logo
ಕನ್ನಡ ಸುದ್ದಿ  /  Sports  /  Suryakumar Yadav Trails Mohammad Rizwan In Icc T20i Rankings

ICC T20I ranking: ಹರಿಣಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ರೂ ನಂಬರ್‌ ವನ್‌ ಸ್ಥಾನ ಮಿಸ್‌ ಮಾಡಿಕೊಂಡ ಸೂರ್ಯ

HT Kannada Desk HT Kannada

Oct 05, 2022 05:29 PM IST

ಟೀಂ ಇಂಡಿಯಾ-ಮೊಹಮ್ಮದ್‌ ರಿಜ್ವಾನ್

  • ‌ಐಸಿಸಿ ಶ್ರೇಯಾಂಕ ಪಟ್ಟಿಯ ಟಿ20 ಮಾದರಿಯಲ್ಲಿ, ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಂದೆರಡು ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದರೂ, ಟಿ20 ಮಾದರಿಯಲ್ಲಿ ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಹೀಗಾಗಿ ಭಾರತದ ಸ್ಟಾರ್ ಆಟಗಾರ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. 

ಟೀಂ ಇಂಡಿಯಾ-ಮೊಹಮ್ಮದ್‌ ರಿಜ್ವಾನ್
ಟೀಂ ಇಂಡಿಯಾ-ಮೊಹಮ್ಮದ್‌ ರಿಜ್ವಾನ್

ಟಿ20 ವಿಶ್ವಕಪ್‌ಗೆ ಅಂತಿಮ ತಯಾರಿಯಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಸ್ಟಾರ್‌ ಆಟಗಾರ, ಟಿ20 ಮಾದರಿಯ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಗಣ್ಯರಾಗಿ ಹೊರಹೊಮ್ಮುವ ನಿರೀಕ್ಷೆಯಿತ್ತು. ಆದರೆ ಇಂದು ICC ಬಿಡುಗಡೆಗೊಳಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯರಿಗೆ ತುಸು ನಿರಾಸೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಕಪ್‌ ನಡೆಯಲಿದೆ. ಇದಕ್ಕೂ ಮುನ್ನ ಹೆಚ್ಚಿನ ರಾಷ್ಟ್ರಗಳು ಪೂರ್ವ ಸಿದ್ಧತೆಯಾಗಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಿವೆ. ಸದ್ಯ ಬಿಡುಗಡೆಯಾಗಿರುವ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ, ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಂದೆರಡು ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದರೂ, ಟಿ20 ಮಾದರಿಯಲ್ಲಿ ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಹೀಗಾಗಿ ಭಾರತದ ಸ್ಟಾರ್ ಆಟಗಾರ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. ಅದುವೇ ಸೂರ್ಯಕುಮಾರ್‌ ಯಾದವ್‌.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ. ಈ ಎರಡೂ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಆಟ ಪ್ರದರ್ಶಿಸಿದ್ದರು. ಭಾರತದ ಗೆಲುವಿನಲ್ಲಿ ಇವರ ಪಾತ್ರ ನಿರ್ಣಾಯಕವಾಗಿತ್ತು. ಇದರಲ್ಲಿ ಮೊದಲ ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 50 ರನ್‌ ಬಂದರೆ, ಎರಡನೇ ಪಂದ್ಯದಲ್ಲಿ 22 ಎಸೆತಗಳಿಂದ ಸ್ಫೋಟಕ 61 ರನ್ ಸಿಡಿಸಿದರು. ಈ ಮೂಲಕ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ ಮುಂದುವರಿಸಿದರು. 61 ಎಸೆತಗಳಲ್ಲಿ 195.08 ಸ್ಟ್ರೈಕ್ ರೇಟ್‌ನಲ್ಲಿ 119 ರನ್‌ಗಳೊಂದಿಗೆ ಸರಣಿ ಪೂರ್ಣಗೊಳಿಸಿದ ಸೂರ್ಯ, ಭಾರತ 2-1 ರಿಂದ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್ ಪ್ರದರ್ಶನದಿಂದ ಸೂರ್ಯಕುಮಾರ್ 37 ಅಂಕಗಳನ್ನು ಗಳಿಸಿದರು. ಆದರೆ ಭಾರತದ ಬ್ಯಾಟರ್ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಲು ಈ ಪಾಯಿಂಟ್ ಸಾಕಾಗಲಿಲ್ಲ.

ಮತ್ತೊಂದೆಡೆ, ಪಾಕಿಸ್ತಾನದ ರಿಜ್ವಾನ್ ಒಂದೆರಡು ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ. ಆದರೂ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ 7 ಪಂದ್ಯಗಳ ಬೃಹತ್‌ ಸರಣಿಯಲ್ಲಿ ರಿಜ್ವಾನ್‌ 316 ರನ್‌ ಗಳಿಸಿದರು. ಲಾಹೋರ್‌ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ ರಿಜ್ವಾನ್‌ಗೆ ಶ್ರೇಯಾಂಕ ಪಟ್ಟಿಯಲ್ಲಿ ಅಂಕ ಕಡಿಮೆಯಾಯ್ತು.

ಇನ್ನೊಂದೆಡೆ ಸೂರ್ಯಕುಮಾರ್ ಯಾದವ್‌ ಕೂಡಾ ಟಿ20 ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸುವ ಅವಕಾಶ ಹೊಂದಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಕೇವಲ ಎಂಟು ರನ್‌ಗಳಿಗೆ ಅವರು ಔಟಾದರು. ಇದು ಶ್ರೇಯಾಂಕ ಪಟ್ಟಿಯಲ್ಲಿ ಅವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ತಂದುಕೊಟ್ಟಿತು. ಆದರೂ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಮೂಲಕ, ರಿಜ್ವಾನ್ ಅವರ ರೇಟಿಂಗ್ ಪ್ರಮಾಣವನ್ನು ಮೀರಿಸಲು ಯಾದವ್‌ಗೆ ಅವಕಾಶವಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಎರಡು ಪಂದ್ಯಗಳಿಂದ 108 ರನ್ ಗಳಿಸಿದ ಹಿನ್ನಲೆಯಲ್ಲಿ ಏಳು ಸ್ಥಾನ ಜಿಗಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 604 ರೇಟಿಂಗ್ ಅಂಕಗಳೊಂದಿಗೆ 16ನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ವಿರಾಟ್‌ ಕೊಹ್ಲಿ 605 ರೇಟಿಂಗ್ ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು