logo
ಕನ್ನಡ ಸುದ್ದಿ  /  ಕ್ರೀಡೆ  /  Fifa Club World Cup: ಐದನೇ ಬಾರಿ ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

FIFA Club World Cup: ಐದನೇ ಬಾರಿ ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

Jayaraj HT Kannada

Feb 12, 2023 01:48 PM IST

ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

    • ಮೊರೊಕ್ಕೊ ಅಭಿಮಾನಿಗಳು ಮೈದಾನದಲ್ಲಿ ತಂಡದ ಪರ ಕೇಕೆ ಹಾಕುವುದರೊಂದಿಗೆ ಆರಂಭದಲ್ಲಿಯೇ ಸಂಭ್ರಮಿಸಿದರು. ತಂಡದ ಗೋಲುಗಳ ಸುರಿಮಳೆಯನ್ನು ಆನಂದಿಸಿದರು. ಯುರೋಪಿಯನ್ ಚಾಂಪಿಯನ್ಸ್ ಪಂದ್ಯದ 13ನೇ ನಿಮಿಷದಲ್ಲಿ ಗೋಲಿನ ಖಾತೆಯನ್ನು ತೆರೆದರು.
ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್
ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್ (REUTERS)

ರಿಯಲ್ ಮ್ಯಾಡ್ರಿಡ್(Real Madrid) ತಂಡವು ಐದನೇ ಬಾರಿಗೆ ಫುಟ್ಬಾಲ್‌ ಕ್ಲಬ್ ವಿಶ್ವಕಪ್ (Club World Cup) ಗೆದ್ದುಕೊಂಡಿದೆ. ಸೌದಿ ಅರೇಬಿಯಾದ ಅಲ್ ಹಿಲಾಲ್(Al Hilal) ತಂಡವನ್ನು 5-3 ರಿಂದ ಸೋಲಿಸಿದ ರಿಯಲ್ ಮ್ಯಾಡ್ರಿಡ್, ಮತ್ತೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಶನಿವಾರ ನಡೆದ ಫೈನಲ್‌ನಲ್ಲಿ ಫೆಡೆರಿಕೊ ವಾಲ್ವೆರ್ಡೆ ಮತ್ತು ವಿನಿಶಿಯಸ್ ಜೂನಿಯರ್‌ ಅವರ ತಲಾ ಎರಡೆರಡು ಗೋಲು ಮತ್ತು ಕರೀಮ್ ಬೆಂಜೆಮಾ ಅವರ ಒಂದು ಗೋಲಿನ ನೆರವಿನಿಂದ ತಂಡವು 5 ಗೋಲುಗಳನ್ನು ಗಳಿಸಿತು. ಪ್ರಿನ್ಸ್ ಮೌಲೆ ಅಬ್ದಲ್ಲಾ ಕ್ರೀಡಾಂಗಣದಲ್ಲಿ ಏಕಪಕ್ಷೀಯವಾಗಿ ಸಾಗಿದ ಸ್ಪರ್ಧೆಯಲ್ಲಿ, ರಿಯಲ್ ಮ್ಯಾಡ್ರಿಡ್‌ ತನ್ನ ಎದುರಾಳಿಗಳಿಗೆ ಹೆಚ್ಚು ಗಳಿಸಲು ಅವಕಾಶ ನೀಡಲಿಲ್ಲ. ಎದುರಾಳಿ ತಂಡವು ಮೂರು ಗೋಲು ಗಳಿಸಿದರೂ, ತಂಡವು ಸಂಪೂರ್ಣ ನಿಯಂತ್ರಣ ಸಾಧಿಸಿತು.

ಮೊರೊಕ್ಕೊ ಅಭಿಮಾನಿಗಳು ಮೈದಾನದಲ್ಲಿ ತಂಡದ ಪರ ಕೇಕೆ ಹಾಕುವುದರೊಂದಿಗೆ ಆರಂಭದಲ್ಲಿಯೇ ಸಂಭ್ರಮಿಸಿದರು. ತಂಡದ ಗೋಲುಗಳ ಸುರಿಮಳೆಯನ್ನು ಆನಂದಿಸಿದರು. ಯುರೋಪಿಯನ್ ಚಾಂಪಿಯನ್ಸ್ ಪಂದ್ಯದ 13ನೇ ನಿಮಿಷದಲ್ಲಿ ಗೋಲಿನ ಖಾತೆಯನ್ನು ತೆರೆದರು.

ಮೂರು ಇಂಟರ್‌ಕಾಂಟಿನೆಂಟಲ್ ಕಪ್ ಟ್ರೋಫಿಗಳನ್ನು ಗೆದ್ದ ನಂತರ, ಸದ್ಯ ರಿಯಲ್‌ ಮ್ಯಾಡ್ರಿಡ್‌ ಒಟ್ಟು ಎಂಟು ಜಾಗತಿಕ ಪ್ರಶಸ್ತಿಗಳನ್ನು ಹೊಂದಿದೆ. ಎರಡು ಸ್ಪರ್ಧೆಗಳಲ್ಲಿ ತಲಾ ನಾಲ್ಕು ಪ್ರಶಸ್ತಿಗಳೊಂದಿಗೆ ಎಸಿ ಮಿಲನ್ ಮತ್ತು ಬೇಯರ್ನ್ ಮ್ಯೂನಿಚ್ ನಂತರದ ಅತ್ಯಂತ ಯಶಸ್ವಿ ತಂಡಗಳಾಗಿವೆ.

“ನಾವು ತುಂಬಾ ಸಂತೋಷವಾಗಿದ್ದೇವೆ. ಎಂಟನೇ ಬಾರಿಗೆ ರಿಯಲ್ ಮ್ಯಾಡ್ರಿಡ್ ವಿಶ್ವ ಚಾಂಪಿಯನ್ ಆಗಿದೆ. ನಾವು ಸಾಕಷ್ಟು ಗುಣಮಟ್ಟದೊಂದಿಗೆ ಉತ್ತಮ ಆಟ ಆಡಿದ್ದೇವೆ. ವಿನಿಸಿಯಸ್, ಬೆಂಜೆಮಾ, ವಾಲ್ವರ್ಡೆ ಚೆನ್ನಾಗಿ ಮಾಡಿದ್ದಾರೆ. ಆಟದಲ್ಲಿ ಅವರು ಕೌಶಲ್ಯ ಮತ್ತು ಗುಣಮಟ್ಟವನ್ನು ತೋರಿಸಿದರು,” ಎಂದು ಮ್ಯಾನೇಜರ್ ಕಾರ್ಲೋ ಅನ್ಸೆಲೋಟ್ಟಿ ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ

Cristiano Ronaldo: ಫುಟ್ಬಾಲ್ ದಿಗ್ಗಜನಿಂದ ಮತ್ತೊಂದು ದಾಖಲೆ; 500 ಗೋಲುಗಳ ಮೈಲುಗಲ್ಲು ತಲುಪಿದ ರೊನಾಲ್ಡೊ

ಜಾಗತಿಕ ಕ್ರೀಡಾಕ್ಷೇತ್ರದ ಜನಪ್ರಿಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಗುರುವಾರ ಸೌದಿ ಪ್ರೊ ಲೀಗ್‌ನಲ್ಲಿ ಅಲ್ ನಾಸರ್‌(Al Nassr) ತಂಡದ ಪರ ನಾಲ್ಕು ಗೋಲುಗಳನ್ನು ಗಳಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 500 ಕ್ಲಬ್ ಗೋಲುಗಳ ಮೈಲಿಗಲ್ಲನ್ನು ರೊನಾಲ್ಡೊ ತಲುಪಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Women's T20 WC: ಕಿವೀಸ್ ವಿರುದ್ಧ ಹಾಲಿ ಚಾಂಪಿಯನ್ನರಿಗೆ ಜಯ; ಐದು ವಿಕೆಟ್ ಪಡೆದು ದಾಖಲೆ ಬರೆದ ಬೌಲರ್

ವನಿತೆಯರ ಟಿ20 ವಿಶ್ವಕಪ್‌ನ ಎರಡನೇ ದಿನದಾಟದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತಂಡವನ್ನು 97 ರನ್‌ಗಳಿಂದ ಸೋಲಿಸಿದೆ. ಗೆಲುವಿನೊಂದಿಗೆ ಆಸೀಸ್‌ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ದಿನದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು