಭಾರತ ನ್ಯೂಜಿಲ್ಯಾಂಡ್ ಪಂದ್ಯದ ದೃಶ್ಯ
ಭಾರತ ನ್ಯೂಜಿಲ್ಯಾಂಡ್ ಪಂದ್ಯದ ದೃಶ್ಯ (AP)

ರಾಂಚಿ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತವು 21 ರನ್‌ಗಳಿಂದ ಸೋತಿದೆ. ಈ ಮೂಲಕ ಕಿವೀಸ್‌ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಈಗಾಗಲೇ ಮುಗಿದ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಆಗಿದ್ದ ಕಿವೀಸ್‌, ಇಂದಿನಿಂದ ಆರಂಭವಾದ ಟಿ20 ಸರಣಿಯಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಕಿವೀಸ್‌ ನೀಡಿದ 177 ರನ್‌ಗಳ ಗುರಿ ಬೆನ್ನತ್ತಿದ ಭಾರತ, ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಗುರಿ ಬೆನ್ನತ್ತಲು ಇಳಿದ ಭಾರತ ಆರಂಭದಲ್ಲೇ ಕುಸಿಯಿತು. ಮೊದಲ ನಾಲ್ಕು ಓವರ್‌ಗಳಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಂಡರು. ಈ ವೇಳೆ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಅರ್ಧಶತಕದ ಅಂಚಿನಲ್ಲಿ ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಒಪ್ಪಿಸಿದರೆ, ಅವರ ಬೆನ್ನಲ್ಲೇ ನಾಯಕ ಪಾಂಡ್ಯ ಕೂಟಾ ಕ್ಯಾಚ್‌ ಕೊಟ್ಟು ಔಟಾದರು.

ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ವಾಷಿಂಗ್ಟನ್‌ ಸುಂದರ್‌ 28 ಎಸೆತಗಳಲ್ಲಿ 50 ರನ್‌ ಗಳಿಸಿ ಮಿಂಚಿದರು. ಭಾರತದ ಗೆಲುವಿಗೆ ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸಿದ ಅವರು, ಅಂತಿಮವಾಗಿ ಸೋಲಿನ ಅಂತರವನ್ನು ತಗ್ಗಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿತು. ಆ ಮೂಲಕ ಭಾರತಕ್ಕೆ 177 ರನ್‌ಗಳ ಗುರಿಯನ್ನು ನೀಡಿತು. ಆರಂಭಿಕ ಆಟಗಾರ ಫಿನ್‌ ಅಲೆನ್‌ 35 ರನ್‌ ಗಳಿಸಿದರು. ಕಿವೀಸ್ ಪರ ಕಾನ್ವೇ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 35 ಎಸೆತಗಳಲ್ಲಿ 52 ರನ್‌ ಗಳಿಸಿದರು. ಅಂತಿಮ ಓವರ್‌ಗಳಲ್ಲಿ ಆರ್ಭಟಿಸಿದ ಡೇರಿಲ್‌ ಮಿಚೆಲ್‌, 30 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 59 ರನ್ ಸಿಡಿಸಿದರು.

ಭಾರತ ಪರ ವಾಷಿಂಗ್ಟ್‌ನ್ ಸುಂದರ್ ಒಂದು ಅದ್ಭುತ ಕ್ಯಾಚ್ ಸಹಿತ 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅರ್ಷದೀಪ್‌, ಕುಲ್ದೀಪ್‌ ಮತ್ತು ಮಾವಿ ತಲಾ ಒಂದು ವಿಕೆಟ್‌ ಪಡೆದರು.

ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿ ಮುಗಿದಿದ್ದು, ಭಾರತ ಕ್ಲೀನ್‌ ಸ್ವೀಪ್‌ ಸಾಧಿಸಿದೆ. ಟಿ20 ಸರಣಿಯ ಮುಂದಿನ ಪಂದ್ಯವು ಜನವರಿ 29ರಂದು ಲಖನೌನಲ್ಲಿ ನಡೆಯಲಿದೆ. ಕೊನೆಯ ಪಂದ್ಯವು ಫೆಬ್ರವರಿ ಒಂದರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಅಲ್ಲಿಗೆ ಭಾರತದಲ್ಲಿ ನಡೆಯುತ್ತಿರುವ ಇಂಡೋ-ಕಿವೀಸ್‌ ಸರಣಿಗೆ ತೆರೆ ಬೀಳಲಿದೆ.

    ಹಂಚಿಕೊಳ್ಳಲು ಲೇಖನಗಳು