logo
ಕನ್ನಡ ಸುದ್ದಿ  /  ಕ್ರೀಡೆ  /  Najam Sethi: 'ಪಾಕಿಸ್ತಾನಕ್ಕೆ ಅಭೂತಪೂರ್ವ ಯಶಸ್ಸು'; ಐಪಿಎಲ್‌ಗಿಂತ ಪಿಎಸ್ಎಲ್ ಉತ್ತಮ ಎಂದು ಪಿಸಿಬಿ ಮುಖ್ಯಸ್ಥ

Najam Sethi: 'ಪಾಕಿಸ್ತಾನಕ್ಕೆ ಅಭೂತಪೂರ್ವ ಯಶಸ್ಸು'; ಐಪಿಎಲ್‌ಗಿಂತ ಪಿಎಸ್ಎಲ್ ಉತ್ತಮ ಎಂದು ಪಿಸಿಬಿ ಮುಖ್ಯಸ್ಥ

HT Kannada Desk HT Kannada

Mar 20, 2023 03:10 PM IST

ನಜಮ್‌ ಸೇಥಿ

    • ಐಪಿಎಲ್ ಅನ್ನು ವಿಶ್ವದ ಅತ್ಯುತ್ತಮ ಟಿ20 ಫ್ರಾಂಚೈಸ್ ಲೀಗ್ ಎಂದು ಹೇಳಲಾಗುತ್ತಿದೆ. ಅದರ ಜನಪ್ರಿಯತೆ, ಬಜೆಟ್‌, ಪ್ರಚಾರ, ವೀಕ್ಷಕರ ಸಂಖ್ಯೆ ಹಾಗೂ ಭಾಗವಹಿಸುತ್ತಿರುವ ಆಟಗಾರರು ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಐಪಿಎಲ್‌ ಯಶಸ್ವಿಯಾಗಿದೆ. ಆದರೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಮಾತ್ರ ಈ ಬಗ್ಗೆ ಭಿನ್ನ ರಾಗ ಎಳೆದಿದ್ದಾರೆ.
ನಜಮ್‌ ಸೇಥಿ
ನಜಮ್‌ ಸೇಥಿ (AP)

ಪಿಎಸ್ಎಲ್ 2023ರ ಆವೃತ್ತಿಯು ಶನಿವಾರ ಅಂತ್ಯಗೊಂಡಿತು. ಫೈನಲ್‌ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್‌ ತಂಡವು ಮುಲ್ತಾನ್ ಸುಲ್ತಾನ್ಸ್‌ ತಂಡವನ್ನು ರೋಚಕ ಒಂದು ರನ್‌ನಿಂದ ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತು. 201 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಸುಲ್ತಾನ್ಸ್‌, ರಿಲೀ ರೊಸೊವ್ ಅವರ ಅರ್ಧಶತಕದ ಹೊರತಾಗಿಯೂ 20 ಓವರ್‌ಗಳಲ್ಲಿ 199 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಭರ್ಜರಿ ಫಾರ್ಮ್‌ನಲ್ಲಿದ್ದ ಲಾಹೋರ್ ನಾಯಕ ಶಾಹೀನ್ ಅಫ್ರಿದಿ ನಾಲ್ಕು ವಿಕೆಟ್‌ ಪಡೆದು ಮಿಂಚಿದರು. ಬ್ಯಾಟಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿದ್ದ ಅವರು, ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ರೋಚಕ ಪಂದ್ಯದೊಂದಿಗೆ ಪಿಎಸ್‌ಎಲ್‌ಗೆ ತೆರೆ ಬಿದ್ದಿತು. ಲೀಗ್‌ ಹಂತದ ಪಂದ್ಯಗಳು ಸೇರಿದಂತೆ ಫೈನಲ್ ಪಂದ್ಯ ಕೂಡಾ ಕುತೂಹಲ ಹೆಚ್ಚಿಸಿತ್ತು. ಸದ್ಯ ಪಿಎಸ್‌ಎಲ್ ಮುಗಿದಿದ್ದರೂ, ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್ ಇನ್ನಷ್ಟೇ ಆರಂಭವಾಗಬೇಕಿದೆ. 2023ರ ಮಾರ್ಚ್ 31ರಂದು ಭಾರತದ ಕ್ರೀಡಾ ಜಾತ್ರೆ ಆರಂಭವಾಗಲಿದೆ.

ಐಪಿಎಲ್ ಅನ್ನು ವಿಶ್ವದ ಅತ್ಯುತ್ತಮ ಟಿ20 ಫ್ರಾಂಚೈಸ್ ಲೀಗ್ ಎಂದು ಹೇಳಲಾಗುತ್ತಿದೆ. ಅದರ ಜನಪ್ರಿಯತೆ, ಬಜೆಟ್‌, ಪ್ರಚಾರ, ವೀಕ್ಷಕರ ಸಂಖ್ಯೆ ಹಾಗೂ ಭಾಗವಹಿಸುತ್ತಿರುವ ಆಟಗಾರರು ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಐಪಿಎಲ್‌ ಯಶಸ್ವಿಯಾಗಿದೆ. ಆದರೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಮಾತ್ರ ಈ ಬಗ್ಗೆ ಭಿನ್ನ ರಾಗ ಎಳೆದಿದ್ದಾರೆ. ಡಿಜಿಟಲ್ ರೇಟಿಂಗ್‌ನಲ್ಲಿ ಐಪಿಎಲ್ ಅನ್ನು ಪಿಎಸ್‌ಎಲ್ ಹಿಂದಿಕ್ಕಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪಿಎಸ್‌ಎಲ್‌ ಫೈನಲ್‌ಗೂ ಮುನ್ನ ಮಾತನಾಡಿದ್ದ ಸೇಥಿ, “ಡಿಜಿಟಲ್ ಬಗ್ಗೆ ಮಾತನಾಡೋಣ. ಪಿಎಸ್ಎಲ್ ಈಗ ಅರ್ಧ ಹಂತದಲ್ಲಿದೆ. ನಮ್ಮ ಡಿಜಿಟಲ್ ರೇಟಿಂಗ್ ನೋಡುವುದಾದರೆ, ನಜಮ್ ಸೇಥಿ ಶೋ ಟಿವಿಯಲ್ಲಿ 0.5 ರೇಟಿಂಗ್ ಹೊಂದಿತ್ತು. ಆದರೆ ಪಿಎಸ್ಎಲ್ 11ಕ್ಕಿಂತ ಹೆಚ್ಚು ರೇಟಿಂಗ್ ಪಡೆಯುತ್ತಿದೆ. ಆದ್ದರಿಂದ, ಅದು ಮುಗಿಯುವ ಹಂತಕ್ಕಾಗುವಾಗ 18 ಅಥವಾ 20 ಆಗಿರುತ್ತದೆ,” ಎಂದು ಹೇಳಿದ್ದಾರೆ.

“150 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದನ್ನು ಡಿಜಿಟಲ್‌ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ. ಇದು ಸಣ್ಣ ವಿಷಯವೇನಲ್ಲ. ಐಪಿಎಲ್‌ನ ಡಿಜಿಟಲ್ ರೇಟಿಂಗ್ 130 ಮಿಲಿಯನ್ ಮಾತ್ರ. ಇದೇ ವೇಳೆ ಪಿಎಸ್‌ಎಲ್‌ನದ್ದು 150 ಮಿಲಿಯನ್‌ಗಿಂತಲೂ ಹೆಚ್ಚು. ಹೀಗಾಗಿ ಇದು ಪಾಕಿಸ್ತಾನಕ್ಕೆ ಉತ್ತಮ ಯಶಸ್ಸು,” ಎಂದು ಸೇಥಿ ಹೇಳಿದ್ದಾರೆ.

ಸೇಥಿ ಅವರ ಹೇಳಿಕೆಗಳು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಕೆಲವು ವಿವಾದಗಳನ್ನು ಸೃಷ್ಟಿಸಬಹುದು. ಸೇಥಿ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

ಐಪಿಎಲ್‌ನ ಈ ಆವೃತ್ತಿಯು ಮಾರ್ಚ್ 31ರಿಂದ ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

    ಹಂಚಿಕೊಳ್ಳಲು ಲೇಖನಗಳು