logo
ಕನ್ನಡ ಸುದ್ದಿ  /  ಕ್ರೀಡೆ  /  Rahul Dravid: ವಿರಾಟ್-ರೋಹಿತ್ ಟಿ20 ಕ್ರಿಕೆಟ್ ಜೀವನ ಅಂತ್ಯ; ಸುಳಿವು ನೀಡಿದ ರಾಹುಲ್ ದ್ರಾವಿಡ್!

Rahul Dravid: ವಿರಾಟ್-ರೋಹಿತ್ ಟಿ20 ಕ್ರಿಕೆಟ್ ಜೀವನ ಅಂತ್ಯ; ಸುಳಿವು ನೀಡಿದ ರಾಹುಲ್ ದ್ರಾವಿಡ್!

HT Kannada Desk HT Kannada

Jan 06, 2023 08:57 PM IST

ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

    • ಈ ವರ್ಷದ ಕೊನೆಯಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ ಹಿರಿಯರ ಹೆಚ್ಚಿನ ಗಮನವು ಈಗ ಏಕದಿನ ಸ್ವರೂಪದಲ್ಲಿದೆ ಎಂದು ಭಾರತದ ಮುಖ್ಯ ಕೋಚ್ ಹೇಳಿದರು.
ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ಭಾರತವು ಟಿ20 ವಿಶ್ವಕಪ್ ಸೆಮಿಫೈನಲ್‌ನಿಂದ ನಿರ್ಗಮಿಸಿದ ಬಳಿಕ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿವೆ. ಚುಟುಕು ಸ್ವರೂಪದ ಕ್ರಿಕೆಟ್‌ನಿಂದ ಈ ಇಬ್ಬರು ಹಿರಿಯ ಆಟಗಾರರನ್ನು ಭಾಗಶಃ ಹೊರಗಿಡುವ ಬಗ್ಗೆ ಈಗಾಗಲೇ ಮಾತುಕತೆಗಳು ನಡೆದಿವೆ. ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಭಾರತ ಟಿ20 ತಂಡದಲ್ಲೂ ಈ ಇಬ್ಬರು ದಿಗ್ಗಜರ ಹೆಸರಿಲ್ಲ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಇದೀಗ ಟೀಮ್‌ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, 2024ರಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗಾಗಿ ಯುವ ಭಾರತ ತಂಡವನ್ನು ನಿರ್ಮಿಸುವ ಕುರಿತು ಬಲವಾದ ಸುಳಿವು ನೀಡಿದ್ದಾರೆ. ದ್ರಾವಿಡ್ ಇಲ್ಲಿ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಆದರೆ ಭಾರತವು ಟಿ20ಗಳಲ್ಲಿ ಮತ್ತಷ್ಟು ಮುಂದೆ ಸಾಗಲು ನಿರ್ಧರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ವರ್ಷದ ಕೊನೆಯಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ ಹಿರಿಯರ ಹೆಚ್ಚಿನ ಗಮನವು ಈಗ ಏಕದಿನ ಸ್ವರೂಪದಲ್ಲಿದೆ ಎಂದು ಭಾರತದ ಮಾಜಿ ನಾಯಕ ಹೇಳಿದರು.

“ಟಿ20 ವಿಶ್ವಕಪ್‌ನಲ್ಲಿ ನಾವು ಇಂಗ್ಲೆಂಡ್ ವಿರುದ್ಧ ಆಡಿದ ಕೊನೆಯ ಸೆಮಿಫೈನಲ್‌ ಪಂದ್ಯದ ಆಟಗಾರರಲ್ಲಿ ಕೇವಲ 3-4 ಹುಡುಗರು ಮಾತ್ರ ಶ್ರೀಲಂಕಾ ವಿರುದ್ಧ ಆಡುತ್ತಿದ್ದಾರೆ. ನಾವು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಿದ್ದೇವೆ. ಟಿ20ಯ ಮುಂದಿನ ಹಂತದಲ್ಲಿ, ನಮ್ಮದು ಸ್ವಲ್ಪ ಕಿರಿಯ ಹಾಗೂ ಯುವ ತಂಡವಾಗಿದೆ. ಶ್ರೀಲಂಕಾದ ಗುಣಮಟ್ಟದ ತಂಡದ ವಿರುದ್ಧ ಆಡುವುದು ನಮಗೆ ಅದ್ಭುತ ಅನುಭವವಾಗಿದೆ. ಒಳ್ಳೆಯ ವಿಷಯವೆಂದರೆ, ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ಹೆಚ್ಚಿನ ಗಮನ ಹರಿಸಿರುವುದರಿಂದ, ಟಿ20ಯಲ್ಲಿ ಈ ಹುಡುಗರನ್ನು ಆಡಿಸಲು ನಮಗೆ ಅವಕಾಶ ಸಿಗುತ್ತವೆ” ಎಂದು ಪುಣೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸೋತ ನಂತರ ದ್ರಾವಿಡ್ ಸುದ್ದಿಗಾರರಿಗೆ ತಿಳಿಸಿದರು.

ದ್ರಾವಿಡ್‌ ಹೇಳಿದಂತೆಯೇ, ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿ ಶ್ರೀಲಂಕಾ ವಿರುದ್ಧದ ಆಡುವ ಬಳಗದಲ್ಲಿಯೂ ಸ್ಥಾನ ಪಡೆದ ಆಟಗಾರರು ನಾಲ್ವರು ಮಾತ್ರ. ಅವರೆಂದರೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್.

ವಿಶ್ವಕಪ್‌ ಬಳಿಕ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಆಡಿದ ಎರಡು ಟಿ20 ಸರಣಿಗಳಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದಾರೆ. ಚುಟುಕು ಮಾದರಿಗೆ ಹಾರ್ದಿಕ್ ಅವರನ್ನು ನಾಯಕನಾಗಿ ಘೋಷಿಸುವ ಬಗ್ಗೆ ಆಯ್ಕೆದಾರರು ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ. ಆದರೆ ಮುಂಬರುವ ಹೆಚ್ಚಿನ ಟಿ20ಗಳಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.

ಮೊದಲ ಪಂದ್ಯದಲ್ಲಿ ಭಾರತದ ಸೋಲಿನ ಕುರಿತು ಮಾತನಾಡಿದ ದ್ರಾವಿಡ್‌, ಭಾರತ ಯುವ ಬೌಲರ್‌ಗಳು ಇನ್ನೂ ಕಲಿಕೆಯ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ನೋಬಾಲ್‌ ಎಸೆತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅರ್ಷದೀಪ್‌ ಇನ್ನೂ ಕಲಿಯುತ್ತಿದ್ದಾರೆ. ಹೀಗಾಗಿ ತಾಳ್ಮೆಯಿಂದಿರಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

“ಈ ಚಿಕ್ಕ ಹುಡುಗರ ಬಗ್ಗೆ ನಾವು ತಾಳ್ಮೆಯಿಂದಿರಬೇಕು. ಭಾರತ ತಂಡದಲ್ಲಿ ಬಹಳಷ್ಟು ಯುವಕರು ಆಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಬೌಲಿಂಗ್ ದಾಳಿ ಸಂಪೂರ್ಣ ಯುವ ಆಟಗಾರರನ್ನು ಹೊಂದಿದೆ. ಅವರಿನ್ನೂ ಚಿಕ್ಕವರು. ನಾವೆಲ್ಲರೂ ತಾಳ್ಮೆಯಿಂದಿರಬೇಕು. ಈ ರೀತಿಯ ಆಟಗಳು ನಡೆಯಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕಲಿಕೆಯ ಹಾದಿಯಲ್ಲಿ ಇವೆಲ್ಲಾ ಸಾಮಾನ್ಯ,” ಎಂದು ದ್ರಾವಿಡ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು