FIFA World Cup 2022: ಇಂಗ್ಲೆಂಡ್-ಯುಎಸ್‌ಎ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ
Nov 26, 2022 09:13 AM IST
ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಮೆರಿಕಾ ತನ್ನ ಅಜೇಯ ದಾಖಲೆ ಉಳಿಸಿಕೊಂಡಿದೆ
- ಕತಾರ್‌ನ ಅಲ್ ಬೇಟ್ ಸ್ಟೇಡಿಯಂನಲ್ಲಿ ತಡರಾತ್ರಿ ನಡೆದ ಪಂದ್ಯದಲ್ಲಿ, ಗೆಲುವಿನ ಗೋಲು ಗಳಿಸಲು ಉಭಯ ತಂಡಗಳು ಪರದಾಡಿದವು. ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಇಂಗ್ಲೆಂಡ್; ತಾನೂ ಗೋಲು ಬಾರಿಸಲಾಗದೆ, ಅಮೆರಿಕಕ್ಕೂ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.
ದೋಹಾ: ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಅಮೆರಿಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ವೇಲ್ಸ್ ವಿರುದ್ಧ ಆಡಿದಂತೆಯೇ, ಇಂಗ್ಲೆಂಡ್ ವಿರುದ್ಧವೂ ಯುಎಸ್‌ಎ ಚಾಣಾಕ್ಷ ಆಟ ಪ್ರದರ್ಶಿಸಿತು. ಆ ಮೂಲಕ ಆಂಗ್ಲರ ವಿರುದ್ಧ ಸಮಬಲ ಸಾಧಿಸಿತು. ಪಂದ್ಯ ನೀರಸ ಡ್ರಾ ಕಂಡು ಅಭಿಮಾನಿಗಳು ನಿರಾಶರಾದರು.
ಕತಾರ್‌ನ ಅಲ್ ಬೇಟ್ ಸ್ಟೇಡಿಯಂನಲ್ಲಿ ತಡರಾತ್ರಿ ನಡೆದ ಪಂದ್ಯದಲ್ಲಿ, ಗೆಲುವಿನ ಗೋಲು ಗಳಿಸಲು ಉಭಯ ತಂಡಗಳು ಪರದಾಡಿದವು. ವೇಲ್ಸ್ ವಿರುದ್ಧ ಆಡಿದಂತೆ, ಯುಎಸ್‌ಎ ಮೈದಾನದ ಇತರ ಕ್ಷೇತ್ರಗಳಲ್ಲಿ ತಮ್ಮ ಸ್ಮಾರ್ಟ್ ಆಟವನ್ನು ಗೋಲುಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಇಂಗ್ಲೆಂಡ್, ತಾನೂ ಗೋಲು ಬಾರಿಸಲಾಗದೆ, ಅಮೆರಿಕಕ್ಕೂ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.
ಬುಕಾಯೊ ಸಾಕಾ ಬಲಭಾಗದಲ್ಲಿ ಚಾಣಾಕ್ಷ ಆಟ ಪ್ರಾರಂಭಿಸಿದರು. ಆದರೆ ಜೂಡ್ ಬೆಲ್ಲಿಂಗ್ಹ್ಯಾಮ್ ಅವರೊಂದಿಗೆ ಕೆಲವು ಉತ್ತಮ ಸಂಯೋಜನೆಯ ಹೊರತಾಗಿಯೂ ಯೋಜನೆ ಯಶಸ್ವಿಯಾಗಲಿಲ್ಲ. ಪಂದ್ಯದ 87ನೇ ನಿಮಿಷದಲ್ಲಿ ಮಾರ್ಕಸ್ ರಾಶ್‌ಫೋರ್ಡ್ ಹೊಡೆದ ಹೊಡೆತ ಗೋಲಾಗಿ ಪರಿವರ್ತನೆ ಆಗಲಿದೆ ಎಂಬ ಭರವಸೆ ಮೂಡಿತು. ಅದು ಕೂಡ ಫಲಕೊಡಲಿಲ್ಲ. ಪಂದ್ಯದಲ್ಲಿ ಪುಲಿಸಿಕ್ ಅವರು ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಪಂದ್ಯದ ಆಟಗಾರ ಎಂಬ ಪ್ರಶಸ್ತಿ ಪಡೆದರು.
ವಿಶೇಷವೆಂದರೆ, ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುಎಸ್ಎ ಇದುವರೆಗೂ ಸೋತಿಲ್ಲ. ತಂಡಗಳು ಈ ಮೊದಲು 1950ರಲ್ಲಿ ಆಡಿದಾಗ, ಯುಎಸ್ 1-0 ಅಂತರದಲ್ಲಿ ಜಯಗಳಿಸಿತ್ತು.
ನಾಲ್ಕು ಅಂಕಗಳು ಮತ್ತು +4ರ ಆರೋಗ್ಯಕರ ಗೋಲು ವ್ಯತ್ಯಾಸದೊಂದಿಗೆ, ಇಂಗ್ಲೆಂಡ್ ಮುಂದಿನ ಹಂತಕ್ಕೆ ಹೋಗುವ ಅವಕಾಶ ದಟ್ಟವಾಗಿದೆ. ಇತ್ತ USA ಆಡಿದ ಪಂದ್ಯಗಳಿಂದ ಎರಡು ಅಂಕಗಳನ್ನು ಸಂಪಾದಿಸಿದೆ. ಹೀಗಾಗಿ ಮುಂದೆ ಇರಾನ್ ವಿರುದ್ಧದ ಪಂದ್ಯ ತಂಡಕ್ಕೆ ನಿರ್ಣಾಯಕವಾಗಿದೆ.
ಗಮನಿಸಬಹುದಾದ ಇತರೆ ಸುದ್ದಿಗಳು
ಈಕ್ವೆಡಾರ್-ನೆದರ್ಲ್ಯಾಂಡ್ಸ್ ಪಂದ್ಯ ಡ್ರಾ; ಗುಂಪು ಹಂತದಲ್ಲೇ ಹೊರಬಿದ್ದ ಅತಿಥೇಯ ಕತಾರ್
ಫಿಫಾ ವಿಶ್ವಕಪ್‌ನಿಂದ ಅತಿಥೇಯ ಕತಾರ್ ಹೊರಬಿದ್ದಿದೆ. ಶುಕ್ರವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಸೋತ ಅತಿಥೇಯರು, ಫುಟ್ಬಾಲ್ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. A ಗುಂಪಿನ ತನ್ನ ಎರಡನೇ ಪಂದ್ಯದಲ್ಲಿಯೂ ಸೆನೆಗಲ್ ವಿರುದ್ಧ 3-1ರಿಂದ ಕತಾರ್ ಸೋತಿತು. ಆ ಬಳಿಕ ನೆದರ್‌ಲ್ಯಾಂಡ್ಸ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯವು 1-1ರಿಂದ ಡ್ರಾ ಆಗುವ ಮೂಲಕ ಗುಂಪು ಹಂತದಲ್ಲೇ ಕತಾರ್ ನಿರ್ಗಮನ ಖಚಿತವಾಯ್ತು. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಚೆಶ್ಮಿ, ರಮಿನ್ ಕೊನೆ ಕ್ಷಣದ ಚಮತ್ಕಾರ; ವೇಲ್ಸ್ ವಿರುದ್ಧ ಇರಾನ್‌ಗೆ ಗೆಲುವು
ಇರಾನ್ ತಂಡದ ಆಟಗಾರ ರೌಜ್ ಬ್ಹೆ ಚೆಶ್ಮಿ ಮತ್ತು ರಮಿನ್ ಹೆಚ್ಚುವರಿ ಸಮಯದ ಅವಕಾಶವನ್ನು ಪಡೆದು ಬಾರಿಸಿದ ತಲಾ ಎರಡು ಗೋಲುಗಳಿಂದ ವೇಲ್ಸ್ ತಂಡವನ್ನು ಮಣಿಸಿ ಫಿಫಾ ವಿಶ್ವಕಪ್ ನ ಗ್ರೂಪ್ ಬಿ ನಲ್ಲಿ ಉಳಿದುಕೊಂಡಿದೆ. ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿಂದು ಶುಕ್ರವಾರ ನಡೆದ ಪಂದ್ಯದಲ್ಲಿ ಇರಾನ್ ತಂಡ ಇಂಜುರಿ ಟೈಮ್ ನಲ್ಲಿ ವೇಲ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ