logo
ಕನ್ನಡ ಸುದ್ದಿ  /  Karnataka  /  Karnataka Woman In Fifa World Cup Medical Team

FIFA World Cup 2022: ಫುಟ್ಬಾಲ್ ವಿಶ್ವಕಪ್ ಮೆಡಿಕಲ್ ತಂಡದಲ್ಲಿ ಕರಾವಳಿ ಮಹಿಳೆ; ನರ್ಸಿಂಗ್ ಇನ್‌ಚಾರ್ಜ್ ಆಗಿ ಪ್ರತಿಭಾ ಆಯ್ಕೆ

HT Kannada Desk HT Kannada

Nov 25, 2022 12:26 PM IST

ಪಿಫಾ ವಿಶ್ವಕಪ್ ಮೆಡಿಕಲ್ ತಂಡ

    • ಕತಾರ್‌ನಲ್ಲಿ ನಡೆಯುತ್ತಿರುವ ಪಿಫಾ ವಿಶ್ವಕಪ್‌ನ ಮೆಡಿಕಲ್ ತಂಡದಲ್ಲಿ ಸೇವೆ ಸಲ್ಲಿಸಲು ಕರಾವಳಿಯ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರತಿಭಾ ಎನ್ ದರ್ಖಾಸು, ಈ ಅವಕಾಶ ಗಿಟ್ಟಿಸಿಕೊಂಡ ನಾರಿ. ವಿಶ್ವಕಪ್‌ ಕ್ರೀಡಾಕೂಟದ ಮೆಡಿಕಲ್ ಟೀಮ್‌ನಲ್ಲಿ ಇವರು ಕೂಡಾ ಸಿಬ್ಬಂದಿಯಾಗಿದ್ದಾರೆ.
 ಪಿಫಾ ವಿಶ್ವಕಪ್ ಮೆಡಿಕಲ್ ತಂಡ
ಪಿಫಾ ವಿಶ್ವಕಪ್ ಮೆಡಿಕಲ್ ತಂಡ

ಮಂಗಳೂರು: ಫಿಫಾ ವಿಶ್ವಕಪ್‌ ಸಡಗರ ಅರಬ್‌ ರಾಷ್ಟ್ರ ಕತಾರ್‌ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮನೆಮಾಡಿದೆ. ಭಾರತ ತಂಡ ಫುಟ್ಬಾಲ್ ವಿಶ್ವಕಪ್‌ ಆಡುವ ಅರ್ಹತೆ ಪಡೆದಿಲ್ಲವಾದರೂ, ದೇಶದಲ್ಲಿ ಕಾಲ್ಚೆಂಡು ಕ್ರೀಡೆಯ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ದೇಶದ ಕೆಲ ಭಾಗಗಳಲ್ಲಿ ಫುಟ್ಬಾಲ್‌ ಅಭಿಮಾನಿಗಳ ಸಂಘವೇ ತಲೆ ಎತ್ತಿ ನಿಂತಿವೆ. ಹಲವು ಕಡೆ, ಫುಟ್ಬಾಲ್‌ ಕ್ರೀಡೆಯನ್ನು ಸಂಭ್ರಮಿಸಲಾಗುತ್ತಿದೆ. ಕರ್ನಾಟಕದಲ್ಲೂ ಫುಟ್ಬಾಲ್‌ ವಿಶ್ವಕಪ್‌ ಅನುಸರಿಸುವವರು ಹಲವರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

Hassan Sex scandal; ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಸಂಚಲನ, ಬಿಜೆಪಿ ನಾಯಕ ದೇವರಾಜೇ ಗೌಡರ ತುರ್ತು ರಹಸ್ಯ ಪತ್ರ ವೈರಲ್, 5 ಅಂಶಗಳು

Drought: ಕರಾವಳಿ ಜಿಲ್ಲೆಗಳಲ್ಲಿ ಏರಿದ ತಾಪಮಾನ, ನದಿಗಳಲ್ಲಿ ಕಡಿಮೆಯಾದ ನೀರಸೆಲೆ

Hassan Sex Scandal: ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಭಾರತದ ಆಟಗಾರರು ಆಡದಿದ್ದರೂ, ಈ ಜಾಗತಿಕ ಕ್ರೀಡಾ ಹಬ್ಬದಕ್ಕೆ ಭಾರತೀಯರ ಕೊಡುಗೆ ಇದ್ದೇ ಇದೆ. ವಿಶ್ವಕಪ್‌ನಲ್ಲಿ ವಿವಿಧ ಬಗೆಯ ಸಿಬ್ಬಂದಿಯಾಗಿ ಭಾರತದ ಹಲವರು ಕ್ರೀಡಾಕೂಟಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅವರಲ್ಲಿ ನಮ್ಮ ಕರಾವಳಿ ಕರ್ನಾಟಕದ ಮಹಿಳೆ ಕೂಡಾ ಸ್ಥಾನ ಪಡೆದಿದ್ದಾರೆ. ಸದ್ಯ ಈ ವಿಚಾರ ಮಹಿಳೆಯ ಕುಟುಂಬ ಹಾಗೂ ತುಳುನಾಡು ಭಾಗದ ಜನತೆಯ ಖುಷಿಗೆ ಕಾರಣವಾಗಿದೆ.

ಕತಾರ್‌ನಲ್ಲಿ ನಡೆಯುತ್ತಿರುವ ಪಿಫಾ ವಿಶ್ವಕಪ್‌ನ ಮೆಡಿಕಲ್ ತಂಡದಲ್ಲಿ ಸೇವೆ ಸಲ್ಲಿಸಲು ಕರಾವಳಿಯ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರತಿಭಾ ಎನ್ ದರ್ಖಾಸು, ಈ ಅವಕಾಶ ಗಿಟ್ಟಿಸಿಕೊಂಡ ನಾರಿ. ವಿಶ್ವಕಪ್‌ ಕ್ರೀಡಾಕೂಟದ ಮೆಡಿಕಲ್ ಟೀಮ್‌ನಲ್ಲಿ ಇವರು ಕೂಡಾ ಸಿಬ್ಬಂದಿಯಾಗಿದ್ದಾರೆ.

ಪ್ರತಿಭಾ ಎನ್ ದರ್ಖಾಸು ಕುಟುಂಬ

ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿಯಾಗಿರುವ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ, ಫಿಫಾ ವಿಶ್ವಕಪ್ ಮೆಡಿಕಲ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಿದ್ಧಕಟ್ಟೆ ಸೂರಂಡೆ ನಿವಾಸಿಗಳಾದ ನಾರಾಯಣ ಪೂಜಾರಿ ಅವರ ಪುತ್ರಿಯಾದ ಪ್ರತಿಭಾ ಅವರು, ವಾಮದಪದವು ಸಮೀಪದ ಕುಡಂಬೆಟ್ಟು ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರನ್ನು ವಿವಾಹವಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಉದ್ಯೋಗ ನಿಮಿತ್ತವಾಗಿ ಸಂಸಾರ ಸಹಿತ ಅವರು ಕತಾರ್‌ ರಾಜಧಾನಿ ದೋಹಾದಲ್ಲಿ ವಾಸವಾಗಿದ್ದಾರೆ.

ಪ್ರತಿಭಾ ಅವರು ಕತಾರ್‌ನ ಹಾಮದ್ ಮೆಡಿಕಲ್ ಕಾರ್ಪೋರೇಶನ್ ಸರ್ಕಾರಿ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಸೇರಿದಂತೆ ಇತರ ತುರ್ತು ಸಂದರ್ಭದಲ್ಲಿನ ಇವರ ವಿಶೇಷ ಸೇವೆಯನ್ನು ಗುರುತಿಸಿ, ಈ ಹಿಂದೆಯೇ ಇವರಿಗೆ ಗೌರವ ಸಲ್ಲಿಸಲಾಗಿತ್ತು.

ಇದೀಗ ಇವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅಗಾಧ ಸೇವೆಯನ್ನು ಗುರುತಿಸಿ ಪಿಫಾ ವಿಶ್ವಕಪ್ ಮೆಡಿಕಲ್ ತಂಡದಲ್ಲಿ ನರ್ಸಿಂಗ್ ಇನ್‌ಚಾರ್ಜ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಇವರು ಸೇರಿದಂತೆ ಇವರ ಕುಟುಂಬಕ್ಕೆ ಭಾರಿ ಗೌರವ ಸಿಕ್ಕಂತಾಗಿದೆ.

ಪ್ರತಿಭಾ ಎನ್ ದರ್ಖಾಸು

ಗಮನಿಸಬಹುದಾದ ಇತರೆ ಸುದ್ದಿಗಳು

ಫುಟ್ಬಾಲ್ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ರೊನಾಲ್ಡೊ; ಈ ಸಾಧನೆ ಮಾಡಿದ ಮೊದಲ ಆಟಗಾರ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ವಿವಿಧ ದಾಖಲೆಗಳು ಹಾಗೂ ರೋಚಕ ಕಾದಾಟಗಳು ನಡೆಯುತ್ತಲೇ ಇವೆ. ಗುರುವಾರ ನಡೆದ ಪೋರ್ಚುಗಲ್‌ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಫುಟ್‌ಬಾಲ್ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಘಾನಾ ವಿರುದ್ಧ ಐತಿಹಾಸಿಕ ಪೆನಾಲ್ಟಿ ಕಿಕ್ ಗಳಿಸಿ ದಾಖಲೆ ಬರೆದಿದ್ದಾರೆ. ರೊನಾಲ್ಡೊ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಐದು ಆವೃತ್ತಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಪಂದ್ಯಗಳಲ್ಲಿ ಆಡಿದ ರೊನಾಲ್ಡೊ, ವಿಶ್ವಕಪ್‌ನಲ್ಲಿ ತಮ್ಮ ದೇಶದ ಪರ ಆಡಿದ 18ನೇ ಪಂದ್ಯದಲ್ಲಿ 8ನೇ ವಿಶ್ವಕಪ್ ಗೋಲನ್ನು ಗಳಿಸಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು